Anjali Arora: ಸೀತೆ ಪಾತ್ರಕ್ಕೆ ಕಚ್ಚಾ ಬಾದಾಮ್ ಹುಡುಗಿ; 23ನೇ ವಯಸ್ಸಲ್ಲಿ 4 ಕೋಟಿಯ ಮನೆ ಖರೀದಿಸಿದ್ದ ಟಿಕ್‌ಟಾಕ್‌ ಸ್ಟಾರ್‌ಗೆ ಅದೃಷ್ಟ
ಕನ್ನಡ ಸುದ್ದಿ  /  ಮನರಂಜನೆ  /  Anjali Arora: ಸೀತೆ ಪಾತ್ರಕ್ಕೆ ಕಚ್ಚಾ ಬಾದಾಮ್ ಹುಡುಗಿ; 23ನೇ ವಯಸ್ಸಲ್ಲಿ 4 ಕೋಟಿಯ ಮನೆ ಖರೀದಿಸಿದ್ದ ಟಿಕ್‌ಟಾಕ್‌ ಸ್ಟಾರ್‌ಗೆ ಅದೃಷ್ಟ

Anjali Arora: ಸೀತೆ ಪಾತ್ರಕ್ಕೆ ಕಚ್ಚಾ ಬಾದಾಮ್ ಹುಡುಗಿ; 23ನೇ ವಯಸ್ಸಲ್ಲಿ 4 ಕೋಟಿಯ ಮನೆ ಖರೀದಿಸಿದ್ದ ಟಿಕ್‌ಟಾಕ್‌ ಸ್ಟಾರ್‌ಗೆ ಅದೃಷ್ಟ

ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಂಜಲಿ ಅರೋರಾಗೆ ಇದೀಗ ಶ್ರೀ ರಾಮಾಯಣ ಕಥಾ ಸಿನಿಮಾದ ಸೀತೆಯ ಪಾತ್ರದಲ್ಲಿ ನಟಿಸುವ ಅವಕಾಶ ದೊರಕಿದೆ. ತನ್ನ 23ನೇ ವಯಸ್ಸಲ್ಲಿ 4 ಕೋಟಿ ರೂಪಾಯಿಯ ಮನೆ ಖರೀದಿಸಿದ್ದ ಅಂಜಲಿ ಅರೋರಾ ಕಚ್ಚಾ ಬಾದಾಮ್‌ ಸಾಂಗ್‌ ಮೂಲಕ ಫೇಮಸ್‌ ಆಗಿದ್ದರು.

Anjali Arora: ಸೀತೆ ಪಾತ್ರಕ್ಕೆ ಕಚ್ಚಾ ಬಾದಾಮ್ ಹುಡುಗಿ
Anjali Arora: ಸೀತೆ ಪಾತ್ರಕ್ಕೆ ಕಚ್ಚಾ ಬಾದಾಮ್ ಹುಡುಗಿ

ಬೆಂಗಳೂರು: ಒಂದೆಡೆ ನಿತೀಶ್‌ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಸುದ್ದಿಯಲ್ಲಿದೆ. ಈ ಪೌರಾಣಿಕ ಸಿನಿಮಾಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಕೂಡ ಸಹ ನಿರ್ಮಾಪಕರು. ರಾಮಾಯಣದಲ್ಲಿ ರಣಬೀರ್‌ ಕಪೂರ್‌, ಸಾಯಿ ಪಲ್ಲವಿ, ಸನ್ನಿ ಡಿಯೋಲ್‌, ಅರುಣ್‌ ಗೋವಿಲ್‌, ಲಾರಾ ದತ್ತಾ ಮತ್ತು ರಕಲ್‌ ಪ್ರೀತ್‌ ಸಿಂಗ್‌ ಮುಂತಾದವರು ನಟಿಸುವ ಕುರಿತು ಸುದ್ದಿ ಇದೆ. ಇದೇ ಸಮಯದಲ್ಲಿ ಸೀತೆ ಪಾತ್ರದಲ್ಲಿ ಕಚ್ಚಾ ಬಾದಮ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದ ಯುವತಿ ಅಂಜಲಿ ಅರೋರಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ, ಆ ರಾಮಾಯಣ ಬೇರೆ, ಈ ರಾಮಾಯಣ ಬೇರೆ. ನಿತೀಶ್‌ ತಿವಾರಿ ರಾಮಾಯಣದಲ್ಲಿ ಸಾಯಿ ಪಲ್ಲವಿಯೇ ನಟಿಸಲಿದ್ದಾರೆ. ಆದರೆ, ಅಂಜಲಿ ಅರೋರಾ ಅವರು ಶ್ರೀ ರಾಮಾಯಣ ಕಥಾ ಎಂಬ ಮತ್ತೊಂದು ಸಿನಿಮಾದಲ್ಲಿ ಸೀತೆಯಾಗಿ ನಟಿಸಲಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಅಂಜಲಿ ಅರೋರಾ ಅವರು ಅಭಿಷೇಕ್‌ ಸಿಂಗ್‌ ನಿರ್ದೇಶನದ ಶ್ರೀ ರಾಮಾಯಣ ಕಥೆಯಲ್ಲಿ ಸೀತೆಯಾಗಿ ನಟಿಸಲಿದ್ದಾರಂತೆ. ಆದರೆ, ಈ ಸುದ್ದಿ ನೆಟ್ಟಿಗರಿಗೆ ಖುಷಿ ಕೊಟ್ಟಿಲ್ಲ. "ಯಾರಿದು ಅಂಜಲಿ ಅರೋರಾ?" "ಆಕೆಗೆ ಸೀತೆಯಾಗಿ ನಟಿಸಲು ಸಾಧ್ಯವೇ?" "ನಟನಾ ಅನುಭವ ಏನಿದೆ?" "ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರೋರೆಲ್ಲ ಸೀತೆಯಾಗಲು ಸಾಧ್ಯವೇ" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

ಯಾರಿದು ಅಂಜಲಿ ಅರೋರಾ?

ಸೋಷಿಯಲ್‌ ಮೀಡಿಯಾದಲ್ಲಿ ಅಂಜಲಿ ಅರೋರಾ ಸಖತ್‌ ಫೇಮಸ್‌. ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಆಗಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ. ತನ್ನ 23 ವರ್ಷ ವಯಸ್ಸಿನಲ್ಲಿಯೇ 4 ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿ ಸುದ್ದಿಯಾಗಿದ್ದರು. ಇವರ ಕಚ್ಚಾ ಬಾದಮ್‌ ಟಿಕ್‌ಟಾಕ್‌ ವಿಡಿಯೋ ವೈರಲ್‌ ಆದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯತೆ ಪಡೆದರು.

ಕಚ್ಚಾ ಬಾದಮ್‌ ಹಾಡು ಜನಪ್ರಿಯತೆ ಪಡೆದ ಬಳಿಕ ಬಿಗ್‌ಬಾಸ್‌ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದರು. ಅಂಜಲಿ ಅರೋರ ಅವರ ಹಲವು ಮ್ಯೂಸಿಕ್‌ ವಿಡಿಯೋಗಳು ರಿಲೀಸ್‌ ಆಗಿವೆ. ಆಲ್ಟ್‌ ಬಾಲಜಿಯ ಲಾಕ್‌ಅಪ್‌ ಶೋನಲ್ಲಿ ಭಾಗವಹಿಸಿದ್ದರು. ಹಲವು ಹಿಂದಿ ಮತ್ತು ಪಂಜಾಬಿ ಹಾಡುಗಳಲ್ಲಿಯೂ ಕಾಣಿಸಿಕೊಂಡಿದ್ದರು. ಟೆಂಪರರಿ ಪ್ಯಾರ್‌, ಆಶಿಕ್‌ ಪುರಾಣ ಸೇರಿದಂತೆ ಈಕೆ ನಟಿಸಿದ್ದ ಹಲವು ಜನಪ್ರಿಯ ಮ್ಯೂಸಿಕ್‌ ವಿಡಿಯೋ ರಿಲೀಸ್‌ ಆಗಿವೆ.

ಅಂಜಲಿ ಅರೋರಾ ವಯಸ್ಸು ಎಷ್ಟು?

ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌, ನಟಿ ಅಂಜಲಿ ಅರೋರಾ ವಯಸ್ಸು ಈಗ ಕೇವಲ 24. ಇವರು 1999ರ ನವೆಂಬರ್‌ 3ರಂದು ಜನಿಸಿದರು.

ಅಂಜಲಿ ಅರೋರಾ ನಟಿಸಿದ ಸಿನಿಮಾಗಳು

ದಿ ಲವ್‌ ಈಸ್‌ ಫಾರೆವರ್‌, ಡೆಲಿಯಾನ್ಸ್‌, ದಿಲ್‌ವಾಲಿಯನ್‌

ಅಂಜಲಿ ಅರೋರಾ ದುಬಾರಿ ಮನೆ

ಅಂಜಲಿ ಅರೋರಾ ಮುಂಬೈನಲ್ಲಿ ತನ್ನ ಮನೆ ಹೊಂದಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ 4 ಕೋಟಿ ರೂಪಾಯಿ ಮೌಲ್ಯದ ವಿಲಾಸಿ ಮನೆ ಖರೀದಿಸಿದ್ದರು.

ರಾಮಾಯಣ ಸಿನಿಮಾದ ಅಪ್‌ಡೇಟ್‌

ನಿರ್ದೇಶಕ ನಿತೀಶ್‌ ತಿವಾರಿಯ ಮುಂಬರುವ ಸಿನಿಮಾ "ರಾಮಾಯಣ"ದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ನಟಿಸಲಿದ್ದಾರೆ. ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ ನಟನೆಯ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚೆಗೆ ರಾಮ ಮತ್ತು ಸೀತಾ ದೇವಿಯ ಪೋಸ್ಟರ್‌ ರಿಲೀಸ್‌ ಆಗಿತ್ತು. ನಟ ಯಶ್‌ ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ನಟಿಸಲಿದ್ದಾರೆ ಎಂದು ಈ ಹಿಂದೆ ಸುದ್ದಿ ಇತ್ತು. ಇದೀಗ ಬಂದ ಅಪ್‌ಡೇಟ್‌ ಪ್ರಕಾರ ಯಶ್‌ ರಾಮಾಯಣ ಸಿನಿಮಾದ ಸಹ ನಿರ್ಮಾಪಕರಾಗಲಿದ್ದಾರೆ. ಅಂದರೆ, ಈ ಸಿನಿಮಾಕ್ಕೆ ಹಣ ಹೂಡಿಕೆ ಮಾಡಲಿದ್ದಾರೆ.

ಸಾಯಿ ಪಲ್ಲವಿ ಭಾರತೀಯ ನಟಿಯಾಗಿದ್ದು, ಸಹಜ ನಟಿ ಎಂದೇ ಫೇಮಸ್‌. ಇವರು ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇದೀಗ ರಾಮಾಯಣದ ಮೂಲಕ ಬಾಲಿವುಡ್‌ ಪ್ರವೇಶಿಸಿಸುತ್ತಿದ್ದಾರೆ. ಇವರಿಗೆ ನಾಲ್ಕು ಫಿಲ್ಮ್‌ಫೇರ್‌ ಸೌತ್‌ ಅವಾರ್ಡ್‌, ಎರಡು ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸೇರಿದಂತೆ ಹಲವು ಅವಾರ್ಡ್‌ಗಳು ದೊರಕಿವೆ.