ಕನ್ನಡ ಸುದ್ದಿ  /  Entertainment  /  Bollywood News In Kannada Prabhas Starrer Adipurush To Have Its World Premiere At Tribeca Festival In New York

Adipurush: ಭಾರತದಲ್ಲಲ್ಲ ಅಮೆರಿಕಾದಲ್ಲಿ ಮೊದಲ ಪ್ರದರ್ಶನ ಕಾಣಲಿದೆ ಪ್ರಭಾಸ್‌ ನಟನೆಯ ಆದಿಪುರುಷ್‌!

ಪ್ರಭಾಸ್‌ (Prabhas) ಅಭಿನಯದ ಆದಿಪುರುಷ್‌ (Adipurush) ಸಿನಿಮಾ ಇದೀಗ ಭಾರತದಲ್ಲಿ ಬಿಡುಗಡೆ ಆಗುವುದಕ್ಕೂ ಮೊದಲು ಅಮೆರಿಕಾದಲ್ಲಿ ಪ್ರದರ್ಶನ ಕಾಣಲಿದೆ. ಯಾವಾಗ ಎಂಬ ಪ್ರಶ್ನೆಗೂ ಇಲ್ಲಿ ಉತ್ತರವಿದೆ.

ಭಾರತದಲ್ಲಲ್ಲ ಅಮೆರಿಕಾದಲ್ಲಿ ಮೊದಲ ಪ್ರದರ್ಶನ ಕಾಣಲಿದೆ ಪ್ರಭಾಸ್‌ ನಟನೆಯ ಆದಿಪುರುಷ್‌!
ಭಾರತದಲ್ಲಲ್ಲ ಅಮೆರಿಕಾದಲ್ಲಿ ಮೊದಲ ಪ್ರದರ್ಶನ ಕಾಣಲಿದೆ ಪ್ರಭಾಸ್‌ ನಟನೆಯ ಆದಿಪುರುಷ್‌!

Adipurush: ಪ್ರಭಾಸ್‌ (Prabhas) ರಾಮನಾಗಿ ನಟಿಸಿರುವ ಆದಿಪುರುಷ್‌ (Adipurush) ಸಿನಿಮಾ ಹಲವು ವಿಚಾರಗಳಿಗೆ ಸುದ್ದಿಯಲ್ಲಿದೆ. ಚಿತ್ರದ ಟೀಸರ್‌ನಿಂದಲೇ ಹೆಚ್ಚು ಟ್ರೋಲ್‌ ಆಗಿದ್ದ ಈ ಸಿನಿಮಾ, ಇನ್ನೇನು ಬಿಡುಗಡೆಗೂ ಹತ್ತಿರ ಬರುತ್ತಿದೆ. ಜೂ. 16ರಂದು (June 16) ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ. ಆದರೆ, ಇದೀಗ ಬಂದ ಮಾಹಿತಿ ಪ್ರಕಾರ ಭಾರತದಲ್ಲಿ ಬಿಡುಗಡೆ ಆಗುವ ಮೂರು ದಿನಗಳ ಮುಂಚಿತವಾಗಿ ಅಮೆರಿಕದಲ್ಲಿ ಆದಿಪುರುಷನ ದರ್ಶನವಾಗಲಿದೆ!

ರಾಮನಾಗಿ ಪ್ರಭಾಸ್‌, ರಾವಣನಾಗಿ ಸೈಫ್‌ ಅಲಿಖಾನ್‌ ನಟಿಸಿರುವ ಈ ಸಿನಿಮಾ ಮೇಲೆ ನಿರೀಕ್ಷೆಯ ಭಾರವೂ ಹೆಚ್ಚಾಗಿದೆ. ಬ್ಯಾಕ್‌ ಟು ಬ್ಯಾಕ್ ‌ಎರಡು ಪ್ಲಾಪ್‌ ಸಿನಿಮಾ ನೀಡಿರುವ ಪ್ರಭಾಸ್‌, ಇದೀಗ ಆದಿಪುರುಷ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ. ಅವರ ಅಭಿಮಾನಿ ಬಳಗದಲ್ಲಿಯೂ ಈ ಸಿನಿಮಾ ಕೌತುಕ ಸೃಷ್ಟಿಸಿದೆ. ಇನ್ನೇನು ಎರಡು ತಿಂಗಳೊಳಗೆ ಈ ಸಿನಿಮಾ ತೆರೆಕಾಣಲಿದೆ. ಅಧಿಕೃತ ಬಿಡುಗಡೆಗೂ ಮುನ್ನ ಅಂದರೆ, ಜೂನ್‌ 16ರರ ಬದಲು, ಜೂನ್‌ 13ರಂದು ಈ ಚಿತ್ರ ಅಮೆರಿಕಾದಲ್ಲಿ ಪ್ರದರ್ಶನ ಕಾಣಲಿದೆ.

ಜೂನ್ 7ರಿಂದ 18ರ ವರೆಗೂ ನ್ಯೂಯಾರ್ಕ್‌ನಲ್ಲಿ ಟ್ರಿಬೆಕಾ ಫಿಲಂ ಫೆಸ್ಟಿವಲ್‌ ನಡೆಯಲಿದೆ. ಆ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಜೂ. 13ರಂದು ಆದಿಪುರುಷ್‌ ಸಿನಿಮಾ ಪ್ರದರ್ಶನ ಕಾಣಲಿದೆ. ಈ ವಿಚಾರವನ್ನು ಸಿನಿಮಾ ತಂಡವೇ ಅಧಿಕೃತವಾಗಿ ಘೋಷಿಸಿದ್ದು, ಈ ಚಿತ್ರೋತ್ಸವಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಸಂಭ್ರಮದಲ್ಲಿದೆ.

ಕನಸು ನನಸಾಯ್ತು

'ಇದು ಚಿತ್ರವಲ್ಲ, ಭಾವನೆ. ಇಡೀ ಭಾರತೀಯರ ಭಾವನೆಗಳೊಂದಿಗೆ ಬೆಸೆದ ಕಥೆಯಿದು. ಈಗ ಈ ನಮ್ಮ ಸಿನಿಮಾ, ಪ್ರಪಂಚದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾದ ಟ್ರಿಬೆಕಾ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಆ ಸಿನಿಮೋತ್ಸವ ನನಗೊಂದು ಕನಸು. ಆ ಚಿತ್ರೋತ್ಸವದಲ್ಲಿ ನಮ್ಮ ಸಿನಿಮಾ ಪ್ರದರ್ಶನ ಕಾಣುತ್ತಿರುವುದಕ್ಕೆ ನನಗೂ ಮತ್ತು ನಮ್ಮ ಇಡೀ ತಂಡಕ್ಕೂ ಮತ್ತಷ್ಟು ಖುಷಿಯಾಗಿದೆ. ನಾವು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಕಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದೇವೆ. ಅದರ ವಿಶ್ವ ಪ್ರೀಮಿಯರ್‌ಗೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಲು ಉತ್ಸುಕರಾಗಿದ್ದೇವೆ" ಎಂದಿದ್ದಾರೆ.

'ಭಾರತೀಯ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ. ಟ್ರಿಬೆಕಾ ಸಿನಿಮೋತ್ಸವವು ಭಾರತದ ಇತಿಹಾಸವನ್ನು ಪ್ರದರ್ಶಿಸುವ ವಿಶ್ವದ ಅತ್ಯಂತ ಅದ್ಭುತವಾದ ವೇದಿಕೆಗಳಲ್ಲಿ ಒಂದಾಗಿದೆ. ನೋಡುಗರಿಗೂ ದೃಶ್ಯ ವೈಭವ ಅನುಭವಿಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರನ್ನು ನಮ್ಮ ಈ ಸಿನಿಮಾ ಮಂತ್ರಮುಗ್ಧಗೊಳಿಸಲಿದೆ" ಎಂಬುದು ಚಿತ್ರದ ನಿರ್ಮಾಪಕ ಭೂಷಣ್‌ ಕುಮಾರ್‌ ಮಾತು.

IPL_Entry_Point