ಕನ್ನಡ ಸುದ್ದಿ  /  ಮನರಂಜನೆ  /  Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

ಕಾನ್ಸ್‌ ಚಿತ್ರೋತ್ಸವದಲ್ಲಿ ಬಾಲಿವುಡ್‌ ನಟಿ ಶೋಭಿತಾ ಧೂಳಿಪಾಲ ಅವರು ಚಿನ್ನದ ಬಣ್ಣದ ಬಾಡಿಕಾನ್‌ ಪೂರ್ಣ ತೋಳಿನ ಉಡುಪನ್ನು ಧರಿಸಿದ್ದರು. ಈ ಉಡುಗೆಯಲ್ಲಿ ಶೋಭಿತಾ ಥೇಟ್‌ ಆಸ್ಕರ್‌ ಟ್ರೋಫಿ ರೀತಿ ಅಭಿಮಾನಿಗಳಿಗೆ ಕಾಣಿಸಿದ್ದಾರೆ.

ಕಾನ್ಸ್‌ ಚಿತ್ರೋತ್ಸವದಲ್ಲಿ ಶೋಭಿತಾ ಧೂಳಿಪಾಲ
ಕಾನ್ಸ್‌ ಚಿತ್ರೋತ್ಸವದಲ್ಲಿ ಶೋಭಿತಾ ಧೂಳಿಪಾಲ

ಬೆಂಗಳೂರು: ಫ್ರಾನ್ಸ್‌ನಲ್ಲಿ 77ನೇ ಕ್ಯಾನ್‌ ಚಿಲನಚಿತ್ರೋತ್ಸವದಲ್ಲಿ ಬಾಲಿವುಡ್‌ ನಟಿ ಶೋಭಿತಾ ಧೂಳಿಪಾಲ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಧರಿಸಿದ ಉಡುಗೆಯ ಕುರಿತು ಇನ್‌ಸ್ಟಾಗ್ರಾಂನಲ್ಲಿ ತನ್ನ ಅಭಿಮಾನಿಗಳಿಗೆ ಅಪ್‌ಡೇಟ್‌ ನೀಡಿದ್ದಾರೆ. ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿನ್ನದ ಬಣ್ಣದ ಉಡುಗೆಯಲ್ಲಿ ಶೋಭಿತಾ ಅಭಿಮಾನಿಗಳ ಕಣ್ಣಲ್ಲಿ ಧೂಳೆಬ್ಬಿಸಿದ್ದಾರೆ. ವಾಹ್‌ ಈ ಉಡುಗೆಯಲ್ಲಿ ನೀವು ಥೇಟ್‌ ಆಸ್ಕರ್‌ ಟ್ರೋಫಿ ರೀತಿ ಹೊಳೆಯುತ್ತಿದ್ದೀರಿ ಎಂದು ಫ್ಯಾನ್ಸ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಾನ್‌ ಚಿತ್ರೋತ್ಸವದಲ್ಲಿ ಶೋಭಿತಾ ಧೂಳಿಪಾಲ

ಶೋಭಿತಾ ಧೂಳಿಪಾಲ ಅವರು ಚಿನ್ನದ ಬಾಡಿಕಾನ್‌ ಪೂರ್ತಣ ತೋಳಿನ ಉಡುಪು ಧರಿಸಿದ್ದರು. ಇದಕ್ಕೆ ಸೂಕ್ತವಾಗುವಂತಹ ಉದ್ದನೆಯ ಕಿವಿಯೋಲೆಗಳನ್ನು ಧರಿಸಿದ್ದರು. ಕೂದಲನ್ನು ಬನ್‌ ರೂಪದಲ್ಲಿ ಕಟ್ಟಿದ್ದರು. ಹೈಹೀಲ್ಡ್‌ ಧರಿಸಿದ್ದರು. ಲೇಬಲ್‌ ಇತ್ರ್‌ ವಿನ್ಯಾಸದ ಈ ಉಡುಗೆಯನ್ನು ಕಾನ್‌ ಚಿತ್ರೋತ್ಸವದಲ್ಲಿ ಧರಿಸಿ ಎಲ್ಲರ ಗಮನ ಸೆಳೆದರು.

ಶೋಭಿತಾ ಲುಕ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗಳಿಗೆ ಶೋಭಿತಾ ಅವರು "ಕಾನ್‌ ಲಾಂಜ್‌ನಲ್ಲಿ ಚಿನ್ನದ ಡ್ರ್ಯಾಗನ್‌ನಂತೆ ಸುತ್ತಾಡುತ್ತಿದ್ದೇನೆ" ಎಂದು ಶೀರ್ಷಿಕೆ ನೀಡಿದ್ದರು. ಇದಕ್ಕೆ ಅಭಿಮಾನಿಗಳು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. "ನೀವು ವಾವ್‌ ಎನ್ನಿಸುವಂತಹ ಲುಕ್‌ನಲ್ಲಿದ್ದಾರೆ. ನಿಮ್ಮ ಸೌಂದರ್ಯ ಹೊಗಳಲು ಪದಗಳಿಲ್ಲ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ನೋಡಲು ಮಾದಕವಾಗಿದ್ದಾರೆ" "ಅದ್ಭುತವಾಗಿದ್ದಾರೆ" "ಕನಸಲ್ಲಿ ಬರುವ ಸುಂದರಿ" "ಈ ಲುಕ್‌ನಲ್ಲಿ ನೀವು ಆಸ್ಕರ್‌ ಟ್ರೋಫಿಯಂತೆ ಕಾಣಿಸುವಿರಿ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

"ನಿಜ ಇವರನ್ನು ನೋಡಿದಾಗ ಆಸ್ಕರ್‌ ನೆನಪಾಗುತ್ತದೆ" "ನಿಮ್ಮ ಕಣ್ಣುಗಳು 90ರ ದಶಕದ ನಟಿಯರಂತೆ ಇದೆ,ವಾಹ್‌" "ನಿಮ್ಮ ಉಡುಪು ಸುಂದರ, ನಿಮಗೆ ಯಾವುದೇ ರೀತಿಯ ಉಡುಗೆ ಚೆನ್ನಾಗಿ ಕಾಣಿಸುತ್ತದೆ" "ನೀವೂ ಹೊಳೆಯುತ್ತಿದ್ದೀರಿ, ನಿಮ್ಮ ಉಡುಗೆಯೂ ಹೊಳೆಯುತ್ತಿದೆ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಕಾನ್‌ ಚಿತ್ರೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗಿ

ಇದೇ ಮೊದಲ ಬಾರಿಗೆ ಶೋಭಿತಾ ಧೂಳಿಪಾಲ ಅವರು ಕಾನ್‌ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶೋಭಿತಾ ಬೇರೆರೀತಿಯ ಉಡುಗೆ ಧರಿಸಿದ್ದರು. ಹೊಳೆಯುವ ನೇರಳೆ ಬಣ್ಣದ ಉಡುಗೆ ಮತ್ತು ಹೈಹೀಲ್ಡ್ಸ್‌ ಧರಿಸಿದ್ದರು. ಕೂದಲನ್ನು ಕಟ್ಟದೆ ಹಾಗೆ ಬಿಟ್ಟಿದ್ದರು. ಈ 1.8 ಲಕ್ಷ ಮೌಲ್ಯದ ಕಾರ್ಡೆಲಿಯಾ ಜಂಪ್ಸೂಟ್ ಅನ್ನು ನಮ್ರತಾ ಜೋಶಿಪುರ ವಿನ್ಯಾಸಗೊಳಿಸಿದ್ದಾರೆ. ಶೋಭಿತಾ ಈ ಕಾರ್ಯಕ್ರಮದಲ್ಲಿ ಪ್ರೀಮಿಯಂ ಐಸ್ ಕ್ರೀಮ್ ಬ್ರಾಂಡ್ ಮ್ಯಾಗ್ನಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.

ಕ್ಯಾನ್‌ ಚಿತ್ರೋತ್ಸವದಲ್ಲಿ ಪ್ರತಿವರ್ಷ ಸೆಲೆಬ್ರಿಟಿಗಳು, ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಚಲನಚಿತ್ರ ಉತ್ಸಾಹಿಗಳು ಭಾಗವಹಿಸುತ್ತಾರೆ. ಈ ಬಾರಿಯೂ ಭಾರತದ ಪ್ರಮುಖ ಸೆಲೆಬ್ರಿಟಿಗಳು ಈ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪ್ರತಿವರ್ಷದಂತೆ ಈ ವರ್ಷವೂ ಐಶ್ವರ್ಯಾ ರೈ ಭಾಗವಹಿಸಿದ್ದಾರೆ. ಕಿಯಾರಾ ಅಡ್ವಾಣಿ ಭಾಗವಹಿಸಿದ್ದರು. ಆದಿತಿ ರಾವ್‌ ಹೈದರಿ ಕೂಡ ಭಾಗವಹಿಸಲಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024