Rashmika Mandanna: ತೆಲುಗು ಚಿತ್ರದ ಹಿಂದಿ ಸೀಕ್ವೆಲ್‌ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ; ಅಕ್ಷಯ್ ಬದಲು ಶಾಹಿದ್ ಕಪೂರ್ ಹೀರೋ
ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ರೌಡಿ ರಾಥೋಡ್ 2 ಚಿತ್ರದಲ್ಲಿ ಶಾಹಿದ್ ಕಪೂರ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ.
Rashmika Mandanna: ಟಾಲಿವುಡ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದಲ್ಲಿ ರವಿತೇಜ ನಾಯಕನಾಗಿ ನಟಿಸಿದ್ದ ವಿಕ್ರಮಾರ್ಕುಡು ಸಿನಿಮಾ ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಸಿನಿಮಾ. ಈ ಬ್ಲಾಕ್‌ಬಸ್ಟರ್ ಸಿನಿಮಾ ಕನ್ನಡದಲ್ಲಿಯೂ ವೀರ ಮದಕರಿ ಹೆಸರಿನಲ್ಲಿ ರಿಮೇಕ್ ಆಯಿತು. ಕಿಚ್ಚ ಸುದೀಪ್ ನಾಯಕನಾಗಿ ನಟಿಸಿದ್ದರು. ಇಲ್ಲಿಯೂ ಈ ಸಿನಿಮಾ ಹಿಟ್ ಪಟ್ಟಿ ಸೇರಿತ್ತು. 2012ರಲ್ಲಿ ಹಿಂದಿಯಲ್ಲಿ ರೌಡಿ ರಾಥೋಡ್ ಹೆಸರಿನೊಂದಿಗೆ ರಿಮೇಕ್ ಆಯಿತು. ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿಯೂ ಈ ಸಿನಿಮಾಕ್ಕೆ ಸಿಕ್ಕಿತು.
ಇದನ್ನೂ ಓದಿ: ನಿಮಗೆ ಮದುವೆ ಆಗಿರುವ ವಿಚಾರ ಹೇಳಬೇಡಿ, ಸಿನಿಮಾಗೆ ಸಮಸ್ಯೆ ಆಗುತ್ತೆ; ಮಾಧವನ್‌ಗೆ ಸಲಹೆ ನೀಡಿದ್ದ ಚಿತ್ರತಂಡ, ಮುಂದೆ ಆಗಿದ್ದೇ ಬೇರೆ
ಈಗ ಸುಮಾರು ಹನ್ನೊಂದು ವರ್ಷಗಳ ಗ್ಯಾಪ್ ನಂತರ ಇದೇ ರೌಡಿ ರಾಥೋಡ್ ಚಿತ್ರದ ಸೀಕ್ವೆಲ್ ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ. ಈ ಸೀಕ್ವೆಲ್ ನಲ್ಲಿ ಅಕ್ಷಯ್ ಕುಮಾರ್ ಬದಲಿಗೆ ಶಾಹಿದ್ ಕಪೂರ್ ನಾಯಕನಾಗಿ ನಟಿಸುತ್ತಿದ್ದಾರೆ. ಈಗ ಈ ಚಿತ್ರಕ್ಕೆ ನಾಯಕಿಯ ಹೆಸರೂ ಅಂತಿಮವಾಗಿದೆ ಎಂಬ ಮಾತು ಕೇಳಿಬಂದಿದೆ. ರಶ್ಮಿಕಾ ಮಂದಣ್ಣ ಶಾಹಿದ್ ಕಪೂರ್‌ಗೆ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರಶ್ಮಿಕಾ ಸಹ ಸೀಕ್ವೆಲ್‌ನಲ್ಲಿ ನಟಿಸಲು ಒಪ್ಪಿಗೆ ಸೂಚಿದ್ದಾರೆ ಎನ್ನಲಾಗಿದೆ.
2012ರಲ್ಲಿ ರೌಡಿ ರಾಥೋಡ್ ಸಿನಿಮಾಕ್ಕೆ ನಟ ನಿರ್ದೇಶಕ ಪ್ರಭುದೇವ ಆಕ್ಷನ್ ಕಟ್ ಹೇಳಿದ್ದರು. ಇದೀಗ ಈ ಚಿತ್ರದ ಸೀಕ್ವೆಲ್‌ಗೆ ಅನೀಸ್ ಬಾಜ್ಮಿ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ರೌಡಿ ರಾಥೋಡ್ 2 ಚಿತ್ರದ ಸ್ಕ್ರಿಪ್ಟಿಂಗ್ ಕೆಲಸ ಮುಗಿದಿದೆ. ಆ್ಯಕ್ಷನ್ ಎಂಟರ್ಟೈನರ್ ಆಗಿ ಮೂಡಿಬರಲಿರುವ ಈ ಸೀಕ್ವೆಲ್ ಗೆ ಬಾಲಿವುಡ್‌ನ ಟಾಪ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಪಕರು.
ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಕನಕಪುರ ಬಂಡೆ!; ಸಾಧಕರ ಕುರ್ಚಿ ಏರಲಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಈ ಮಧ್ಯೆ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ರಣಬೀರ್ ಕಪೂರ್ ಅಭಿನಯದ ಈ ಚಿತ್ರ ಆಗಸ್ಟ್ 11 ರಂದು ತೆರೆಗೆ ಬರಲಿದೆ. ನಿತಿನ್- ವೆಂಕಿ ಕುಡುಮುಲ ಕಾಂಬಿನೇಷನ್‌ನಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದಲ್ಲಿಯೂ ರಶ್ಮಿಕಾ ಮಂದಣ್ಣ ಬಿಜಿಯಾಗಿದ್ದಾರೆ.