‘ಬಂಟಿ ನಿನ್ನ ಸೋಪ್ ಸ್ಲೋನಾ?’ ಎಂದಿದ್ದ ಪುಟಾಣಿ ಹುಡುಗಿ ಈಗ ಬೋಲ್ಡ್ ಬ್ಯೂಟಿ, ಮಾದಕತೆಗೂ ಮತ್ತೊಂದು ಹೆಸರು
ಬಂಟಿ ನಿನ್ನ ಸೋಪ್ ಸ್ಲೋನಾ? ಹೀಗೊಂದು ಡೈಲಾಗ್ ಕೇಳುತ್ತಿದ್ದಂತೆ, ಹ್ಯಾಂಡ್‌ವಾಷ್ ಜಾಹೀರಾತು ನಿಮ್ಮ ಗಮನಕ್ಕೆ ಬರಬಹುದು. ದಶಕದ ಹಿಂದಿನ ಈ ಜಾಹೀರಾತಲ್ಲಿ ನಟಿಸಿದ್ದ ಪುಟಾಣಿ ಹುಡುಗಿ ಈಗ ಸಾಕಷ್ಟು ಬದಲಾಗಿದ್ದಾರೆ. ಹಾಟ್‌ನೆಸ್ ಮೂಲಕವೇ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಇವರ ಹೆಸರು ಅವ್ನೀತ್ ಕೌರ್.

Avneet Kaur: ಬಣ್ಣದ ಲೋಕ ಒಂದು ರೀತಿ ಅದು ಹರಿಯುವ ನೀರಿದ್ದಂತೆ. ಅಲ್ಲಿ ಗಟ್ಟಿಯಾಗಿ ನೆಲೆನಿಂತವರಿಗಿಂತ, ಹರಿವ ನೀರಿನಂತೆ ಕಣ್ಮರೆ ಆದವರೇ ಹೆಚ್ಚು. ಬಾಲ ಕಲಾವಿದರಾಗಿ, ನಾಯಕಿಯರಾಗಿ, ಹೀರೋಗಳಾಗಿ ಎಷ್ಟೋ ಮಂದಿ ಬಂದರೂ, ಎಲ್ಲರೂ ಖ್ಯಾತಿಯ ಶಿಖರವನ್ನೇನು ಮುಟ್ಟಿಲ್ಲ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಅದೇ ಬಾಲ ಕಲಾವಿದರ ಅಂದು ಮತ್ತು ಇಂದು ಎಂಬ ಪರಿಕಲ್ಪನೆಯ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಆ ಪೈಕಿ ದಶಕದ ಹಿಂದೆ ಲೈಫ್‌ಬಾಯ್ ಹ್ಯಾಂಡ್‌ವಾಷ್ ಜಾಹೀರಾತು ಮೂಲಕ ಎಲ್ಲರ ಗಮನ ಸೆಳೆದಿದ್ದ ಅಂದಿನ ಪುಟಾಣಿ ಹುಡುಗಿ ಈಗ ಸಖತ್ ಹಾಟ್ ಹಾಟ್!
ನಾವಿಲ್ಲಿ ಹೇಳ ಹೊರಟಿರುವ ಹುಡುಗಿ ನಿಮಗೂ ನೆನಪಿರಬಹುದು. ಟಿವಿ ನೋಡುವಾಗ ಆಗಾಗ ಜಾಹೀರಾತಿನಲ್ಲಿ ನಿಮ್ಮ ಎದುರು ಬಂದು, ಬಂಟಿ ನಿನ್ನ ಸೋಪು ಸ್ಲೋನಾ? ಎಂದು ಹೇಳುತ್ತಿದ್ದ ಹುಡುಗಿ ನೆನಪಿದ್ದಾಳಾ? ಹತ್ತು ವರ್ಷದ ಹಿಂದೆ ಲೈಫ್‌ಬಾಯ್ ಹ್ಯಾಂಡ್‌ವಾಶ್ ಜಾಹೀರಾತಿನಲ್ಲಿ ಈ ಹುಡುಗಿ ಕಾಣಿಸಿಕೊಂಡಿದ್ದಳು. ಈಗ ದಶಕ ಉರುಳಿದೆ. ಅಂದಿನ ಆ ಪುಟಾಣಿ ಈಗ ಸಖತ್ ಹಾಟ್! ಸೋಷಿಯಲ್ ಮೀಡಿಯಾದಲ್ಲೂ ಪ್ರಭಾವಿಯಾಗಿ, ಯಾವ ಸೆಲೆಬ್ರಿಟಿಗೂ ಕಮ್ಮಿ ಇಲ್ಲ ಎಂಬಂತೆ ಬೆಳೆದಿದ್ದಾರೆ. ಅವರ ಹೆಸರು ಅವ್ನೀತ್ ಕೌರ್.
ಸೋಷಿಯಲ್ ಮೀಡಿಯಾದಲ್ಲೂ ಸ್ಟ್ರಾಂಗ್
ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 32 ಮಿಲಿಯನ್ (3 ಕೋಟಿ 20 ಲಕ್ಷಕ್ಕೂ ಅಧಿಕ) ಫಾಲೋವರ್ಸ್ ಹೊಂದಿರುವ ಈ ಬೆಡಗಿ, ತಮ್ಮ ಸೌಂದರ್ಯದ ಮೂಲಕವೇ ಮೋಡಿ ಮಾಡುತ್ತ ಹಲ್‌ಚಲ್ ಸೃಷ್ಟಿಸುತ್ತಿದ್ದಾರೆ. ಹೌದು ಲೈಫ್ ಬಾಯ್ ಹ್ಯಾಂಡ್ ವಾಶ್ ಜಾಹೀರಾತಿನಲ್ಲಿ ನಟಿಸಿದ ಪುಟ್ಟ ಹುಡುಗಿಯ ಹೆಸರು ಅವ್ನೀತ್ ಕೌರ್. ಬಾಲಕಿಯಾಗಿದ್ದಾಗಲೇ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಇವರು, ಬಾಲಿವುಡ್‌ನಲ್ಲಿ ಅನೇಕ ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇಲ್ಲಿಗೆ ಮುಗಿಯಲಿಲ್ಲ ರಾಣಿ ಮುಖರ್ಜಿ ಅವರ ಮರ್ದಾನಿ ಸಿನಿಮಾದಲ್ಲಿ ಮೀರಾ ಪಾತ್ರದಲ್ಲೂ ನಟಿಸಿ ಮತ್ತಷ್ಟು ಫೇಮ್ ಹೆಚ್ಚಿಸಿಕೊಂಡರು.
ಈಗ ಈ ಯುವತಿಯ ವಯಸ್ಸೆಷ್ಟು?
2001ರಲ್ಲಿ ಪಂಜಾಬ್‌ನ ಜಲಂದರ್‌ನಲ್ಲಿ ಜನಿಸಿರುವ ಅವ್ನೀತ್ ಕೌರ್. ಹೆತ್ತವರ ಜತೆಗೆ ಮುಂಬೈನಲ್ಲಿಯೇ ವಾಸವಾಗಿದ್ದಾರೆ. ಸದ್ಯ ಬೆಡಗಿಯ ವಯಸ್ಸು ಕೇವಲ 22. ಈ ನಡುವೆ ಸಿನಿಮಾ, ಧಾರಾವಾಹಿ, ಟಿವಿ ಶೋಗಳಲ್ಲಿ ಸದಾ ಬಿಜಿಯಾಗಿರುವ ಈ ಬೋಲ್ಡ್ ಬ್ಯೂಟಿ, ಸೋಷಿಯಲ್ ಮೀಡಿಯಾದಲ್ಲಿಯೂ ಆಗಾಗ ತಮ್ಮ ಹಸಿಬಿಸಿ ಫೋಟೋಗಳ ಮೂಲಕವೇ ಸುದ್ದಿಯ ಮುನ್ನೆಲೆಯಲ್ಲಿರುತ್ತಾರೆ. ತೀರಾ ಹಾಟ್ ಎನಿಸುವ ಫೋಟೋಗಳನ್ನೇ ಶೇರ್ ಮಾಡುತ್ತ ಪಡ್ಡೆಗಳ ಎದೆಬಡಿತವನ್ನೂ ಶೇಕ್ ಮಾಡುತ್ತಿರುತ್ತಾರೆ ಅವ್ನೀತ್ ಕೌರ್.
ಇಲ್ಲಿದೆ ನೋಡಿ ಅವ್ನೀತ್ ಕೌರ್ ಹೊಸ ವಿಡಿಯೋ
ಸಿಖ್ ಕುಟುಂಬದ ಅವ್ನೀತ್ ಕೌರ್
ಸಿಖ್ ಕುಟುಂಬದ ಸೋನಿಯಾ ನಂದ್ರಾ, ಅಮನ್‌ದೀಪ್ ಸಿಂಗ್ ನಂದ್ರಾ ದಂಪತಿಯ ಮಗಳು ಈ ಅವ್ನೀತ್ ಕೌರ್. 2010 ರಿಂದಲೇ ಅಂದರೆ ಕೇವಲ 10 ವರ್ಷದವಳಿದ್ದಾಗಲೇ ಜಾಹೀರಾತು ಲೋಕದಲ್ಲಿ ಮಿಂಚಲು ಶುರು ಮಾಡಿದ ಈ ಪುಟಾಣಿ, ಮಾಡೆಲಿಂಗ್, ಸಿನಿಮಾ, ಕಿರುತೆರೆಯಲ್ಲೂ ಗುರುತಿಸಿಕೊಂಡರು. ಮ್ಯೂಸಿಕ್ ವಿಡಿಯೋ ಮೂಲಕವೂ ಸದ್ದು ಮಾಡಿದ್ದ ಅವ್ನೀತ್, ಬಂದಿಷ್ ಬಂಡಿತ್ ವೆಬ್ ಸಿರೀಸ್‌ನಲ್ಲೂ ನಟಿಸಿದ್ದಾರೆ.
