Esha Gupta: ಭಯಾನಕ 2 ಕಾಸ್ಟಿಂಗ್‌ ಕೌಚ್‌ ಅನುಭವ ಹಂಚಿಕೊಂಡ ಇಶಾ ಗುಪ್ತಾ; ಒಮ್ಮೆ ಮೇಕಪ್‌ ಆರ್ಟಿಸ್ಟ್‌ ಸಹಾಯ ಪಡೆದ್ರಂತೆ ಜನ್ನತ್‌ ನಟಿ-bollywood news esha gupta recalls horrific casting couch experience outdoor shoot film industry news pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Esha Gupta: ಭಯಾನಕ 2 ಕಾಸ್ಟಿಂಗ್‌ ಕೌಚ್‌ ಅನುಭವ ಹಂಚಿಕೊಂಡ ಇಶಾ ಗುಪ್ತಾ; ಒಮ್ಮೆ ಮೇಕಪ್‌ ಆರ್ಟಿಸ್ಟ್‌ ಸಹಾಯ ಪಡೆದ್ರಂತೆ ಜನ್ನತ್‌ ನಟಿ

Esha Gupta: ಭಯಾನಕ 2 ಕಾಸ್ಟಿಂಗ್‌ ಕೌಚ್‌ ಅನುಭವ ಹಂಚಿಕೊಂಡ ಇಶಾ ಗುಪ್ತಾ; ಒಮ್ಮೆ ಮೇಕಪ್‌ ಆರ್ಟಿಸ್ಟ್‌ ಸಹಾಯ ಪಡೆದ್ರಂತೆ ಜನ್ನತ್‌ ನಟಿ

Casting Couch Experience: ಸಿನಿಮಾ ಜಗತ್ತಿನಲ್ಲಿ ಅವಕಾಶ ಪಡೆಯಲು ಲೈಂಗಿಕ ಬೇಡಿಕೆ ಇಡುವ ಕಾಸ್ಟಿಂಗ್‌ ಕೌಚ್‌ ಕರಾಳ ಅನುಭವವನ್ನು ನಟಿ ಇಶಾ ಗುಪ್ತಾ (Esha Gupta) ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಎರಡು ಬಾರಿ ಇಂತಹ ಅನುಭವವಾಗಿದೆ ಎಂದು ಹೇಳಿದ್ದಾರೆ.

Esha Gupta: ಭಯಾನಕ 2 ಕಾಸ್ಟಿಂಗ್‌ ಕೌಚ್‌ ಅನುಭವ ಹಂಚಿಕೊಂಡ ಇಶಾ ಗುಪ್ತಾ
Esha Gupta: ಭಯಾನಕ 2 ಕಾಸ್ಟಿಂಗ್‌ ಕೌಚ್‌ ಅನುಭವ ಹಂಚಿಕೊಂಡ ಇಶಾ ಗುಪ್ತಾ

ಸಿನಿಮಾ ಜಗತ್ತಿನಲ್ಲಿ ಕಾಸ್ಟಿಂಗ್‌ ಕೌಚ್‌ನ ಕರಾಳ ಅನುಭವಗಳನ್ನು ಸಾಕಷ್ಟು ನಟಿಯರು ಅನುಭವಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್‌ ನಟಿ ಇಶಾ ಗುಪ್ತಾ ಅವರು ತನ್ನ ವೃತ್ತಿಜೀವನದಲ್ಲಿ ಎದುರಾದ ಹಲವು ಕಾಸ್ಟಿಂಗ್‌ ಕೌಚ್‌ ಅನುಭವಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಇಶಾ ಗುಪ್ತಾ ಅವರಿಗೆ ಒಂದಲ್ಲ ಒಟ್ಟು ಎರಡು ಬಾರಿ ಇಂತಹ ಕಾಸ್ಟಿಂಗ್‌ ಕೌಚ್‌ ಅನುಭವವಾಗಿದೆಯಂತೆ. ಕಾಸ್ಟಿಂಗ್‌ ಕೌಚ್‌ ಎಂದರೆ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಪಡೆಯಲು ಪ್ರಯತ್ನಿಸುವ ಪ್ರತಿಭೆಗಳನ್ನು ಲೈಂಗಿಕ ಅಥವಾ ಇನ್ನಿತರ ಉದ್ದೇಶಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುವ ಕ್ರೂರ ಜಗತ್ತು.

ಅರ್ಧ ಚಿತ್ರೀಕರಣಗೊಂಡ ಸಿನಿಮಾದಿಂದಲೇ ಔಟ್‌

ಇಶಾ ಗುಪ್ತಾ ಅವರಲ್ಲಿ ಸಿನಿಮಾ ತಯಾರಕರು ಲೈಂಗಿಕ ಬೇಡಿಕೆ ಇಟ್ಟರಂತೆ. ಇದಕ್ಕೆ ಇವರು ನಿರಾಕರಿಸಿದ್ರಂತೆ. ಇದಕ್ಕೆ ಕೋಪಗೊಂಡ ಆ ಫಿಲ್ಮ್‌ ಮೇಕರ್‌ ಅರ್ಧ ಚಿತ್ರಿಕರಣಗೊಂಡ ಚಿತ್ರದಿಂದಲೇ ಇಶಾ ಗುಪ್ತಾರನ್ನು ಹೊರಕ್ಕೆ ಕಳುಹಿಸಿದ್ದರಂತೆ. "ಆತನ ಲೈಂಗಿಕ ಬೇಡಿಕೆ ನಿರಾಕರಿಸಿದೆ. ಆತ ನನ್ನನ್ನು ಆ ಸಿನಿಮಾದಲ್ಲಿ ಬಳಿಕ ನೋಡಲು ಬಯಸಲಿಲ್ಲ. ನಾನೇನು ಮಾಡಲು ಸಾಧ್ಯ. ಆ ಸಿನಿಮಾದಿಂದ ಹೊರಕ್ಕೆ ಬಂದೆ. ಇದಾದ ಬಳಿಕ ಹಲವು ಸಿನಿಮಾ ತಯಾರಕರು ನನಗೆ ಅವಕಾಶ ನೀಡಲಿಲ್ಲ. ನಾನು ಅವರಿಗೆ ಏನಾದರೂ ನೀಡದೆ ಇದ್ದರೆ ಇವಳಿಗ್ಯಾಕೆ ಅವಕಾಶ ನೀಡಬೇಕು ಎಂದು ಇತರರು ಮಾತನಾಡುವ ವಿಷಯ ನನ್ನ ಗಮನಕ್ಕೆ ಬಂದಿತ್ತು" ಎಂದು ಇಶಾ ಗುಪ್ತಾ ಹೇಳಿದ್ದಾರೆ.

ಹೊರಾಂಗಣ ಶೂಟಿಂಗ್‌ನಲ್ಲೂ ಕೆಟ್ಟ ಅನುಭವ

ಹೊರಾಂಗಣ ಶೂಟಿಂಗ್‌ ನಡೆಸಿ ತನ್ನ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿಯೂ ಇಂತಹ ಅನುಭವ ಆಗಿರುವ ವಿವರವನ್ನು ಇಶಾ ನೀಡಿದ್ದಾರೆ. ಅಂದೊಂದು ದಿನ ಹೊರಾಂಗಣ ಶೂಟಿಂಗ್‌ ನಡೆಸಿ ರೂಂನಲ್ಲಿದ್ದೆ. ಆಗ ಹಲವು ಬಾರಿ ಯಾರೋ ಬಾಗಿಲು ಬಡಿದು ಬೇಡಿಕೆ ಇಟ್ಟರು. ಈ ಘಟನೆ ನಡೆದ ಸಂದರ್ಭದಲ್ಲಿ ಒಬ್ಬಳಿಗೆ ಉಳಿದುಕೊಳ್ಳಲು ಭಯವಾಯಿತು. ಮೇಕಪ್‌ ಆರ್ಟಿಸ್ಟ್‌ಗೆ ಕಾಲ್‌ ಮಾಡಿ ನನ್ನ ರೂಂನಲ್ಲಿ ಉಳಿದುಕೊಳ್ಳಲು ತಿಳಿಸಿದೆ" ಎಂದು ಇಶಾ ಗುಪ್ತಾ ಹೇಳಿದ್ದಾರೆ.

ಇಶಾ ಗುಪ್ತಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸಕ್ರೀಯರಾಗಿರುತ್ತಾರೆ. ಇವರಿಗೆ ಸಾಕಷಟು ಅಭಿಮಾನಿಗಳು ಇದ್ದಾರೆ. 2012ರಲ್ಲಿ ಜನ್ನತ್‌ 2 ಸಿನಿಮಾದ ಮೂಲಕ ಇವರು ಬಾಲಿವುಡ್‌ಗೆ ಪ್ರವೇಶಿಸಿದರು. ರಾಜ್‌ 3ಡಿ, ಗೋರಿ ತೇರೇ ಪ್ಯಾರ್‌ ಮೇನ್‌, ಹಮ್‌ಶಕಲ್ಸ್‌, ಬೇಬಿ, ರುಸ್ತುಂ, ಟೋಟಲ್‌ ಧಮಾಲ್‌, ಪಾಲ್ತಾನ್‌, ಬಾದ್‌ಶಾಹೋ ಇತ್ಯಾದಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿಯರಿಂದ ಕಾಸ್ಟಿಂಗ್‌ ಕೌಚ್‌ ಬಹಿರಂಗ

ಸುರ್ವಿನ್‌ ಚೌಹ್ಲಾ ಅವರು "ನನಗೆ ಹಲವು ಬಾರಿ ಕಾಸ್ಟಿಂಗ್‌ ಕೌಚ್‌ ಅನುಭವ ಆಗಿದೆ" ಎಂದು ಬಹಿರಂಗಪಡಿಸಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್ ತನಗಾದ ಇಂತಹ ಅನುಭವ ಹೇಳಿದ್ದಾರೆ. ನಿರ್ದೇಶಕರೊಬ್ಬರು ಕೆಲಸಕ್ಕೆ ಬದಲಾಗಿ ರಾಜಿ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದರು ಎಂದು ಸುಲಗ್ನಾ ಚಟರ್ಜಿ ಬಹಿರಂಗಪಡಿಸಿದ್ದರು. ತಮಿಳು ಚಿತ್ರರಂಗದ ಪ್ರಮುಖ ನಿರ್ಮಾಪಕ ತಮ್ಮಿಂದ ಲೈಂಗಿಕಾಸಕ್ತಿ ಬಗ್ಗೆ ಕೇಳಿದ ಘಟನೆಯ ಬಗ್ಗೆ ಶ್ರುತಿ ಹರಿಹರನ್ ಕೂಡ ಬಾಯಿಬಿಟ್ಟಿದ್ದರು. ಶ್ರೀರೆಡ್ಡಿ ಪಂಡೋರಾ, ಮಲಯಾಳಂ ನಟಿ ಪಾರ್ವತಿ, ಇಲಿಯಾನಾ ಡಿಕ್ರೂಜ್ ಸೇರಿದಂತೆ ಹಲವು ನಟಿಯರು ತಮಗೆ ಆಗಿರುವ ಕಾಸ್ಟಿಂಗ್‌ ಕೌಚ್‌ ಅನುಭವ ಹೇಳಿಕೊಂಡಿದ್ದರು.

ಏನಿದು ಕಾಸ್ಟಿಂಗ್‌ ಕೌಚ್‌?

ಕಾಸ್ಟಿಂಗ್‌ ಕೌಚ್‌ ಪದದ ನಿಜವಾದ ಅರ್ಥ ಕಾಸ್ಟಿಂಗ್‌ ಆಫೀಸ್‌ನಲ್ಲಿ ಇರುವ ಮಂಚ. ಮನರಂಜನಾ ಕ್ಷೇತ್ರದಲ್ಲಿ (ಸಿನಿಮಾ, ಧಾರಾವಾಹಿ) ನಟನೆಯ ಅವಕಾಶಕ್ಕಾಗಿ ಬರುವ ನಟನಟಿಯರಲ್ಲಿ ಲೈಂಗಿಕ ಸುಖವನ್ನು ಬಯಸುವ ಅಭ್ಯಾಸವನ್ನು ತಿಳಿಸಲು ಸೂಚಕವಾಗಿ ಬಳಸುವ ಒಂದು ಪದ ಇದಾಗಿದೆ. ಪುರುಷ ಕಾಸ್ಟಿಂಗ್‌ ಡೈರೆಕ್ಟರ್‌ಗಳು ನಟಿಯರಲ್ಲಿ ಇಂತಹ ಬೇಡಿಕೆ ಇಡುತ್ತಾರೆ. ಇಲ್ಲಿ ಕಾಸ್ಟಿಂಗ್‌ ಡೈರೆಕ್ಟರ್‌ಗಳು ತನಗಾಗಿ ಮಾತ್ರವಲ್ಲದೆ ಇತರರಿಗಾಗಿಯೂ ಇಂತಹ ಬೇಡಿಕೆ ಇಡಬಹುದು. ಮಹಿಳಾ ಕಾಸ್ಟಿಂಗ್‌ ಡೈರೆಕ್ಟರ್‌ಗಳು ಯುವ ನಟರಲ್ಲಿ ಇಂತಹ ಲೈಂಗಿಕ ಸುಖದ ಬೇಡಿಕೆ ಇಡಬಹುದು.