Good Bad Ugly: ಬಾಕ್ಸ್ ಆಫೀಸ್‌ನಲ್ಲಿ ಗುಡ್ ಬ್ಯಾಡ್ ಅಗ್ಲಿ ಗಳಿಸಿದ್ದೆಷ್ಟು? ಅಜಿತ್ ಕುಮಾರ್ ಸಿನಿಮಾದ ಗಳಿಕೆ ಗುಡ್ ಅಥವಾ ಬ್ಯಾಡ್
Good Bad Ugly worldwide box office collection day 2: ಅಧಿಕ್ ರವಿಚಂದ್ರನ್ ನಿರ್ದೇಶನದ, ಅಜಿತ್ ಕುಮಾರ್ ಮತ್ತು ತ್ರಿಶಾ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಏಪ್ರಿಲ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡಿದೆ ನೋಡೋಣ.

Good Bad Ugly worldwide box office collection day 2: ಈ ವಾರ ಬಿಡುಗಡೆಯಾದ ಬಹುನಿರೀಕ್ಷಿತ ತಮಿಳು ಸಿನಿಮಾ ಗುಡ್ ಬ್ಯಾಡ್ ಅಗ್ಲಿ ಸಿನಿಮಾವು ಮೊದಲ ಎರಡು ದಿನದಲ್ಲಿ ಉತ್ತಮವಾಗಿಯೇ ಗಳಿಕೆ ಮಾಡಿದೆ. ಅಧಿಕ್ ರವಿಚಂದ್ರನ್ ನಿರ್ದೇಶನದ, ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾವು ಏಪ್ರಿಲ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಕಳೆದ ಎರಡು ದಿನಗಳಲ್ಲಿ 77 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಸ್ಕ್ಯಾನಿಲ್ಕ್.ಕಾಂ ವರದಿ ಮಾಡಿದೆ. ಈ ಮೂಲಕ ಈ ಸಿನಿಮಾವು ಮದ ಗಜ ರಾಜಾ ಮತ್ತು ವೀರ ಧೀರ ಶೂರನ್ ಸಿನಿಮಾಗಳ ಲೈಫ್‌ಟೈಮ್ ಗಳಿಕೆಯನ್ನು ಹಿಂದಿಕ್ಕಿದೆ.
ಗುಡ್ ಬ್ಯಾಡ್ ಅಗ್ಲಿ ಜಾಗತಿಕ ಕಲೆಕ್ಷನ್
ಟ್ರೇಡ್ ವೆಬ್‌ಸೈಟ್ ಸ್ಯಾಕ್ನಿಲ್ಕ್.ಕಾಂ ವರದಿ ಪ್ರಕಾರ ಗುಡ್ ಬ್ಯಾಡ್ ಅಗ್ಲಿ ಸಿನಿಮಾವು 44.25 ಕೋಟಿ ರೂಪಾಯಿ ನಿವ್ವಳ ಮತ್ತು 52 ಕೋಟಿ ರೂಪಾಯಿ ಗ್ರೋಸ್ ಗಳಿಕೆ ಮಾಡಿದೆ. ವಿದೇಶಿ ಮಾರುಕಟ್ಟೆಯಲ್ಲಿ ಈ ಸಿನಿಮಾ 25 ಕೋಟಿ ರೂಪಾಯಿ ಗಳಿಸಿದೆ. ಒಟ್ಟಾರೆ ಈ ಸಿನಿಮಾದ ಎರಡು ದಿನದ ಗಳಿಕೆ 77 ಕೋಟಿ ರೂಪಾಯಿಗೆ ತಲುಪಿದೆ. ಈ ಸಿನಿಮಾವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 51.40 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ, ಶುಕ್ರವಾರದ ಗಳಿಕೆ ಗಮನಾರ್ಹವಾಗಿ ಇಳಿಕೆ ಕಂಡಿದೆ.
ಹೀಗಿದ್ದರೂ ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಗಳಿಕೆಯು ಅಜಿತ್ ಅವರ ಈ ಹಿಂದಿನ ಸಿನಿಮಾ ವಿಡಾಮುಯರ್ಚಿ ಗಳಿಕೆಗಿಂತ ಉತ್ತಮವಾಗಿದೆ. ವಿಡಾಮುಯರ್ಚಿ ಸಿನಿಮಾವು ಮೊದಲ ಎರಡು ದಿನಗಳಲ್ಲಿ 63.45 ಕೋಟಿ ರೂಪಾಯಿ ಗಳಿಸಿತ್ತು. ಈ ಸಿನಿಮಾವು ಒಟ್ಟಾರೆ ಎಲ್ಲಾ ದಿನಗಳು ಸೇರಿ 135.65 ಕೋಟಿ ರೂಪಾಯಿ ಗಳಿಸಿತ್ತು. ಇದೇ ಸಮಯದಲ್ಲಿ ಗುಡ್ ಬ್ಯಾಡ್ ಅಗ್ಲಿಯು ವಿಶಾಲ್‌ನ ಮದ ಗದ ರಾಜಾ ಸಿನಿಮಾದ ಗಳಿಕೆಯನ್ನು ಹಿಂದಿಕ್ಕಿದೆ. ಆ ಸಿನಿಮಾ ಒಟ್ಟಾರೆ 56.15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇಷ್ಟು ಮಾತ್ರವಲ್ಲದೆ ಈ ಸಿನಿಮಾವು ವಿಕ್ರಮ್ ಅವರ ವೀರ ಧೀರ ಸೂರನ್ ಸಿನಿಮಾದ ಗಳಿಕೆಯನ್ನೂ ಹಿಂದಿಕ್ಕಿದೆ. ವೀರ ಧೀರ ಸೂರನ್ ಸಿನಿಮಾವು ಹದಿನಾಲ್ಕು ದಿನಗಳಲ್ಲಿ 63.45 ಕೋಟಿ ರೂಪಾಯಿ ಗಳಿಸಿತ್ತು.
ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಕುರಿತು ಹಿಂದೂಸ್ತಾನ್ ಟೈಮ್ಸ್ ಕನ್ನಡವು ಹೀಗಾಗಲೇ ವಿಮರ್ಶೆ ಪ್ರಕಟಿಸಿದೆ. ಅದರ ಪ್ರಕಾರ "ಅಜಿತ್ ಕುಮಾರ್ ತಮ್ಮ ಅಭಿಮಾನಿಗಳು ಬಯಸುತ್ತಿದ್ದ ಮಾಸ್, ಕಮರ್ಷಿಯಲ್ ಎಂಟರ್‌ಟೈನರ್ ಅವತಾರವನ್ನು ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ನೀಡಿದ್ದಾರೆ. ನಿರ್ದೇಶಕ ಅಧಿಕ್ ರವಿಚಂದ್ರನ್ ತಮಿಳು ಚಿತ್ರರಂಗಕ್ಕೆ ಪರಿಚಿತವಲ್ಲದ ಕ್ಲಾಸಿಕ್ ಗ್ಯಾಂಗ್‌ಸ್ಟರ್-ಗಾನ್-ಕ್ಲೀನ್ ಟ್ರೋಪ್‌ನಲ್ಲಿ ಬೇರೂರಿರುವ ಕಥೆಯನ್ನು ಹೆಣೆದಿದ್ದಾರೆ. ಇದೇ ಸಮಯದಲ್ಲಿ ಅಜಿತ್ ಕುಮಾರ್ ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ". ಪೂರ್ಣ ವಿಮರ್ಶೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ 'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಅಭಿನಂದನ್ ರಾಮಾನುಜಂ ಛಾಯಾಗ್ರಹಣ, ವಿಜಯ್ ವೇಲುಕುಟ್ಟಿ ಸಂಕಲನ ಮತ್ತು ಸಂಗೀತ ನೀಡಿದ್ದಾರೆ.
