ಕನ್ನಡ ಸುದ್ದಿ  /  Entertainment  /  Bollywood News How To Grow Instant Tomato Rakhi Sawant Teaches Tomato Farming Tomato Price Hike Rsm

Rakhi Sawant: ದಿಢೀರ್‌ ಅಂತ ಟೊಮೆಟೊ ಬೆಳೆಯೋದು ಹೇಗೆ; ಬಾಲಿವುಡ್‌ ನಟಿ ರಾಖಿ ಸಾವಂತ್‌ ಹೇಳಿ ಕೊಡ್ತಾರೆ ನೋಡಿ, ಕಲಿಯಿರಿ, ನೀವೂ ಬೆಳೆಯಿರಿ

ಬಾಲಿವುಡ್‌ ನಟಿ ರಾಖಿ ಸಾವಂತ್ ಟೊಮೆಟೊ‌ ಬೆಳೆದು ಸುದ್ದಿಯಾಗಿದ್ದಾರೆ. ಅದು ಅಂತಿಥ ಟೊಮೆಟೊ ಅಲ್ಲ ದಿಢೀರ್‌ ಟೊಮೆಟೊ ಬೆಳೆ. 4-5 ಟೊಮೆಟೊಗಳನ್ನು ಪಾಟ್‌ ಒಳಗೆ ಹಾಕುವ ರಾಖಿ, ಅದರ ಮೇಲೆ ಮಣ್ಣು ಮುಚ್ಚಿ, ಟೊಮೆಟೊ ಗಿಟ ನೆಟ್ಟು ಮತ್ತೆ ಮಣ್ಣು ಹಾಕಿ ನೀರು ಹಾಕುತ್ತಾರೆ.

ಟೊಮೆಟೊ ಬೆಳೆದ ರಾಖಿ ಸಾವಂತ್
ಟೊಮೆಟೊ ಬೆಳೆದ ರಾಖಿ ಸಾವಂತ್

ಕಳೆದ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ಟೊಮೆಟೊ ಭಾರೀ ಸದ್ದು ಮಾಡುತ್ತಿದೆ. ಎಲ್ಲೆಡೆ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಎಷ್ಟೊ ಕಡೆ ಟೊಮೆಟೊ ಕಳ್ಳತನವಾಗುತ್ತಿದೆ. ಕೆಲವೆಡೆ ಕಳ್ಳರು ಹೊಲದಿಂದ ಟೊಮೆಟೊ ಕದ್ದರೆ ಇನ್ನೂ ಕೆಲವೆಡೆ ಟೊಮೆಟೊ ವಾಹವನ್ನೇ ಕದ್ದೊಯ್ದಿರುವ ಘಟನೆ ವರದಿ ಆಗಿದೆ. ಈ ನಡುವೆ ಬಾಲಿವುಡ್‌ ನಟಿ ರಾಖಿ ಸಾವಂತ್‌ ಕಡಿಮೆ ಸಮಯದಲ್ಲಿ ಟೊಮೆಟೊ ಬೆಳೆಯುವುದು ಹೇಗೆ ಎಂಬ ಟಿಪ್ಸ್‌ ನೀಡಿದ್ದಾರೆ ನೋಡಿ.

ಟ್ರೆಂಡಿಂಗ್​ ಸುದ್ದಿ

ಫನ್ನಿ ವಿಡಿಯೋಗಳ ಮೂಲಕವೇ ಸದ್ದು ಮಾಡುತ್ತಿರುವ ರಾಖಿ

ರಾಖಿ ಸಾವಂತ್‌ ರಂಪಾಂಟ ಒಂದಾ ಎರಡಾ, ಯಾರಿಗೂ ತಿಳಿಯದಂತೆ ಕಳೆದ ವರ್ಷ ಆದಿಲ್‌ ಖಾನ್‌ ಮದುವೆ ಆಗಿದ್ದ ರಾಖಿ ಸಾವಂತ್‌ ಆತ ಮೋಸಗಾರ ಎಂದು ತಿಳಿಯುತ್ತಿದ್ದಂತೆ ಆತನನ್ನು ದೂರ ಮಾಡಿದ್ದರು. ರೆಸ್ಟೋರೆಂಟ್‌ ಒಂದರಲ್ಲಿ ಊಟ ಮಾಡಿಸಿ ಅರೆಸ್ಟ್‌ ಮಾಡಿಸಿದ್ದರು. ಆದಿಲ್‌ ಹೊಸ ಹೊಸ ಅವಾಂತರಗಳ ಬಗ್ಗೆ ತಿಳಿಯುತ್ತಿದ್ದಂತೆ ನನ್ನ ಜೀವನ ಹಾಳಾಯ್ತು ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು. ಮೈಸೂರಿಗೂ ಹೋಗಿ ಆದಿಲ್‌ ಖಾನ್‌ ಕುಟುಂಬದವರನ್ನು ಭೇಟಿ ಮಾಡಲು ಯತ್ನಿಸಿದ್ದರು. ಆದರೆ ಯಾರೂ ಸಿಗದ ವಾಪಸ್‌ ಆಗಿದ್ದರು.

ದಿಢೀರ್‌ ಟೊಮೆಟೊ ಬೆಳೆದ ರಾಖಿ ಸಾವಂತ್

ಇಷ್ಟೆಲ್ಲಾ ಸಮಸ್ಯೆ ಅನುಭವಿಸಿದರೂ ರಾಖಿ ಸಾವಂತ್‌ ಎಲ್ಲವನ್ನೂ ಮರೆತು ಮೊದಲಿನಂತೆ ಫನ್ನಿ ವಿಡಿಯೋ ಮೂಲಕ . ಈಗ ಅವರು ಟೊಮೆಟೊ ಬೆಳೆ ಬೆಳೆದು ಸುದ್ದಿಯಾಗಿದ್ದಾರೆ. ಅದು ಅಂತಿಥ ಟೊಮೆಟೊ ಅಲ್ಲ ದಿಢೀರ್‌ ಟೊಮೆಟೊ ಬೆಳೆ. 4-5 ಟೊಮೆಟೊಗಳನ್ನು ಪಾಟ್‌ ಒಳಗೆ ಹಾಕುವ ರಾಖಿ, ಅದರ ಮೇಲೆ ಮಣ್ಣು ಮುಚ್ಚಿ, ಟೊಮೆಟೊ ಗಿಟ ನೆಟ್ಟು ಮತ್ತೆ ಮಣ್ಣು ಹಾಕಿ ನೀರು ಹಾಕುತ್ತಾರೆ. ಈ ಗಿಡದ ಹೆಸರು ರಾಖಿ ಕಾ ಟಮಾಟರ್‌ , ಸರ್ಕಾರ ಜನರು ತಿನ್ನುವ ಆಹಾರ ಪದಾರ್ಥಗಳ ಬೆಲೆ ಏಕೆ ಹೆಚ್ಚಿಸುತ್ತಾರೋ ಗೊತ್ತಿಲ್ಲ, ಜೀವನ ಬಹಳ ಕಷ್ಟವಾಗಿದೆ ಎಂದು ಹೇಳುತ್ತಿರುವ ವಿಡಿಯೋ ವೈರಲ್‌ ಆಗುತ್ತಿದೆ. ‌

ಇನ್ನಷ್ಟು ಮನರಂಜನೆ ಸುದ್ದಿಗಳು

ಸಮಂತಾ ಕುರಿತು, ಕರ್ಮ ಯಾರನ್ನೂ ಬಿಡುವುದಿಲ್ಲ ಎಂದ ಮಹೇಶ್‌ ಬಾಬು ಅಭಿಮಾನಿಗಳು; ಖುಷಿ ಸಿನಿಮಾ ನಟಿ ಮಾಡಿದ್ದಾದ್ರೂ ಏನು?

ಟಾಲಿವುಡ್‌ ನಟಿ ಸಮಂತಾ ಬ್ಯಾಕ್‌ ಟು ನಾರ್ಮಲ್‌ ಲೈಫ್‌ ಎನ್ನುವಂತೆ ಜೀವನದಲ್ಲಾದ ಕಹಿ ಘಟನೆಗಳನ್ನು ಮರೆತು ಮೊದಲಿನಂತೆ ಜೀವನ ಸಾಗಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಗಳಿಸುತ್ತಿದ್ದಾರೆ. 'ಶಾಕುಂತಲಂ' ಸೋಲಿನ ನಂತರ ಈಗ ಅವರು 'ಖುಷಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಸಮಂತಾ ಮಾಡಿದ್ದ ಹಳೆಯ ಟ್ವೀಟ್‌ ಒಂದು ಮತ್ತೆ ಚರ್ಚೆ ಆಗುತ್ತಿದೆ.‌ ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ

ಭೂಮಿ ಶೆಟ್ಟಿ ಹಾಟ್‌ ಅವತಾರ ವೈರಲ್‌; ಮೈ ಮುಚ್ಚುವ ಬಟ್ಟೆಗಳು ಯಾವ ಅಂಗಡಿಯಲ್ಲೂ ಸಿಗೋಲ್ವಾ ಎಂದು ಪ್ರಶ್ನಿಸಿದ ನೆಟಿಜನ್ಸ್‌

ಭೂಮಿ ಶೆಟ್ಟಿ ಒಮ್ಮೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಗದ್ದೆಗೆ ಇಳಿದು ಕೆಲಸ ಮಾಡುತ್ತಿದ್ದ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಸೆಲೆಬ್ರಿಟಿ ಆಗಿ ನೀವು ಈ ರೀತಿ ಹೊಲ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದೀರಿ, ನಿಜಕ್ಕೂ ನಿಮ್ಮನ್ನು ಮೆಚ್ಚಲೇಬೇಕು ಎಂದು ಬೆನ್ನು ತಟ್ಟಿದ್ದರು. ಇದರ ಜೊತೆಗೆ ಭೂಮಿ ಶೆಟ್ಟಿ ಹುಟ್ಟೂರಿನಿಂದ ಬೆಂಗಳೂರು, ಬೆಂಗಳೂರಿನಿಂದ ಊರಿಗೆ ಬೈಕ್‌ ಸವಾರಿ ಮಾಡುವ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇವೆಲ್ಲಾ ಪೋಸ್ಟ್‌ಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಜನರು ಇತ್ತೀಚೆಗೆ ಭೂಮಿ ಶೆಟ್ಟಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.‌ ಪೂರ್ತಿ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.