Jaya Bachchan Birthday: ಬಚ್ಚನ್‌ ಕುಟುಂಬದಲ್ಲಿ ಅಮಿತಾಬ್‌ ದೊಡ್ಡ ಮಗು; ಕಾಫಿ ವಿತ್‌ ಕರಣ್‌ನಲ್ಲಿ ಮನಬಿಚ್ಚಿ ಮಾತನಾಡಿದ ಜಯಾ ಬಚ್ಚನ್‌-bollywood news jaya bachchan birthday jaya called amitabh biggest baby in house abhishek talks non stop pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Jaya Bachchan Birthday: ಬಚ್ಚನ್‌ ಕುಟುಂಬದಲ್ಲಿ ಅಮಿತಾಬ್‌ ದೊಡ್ಡ ಮಗು; ಕಾಫಿ ವಿತ್‌ ಕರಣ್‌ನಲ್ಲಿ ಮನಬಿಚ್ಚಿ ಮಾತನಾಡಿದ ಜಯಾ ಬಚ್ಚನ್‌

Jaya Bachchan Birthday: ಬಚ್ಚನ್‌ ಕುಟುಂಬದಲ್ಲಿ ಅಮಿತಾಬ್‌ ದೊಡ್ಡ ಮಗು; ಕಾಫಿ ವಿತ್‌ ಕರಣ್‌ನಲ್ಲಿ ಮನಬಿಚ್ಚಿ ಮಾತನಾಡಿದ ಜಯಾ ಬಚ್ಚನ್‌

Jaya Bachchan Birthday: ಅಮಿತಾಬ್‌ ಬಚ್ಚನ್‌ ಪತ್ನಿ ಜಯ ಬಚ್ಚನ್‌ಗೆ ಇಂದು 76ನೇ ವರ್ಷದ ಹುಟ್ಟುಹಬ್ಬ. ಕಾಫಿ ವಿದ್‌ ಕರಣ್‌ ಸೀಸನ್‌ 2ರಲ್ಲಿ ಜಯ ಬಚ್ಚನ್‌ ಮತ್ತು ಶ್ವೇತಾ ಬಚ್ಚನ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೇಮಾ ಮಾಲಿನಿ ಮತ್ತು ಈಶಾ ಡಿಯೋಲ್‌ ಕೂಡ ಇವರ ಜತೆ ಸೇರಿಕೊಂಡಿದ್ದಾರೆ.

ಜಯ ಬಚ್ಚನ್‌ ಹುಟ್ಟುಹಬ್ಬ, ಅಮಿತಾಬ್‌ ಬಚ್ಚನ್‌ ಕುಟುಂಬದ ಫೋಟೋ
ಜಯ ಬಚ್ಚನ್‌ ಹುಟ್ಟುಹಬ್ಬ, ಅಮಿತಾಬ್‌ ಬಚ್ಚನ್‌ ಕುಟುಂಬದ ಫೋಟೋ

ಬೆಂಗಳೂರು: ಹಿರಿಯ ನಟಿ ಜಯ ಬಚ್ಚನ್‌ ಅವರು ತನ್ನ ಮಗಳು ಶ್ವೇತಾ ಬಚ್ಚನ್‌ ಜತೆಗಿನ ಜಗಳದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ 76ನೇ ಹುಟ್ಟುಹಬ್ಬದ ಸಮಯದಲ್ಲಿ ತನ್ನ ಕುಟುಂಬದ ಸದಸ್ಯರ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತನ್ನ ಮಗ ಅಭಿಷೇಕ್‌ ಬಚ್ಚನ್‌ ನಾನ್‌ ಸ್ಟಾಪ್‌ ಮಾತುಗಾರ ಎಂದಿದ್ದಾರೆ. ಇದೇ ಸಮಯದಲ್ಲಿ ತನ್ನ ಗಂಡ ಅಮಿತಾಬ್‌ ಬಚ್ಚನ್‌ ಅವರು ಮನೆಯಲ್ಲಿರುವ ದೊಡ್ಡ ಮಗು ಎಂದಿದ್ದಾರೆ.

ತಮ್ಮ ಜಗಳದ ಕುರಿತು ಜಯ, ಶ್ವೇತಾ ಮಾತು

ಕಾಫಿ ವಿದ್‌ ಕರಣ್‌ ಸೀಸನ್‌ 2ನ ಎಪಿಸೋಡ್‌ 10ರಲ್ಲಿ ಶ್ವೇತಾ ಬಚ್ಚನ್‌ ಮತ್ತು ಜಯಾ ಬಚ್ಚನ್‌ ಜತೆಗೆ ಹೇಮಾ ಮಾಲಿನಿ ಮತ್ತು ಈಶಾ ಡಿಯೋಲ್‌ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಜಯ ಮತ್ತು ಶ್ವೇತಾ ಅವರಲ್ಲಿ "ನೀವು ಯಾವ ವಿಷಯಕ್ಕೆ ಜಗಳ ಮಾಡುವಿರಿ?" ಎಂದು ಕರಣ್‌ ಪ್ರಶ್ನಿಸಿದ್ದರು. "ನಾವು ಪ್ರತಿಯೊಂದಕ್ಕೂ ಜಗಳ ಮಾಡುತ್ತೇವೆ" ಎಂದು ಶ್ವೇತಾ ಹೇಳಿದ್ದಾರೆ. "ನಾವು ಜಗಳ ಮಾಡಿಕೊಳ್ಳುವುದಿಲ್ಲ, ಕೋಪಗೊಳ್ಳುತ್ತೇವೆ" ಎಂದು ಜಯಾ ಬಚ್ಚನ್‌ ಹೇಳಿದ್ದಾರೆ.

"ನಾವು ಜಗಳ ಮಾಡುತ್ತೇವೆ ಅಮ್ಮ, ಅದನ್ನು ಅಡಗಿಸಿಡಬೇಡಿ" ಎಂದು ಶ್ವೇತಾ ಹೇಳಿದರು. "ನಾವು ಫೋನ್‌ ಬಿಸಾಕುತ್ತೇವೆ" ಎಂದು ಜಯ ಹೇಳಿದ್ದಾರೆ. "ನೀನು ಫೋನ್‌ ಬಿಸಾಕಿದರೆ, ನಾನು ನನ್ನ ಅಮ್ಮನಲ್ಲಿ ಹೇಳುತ್ತಾ ಇರುವೆ, ನೀನು ನನಗಿಂತ ಚಿಕ್ಕವಳು, ನೀನು ನನ್ನ ಕಡೆಗೆ ಫೋನ್‌ ಏಕೆ ಬಿಸಾಕುವೆ?" ಎಂದು ಶ್ವೇತಾ ಹೇಳಿದ್ದಾರೆ. "ಓಹ್‌ ನೀವು ಫೋನ್‌ ಬಿಸಾಕುವ ವಿಷಯದಲ್ಲೂ ಡಾಮಿನೆಟ್‌ ಮಾಡಲು ಬಯಸುವಿರಾ?" ಎಂದು ಕರಣ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಭಿಷೇಕ್‌ ತುಂಬಾ ಮಾತನಾಡುತ್ತಾನೆ ಎಂದ್ರು ಜಯಾ

ಬಚ್ಚನ್‌ ಕುಟುಂಬದಲ್ಲಿ ಕಡಿಮೆ ಮಾತನಾಡುವ ಸದಸ್ಯ ಯಾರು ಎಂದು ಕರಣ್‌ ಪ್ರಶ್ನಿಸಿದರು. ಅಭಿಷೇಕ್‌ ಬಚ್ಚನ್‌ ಕಡಿಮೆ ಮಾತನಾಡುವ ವ್ಯಕ್ತಿ ಅಲ್ವೇ? ಎಂದು ಕೇಳಿದಾಗ ಜಯ ಬಚ್ಚನ್‌ "ಸಾಧ್ಯವೇ ಇಲ್ಲ" ಎಂದರು. "ಅಭಿಷೇಕ್‌ ಮೌನವಾಗಿರುತ್ತಾನ? ಅಭಿಷೇಕ್‌ ನಾನ್‌ ಸ್ಟಾಪ್‌ ಮಾತನಾಡುತ್ತಾನೆ. ಎಲ್ಲಾ ವಿಷಯಗಳ ಕುರಿತು ತನ್ನ ಅಭಿಪ್ರಾಯ ಹೇಳುತ್ತಾನೆ" ಎಂದರು.

"ಅಭಿಷೇಕ್‌ ತುಂಬಾ ಮೃದು ಸ್ವಭಾವದ ವ್ಯಕ್ತಿ. ಆತ ಪ್ರತಿಯೊಬ್ಬರನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುತ್ತಾನೆ. ನಾನು ಪ್ರತಿಯೊಂದು ವಿಚಾರಕ್ಕೂ ಮೂಗು ತೂರಿಸಿ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವೆ. ಆದರೆ, ಆತ ತನ್ನ ತಾಯಿಯ ಜತೆ ಕೂತಾಗ ನೀನು ಹೇಳಿದ್ದು ಸರಿ ಅಮ್ಮಾ ಎನ್ನುತ್ತಾನೆ. ತಂದೆಯ ಜತೆ ಕುಳಿತಾಗ ನೀವು ಹೇಳಿದ್ದು ಸರಿ ಡ್ಯಾಡ್‌ ಎನ್ನುತ್ತಾನೆ. ಆತ ವಿರೋಧಿಸುವುದಿಲ್ಲ" ಎಂದು ಶ್ವೇತಾ ಬಚ್ಚನ್‌ ಹೇಳಿದ್ದಾರೆ.

ಅಮಿತಾಬ್‌ ಬಚ್ಚನ್‌ ಬಗ್ಗೆ ಜಯಾ ಮಾತು

ಬಿಗ್‌ಬಿ ಬಗ್ಗೆಯೂ ಜಯಾ ಬಚ್ಚನ್‌ ಮುಕ್ತವಾಗಿ ಮಾತನಾಡಿದ್ದಾರೆ. "ಮನೆಯಲ್ಲಿ ದೊಡ್ಡ ಮಗು ಎಲ್ಲರಿಗಿಂತ ಹೆಚ್ಚು ಅಟೆನ್ಷನ್‌ ಪಡೆಯುತ್ತದೆ" ಎಂದು ಜಯಾ ಬಚ್ಚನ್‌ ಹೇಳಿದ್ದಾರೆ. "ಯಾರದು ದೊಡ್ಡ ಮಗು, ಅಭಿಷೇಕ್‌ ಬಚ್ಚನ್‌?" ಎಂದು ಕರಣ್‌ ಪ್ರಶ್ನಿಸಿದರು. ಅದಕ್ಕೆ ಜಯಾ "ಅಲ್ಲ, ಅವರು ಅಮಿತಾಬ್‌ ಬಚ್ಚನ್‌" ಎಂದು ಹೇಳಿದರು.

ಬಚ್ಚನ್‌ ಕುಟುಂಬದ ಕುರಿತು

ಜಯಾ ಮತ್ತು ಅಮಿತಾಬ್‌ ಬಚ್ಚನ್‌ 1973ರಲ್ಲಿ ವಿವಾಹವಾದರು. ಇವರಿಗೆ ಶ್ವೇತಾ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ಎಂಬ ಇಬ್ಬರು ಮಕ್ಕಳು. ಶ್ವೇತಾ ಅವರು ಬಿಸ್ನೆಸ್‌ಮ್ಯಾನ್‌ ನಿಖಿಲ್‌ ನಂದಾ ಅವರನ್ನು ವಿವಾಹವಾದರು. ಇವರಿಗೆ ನವ್ಯಾ ನಂದಾ ಮತ್ತು ಆಗಸ್ತ್ಯ ನಂದಾ (ಓದಿ: ಯಾರಿದು ಆಗಸ್ತ್ಯ ನಂದ, ಅಮಿತಾಬ್‌ ಬಚ್ಚನ್‌ ಕುಟುಂಬದ ಕಂದ) ಎಂಬ ಇಬ್ಬರು ಮಕ್ಕಳಿದ್ದಾರೆ. ಅಭಿಷೇಕ್‌ ಬಚ್ಚನ್‌ ಅವರು ಐಶ್ವಾರ್ಯ ರೈ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಆರಾಧ್ಯ ಬಚ್ಚನ್‌ ಎಂಬ ಹೆಸರಿನ ಮಗಳಿದ್ದಾಳೆ.