ಕನ್ನಡ ಸುದ್ದಿ  /  ಮನರಂಜನೆ  /  ಪಕ್ಕದಲ್ಲಿ ಮಲಗಿರುವ ಗಂಡ ಗೊರಕೆ ಹೊಡೆಯುತ್ತಿದ್ದಾನೆ; ನೀವು ನನ್ನ ಡಿವೋರ್ಸ್‌ ಕಥೆ ಹೇಳುತ್ತಿದ್ದೀರಿ ಎಂದ ನಟಿ ದಿವ್ಯಾ

ಪಕ್ಕದಲ್ಲಿ ಮಲಗಿರುವ ಗಂಡ ಗೊರಕೆ ಹೊಡೆಯುತ್ತಿದ್ದಾನೆ; ನೀವು ನನ್ನ ಡಿವೋರ್ಸ್‌ ಕಥೆ ಹೇಳುತ್ತಿದ್ದೀರಿ ಎಂದ ನಟಿ ದಿವ್ಯಾ

ರಾಗಿಣಿ ಎಂಎಂಎಸ್‌ ರಿಟರ್ನ್ಸ್‌ ವೆಬ್‌ ಸರಣಿ ಖ್ಯಾತಿಯ, ಬಿಗ್‌ಬಾಸ್‌ ಒಟಿಟಿ ವಿನ್ನರ್‌ ದಿವ್ಯ ಅಗರ್‌ವಾಲ್‌ ಇದೀಗ ತನ್ನ ಡಿವೋರ್ಸ್‌ ವದಂತಿ ಕುರಿತು ಮೌನ ಮುರಿದಿದ್ದಾರೆ. ದಿವ್ಯಾ ಅಗರ್ವಾಲ್ ಮತ್ತು ಅಪೂರ್ವ ಪಡ್ಗಾಂವ್ಕರ್ ಈ ವರ್ಷದ ಫೆಬ್ರವರಿಯಲ್ಲಿ ವಿವಾಹವಾಗಿದ್ದರು.

ಡಿವೋರ್ಸ್‌ ವದಂತಿ ನಿರಾಕರಿಸಿದ ದಿವ್ಯಾ
ಡಿವೋರ್ಸ್‌ ವದಂತಿ ನಿರಾಕರಿಸಿದ ದಿವ್ಯಾ

ಬೆಂಗಳೂರು: ಈ ವರ್ಷದ ಆರಂಭದಲ್ಲಿ ಉದ್ಯಮಿ ಅಪೂರ್ವ ಪಡ್ಗಾಂವ್ಕರ್ ಅವರನ್ನು ವಿವಾಹವಾಗಿದ್ದ ಬಿಗ್‌ಬಾಸ್‌ ಒಟಿಟಿ ವಿಜೇತೆ ದಿವ್ಯಾ ಅವರ್‌ವಾಲ್‌ ಇದೀಗ ತಮ್ಮ ವಿವಾಹ ವಿಚ್ಛೇದನದ ವದಂತಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಒಂದು ಟಿಪ್ಪಣಿ ಹಂಚಿಕೊಂಡಿದ್ದು, ಡಿವೋರ್ಸ್‌ ವದಂತಿ ತಳ್ಳಿಹಾಕಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಡಿವೋರ್ಸ್‌ ವದಂತಿ ನಿರಾಕರಿಸಿದ ದಿವ್ಯಾ

ಸೋಷಿಯಲ್‌ ಮೀಡಿಯಾ ನೋಟ್‌ನಲ್ಲಿ ದಿವ್ಯಾ ಅಗರ್‌ವಾಲ್‌ ಹೀಗೆ ಬರೆದಿದ್ದಾರೆ. "ನಾನು ಈ ಕುರಿತು ಎಲ್ಲೂ ಹೇಳಿಲ್ಲ. ಯಾವುದೇ ಕಾಮೆಂಟ್‌ ಅಥವಾ ಸ್ಟೋರಿ ಬರೆದಿಲ್ಲ. ನಾನು 2500 ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದೇನೆ. ಆದರೆ, ಮಾಧ್ಯಮಗಳು ಇವುಗಳಲ್ಲಿ ನಮ್ಮ ಮದುವೆಯ ವಿಷಯವನ್ನು ಮಾತ್ರ ಆಯ್ಕೆ ಮಾಡಿಕೊಂಡು ಪ್ರತಿಕ್ರಿಯೆ ನೀಡಿವೆ. ಜನರು ನನ್ನಿಂದ ಏನು ಬಯಸುತ್ತಾರೆ? ನನ್ನ ಬಗ್ಗೆ ಯಾವ ರೀತಿ ಆಲೋಚಿಸುತ್ತಾರೆ ಎನ್ನುವ ವಿಚಾರ ತಮಾಷೆಯಾಗಿದೆ. ಜನರು ನನ್ನಿಂದ ಎಂದಿಗೂ ನಿರೀಕ್ಷಿಸದ ಕೆಲಸವನ್ನು ನಾನು ಯಾವಾಗಲೂ ಮಾಡಿದ್ದೇನೆ. ಈಗ ಜನರಿಗೆ ಏನು ಬೇಕಾಗಿದೆ? ಮಕ್ಕಳು ಬೇಕೆ? ವಿವಾಹ ವಿಚ್ಛೇದನ ಬೇಕೆ? ಅದ್ಯಾವುದೂ ನಡೆಯುತ್ತಿಲ್ಲ. ವಾಸ್ತವವಾಗಿ ನನ್ನ ಇನ್‌ಸ್ಟಾಗ್ರಾಂನಲ್ಲಿ ಮೊದಲು ಪಿನ್‌ ಮಾಡಿದ ಪೋಸ್ಟ್‌ ಮಾಡಿದ ವಿಷಯ ನನಗೆ ಸಂತೋಷ ತರುವ ವಿಷಯವಾಗಿದೆ. ಪ್ರತಿಯೊಂದು ಚಿತ್ರವೂ ಸಂತೋಷದಿಂದ ಕೊನೆಗೊಳ್ಳುತ್ತದೆ. ದೇವರ ದಯೆಯಿಂದ ನನ್ನ ಪತಿ ನನ್ನ ಪಕ್ಕದಲ್ಲಿಯೇ ಜೋರಾಗಿ ಗೊರಕೆ ಹೊಡೆಯುತ್ತಿದ್ದಾನೆ!" ಎಂದು ದಿವ್ಯಾ ಅಗರ್‌ವಾಲ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ದಿವ್ಯಾ ಮತ್ತು ಅಪೂರ್ವ ವಿವಾಹ

ದಿವ್ಯಾ ಮತ್ತು ಅಪೂರ್ವ ಈ ವರ್ಷ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಿದ್ದರು. ದಂಪತಿ ಮುಂಬೈನಲ್ಲಿ ಮರಾಠಿ ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆಯಾದ ಕೆಲವೇ ಕ್ಷಣಗಳಲ್ಲಿ ಅಪೂರ್ವ ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. ಮದುವೆಯಂದು ಇವರಿಬ್ಬರು ಮ್ಯಾಚಿಂಗ್‌ ಉಡುಗೆ ಧರಿಸಿದ್ದರು.

ದಿವ್ಯಾ ಮತ್ತು ಅಪೂರ್ವ ಬಗ್ಗೆ

ದಿವ್ಯಾ ಅಗರ್‌ವಾಲ್‌ ಭಾರತೀಯ ನಟಿ, ಮಾಡೆಲ್‌, ಡ್ಯಾನ್ಸರ್‌. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ 10ನಲ್ಲಿ ರನ್ನರ್‌ ಪ್‌ ಆಗಿದ್ದರು. ಏಸ್‌ ಆಫ್‌ ಸ್ಪೇಸ್‌ 1ನಲ್ಲಿ ಗೆಲುವು ಪಡೆದಿದ್ದರು. ಬಿಗ್‌ಬಾಸ್‌ ಒಟಿಟಿ ಸೀಸನ್‌ 1ರಲ್ಲಿ ಗೆಲುವು ಪಡೆದಿದ್ದರು. ರಾಗಿಣಿ ಎಂಎಂಎಸ್‌: ರಿಟರ್ನ್ಸ್‌ 2 ಎಂಬ ಹಾರರ್‌ ವೆಬ್‌ ಸರಣಿ ಮೂಲಕ ಮನರಂಜನೆ ಕ್ಷೇತ್ರಕ್ಕೆ ಎಂಟ್ರಿ ನೀಡಿದರು.

ದಿವ್ಯಾ ಅಗರ್‌ವಾಲ್‌ ಅವರು 2022ರಲ್ಲಿ ಅಪೂರ್ವ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡರು. ಡಿಸೆಂಬರ್‌ 2023ರಲ್ಲಿ ಮದುವೆ ಮಾಹಿತಿ ನೀಡಿದರು. ದಿವ್ಯಾ ಅಗರ್‌ವಾಲ್‌ ಈ ಹಿಂದೆ ವರುಣ್‌ ಸೂದ್‌ ಜತೆ ಡೇಟಿಂಗ್‌ನಲ್ಲಿದ್ದರು. 2022ರಲ್ಲಿ ಬ್ರೇಕಪ್‌ ಘೋಷಿಸಿದರು. ಏಸ್ ಆಫ್ ಸ್ಪೇಸ್ ಮತ್ತು ಸ್ಪ್ಲಿಟ್ಸ್ ವಿಲ್ಲಾದಲ್ಲಿ ಕಾಣಿಸಿಕೊಂಡ ನಂತರ ದಿವ್ಯಾ ಮತ್ತು ವರುಣ್ ಡೇಟಿಂಗ್ ಪ್ರಾರಂಭಿಸಿದರು. ಈ ವರ್ಷದ ಆರಂಭದಲ್ಲಿ ಅಪೂರ್ವ ಜತೆ ವಿವಾಹವಾದರು. ಇದೀಗ ತಮ್ಮ ಡಿವೋರ್ಸ್‌ ವದಂತಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಟಿ20 ವರ್ಲ್ಡ್‌ಕಪ್ 2024