ಕನ್ನಡ ಸುದ್ದಿ  /  ಮನರಂಜನೆ  /  ಗಂಡಸರೇ ದೂರ ನಿಲ್ಲಿ, ನಾನೀಗ ಪವಿತ್ರಳು; ಮುಟ್ಟಲು ಬಂದ ವ್ಯಕ್ತಿಗೆ ರಾಕಿ ಸಾವಂತ್ ಎಚ್ಚರಿಕೆ

ಗಂಡಸರೇ ದೂರ ನಿಲ್ಲಿ, ನಾನೀಗ ಪವಿತ್ರಳು; ಮುಟ್ಟಲು ಬಂದ ವ್ಯಕ್ತಿಗೆ ರಾಕಿ ಸಾವಂತ್ ಎಚ್ಚರಿಕೆ

ಮೆಕ್ಕಾದಿಂದ ಬಂದ ಬಳಿಕ ರಾಕಿ ಸಾವಂತ್‌ ಬದಲಾದರೇ? ಹೀಗೊಂದು ಪ್ರಶ್ನೆ ಮೂಡುವುದಕ್ಕೆ ಕಾರಣ ಇಲ್ಲಿದೆ ಹೊಸ ವಿಡಿಯೋ. ಗಂಡಸರನ್ನು ಕಂಡೊಡನೆ ನನ್ನನ್ನು ಮುಟ್ಟಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಗಂಡಸರೇ ದೂರ ನಿಲ್ಲಿ, ನಾನೀಗ ಪವಿತ್ರಳು; ಮುಟ್ಟಲು ಬಂದ ವ್ಯಕ್ತಿಗೆ ರಾಕಿ ಸಾವಂತ್ ಖಡಕ್‌ ವಾರ್ನಿಂಗ್‌‌
ಗಂಡಸರೇ ದೂರ ನಿಲ್ಲಿ, ನಾನೀಗ ಪವಿತ್ರಳು; ಮುಟ್ಟಲು ಬಂದ ವ್ಯಕ್ತಿಗೆ ರಾಕಿ ಸಾವಂತ್ ಖಡಕ್‌ ವಾರ್ನಿಂಗ್‌‌

Rakhi Sawant: ಒಂದಿಲ್ಲೊಂದು ವಿವಾದಕ್ಕೆ ತುಪ್ಪ ಸುರಿಯುತ್ತ ಸುದ್ದಿಯಲ್ಲಿರುವ ಬಾಲಿವುಡ್‌ನ ರಾಕಿ ಸಾವಂತ್‌, ಇತ್ತೀಚೆಗಷ್ಟೇ ಮೆಕ್ಕಾಗೆ ತೆರಳಿ ಸುದ್ದಿಯಾಗಿದ್ದರು. ನನಗೆ ಅನ್ಯಾಯವಾಗಿದೆ, ಎಂದು ಬಿಕ್ಕಳಿಸಿ ಅಳುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಮೆಕ್ಕಾದಲ್ಲಿ ಅಲ್ಲಾಹುನ ದರ್ಶನ ಪಡೆದು, "ನನಗೆ ನ್ಯಾಯ ಬೇಕು. ಅದಕ್ಕಾಗಿ ನಾನು ಮೆಕ್ಕಾಗೆ ಬಂದಿದ್ದೇನೆ. ಎಲ್ಲರೂ ನನ್ನ ವಿರುದ್ಧ ಸುಳ್ಳನ್ನೇ ಹೇಳುತ್ತಿದ್ದಾರೆ" ಎಂಬ ವಿಡಿಯೋ ಮಾಡಿ ಸಂಚಲನ ಸೃಷ್ಟಿಸಿ ಸದ್ದು ಮಾಡಿದ್ದರು. ಇದೀಗ ಮೆಕ್ಕಾಗೆ ಹೋಗಿ ಬಂದ ಬಳಿಕ ರಾಕಿಯವರಲ್ಲಿನ ಬದಲಾವಣೆ ನೋಡಿ ಜನಗಳೇ ಅಚ್ಚರಿಗೊಳಗಾಗಿದ್ದಾರೆ.

ಇದೀಗ ಇದೇ ಮೆಕ್ಕಾ ಪ್ರವಾಸದಿಂದ ಮರಳಿ ಮುಂಬೈಗೆ ಆಗಮಿಸಿದ್ದಾರೆ. ಕೆಂಪು ಬಣ್ಣದ ವಿಶೇಷ ದಿರಿಸಿನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೆ ನೂಕಿದ್ದಾರೆ. ಅಷ್ಟೇ ಅಲ್ಲ ರಾಕಿ ಎಂದು ಕರೆದರೆ, ಫಾತೀಮಾ ಎಂದು ಕರೆಯಿರಿ ಎಂದು ಸೂಚಿಸಿದ್ದಾರೆ. ಹೀಗಿರುವಾಗಲೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಅಲ್ಲಿನ ಕೆಲವರು ಅವರನ್ನು ಮುಟ್ಟಲು ಮುಂದಾಗಿದ್ದಾರೆ. ಇಷ್ಟಾಗಿದ್ದೇ ತಡ, ಪುರುಷರು ನನ್ನನ್ನು ಮುಟ್ಟಬೇಡಿ ಎಂದು ಗದರಿದ್ದಾರೆ ರಾಕಿ. ನಾನೀಗ ಪವಿತ್ರಳು ಎಂದೂ ಹೇಳಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೆಕ್ಕಾದಿಂದ ಮುಂಬೈ ಬಂದಿಳಿಯುತ್ತಿದ್ದಂತೆ, ಖಾಸಗಿ ಇವೆಂಟ್‌ನಲ್ಲಿ ರಾಕಿ ಭಾಗವಹಿಸಿದ್ದಾರೆ. ಅಲ್ಲಿಯೇ ನೆರೆದ್ದ ಫೋಟೋಗ್ರಾಫರ್‌ಗಳು ರಾಕಿಯ ಫೋಟೋ ಕ್ಲಿಕ್‌ ಮಾಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬನ ಕೈ ರಾಕಿಗೆ ಟಚ್‌ ಆಗಿದೆ. ದಯಮಾಡಿ, ನನ್ನನ್ನು ಗಂಡಸರು ಮುಟ್ಟಬೇಡಿ. ನಾನು ಮೆಕ್ಕಾ ಮದೀನಾದಿಂದ ಬಂದಿದ್ದೇನೆ. ಗಂಡಸರು ದೂರ ನಿಲ್ಲಿ, ನನ್ನನ್ನು ಮುಟ್ಟಬೇಡಿ. ನಾನು ಪವಿತ್ರಳಾಗಿದ್ದೇನೆ" ಎಂದು ಅಲ್ಲಿನವರಿಗೆ ವಾರ್ನಿಂಗ್‌ ಮಾಡಿದ್ದಾರೆ.

ರಾಕಿ ಹೀಗೆ ಮಾತನಾಡುವ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ನೆಟ್ಟಿಗರು ಮನದುಂಬಿ ಟೀಕೆಯನ್ನು ಮಾಡಿದ್ದಾರೆ. ನೆಗೆಟಿವ್‌ ಕಾಮೆಂಟ್‌ ಮೂಲಕವೇ ರಾಕಿಯ ಕಾಲೆಳೆದಿದ್ದಾರೆ. ಆ ಪೈಕಿ ಕೆಲ ಕಾಮೆಂಟ್ಸ್‌ಗಳು ಹೀಗಿವೆ.

- ರಾಕಿಯ ಈ ನಾಟಕಕ್ಕೆ ಗಿನ್ನಿಸ್‌ ಅವಾರ್ಡ್‌ ನೀಡಬೇಕು

- ರಾಕಿ ಥೇಟ್‌ ಅರಬ್‌ ಕ್ವೀನ್‌ ರೀತಿ ಕಾಣುತ್ತಿದ್ದಾಳೆ

- ನೋಡಿ ರಾಕಿ ಈಗ ಪವಿತ್ರಳಾಗಿದ್ದಾರೆ. ಎಲ್ಲಿಯವರೆಗೂ ಎಂಬುದು ಗೊತ್ತಿಲ್ಲ

- ಇವಳು ಪೂರ್ತಿ ಹುಚ್ಚಿಯಾಗಿದ್ದಾಳೆ

- ಮೇಕಪ್‌ ಮಾಡುವವನು ನಿಮ್ಮನ್ನು ಟಚ್‌ ಮಾಡಲಿಲ್ಲವೇ?

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ