Heroines Side Business: ನಟನೆ ಜೊತೆಗೆ ಸೈಡ್ ಬ್ಯುಸಿನೆಸ್‌ನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ನಾಲ್ವರು ನಟಿಯರು
ಕನ್ನಡ ಸುದ್ದಿ  /  ಮನರಂಜನೆ  /  Heroines Side Business: ನಟನೆ ಜೊತೆಗೆ ಸೈಡ್ ಬ್ಯುಸಿನೆಸ್‌ನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ನಾಲ್ವರು ನಟಿಯರು

Heroines Side Business: ನಟನೆ ಜೊತೆಗೆ ಸೈಡ್ ಬ್ಯುಸಿನೆಸ್‌ನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ನಾಲ್ವರು ನಟಿಯರು

ಬಾಲಿವುಡ್‌ನ ಕೆಲವು ನಟಿಯರು ಸಿನಿಮಾದಲ್ಲಿ ನಟನೆಯ ಜೊತೆಗೆ ಸೈಡ್‌ ಬ್ಯುಸಿನೆಸ್‌ನಿಂದ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಬಾಲಿವುಡ್‌ ಟಾಪ್‌ ಹೀರೋಯಿನ್‌ಗಳು ಬ್ಯುಸಿನೆಸ್‌ನಲ್ಲೂ ಸಖತ್ ಸೌಂಡ್ ಮಾಡುತ್ತಿದ್ದಾರೆ.

ನಾಲ್ವರು ನಟಿಯರು ನಟನೆಯ ಜೊತೆಗೆ ಸೈಟ್ ಬ್ಯುಸಿನೆಸ್ ಮೂಲಕ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾರೆ.
ನಾಲ್ವರು ನಟಿಯರು ನಟನೆಯ ಜೊತೆಗೆ ಸೈಟ್ ಬ್ಯುಸಿನೆಸ್ ಮೂಲಕ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾರೆ.

ಮುಂಬೈ: ಬಾಲಿವುಡ್‌ನ (Bollywood Actresses) ಕೆಲವು ಹೀರೋಯಿನ್‌ಗಳು ನಟನೆಯಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಬ್ಯುಸಿ ಶೆಡ್ಯೂಲ್‌ಗಳ ನಡುವೆ ಇವರು ಸೈಡ್‌ ಬ್ಯುಸಿನೆಸ್ (Sid Business) ಕೂಡ ಮಾಡ್ತಾರೆ.  ಅದ್ಭುತ ನಟನೆ ಮಾತ್ರವಲ್ಲದೆ, ಕೆಲವು ನಟಿಯರು (Actress) ಉದ್ಯಮಿಗಳಾಗಿದ್ದಾರೆ. 

ಈ ನಟಿಮಣಿಗಳು ತಮ್ಮ ಸೈಡ್ ಬ್ಯುಸಿನೆಸ್‌ನಿಂದಲೇ ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದಾರೆ. ಕೃತಿ ಸನೋನ್‌ನಿಂದ ಹಿಡಿದು ಅನುಷ್ಕಾ ಶರ್ಮಾವರೆಗೆ ಯಾವ ನಟಿಯ ವ್ಯಾಪಾರ ಎಷ್ಟಿದೆ ಎಂಬುದನ್ನು ಇಲ್ಲಿ ತಿಳಿಯೋಣ. 

ಕೃತಿ ಸನೋನ್ (Kriti Sanon): ರಾಷ್ಟ್ರದಲ್ಲಿ ಭಾರಿ ಸುದ್ದಿಯಾಗಿ ಬಹುಭಾಷೆಗಳಲ್ಲಿ ತೆರೆಗೆ ಬಂದಿದ್ದ ಡಾರ್ಲಿಂಗ್ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ಮೂಲಕ ಗಮನ ಸೆಳೆದಿದ್ದ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ನಟಿ ಕೃತಿ ಸನೋನ್ ಇತ್ತೀಚೆಗೆ ತಮ್ಮ ಸಹೋದರಿ ನೂಪುರ್ ಅವರೊಂದಿಗೆ ಪ್ರೊಡಕ್ಷನ್ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ.

ಪ್ರೊಡಕ್ಷನ್‌ ಸಂಸ್ಥೆಯ ಹೆಸರು ಬ್ಲೂ ಬಟರ್‌ಫ್ಲೈ ಫಿಲ್ಮ್ಸ್ ಅಂತ. ತನ್ನ ನಿರ್ಮಾಣ ಸಂಸ್ಥೆಯ ಆರಂಭಿಸಿದ ನಂತರ ಈಕೆ ಇದರ ಅಡಿಯಲ್ಲಿ ಸಿನಿಮಾಗಳನ್ನು ಮಾಡುವ  ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾಳೆ. ದೋ ಪಟ್ಟಿ ಎನ್ನುವ ಸಿನಿಮಾವನ್ನು ಇದೇ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಸಲಾಗುತ್ತಿದ್ದು, ನಟಿ ಕಾಜೋಲ್ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಈ ಮೂವಿ ನೆಟ್‌ಫ್ಲಿಕ್ಸ್‌ನಲ್ಲಿ ಬಡುಗಡೆಯಾಗಲಿದೆ. 

ಸುಶ್ಮಿತಾ ಸೇನ್ (Sushmita Sen): ಬಾಲಿವುಡ್‌ನ  ಮತ್ತೊಬ್ಬ ನಟಿ ಸುಶ್ಮಿತಾ ಸೇನ್ ಉತ್ತಮ ನಟಿ. ಈಕೆ ಆಭರಣ ಬ್ರಾಂಡ್‌ ಮಾಲೀಕರು. ಇದಲ್ಲದೇ ತಂತ್ರ ಎಂಟರ್‌ಟೈನ್ಮೆಂಟ್ ಪ್ರೊಡಕ್ಷನ್ ಹೌಸ್‌ನ ಮಾಲೀಕರು ಹೌದು. ಸುಶ್ಮಿತಾ ಇದರ ಜೊತೆಗೆ ಹಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. 2022ರ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಸುಶ್ಮಿತಾ ಸೇನ್ ಅವರ ನಿವ್ವಳ ಮೌಲ್ಯ 74 ಕೋಟಿ ರೂಪಾಯಿಗಳು. 

ಅನುಷ್ಕಾ ಶರ್ಮಾ (Anushka Sharma): ಬಾಲಿವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ  ನಟಿಯರ ಪೈಕಿ ಅನುಷ್ಕಾ ಶರ್ಮಾ ಕೂಡ ಒಬ್ಬರು. ಅನುಷ್ಕಾ ಕೂಡ ತಮ್ಮದೇ ಆದ ಪ್ರೊಡಕ್ಷನ್ ಹೌಸ್‌ವೊಂದನ್ನು ಮಾಡಿಕೊಂಡಿದ್ದಾರೆ. ಇವರ ಈ ನಿರ್ಮಾಣ ಸಂಸ್ಥೆ ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್‌ನೊಂದಿಗೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದೆ. ಅನುಷ್ಕಾ ನುಶ್ ಎಂಬ ಡ್ರೆಸ್ ಬ್ರಾಂಡ್‌ಅನ್ನು ಹೊಂದಿದ್ದಾರೆ. 

ದೀಪಿಕಾ ಪಡುಕೋಣೆ (Deepika Padukone): ಬಾಲಿವುಡ್‌ ಮಾತ್ರವಲ್ಲದೆ, ಹಾಲಿವುಡ್‌ನಲ್ಲೂ ಹಲವು ಚಿತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಡಿಂಪಲ್‌ ಕ್ವೀನ್ ದೀಪಿಕಾ ಪಡುಕೋಣೆ ಆಲ್ ಅಬೌಟ್‌ ಯು ಎಂಬ ಬಟ್ಟೆ ಬ್ರಾಂಡ್‌ ಅನ್ನು ನಡೆಸುತ್ತಿದ್ದಾರೆ. ಜೊತೆಗೆ ಲೈವ್ ಲವ್ ಲಾಫ್ ಫೌಂಡೇಶನ್‌ ಸಂಸ್ಥಾಪಕಿಯೂ ಆಗಿದ್ದಾರೆ. ಡಬ್ಲ್ಯೂಐಬಿ  ಪ್ರಕಾರ, ದೀಪಿಕಾ ಪಡುಕೋಣೆ ಅವರ ನಿವ್ವಳ ಮೌಲ್ಯ 498 ಕೋಟಿ ರೂಪಾಯಿ. 

ಈ ನಾಲ್ವರು ನಟಿಯವರು ಮಾತ್ರವಲ್ಲದೆ, ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್‌ ಸೇರಿದಂತೆ ಇತರೆ ಸಿನಿಮಾ ಕ್ಷೇತ್ರಗಳಲ್ಲಿನ ಹಲವು ನಟಿಯರು ತಮ್ಮ ಆದೇ ಸೈಡ್ ಬ್ಯುಸಿನೆಸ್‌ಗಳನ್ನು ಹೊಂದಿದ್ದು,  ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ.

Whats_app_banner