Alia Bhatt Diet: ಬಾಲಿವುಡ್ ನಟಿ ಆಲಿಯಾ ಭಟ್ ತೂಕ ಇಳಿಸಿಕೊಂಡದ್ದು ಹೇಗೆ, ಫಿಟ್ನೆಸ್ ಎಂದರೆ ಮೈಮಾಟ ಅಷ್ಟೇ ಅಲ್ಲ
How did Alia Bhatt lose weight: ಬಾಲಿವುಡ್ ನಟಿ ಆಲಿಯಾ ಭಟ್ ತೂಕ ಇಳಿಸಿಕೊಂಡಿರುವುದು ಹೇಗೆ? ಆಲಿಯಾ ಭಟ್ ಡಯೆಟ್ ಪ್ಲ್ಯಾನ್ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ವರ್ಕೌಟ್ ಎಂದರೆ ಕೇವಲ ಮೈಮಾಟ ರೂಪುಗೊಳ್ಳುವ ಪ್ರಕ್ರಿಯೆಯಲ್ಲ. ಅದು ನಮ್ಮ ರೋಗ ನಿರೋಧಕ, ಆರೋಗ್ಯ ಮತ್ತು ಶಕ್ತಿ ಉತ್ತಮಪಡಿಸುವಂತೆ ಇರಬೇಕು ಎಂದು ಆಲಿಯಾ ಭಟ್ ಸಲಹೆ ನೀಡಿದ್ದಾರೆ.
ಬಾಲಿವುಡ್ ನಟಿಯರಲ್ಲಿ ಆಲಿಯಾ ಭಟ್ ಎಂದರೆ ಸಾಕಷ್ಟು ಜನರಿಗೆ ಅಚ್ಚರಿ. ಪುಟ್ಟ ಹುಡುಗಿಯಂತೆ ಕಾಣಿಸುವ ಈ ನಟಿ ಹೇಗೆ ತನ್ನ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತಾರೆ. ಇವರ ಸುಂದರ ಮೈಕಟ್ಟಿನ ರಹಸ್ಯವೇನು ಎಂಬ ಸಂದೇಹ ಎಲ್ಲರಲ್ಲಿಯೂ ಇರುತ್ತದೆ. ರಾಕಿ ಔರ್ ರಾಣಿ ಕಾ ಪ್ರೇಮ್ ಕಹಾನಿ, ಬ್ರಹ್ಮಾಸ್ತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಆಲಿಯಾ ಭಟ್ ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲೂ ತಮ್ಮ ತೂಕ ಇಳಿಕೆ ಕುರಿತಾದ ಅಪ್ಡೇಟ್ಗಳನ್ನು ನೀಡುತ್ತ ಇರುತ್ತಾರೆ. ಪ್ರತಿನಿತ್ಯ ತೂಕ ಹೆಚ್ಚಾಗುತ್ತದೆ ಎಂಬ ಭಯದಲ್ಲಿ ಸರಿಯಾಗಿ ಊಟ ಮಾಡದೆ ಇರುವ ಮಹಿಳೆಯರಿಗೆ, ಪುರುಷರಿಗೆ ಆಲಿಯಾ ಭಟ್ ಅವರ ವರ್ಕೌಟ್ ಮತ್ತು ಡಯೆಟ್ ಪ್ಲ್ಯಾನ್ಗಳು ಸ್ಪೂರ್ತಿಯಾಗಬಲ್ಲದು. ಓದಿ: Rashmika Mandanna: ವರ್ಕೌಟ್ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ; ಫಿಟ್ನೆಸ್ಗಾಗಿ ಇಷ್ಟೊಂದು ಶ್ರಮ ವಹಿಸ್ತಾರ ಅನಿಮಲ್ ನಟಿ
ಆಲಿಯಾ ಭಟ್ ತೂಕ ಇಳಿಸಿಕೊಂಡಿರುವುದು ಹೇಗೆ ಎಂದು ಇಂಟರ್ನೆಟ್ನಲ್ಲಿ ಅತ್ಯಧಿಕ ಜನರು ಸರ್ಚ್ ಮಾಡುತ್ತಾರೆ. ಎಲ್ಲರಿಗೂ ಆಕೆಯ ಡಯೆಟ್ ಮತ್ತು ವರ್ಕೌಟ್ ತಿಳಿಯೋ ಕುತೂಹಲ. ಆಲಿಯಾ ಭಟ್ ಅವರಿಗೆ ರಹಾ ಎಂಬ ಮಗಳಿದ್ದಾಳೆ. ಈ ಮಗು ಹುಟ್ಟಿದ ಬಳಿಕ ಇವರು ತೂಕ ಇಳಿಕೆ ಮಾಡಲು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಸಿನಿಮಾದಲ್ಲಿ ನಟಿಸುವ ಉದ್ದೇಶಕ್ಕಾಗಿ ತೂಕ ಇಳಿಕೆ ಅನಿವಾರ್ಯ ಎಂದು ಅವರು ಈ ಹಿಂದೆ ಹೇಳಿದ್ದಾರೆ. ಇದನ್ನೂ ಓದಿ: Diet Tips: ದೀಪಿಕಾ ಪಡುಕೋಣೆ ಸಪುರ ಮೈಕಟ್ಟು ರಹಸ್ಯ ಬಯಲು; ತೂಕ ಇಳಿಸಲು ಅನ್ನ ತಿನ್ನೋಲ್ವಂತೆ, ಹೀಗಿದೆ ಅವರ ಆಹಾರಕ್ರಮ- ವ್ಯಾಯಾಮ ದಿನಚರಿ
ವರ್ಕೌಟ್ ಎಂದರೆ ಕೇವಲ ತೂಕ ಇಳಿಕೆ ಅಲ್ಲ
ಈ ಹಿಂದಿನ ಸಂದರ್ಶನದಲ್ಲಿ ತೂಕ ಇಳಿಕೆ ಕುರಿತು ಅವರು ಸ್ಪೂರ್ತಿದಾಯಕ ವಿಚಾರವೊಂದನ್ನು ಹೇಳಿದ್ದರು. "ವರ್ಕೌಟ್ ಎಂದರೆ ಕೇವಲ ಮೈಮಾಟ ರೂಪುಗೊಳ್ಳುವ ಪ್ರಕ್ರಿಯೆಯಲ್ಲ. ಅದು ನಮ್ಮ ರೋಗ ನಿರೋಧಕತೆ ಮತ್ತು ಶಕ್ತಿಯನ್ನು ಹೆಚ್ಚಿಸುವಂತೆ ಇರಬೇಕು. ನಾವು ಮಾಡುವ ವರ್ಕೌಟ್ ಆರೋಗ್ಯಕರವಾಗಿರಬೇಕು. ಅನಾರೋಗ್ಯಕರ ಡಯೆಟ್ ಮಾಡಬೇಡಿ" ಎಂದು ತಮ್ಮ ಫ್ಯಾನ್ಸ್ಗೆ ಅವರು ಹಲವು ಬಾರಿ ಸಲಹೆ ನೀಡಿದ್ದಾರೆ.
ಸ್ಟೈಲ್ಕ್ರೇಜ್ ವೆಬ್ಸೈಟ್ ಪ್ರಕಾರ ಆಲಿಯಾ ಭಟ್ ಅವರು ತೂಕ ಇಳಿಸಲು ಸಾಕಷ್ಟು ಶ್ರಮವಹಿಸಿದ್ದಾರೆ. ಆಲಿಯಾ ಭಟ್ ದೊಡ್ಡ ಕನಸು ಮತ್ತು ಗುರಿಗಳನ್ನು ಬೆನ್ನೆತ್ತಿದ್ದ ಹುಡುಗಿ. ಕರಣ್ ಜೋಹರ್ ಸಿನಿಮಾದಲ್ಲಿ ನಟಿಸಬೇಕಾದ ಸಂದರ್ಭದಲ್ಲಿ ಇವರು 68 ಕೆಜಿ ತೂಕ ಹೊಂದಿದ್ದರು. ಅವರ ವಯಸ್ಸು ಮತ್ತು ಎತ್ತರಕ್ಕೆ ಹೋಲಿಸಿದರೆ ಅವರ ತೂಕ 20 ಕೆಜಿ ಹೆಚ್ಚಿತ್ತು. ಅವರು ಸೂಪರ್ ಹೆಲ್ದಿ ವರ್ಕೌಟ್ ಮೂಲಕ ಇವರು ತೂಕ ಇಳಿಸುವಲ್ಲಿ ಸಫಲರಾದರು. ಇದನ್ನು ಓದಿದ್ದೀರಾ?: Healthy Diet: ಆಫೀಸ್ ಕೆಲಸದ ಅವಧಿಯಲ್ಲಿ ಆರೋಗ್ಯಕರ ಡಯೆಟ್ ಹೇಗೆ, ಈ 5 ಸಲಹೆ ಗಮನಿಸಿ
ಆಲಿಯಾ ಭಟ್ ಅವರ ಡಯೆಟ್ ಪ್ಲ್ಯಾನ್ ಹೀಗಿದೆ
ಸಾವಯವ ಮತ್ತು ಆರೋಗ್ಯಕರ ಆಹಾರ ಆಲಿಯಾ ಭಟ್ ಅವರ ಡಯೆಟ್ ಪ್ಲ್ಯಾನ್ನಲ್ಲಿ ಇರುತ್ತದೆ. ಈಕೆಗೆ ಸಿಹಿ ತಿನ್ನುವುದು ಇಷ್ಟವಂತೆ. ಸಿಹಿ ಸಿಕ್ಕಾಗ ಬಿಡುವವರೇ ಅಲ್ಲ. "ನನಗೆ ಪರ್ಸನಲ್ ಟ್ರೈನರ್ (ಫಿಟ್ನಸ್ ಟ್ರೈನರ್) ದೊರಕಿದರು. ಅವರು ನನ್ನ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಮಾಡಿದರು. ನಾನು ತರಕಾರಿ ಮತ್ತು ಚಿಕನ್ ತಿನ್ನುತ್ತೇನೆ. ನನಗೆ ಇಷ್ಟವಾಗಿರುವ ಎಲ್ಲಾ ಆಹಾರಗಳನ್ನು ತ್ಯಜಿಸಬೇಕಾಯಿತು" ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಬ್ರೇಕ್ಫಾಸ್ಟ್: ಬೆಳಗ್ಗೆ ಎದ್ದ ಬಳಿಕ ಬಿಸಿ ಹರ್ಬಲ್ ಟೀ ಅಥವಾ ಕಾಫಿ ಕುಡಿಯುತ್ತಾರೆ. ಇದಕ್ಕೆ ಸಕ್ಕರೆ ಹಾಕುವುದಿಲ್ಲ. ಇದರೊಂದಿಗೆ ಒಂದು ಬೌಲ್ನಲ್ಲಿ ವೆಜಿಟೇಬಲ್ ಪೋಹ ಅಥವಾ ಮೊಟ್ಟೆ ಬಿಳಿಭಾಗದ ಸ್ಯಾಂಡ್ವಿಚ್ ಸೇವಿಸುತ್ತಾರೆ.
ಬೆಳಗ್ಗೆ-ಮಧ್ಯಾಹ್ನದ ನಡುವೆ: ಒಂದು ಬೌಲ್ ಹಣ್ಣುಗಳು (ಹೆಚ್ಚಾಗಿ ಪಪ್ಪಾಯಿ) ಅಥವಾ ಒಂದು ಇಂಡ್ಲಿ (ಕೊಂಚ ಸಾಂಬಾರ್).
ಲಂಚ್: ತುಪ್ಪ ಇಲ್ಲದೆ ಒಂದು ರೊಟ್ಟಿ. ಸಾಕಷ್ಟು ತರಕಾರಿ. ಒಂದು ಕಪ್ ದಾಲ್. ಮೊಸರು ಅಥವಾ ಚಿಕನ್ ಜತೆ ನವಣೆ.
ಸಂಜೆ ಸ್ನ್ಯಾಕ್: ಸಕ್ಕರೆ ರಹಿತ ಚಹ ಅಥವಾ ಕಾಫಿ. ಒಂದು ಇಡ್ಲಿ (ಕೊಂಚ ಸಾಂಬಾರ್).
ರಾತ್ರಿ: ರಾತ್ರಿಯೂಟವಾದರೂ ಹೊಟ್ಟೆ ತುಂಬಾ ತಿನ್ತಾರ ಎಂದುಕೊಳ್ಳಬೇಡಿ. ರಾತ್ರಿಯೂ ತುಪ್ಪ ಇಲ್ಲದೆ ಒಂದು ರೊಟ್ಟಿ. ಒಂದು ಬೌಲ್ ತರಕಾರಿ. ಅಪರೂಪಕ್ಕೆ ಗ್ರಿಲ್ ಚಿಕನ್.