Kalki 2898 AD: ಯಂಗರ್ ಲುಕ್‌ನಲ್ಲಿ ಅಮಿತಾಬ್; ಡಿಜಿಟಲ್ ಡಿ ಏಜಿಂಗ್ ಕರಾಮತ್ತಿನಿಂದ ವಯಸ್ಸು ಇಳಿಸಿಕೊಂಡ ನಟರ ಪಟ್ಟಿ ಇಲ್ಲಿದೆ ನೋಡಿ
Amitabh Bachchan in Kalki 2898 AD: ಭಾರತ ಚಿತ್ರರಂಗದ ಪ್ರಮುಖ ನಟಿಯರು, ನಟರು ನಟಿಸಿರುವ ಕಲ್ಕಿ 2898 ಎಡಿ ಸಿನಿಮಾದ ಅಮಿತಾಬ್ ಬಚ್ಚನ್ ಲುಕ್ ಅನ್ನು ಚಿತ್ರತಂಡ ಇಂದು ಬಹಿರಂಗಪಡಿಸಿದೆ. ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಯುವ ಮತ್ತು ವಯಸ್ಸಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ ಚಿತ್ರರಂಗದ ಪ್ರಮುಖ ನಟಿಯರು, ನಟರು ನಟಿಸಿರುವ ಕಲ್ಕಿ 2898 ಎಡಿ ಸಿನಿಮಾದ ಅಮಿತಾಬ್ ಬಚ್ಚನ್ ಲುಕ್ ಅನ್ನು ಚಿತ್ರತಂಡ ಇಂದು ಬಹಿರಂಗಪಡಿಸಿದೆ. ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಯುವ ಮತ್ತು ವಯಸ್ಸಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಅಮಿತಾಬ್ ಬಚ್ಚನ್ ಅವರನ್ನು ಚಿತ್ರದ ಅವಶ್ಯಕತೆಗೆ ತಕ್ಕಂತೆ ಯುವ ಅಶ್ವತ್ಥಾಮನ ಲುಕ್‌ನಲ್ಲಿ ತೋರಿಸಿರುವುದು ಫ್ಯಾನ್ಸ್‌ಗೆ ಅಚ್ಚರಿ ತಂದಿದೆ. ಈ ಹಿಂದೆಯೂ ಬಾಲಿವುಡ್, ಹಾಲಿವುಡ್‌ನ ಹಲವು ತಾರೆಯರು ಸ್ಕ್ರಿಪ್ಟ್‌ನ ಬೇಡಿಕೆಗಳಿಗೆ ತಕ್ಕಂತೆ ತೆರೆಯ ಮೇಲೆ ತಮ್ಮ ವಯಸ್ಸನ್ನು ಕಡಿಮೆಯಾಗಿರುವಂತೆ ಪ್ರದರ್ಶಿಸಿದ್ದಾರೆ. ಇದಕ್ಕೆ ಡಿಜಿಟಲ್ ಡಿಏಜಿಂಗ್ ಟೆಕ್ನಾಲಜಿಯನ್ನು ಬಳಸಿಕೊಳ್ಳಲಾಗಿದೆ.
ಅಮಿರ್‌ಖಾನ್ ಡಿಜಿಟಲ್ ರೂಪಾಂತರ
2022 ರಲ್ಲಿ ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ ನಿರೂಪಕ ಕರಣ್ ಜೋಹರ್ ಅವರು ಅಮೀರ್ ಖಾನ್‌ಗೆ "ಲಾಲ್ ಸಿಂಗ್ ಚಡ್ಡಾಗೆ ಕರೀನಾ ಕಪೂರ್ ಮೊದಲ ಆಯ್ಕೆಯೇ?" ಎಂದು ಕೇಳಿದ್ದರು. "ಇಲ್ಲ ನಾವು ವಯಸ್ಸಿನ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವು. ಈ ಸಿನಿಮಾದ ಕಥೆಯು 18 ರಿಂದ 50 ವರ್ಷದವರೆಗಿನ ಜೀವನವನ್ನು ಹೊಂದಿದೆ. ಆರಂಭದಲ್ಲಿ 25 ವರ್ಷದವರಾಗಿರಬೇಕು. ಇದಕ್ಕಾಗಿ ನಾವು ವಯಸ್ಸು ಕಡಿಮೆ ಮಾಡುವ ಡಿಜಿಟಲ್ ತಂತ್ರ ಅನುಸರಿಸಿದೆವು" ಎಂದು ಅವರು ಮಾಹಿತಿ ನೀಡಿದ್ದರು. ಫಾರೆಸ್ಟ್ ಗಂಪ್‌ನ ಹಿಂದಿ ರಿಮೇಕ್ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕಾಗಿ ಮಾತ್ರವಲ್ಲದೆ, ಪಿಕೆ ಚಿತ್ರದಲ್ಲೂ ಅಮೀರ್ ಖಾನ್ ಡಿಜಿಟಲ್ ಸ್ಪರ್ಶ ಪಡೆದರು. ಪಿಕೆ ಚಿತ್ರದಲ್ಲಿ ಅನ್ಯಗ್ರಹ ಜೀವಿ ಪಾತ್ರವನ್ನು ಇವರು ಯಶಸ್ವಿಯಾಗಿ ನಿರ್ವಹಿಸಿದರು.
ಇಂಡಿಯಾನಾ ಜೋನ್ಸ್: ಹ್ಯಾರಿಸನ್ ಫೋರ್ಡ್ ಮತ್ತು ಡಯಲ್ ಆಫ್ ಡೆಸ್ಟಿನಿ
2023ರ ಇಂಡಿಯಾನಾ ಜೋನ್ಸ್ ಸಿನಿಮಾದಲ್ಲಿ ಫ್ಲ್ಯಾಶ್ ಬ್ಯಾಕ್ ದೃಶ್ಯಕ್ಕಾಗಿ ಹ್ಯಾರಿಸನ್ ಫೋರ್ಡ್ ವಯಸ್ಸು ಕಡಿಮೆ ಮಾಡಿಕೊಂಡಿದ್ದರು. "ಇದು ನನ್ನ ಮುಖ ಎಂದು ನನಗೆ ಗೊತ್ತು. ಇದು ಫೋಟೋಶಾಪ್ ಮ್ಯಾಝಿಕ್ ಅಲ್ಲ. 35 ವರ್ಷಗಳ ಹಿಂದೆ ನಾನು ಹೇಗಿದ್ದೆ ಎಂದು ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಮಾಡಿರುವ ತಂತ್ರವಾಗಿದೆ. ಇದು ತಾಂತ್ರಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಇಷ್ಟವಾಗುವಂತಹ ತಂತ್ರಜ್ಞಾನ" ಎಂದು ಅವರು ಹೇಳಿದ್ದರು.
ಭಾರತ್ ಚಿತ್ರದಲ್ಲಿ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ನಟನೆಯ ಭಾರತ್ ಸಿನಿಮಾವು ಹಲವು ದಶಕಗಳಲ್ಲಿ ಭಾರತದ ಪ್ರಯಾಣದ ಕಥೆಯನ್ನು ಹೊಂದಿದೆ. ಇವರ ಪಾತ್ರವು 8 ವರ್ಷದಿಂದ 70 ವರ್ಷ ವಯಸ್ಸಿನವರೆಗೆ ಸಾಗುತ್ತದೆ. ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಅವರು ಡಿಜಿಟಲ್ ಡಿ-ಏಜಿಂಗ್ ಬೆಂಬಲವನ್ನು ಪಡೆದುಕೊಂಡಿದ್ದಾರೆ.
ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್ ಸಿನಿಮಾದಲ್ಲಿ ಬ್ರಾಡ್ ಪಿಟ್
ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್ ನಲ್ಲಿ, ಬ್ರಾಡ್ ಪಿಟ್ ಅದ್ಭುತವಾಗಿ ಕಾಣಿಸಿದ್ದಾರೆ. ಅವರ ಯೌವ್ವನದ ಪಾತ್ರಗಳಿಗೆ ಡಿಜಿಟಲ್ ಡಿಏಜಿಂಗ್ ತಂತ್ರ ಬಳಸಿಕೊಳ್ಳಲಾಯಿತು.
ಡಂಕಿ ಚಿತ್ರದಲ್ಲಿ ಶಾರುಖ್ ಖಾನ್
ಡಂಕಿ ಸಿನಿಮಾದಲ್ಲಿಯೂ ಕೆಲವು ದೃಶ್ಯಗಳಲ್ಲಿ ಡಿ ಏಜಿಂಗ್ ತಂತ್ರಜ್ಞಾನ ಬಳಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕ್ಯಾಪ್ಟನ್ ಅಮೆರಿಕ: ಸಿವಿಲ್ ವಾರ್‌ನಲ್ಲಿ ರಾಬರ್ಟ್ ಡೌನಿ ಜೂನಿಯರ್
2016 ರ ಬ್ಲಾಕ್ ಬಸ್ಟರ್ ಸಿನಿಮಾ ಕ್ಯಾಪ್ಟನ್ ಅಮೆರಿಕ: ಸಿವಿಲ್ ವಾರ್‌ನಲ್ಲಿ ರಾಬರ್ಟ್ ಡೌನಿ ಜೂನಿಯರ್ ನಟನೆಯನ್ನು ಮರೆಯುವಂತೆ ಇಲ್ಲ. ಈ ಚಿತ್ರದಲ್ಲಿ ಒಂದು ಹಂತದಲ್ಲಿ ಇವರು ವಯೋವೃದ್ಧನಾಗಿ ಕಾಣಿಸಿಕೊಂಡರು.
ದಿ ಐರಿಶ್ ಸಿನಿಮಾ
ದಿ ಐರಿಶಾ ಸಿನಿಮಾದಲ್ಲಿ ರಾಬರ್ಟ್ ಡಿ ನಿರೋ, ಜೋ ಪೆಸ್ಸಿ ಮತ್ತು ಅಲ್ ಪಸಿನೊ ಎಂಬ ಮೂವರು ಪುರುಷ ಪಾತ್ರದಾರಿಗಳು ಡಿಜಿಟಲ್ ಡಿ ಏಜಿಂಗ್ ತಂತ್ರಜ್ಞಾನ ಬಳಸಿದರು. ಸಿನಿಮಾ, ಒಟಿಟಿ, ಸೀರಿಯಲ್ ಸುದ್ದಿಗಳನ್ನು ಓದಲು ಹಿಂದೂಸ್ತಾನ್ ಟೈಮ್ಸ್ ಓದಿ.
