ಕನ್ನಡ ಸುದ್ದಿ  /  ಮನರಂಜನೆ  /  Akshay Kumar Diet: ಅಕ್ಷಯ್‌ ಕುಮಾರ್‌ ಆಹಾರ ಕ್ರಮ, ವರ್ಕೌಟ್‌ ಹೀಗಿರುತ್ತೆ, ಯುವ ಜನರಿಗೆ ಬಾಲಿವುಡ್‌ ನಟನ 5 ಅಮೂಲ್ಯ ಸಲಹೆಗಳಿವು

Akshay Kumar Diet: ಅಕ್ಷಯ್‌ ಕುಮಾರ್‌ ಆಹಾರ ಕ್ರಮ, ವರ್ಕೌಟ್‌ ಹೀಗಿರುತ್ತೆ, ಯುವ ಜನರಿಗೆ ಬಾಲಿವುಡ್‌ ನಟನ 5 ಅಮೂಲ್ಯ ಸಲಹೆಗಳಿವು

Akshay Kumar Diet and workout routine: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಫಿಟ್ನೆಸ್‌ ಪ್ರಿಯರಿಗೆ ಆದರ್ಶ. 56 ವರ್ಷವಾದರೂ ಯುವಕರನ್ನು ನಾಚಿಸುವಂತೆ ದೇಹದ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಅವರ ಆಹಾರ ಕ್ರಮ, ವರ್ಕೌಟ್‌ ಜತೆಗೆ ಯುವ ಜನತೆಗೆ ನೀಡಿರುವ ಅಮೂಲ್ಯ ಫಿಟ್ನೆಸ್‌ ಸಲಹೆಗಳು ಇಲ್ಲಿವೆ.

Akshay Kumar Diet: ಅಕ್ಷಯ್‌ ಕುಮಾರ್‌ ಆಹಾರ ಕ್ರಮ, ವರ್ಕೌಟ್‌
Akshay Kumar Diet: ಅಕ್ಷಯ್‌ ಕುಮಾರ್‌ ಆಹಾರ ಕ್ರಮ, ವರ್ಕೌಟ್‌

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ಗೆ ಈಗ 56 ವರ್ಷ ವಯಸ್ಸು. ಆದರೆ, ನೋಡಿದರೆ ಹಾಗೆನಿಸದು. ನವ ತರುಣರನ್ನು ನಾಚಿಸುವಂತೆ ಆಕ್ಟಿವ್‌ ಆಗಿರುವ ಅಕ್ಷಯ್‌ ಕುಮಾರ್‌ ಈಗಲೂ ಕಠಿಣ ವರ್ಕೌಟ್‌ಗಳ ಮೂಲಕ ಬೆರಗು ಹುಟ್ಟಿಸುತ್ತಾರೆ. ಅವರ ಆರೋಗ್ಯದ ಗುಟ್ಟೇನು ಎಂಬ ಪ್ರಶ್ನೆಗೆ "ಶಿಸ್ತಿನ ಜೀವನಶೈಲಿ ಮತ್ತು ಫಿಟ್ನೆಸ್‌ ಕುರಿತು ಅವರ ಡೆಡಿಕೇಷನ್‌" ಎಂದು ಉತ್ತರಿಸಬಹುದು. ಕಾರ್ಡಿಯೋ, ವೇಟ್‌ ಟ್ರೇನಿಂಗ್‌, ಮಾರ್ಷಿಯಲ್‌ ಆರ್ಟ್‌ನಂತಹ ವರ್ಕೌಟ್‌ಗಳನ್ನು ಮಾಡುತ್ತಾರೆ. ಇದರೊಂದಿಗೆ ಯೋಗ ಮತ್ತು ಧ್ಯಾನದ ಮೂಲಕವೂ ತನ್ನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಕ್ಷಯ್‌ ಕುಮಾರ್‌ರಂತೆ ಆಗಬೇಕೆಂದರೆ ಸಮತೋಲಿತ ಆಹಾರ ಕ್ರಮ ಅನುಸರಿಸಬೇಕಾಗುತ್ತದೆ. ಅತ್ಯುತ್ತಮ ಪ್ರೊಟೀನ್‌ ಇರುವ ಆಹಾರಗಳು, ಉತ್ತಮ ವ್ಯಾಯಾಮ ಇತ್ಯಾದಿಗಳ ಅಗತ್ಯವಿರುತ್ತದೆ. ದೇಹಕ್ಕೆ ಬೇಕಾದ ವಿಟಮಿನ್‌ ಮತ್ತು ಮಿನರಲ್‌ಗಳು ಇರುವ ಆಹಾರವನ್ನು ಯಥೇಚ್ಛವಾಗಿ ಸೇವಿಸಬೇಕು. ಹಣ್ಣು ತರಕಾರಿಗಳು, ಮೀನು, ಮೊಟ್ಟೆ ಇತ್ಯಾದಿಗಳು ಆಹಾರದಲ್ಲಿರಬೇಕು.

ಯುವ ಜನರಿಗೆ ಬಾಲಿವುಡ್‌ ನಟನ ಅಮೂಲ್ಯ ಸಲಹೆಗಳಿವು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಯುವ ಜನರಿಗೆ ಅಕ್ಷಯ್‌ ಕುಮಾರ್‌ ಅಮೂಲ್ಯ ಸಲಹೆ ನೀಡಿದ್ದಾರೆ.

  • - ಯುವ ಜನರು ಫಿಟ್ನೆಸ್‌ ವಿಷಯದಲ್ಲಿ ಸೆಲೆಬ್ರಿಟಿಗಳ ಜೀವನ ಕ್ರಮ ಅನುಸರಿಸಬಾರದು. ವೈದ್ಯರ ಸಲಹೆಯಂತೆ ಜೀವನಶೈಲಿ ಹೊಂದಬೇಕು.
  • - ಸಿನಿಮಾದಲ್ಲಿ ಕಾಣಿಸುವಂತೆ ನಿಜಜೀವನದಲ್ಲಿ ಸೆಲೆಬ್ರಿಟಿಗಳು ಇರುವುದಿಲ್ಲ. ಸಿನಿಮಾ ನಟರಂತೆ ಆಗಬೇಕೆಂದು ಅಡ್ಡದಾರಿ ಹಿಡಿಯಬಾರದು. ಇದರಿಂದ ದೇಹಕ್ಕೆ ಒಳಿತಿಗಿಂತ ಅಪಾಯವೇ ಹೆಚ್ಚು ಎಂದು ಅವರು ಹೇಳಿದ್ದಾರೆ.
  • - ದಪ್ಪ ಆಗುತ್ತೇವೆ ಎಂದು ತುಪ್ಪ ತಿನ್ನುವುದನ್ನು ಬಿಡಬಾರದು. ನಾನು ಗುಣಮಟ್ಟದ ತುಪ್ಪ ಸೇವಿಸುವೆ. ದೇಹಕ್ಕೆ ಕೆಲವೊಂದು ಅಂಶಗಳು ಅಗತ್ಯವಾಗಿ ಬೇಕಿರುತ್ತವೆ.
  • - ಫಿಟ್ನೆಸ್‌ಗಾಗಿ ಸೈಕಲ್‌ ಸವಾರಿ, ಈಜು, ಬ್ಯಾಂಡ್ಮಿಟನ್‌ ಆಟ, ಮೆಟ್ಟಿಲು ಹತ್ತುವುದು ಮತ್ತು ಇಳಿಯುವುದು ಇತ್ಯಾದಿ ನೈಸರ್ಗಿಕ ವಿಧಾನಗಳನ್ನು ಯುವ ಜನರು ಅನುಸರಿಬೇಕು.
  • - ಸಿನಿಮಾ ನಟಿ-ನಟರಂತೆ ಆಗಬೇಕೆಂದು ಸಿನಿಮಾ ತಾರೆಯರ ಡಯೆಟ್‌ ಪ್ಲ್ಯಾನ್‌ಗಳನ್ನು ಕಣ್ಣುಮುಚ್ಚಿ ಅನುಸರಿಸಬೇಡಿ. ನಿಮ್ಮ ದೇಹದ ಸ್ಥಿತಿಗೆ ತಕ್ಕಂತೆ ತಜ್ಞರ ಸಲಹೆಯಂತೆ ಡಯೆಟ್‌ ಪ್ಲ್ಯಾನ್‌ ಮಾಡಬೇಕೆಂದು ಅವರು ಕಿವಿ ಮಾತು ಹೇಳಿದ್ದಾರೆ.

ಅಕ್ಷಯ್‌ ಕುಮಾರ್‌ ಡಯೆಟ್‌ ಕ್ರಮ ಹೀಗಿರುತ್ತದೆ

ಈಗಾಗಲೇ ಹೇಳಿದಂತೆ ಅಕ್ಷಯ್‌ ಕುಮಾರ್‌ ಅವರು ಪ್ರತಿನಿತ್ಯ ಯೋಗ ಮತ್ತು ಇತರೆ ಕಾರ್ಡಿಯೋ ವ್ಯಾಯಾಮಗಳನ್ನು ಮಾಡುತ್ತಾರೆ. ಅವರು ಆಲ್ಕೋಹಾಲ್‌, ಸಿಗರೇಟ್‌, ಕೆಫಿನ್‌ನಂತಹ ವಸ್ತುಗಳಿಂದ ದೂರ ಇರುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 5 ಗಂಟೆಗೆ ಇವರ ದಿನಚರಿ ಆರಂಭವಾಗುತ್ತದೆ. ಇವರು ಬಾಲಿವುಡ್‌ನ ತನ್ನ ತಲೆಮಾರಿನ ಅತ್ಯಂತ ಶಿಸ್ತಿನ ಮತ್ತು ಫಿಟ್‌ ಆಗಿರುವ ನಟ. ಇದೇ ಕಾರಣಕ್ಕೆ ಫಿಟ್ನೆಸ್‌ ವಿಷಯದಲ್ಲಿ ಸಾಕಷ್ಟು ಜನರಿಗೆ ಇವರು ಆದರ್ಶ ವ್ಯಕ್ತಿ.

  • - ಬೆಳಗ್ಗಿನ ಉಪಹಾರಕ್ಕೆ ಇವರು ಪರಾಟ ಮತ್ತು ಒಂದು ಲೋಟ ಹಾಲು ಕುಡಿಯುತ್ತಾರೆ. ಬೆಳಗ್ಗೆ ಹೊಟ್ಟೆ ತುಂಬಾ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.
  • - ಮಿಡ್‌ ಡೇ ಸ್ನಾಕ್‌ ಆಗಿ ಹಣ್ಣುಗಳು, ಒಣ ಹಣ್ಣುಗಳು ಇತ್ಯಾದಿಗಳನ್ನು ಸೇವಿಸುತ್ತಾರೆ.
  • - ಮಧ್ಯಾಹ್ನದ ಊಟಕ್ಕೆ ಇವರು ರೋಟಿ, ದಾಲ್‌, ಒಂದು ಕಪ್‌ ತರಕಾರಿ ತುಂಡುಗಳು, ಮೊಸರು, ಬಾಯ್ಲ್ಡ್‌ ಅಥವಾ ಸ್ಟೀಮ್‌ ಮಾಡಿರುವ ಚಿಕನ್‌ ಸೇವಿಸುತ್ತಾರೆ.
  • - ರಾತ್ರಿಯೂಟ ಸಿಂಪಲ್‌ ಆಗಿರುತ್ತದೆ. ಸೂಪ್‌ ಮತ್ತು ತರಕಾರಿ ಸೇವನೆಗೆ ಆದ್ಯತೆ ನೀಡುತ್ತಾರೆ. ರಾತ್ರಿ 8 ಗಂಟೆಗೆ ಮೊದಲು ರಾತ್ರಿಯೂಟ ಮುಗಿಸುತ್ತಾರೆ. ರಾತ್ರಿ ಡಿನ್ನರ್‌ ಮುಗಿದ ಬಳಿಕ ಎರಡು ಗಂಟೆ ಕಳೆದು ಆಮೇಲೆ ನಿದ್ದೆ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಈ ಮೂಲಕ ರಾತ್ರಿಯೂಟ ಸರಿಯಾಗಿ ಡೈಜೆಸ್ಟ್‌ ಆದ ಬಳಿಕ ನಿದ್ದೆ ಮಾಡುತ್ತಾರೆ.

ಇದನ್ನು ಓದಿ: Rashmika Mandanna: ವರ್ಕೌಟ್‌ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ; ಫಿಟ್ನೆಸ್‌ಗಾಗಿ ಇಷ್ಟೊಂದು ಶ್ರಮ ವಹಿಸ್ತಾರ ಅನಿಮಲ್‌ ನಟಿ

ಟಿ20 ವರ್ಲ್ಡ್‌ಕಪ್ 2024