Ganapath Trailer: ಟೈಗರ್‌ ಶ್ರಾಫ್‌ ಗಣಪತ್‌ ಚಿತ್ರದ ಟ್ರೈಲರ್‌ ಬಿಡುಗಡೆ, ಕೃತಿ ಸನನ್‌ ಅಮಿತಾಬ್‌ ಬಚ್ಚನ್‌ ಜತೆಗೆ ರೋಮಾಂಚನಕಾರಿ ಸಾಹಸ
ಕನ್ನಡ ಸುದ್ದಿ  /  ಮನರಂಜನೆ  /  Ganapath Trailer: ಟೈಗರ್‌ ಶ್ರಾಫ್‌ ಗಣಪತ್‌ ಚಿತ್ರದ ಟ್ರೈಲರ್‌ ಬಿಡುಗಡೆ, ಕೃತಿ ಸನನ್‌ ಅಮಿತಾಬ್‌ ಬಚ್ಚನ್‌ ಜತೆಗೆ ರೋಮಾಂಚನಕಾರಿ ಸಾಹಸ

Ganapath Trailer: ಟೈಗರ್‌ ಶ್ರಾಫ್‌ ಗಣಪತ್‌ ಚಿತ್ರದ ಟ್ರೈಲರ್‌ ಬಿಡುಗಡೆ, ಕೃತಿ ಸನನ್‌ ಅಮಿತಾಬ್‌ ಬಚ್ಚನ್‌ ಜತೆಗೆ ರೋಮಾಂಚನಕಾರಿ ಸಾಹಸ

Ganapath: A Hero is Born: ಗಣಪತ್‌: ಎ ಹೀರೋ ಈಸ್‌ ಬಾರ್ನ್‌ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಪಿವಿಆರ್‌ ಸಿನಿಮಾಸ್‌ ಈ ಟ್ರೈಲರ್‌ ಅನ್ನು ಟ್ವಿಟ್ಟರ್‌ನಲ್ಲಿ ರಿಲೀಸ್‌ಮ ಆಡಿದೆ. ಇದು ಎರಡೂವರೆ ನಿಮಿಷದ ಟ್ರೈಲರ್‌ ಆಗಿದೆ. ಈ ಚಿತ್ರದಲ್ಲಿ ಟೈಗರ್‌ ಶ್ರಾಫ್‌, ಕೃತಿ ಸನನ್‌ ಮತ್ತು ಅಮಿತಾಬ್‌ ಬಚ್ಚನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Ganapath Trailer: ಟೈಗರ್‌ ಶ್ರಾಫ್‌ ಗಣಪತ್‌ ಚಿತ್ರದ ಟ್ರೈಲರ್‌ ಬಿಡುಗಡೆ
Ganapath Trailer: ಟೈಗರ್‌ ಶ್ರಾಫ್‌ ಗಣಪತ್‌ ಚಿತ್ರದ ಟ್ರೈಲರ್‌ ಬಿಡುಗಡೆ

ಗಣಪತ್‌: ಎ ಹೀರೋ ಈಸ್‌ ಬಾರ್ನ್‌ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಪಿವಿಆರ್‌ ಸಿನಿಮಾಸ್‌ ಈ ಟ್ರೈಲರ್‌ ಅನ್ನು ಟ್ವಿಟ್ಟರ್‌ನಲ್ಲಿ ರಿಲೀಸ್‌ಮ ಆಡಿದೆ. ಇದು ಎರಡೂವರೆ ನಿಮಿಷದ ಟ್ರೈಲರ್‌ ಆಗಿದೆ. ಈ ಚಿತ್ರದಲ್ಲಿ ಟೈಗರ್‌ ಶ್ರಾಫ್‌, ಕೃತಿ ಸನನ್‌ ಮತ್ತು ಅಮಿತಾಬ್‌ ಬಚ್ಚನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಗಣಪತ್‌ ಟ್ರೈಲರ್‌ನಲ್ಲಿ ಏನಿದೆ?

ಟೈಗರ್ ಶ್ರಾಫ್ ಅವರ ಪಾತ್ರದ ಬಗ್ಗೆ ತಿಳಿಸುವ ಮೂಲಕ ಟ್ರೈಲರ್‌ ಆರಂಭವಾಗುತ್ತದೆ. ಇವರು ದುಷ್ಟರ ಕೂಟದಿಂದ ಜನರನ್ನು ಹೇಗೆ ರಕ್ಷಿಸುತ್ತಾರೆ ಎಂಬುದರ ಕುರಿತು ಟ್ರೈಲರ್‌ ಮಾತನಾಡುತ್ತದೆ. ಬಳಿಕ ಟೈಗರ್‌ ಶ್ರಾಫ್‌ ಅವರ ಹಲವು ಆಕ್ಷನ್‌ ಸೀಕ್ವೆನ್ಸ್‌ಗಳು ಕಾಣಿಸುತ್ತವೆ. ನುಂಚಕು (ಒಂದು ರೀತಿಯ ಆಯುಧ) ಪರಿಣಿತರಾದ ಕೃತಿ ಸನೋನ್ ನಂತರದ ದೃಶ್ಯದಲ್ಲಿ ಕಾಣಿಸುತ್ತಾರೆ. ಬಳಿಕ ಅಮಿತಾಬ್‌ ಬಚ್ಚನ್‌ ಅವರು ಪರದೆಯನ್ನು ಆಕ್ರಮಿಸಿಕೊಳ್ಳುತ್ತಾರೆ. ಒಟ್ಟಾರೆ, ಶತ್ರುಗಳ ಜತೆಗೆ ಹೊಡೆದಾಟದ ದೃಶ್ಯವಿದೆ.

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಗಣಪತ್‌ ಚಿತ್ರ ಬಿಡುಗಡೆಯಾಗಲಿದೆ. ಈ ಪ್ಯಾನ್‌ ಇಂಡಿಯಾದ ಟ್ರೈಲರ್‌ನಲ್ಲಿ ಟೈಗರ್‌ ಶ್ರಾಪ್‌ ಅವರ ಹೊಸ ಅವತಾರವನ್ನು ನೋಡಬಹುದು. ಯಾವುದೋ ಹಾಲಿವುಡ್‌ ಸಿನಿಮಾಗಳ ದೃಶ್ಯಗಳಂತೆ ಈ ಟ್ರೈಲರ್‌ ಭಾಸವಾಗುತ್ತದೆ.

ಬಾಲಿವುಡ್‌ನ ಪೂಜಾ ಎಂಟರ್‌ಟೈನ್ಮೆಂಟ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಹಲವು ಜನಪ್ರಿಯ ಚಿತ್ರಗಳನ್ನು ನೀಡಿರುವ ಈ ನಿರ್ಮಾಣ ಸಂಸ್ಥೆಯ ಗಣಪತ್‌ ಚಿತ್ರದ ಕುರಿತು ಬಾಲಿವುಡ್‌ನಲ್ಲಿ ಹೆಚ್ಚಿನ ನಿರೀಕ್ಷೆಗಳಿವೆ. ಈ ಚಿತ್ರದ ಟ್ರೈಲರ್‌ ನೋಡಿದಾಗಲೇ ಇದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿರುವ ಸಿನಿಮಾ ಎನ್ನುವುದು ಖಾತ್ರಿಯಾಗುತ್ತದೆ.

ಗಣಪತ್‌ ಚಿತ್ರ ಅಕ್ಟೋಬರ್‌ 20ರಂದು ಬಿಡುಗಡೆ

ಬಹುನಿರೀಕ್ಷಿತ ಗಣಪತ್‌ ಪ್ಯಾನ್‌ ಇಂಡಿಯಾ ಚಿತ್ರವು ಅಕ್ಟೋಬರ್‌ 20ರಂದು ಬಿಡುಗಡೆಯಾಗಲಿದೆ. ಅಮಿತಾಬ್‌ ಬಚ್ಚನ್‌ ಕೂಡ ಈ ಚಿತ್ರದಲ್ಲಿರುವುದರಿಂದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನಾಳೆ ಅಮಿತಾಬ್‌ ಬಚ್ಚನ್‌ ತನ್ನ 81ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ಹೊಸ ಪ್ರಪಂಚಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವ ನಿರೀಕ್ಷೆಯಿದೆ.

ಹಾಲಿವುಡ್‌ ಮಾದರಿಯ ಚಿತ್ರ

ಇಂಗ್ಲಿಷ್‌ ಸಿನಿಮಾಗಳಲ್ಲಿ ಈಗಾಗಲೇ ಹಾರುವ ಯಂತ್ರಗಳು, ವಿಶೇಷ ಲೋಕ, ಅನ್ಯಗ್ರಹ ಇತ್ಯಾದಿ ಕತೆಗಳು ಇರುವ ಚಿತ್ರಗಳು ಸಾಕಷ್ಟು ಬಂದಿವೆ. ಗಣಪತ್‌ ಚಿತ್ರದಲ್ಲಿ ಹಾರುವ ವಿಶೇಷ ವಿಮಾನಗಳು, ಹಾರುವ ಯಂತ್ರಗಳನ್ನು ನೋಡುವಾಗ ಇದು ಫ್ಯೂಚರ್‌ ಸಿನಿಮಾ ಎನಿಸುತ್ತದೆ. ಜತೆಗೆ, ಅತ್ಯುತ್ತಮ ಗ್ರಾಫಿಕ್ಸ್‌ಗಳು ಈ ಚಿತ್ರದಲ್ಲಿ ಇರಲಿವೆ. ಜತೆಗೆ, ವಿಎಫ್‌ಎಕ್ಸ್‌ ಕೂಡ ಅನನ್ಯವಾಗಿರಲಿದೆ. "ಗ್ರಾಫಿಕ್ಸ್‌ ಮತ್ತು ವಿಎಫ್‌ಎಕ್ಸ್‌ ವಿಶ್ವದರ್ಜೆಯಲ್ಲಿ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಚಿತ್ರದ ಅನುಭವನ್ನು ಗಣಪತ್‌ ನೀಡಲಿದೆ" ಎಂದು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಜಾಕಿ ಭಗ್ನಾನಿ ಹೇಳಿದ್ದಾರೆ.

Whats_app_banner