Kareena Kapoor: ನಾನು ಈಗಲೂ ಹಾಟ್‌ ನಟಿ, ಅದಕ್ಕೆ ಬಾಲಿವುಡ್‌ನಲ್ಲಿ ಇಷ್ಟು ವರ್ಷದಿಂದ ಇದ್ದೇನೆ; ಕರೀನಾ ಕಪೂರ್‌ ಮನದ ಮಾತು
ಕನ್ನಡ ಸುದ್ದಿ  /  ಮನರಂಜನೆ  /  Kareena Kapoor: ನಾನು ಈಗಲೂ ಹಾಟ್‌ ನಟಿ, ಅದಕ್ಕೆ ಬಾಲಿವುಡ್‌ನಲ್ಲಿ ಇಷ್ಟು ವರ್ಷದಿಂದ ಇದ್ದೇನೆ; ಕರೀನಾ ಕಪೂರ್‌ ಮನದ ಮಾತು

Kareena Kapoor: ನಾನು ಈಗಲೂ ಹಾಟ್‌ ನಟಿ, ಅದಕ್ಕೆ ಬಾಲಿವುಡ್‌ನಲ್ಲಿ ಇಷ್ಟು ವರ್ಷದಿಂದ ಇದ್ದೇನೆ; ಕರೀನಾ ಕಪೂರ್‌ ಮನದ ಮಾತು

Kareena Kapoor News: ಕರೀನಾ ಕಪೂರ್‌ ಅವರು 2000ರಲ್ಲಿ ರೆಫ್ಯೂಜಿ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು. ಜಾನೆ ಜಾನ್‌ ಇವರ ಇತ್ತೀಚಿನ ಚಿತ್ರ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ಸೌಂದರ್ಯದ ಕುರಿತು ಮಾತನಾಡಿದ್ದಾರೆ.

ಕರೀನಾ ಕಪೂರ್‌
ಕರೀನಾ ಕಪೂರ್‌

ಸಿನಿಮಾರಂಗದಲ್ಲಿ ಮಹಿಳಾ ಕಲಾವಿದರು ಹೆಚ್ಚು ಕಾಲ ಇರುವುದು ಕಷ್ಟ ಎನ್ನುವ ಮಾತಿದೆ. ವಿಶೇಷವಾಗಿ ನಾಯಕಿ ನಟಿಯಾಗಿ ಹೆಚ್ಚು ವರ್ಷ ಬೇಡಿಕೆ ಉಳಿಸಿಕೊಳ್ಳುವ ಸವಾಲು ಇರುತ್ತದೆ. ಆದರೆ, ಸಾಕಷ್ಟು ನಟಿಯರು ಹಲವು ವರ್ಷಗಳು, ದಶಕಗಳು ಕಳೆದರೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರಲ್ಲಿ ಕರೀನಾ ಕಪೂರ್‌ ಕೂಡ ಒಬ್ಬರು. ನಾನಿನ್ನೂ ಹಿಂದಿ ಚಿತ್ರರಂಗದಲ್ಲಿ ಏಕೆ ಇಷ್ಟು ಸಮಯ ಇದ್ದೇನೆ ಎಂಬ ವಿಚಾರದ ಕುರಿತು ಕರೀನಾ ಕಪೂರ್‌ ಮಾತನಾಡಿದ್ದಾರೆ. ಡರ್ಟಿ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

ಹಿಂದಿ ಚಲನಚಿತ್ರೋದ್ಯಮದಲ್ಲಿ ಇಷ್ಟು ವರ್ಷ ಇರುವ ಕಾರಣ ಹಲವು ಇರಬಹುದು. ಈ ಕುರಿತು ಇತರೆ ನಟಿಯರಿಗಿಂತ ಭಿನ್ನವಾಗಿ ಏನನ್ನಾದರೂ ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಭಿನ್ನತೆಯನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದನ್ನು ಓದಿ: 104 ಕೆಜಿ ತೂಕವಿದ್ದೆ, ಟೆಡ್ಡಿ ಬೇರ್‌ ಅನ್ತಾ ಇದ್ರು, ಖಿನ್ನತೆಯಿಂದ ಕುಗ್ಗಿ ಹೋಗಿದ್ದೆ; ದುಃಖ ಬಿಚ್ಚಿಟ್ಟ ನಟ ಕಾರ್ತಿ

ಸ್ಪರ್ಧೆ- ಹೋಲಿಕೆ ಬಗ್ಗೆ ಕರೀನಾ ಅಭಿಪ್ರಾಯ

ಈಗ ವಿಶೇಷವಾಗಿ ನಟರು ಏನನ್ನಾದರೂ ಹೇಳುತ್ತ ಇರುತ್ತದೆ. ನನಗೆ ಈ ರೀತಿ ಇರಲು ಸಾಧ್ಯವಿಲ್ಲ. ಇಲ್ಲದಿದ್ದರೆ ನಾನು ಇಷ್ಟು ವರ್ಷ ಇರಲು ಸಾಧ್ಯವಿರಲಿಲ್ಲ. ನಾನು ಈ ಸ್ಪರ್ಧಾ ಜಗತ್ತಿನಲ್ಲಿ, ಈ ಒತ್ತಡದಲ್ಲಿ, ಈ ನೋಟ ಮತ್ತು ಹೋಲಿಕೆಯಲ್ಲಿ ಸೊರಗುತ್ತಿದ್ದೆ. ಇದು ಹೆಚ್ಚಾಗುತ್ತಿದೆ. ಪ್ರತಿಬಾರಿ ನಾನು ಯಂಗ್‌ ಆಗಿ ಕಾಣಿಸಬೇಕು ಎಂಬ ಒತ್ತಡವಿದೆ. ಇದು ಅಗತ್ಯವಿದೆ. ಏಕೆಂದರೆ, ಬ್ರ್ಯಾಂಡ್‌ಗಾಗಿ ಈ ರೀತಿ ಇರಬೇಕು. ಇದು ಜಾಗತಿಕ ಮುಖ, ಇದು ಬ್ರ್ಯಾಂಡ್‌, ಆದರೆ, ನನಗೆ ಇನ್ನು ಸಾಧ್ಯವಿಲ್ಲ. ಮುಗಿದಿದೆ" ಎಂದೆಲ್ಲ ಕರೀನಾ ಕಪೂರ್‌ ಮಾತನಾಡಿದ್ದಾರೆ. ಇದನ್ನು ಓದಿದ್ದೀರಾ: ಶಿಲ್ಪಾ ಶೆಟ್ಟಿ ಬದುಕಿನ ಕಥೆ: ಕಾರಣವೇ ಇಲ್ಲದೆ ಸಿನಿಮಾದಿಂದ ಹೊರಹಾಕಿದ್ರು, ಖಿನ್ನತೆ ಕಾಡಿತ್ತು; ಯಶಸ್ಸಿನ ಹಿಂದಿದೆ ಛಲದ ಬದುಕು

ನಾನು ಇನ್ನೂ ಹಾಟ್‌ ನಟಿ

"ನೀವು ನಿಮ್ಮನ್ನು ಕಂಡುಕೊಳ್ಳಬೇಕು. ನೀವು ಇತರರಿಗಿಂತ ಭಿನ್ನವಾಗಿರಿ. ನಿಮಗೆ ಸೂಕ್ತವಾಗಿ ಹೊಂದಿಕೆಯಾಗುವ ವಿಷಯವನ್ನು ಹುಡುಕಿ. ಅದನ್ನು ಎಂದಿಗೂ ಕಳೆದುಕೊಳ್ಳಬೇಡಿ. ನಾನು ಡರ್ಟಿ ಮ್ಯಾಗಜಿನ್‌ನ ಕವರ್‌ನಲ್ಲಿ ಇರಬೇಕು ಎಂದು ನೀವೆಲ್ಲರೂ ಹೇಳುವಿರಿ. ಇದನ್ನು ಮುಂದುವರೆಸಿಕೊಂಡು ಹೋಗುತ್ತಿರಬೇಕು. ನನ್ನಿಂದ ಅದು ಸಾಧ್ಯವಿದೆ. ನಾನು ಇನ್ನೂ ಹಾಟ್‌ ಇದ್ದೇನೆ" ಎಂದು ಅವರು ಹೇಳಿದ್ದಾರೆ.

ಕರೀನಾ ಕಪೂರ್‌ ಅವರು 2000ನೇ ಇಸವಿಯಲ್ಲಿ ರೆಫ್ಯೂಜಿ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಕಭಿ ಖುಷಿ ಕಭಿ ಗಮ್, ಚಮೇಲಿ, ಓಂಕಾರ, ಜಬ್ ವಿ ಮೆಟ್, ತಲಾಶ್, ಉಡ್ತಾ ಪಂಜಾಬ್, 3 ಈಡಿಯಟ್ಸ್, ಬಾಡಿಗಾರ್ಡ್, ಬಜರಂಗಿ ಭಾಯಿಜಾನ್, ವೀರೇ ದಿ ವೆಡ್ಡಿಂಗ್ ಮತ್ತು ಲಾಲ್ ಸಿಂಗ್ ಚಡ್ಡಾ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಕರೀನಾ ಕಪೂರ್‌ ಸಿನಿಮಾಗಳು

ಸದ್ಯ ಕರೀನಾ ಕಪೂರ್‌ ಅವರು ಹನ್ಸಲ್ ಮೆಹ್ತಾ ನಿರ್ದೇಶನದ ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಇತ್ತೀಚೆಗೆ ಬಿಎಫ್‌ಐ ಲಂಡನ್ ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಯಿತು. ಟಬು, ದಿಲ್ಜಿತ್ ದೋಸಾಂಜ್ ಮತ್ತು ಕೃತಿ ಸನೋನ್ ಅವರೊಂದಿಗೆ ದಿ ಕ್ರೂನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ದಿ ಕ್ರೂ ಚಿತ್ರವು ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕರೀನಾ ಕಪೂರ್‌ ನಟಿಸಿದ ಜಾನೆ ಜಾನ್‌ ಚಿತ್ರವು ಜಪಾನೀಸ್ ಕಾದಂಬರಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್‌ ಆಧರಿತಕವಾಗಿದ್ದು, ಸೆಪ್ಟೆಂಬರ್‌ ತಿಂಗಳಲ್ಲಿ ಒಟಿಟಿಗೆ ಪ್ರವೇಶಿಸಿತು. ಈ ಚಿತ್ರವು ಈಗ ನೆಟ್‌ಫಿಕ್ಸ್‌ನಲ್ಲಿದೆ. ಜಾನೆ ಜಾನ್‌ ಚಿತ್ರದಲ್ಲಿ ವಿಜಯ್‌ ವರ್ಮಾ ಮತ್ತು ಜೈದೀಪ್‌ ಅಹ್ಲಾವತ್‌ ಕೂಡ ಇದ್ದಾರೆ.

Whats_app_banner