ತಮ್ಮ 25 ವರ್ಷಗಳ ಸಿನಿ ಬದುಕಿನ ಅತಿಮುಖ್ಯ ಸಿನಿಮಾಕ್ಕೆ ಸಹಿ ಹಾಕಿದ ಕರೀನಾ ಕಪೂರ್: ಬಾಲಿವುಡ್‌ನಲ್ಲಿ ಇದೀಗ ದೊಡ್ಡ ಚರ್ಚೆ-bollywood news kareena kapoor khan celebrates 25 years in bollywood with signing biggest film uks ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತಮ್ಮ 25 ವರ್ಷಗಳ ಸಿನಿ ಬದುಕಿನ ಅತಿಮುಖ್ಯ ಸಿನಿಮಾಕ್ಕೆ ಸಹಿ ಹಾಕಿದ ಕರೀನಾ ಕಪೂರ್: ಬಾಲಿವುಡ್‌ನಲ್ಲಿ ಇದೀಗ ದೊಡ್ಡ ಚರ್ಚೆ

ತಮ್ಮ 25 ವರ್ಷಗಳ ಸಿನಿ ಬದುಕಿನ ಅತಿಮುಖ್ಯ ಸಿನಿಮಾಕ್ಕೆ ಸಹಿ ಹಾಕಿದ ಕರೀನಾ ಕಪೂರ್: ಬಾಲಿವುಡ್‌ನಲ್ಲಿ ಇದೀಗ ದೊಡ್ಡ ಚರ್ಚೆ

ಬಾಲಿವುಡ್‌ನ ಪ್ರಮುಖ ನಟಿಯರ ಪೈಕಿ ಕರೀನಾ ಕಪೂರ್‌ ಒಬ್ಬರು. ಅವರ ವೃತ್ತಿಜೀವನಕ್ಕೆ 25 ವರ್ಷಗಳ ಸಂಭ್ರಮ. ಹೀಗಾಗಿ ತಮ್ಮ 25 ವರ್ಷಗಳ ಸಿನಿ ಬದುಕಿನ ಅತಿಮುಖ್ಯ ಸಿನಿಮಾಕ್ಕೆ ಕರೀನಾ ಕಪೂರ್ ಸಹಿ ಹಾಕಿದ್ದು ಈಗ ಟಾಕ್ ಆಫ್‌ ದಿ ಟೌನ್‌. ಆ ವಿವರ ಇಲ್ಲಿದೆ.

ತಮ್ಮ 25 ವರ್ಷಗಳ ಸಿನಿ ಬದುಕಿನ ಅತಿಮುಖ್ಯ ಸಿನಿಮಾಕ್ಕೆ ಸಹಿ ಹಾಕಿದ ಕರೀನಾ ಕಪೂರ್ (ಕಡತ ಚಿತ್ರ)
ತಮ್ಮ 25 ವರ್ಷಗಳ ಸಿನಿ ಬದುಕಿನ ಅತಿಮುಖ್ಯ ಸಿನಿಮಾಕ್ಕೆ ಸಹಿ ಹಾಕಿದ ಕರೀನಾ ಕಪೂರ್ (ಕಡತ ಚಿತ್ರ) (Photo by Sujit JAISWAL / AFP)

ಬಾಲಿವುಡ್‌ಗೆ 2000ನೇ ಇಸವಿ ಜೂನ್‌ನಲ್ಲಿ ಜೆಪಿ ದತ್ತಾ ನಿರ್ದೇಶನದ ರೆಫ್ಯೂಜಿ ಸಿನಿಮಾದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಬೆಬೊ ಎಂದೇ ಕರೆಯಿಸಿಕೊಳ್ಳುವ ಕರೀನಾ ಕಪೂರ್‌ ವೃತ್ತಿಬದುಕಿನ 25ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ 25 ವರ್ಷಗಳ ಸಿನಿ ಬದುಕಿನ ಅತಿಮುಖ್ಯ ಸಿನಿಮಾಕ್ಕೆ ಕರೀನಾ ಕಪೂರ್ ಸಹಿ ಹಾಕಿರುವ ಸುದ್ದಿ ಬಹಿರಂಗವಾಗಿದೆ.

ಹಿಂದಿ ಚಿತ್ರರಂಗದ ಪ್ರಮುಖ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿರುವ ಕರೀನಾ ಕಪೂರ್‌ ಚಿತ್ರರಂಗದಲ್ಲಿ 25 ವರ್ಷದ ಸಂಭ್ರಮದಲ್ಲಿರುವ ಕಾರಣ ಪಿವಿಆರ್‌ಇನಾಕ್ಸ್‌ ಅವರ ಸಿನಿಮಾ ಪ್ರದರ್ಶನಗಳನ್ನೂ ಆಯೋಜಿಸಿದೆ. ಆದರೆ ಎಲ್ಲದಕ್ಕೂ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಬಿಗ್‌ ಬಜೆಟ್‌ ಮೂವಿಗೆ ಅವರು ಸಹಿ ಹಾಕಿರುವುದು.

25 ಸುದೀರ್ಘ ವರ್ಷಗಳ ಪ್ರಯಾಣದಲ್ಲಿ ಬಿಗ್‌ ಬಜೆಟ್ ಮೂವಿಗೆ ಸಹಿ ಹಾಕಿ ಹುಬ್ಬೇರುವಂತೆ ಮಾಡಿದ ಕರೀನಾ

ಕರೀನಾ ಕಪೂರ್ ಅವರಿಗೆ ಕಳೆದ 9 ತಿಂಗಳಲ್ಲಿ ಕೆಲವು ದೊಡ್ಡ ಪ್ಯಾನ್ ಇಂಡಿಯಾ ಚಲನಚಿತ್ರಗಳ ಆಫರ್‌ ಬಂದಿದ್ದವು. ಈ ಪೈಕಿ ಭಾರತೀಯ ಚಿತ್ರರಂಗದ ಅತಿದೊಡ್ಡ ಮತ್ತು ರೋಮಾಂಚಕಾರಿ ಚಲನಚಿತ್ರವಾಗಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಕ್ಕೆ ಕರೀನಾ ಕಪೂರ್ ಸಹಿ ಹಾಕಿದ್ದಾರೆ ಎಂದು ಈ ವಿದ್ಯಮಾನವನ್ನು ಸಮೀಪದಿಂದ ಗಮನಿಸಿದವರು ತಿಳಿಸಿದ್ದಾಗಿ ಪಿಂಕ್‌ವಿಲ್ಲಾ ತಾಣ ವರದಿ ಮಾಡಿದೆ.

ಕರೀನಾ ಕಪೂರ್ ಅವರ ಪಾತ್ರ ಯಾವುದು, ಚಿತ್ರದ ನಿರ್ದೇಶಕರು ಯಾರು ಎಂಬ ಪ್ರಶ್ನೆಗೆ ಸಿಕ್ಕಿದ ಉತ್ತರ ಇಷ್ಟೆ - "ಇದುವರೆಗೆ ಅವರು ಮಾಡದೇ ಇದ್ದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಮತ್ತು ಸದ್ಯ ಹೆಚ್ಚು ಪ್ರಚಲಿತದಲ್ಲಿರುವ ನಿರ್ದೇಶಕರು ಈ ತಂಡದಲ್ಲಿದ್ದಾರೆ. ಈ ಸಿನಿಮಾದೊಂದಿಗೆ ಕರೀನಾ ಕಪೂರ್ ತಮ್ಮ ವೃತ್ತಿಬದುಕಿನ 25ನೇ ವರ್ಷವನ್ನು ಆಚರಿಸಲಿದ್ದಾರೆ.

"ಸಾಮಾನ್ಯವಾಗಿ, ಕರೀನಾ ಅವರು ಚಲನಚಿತ್ರಕ್ಕೆ ಸಹಿ ಹಾಕಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇದರ ನಿರೂಪಣೆ ಕೇಳಿದ ಕೂಡಲೇ ನಿರ್ದೇಶಕರು ಸೃಷ್ಟಿಸಿದ ಕಥಾ ಪ್ರಪಂಚ ಗಮನಿಸಿ ವಿಸ್ಮಯಗೊಂಡರು. ಈಗ ಪಾತ್ರದ ಹೊಸ ಡೈನಾಮಿಕ್ಸ್ ಅನ್ನು ಅನ್ವೇಷಿಸುವ ನಿರೀಕ್ಷೆಯಲ್ಲಿದ್ದಾರೆ. ಪಾತ್ರದ ಡೈನಾಮಿಕ್ ಮತ್ತು ಚಿತ್ರದ ಬಗ್ಗೆ ನಿರ್ದೇಶಕರ ದೃಷ್ಟಿಕೋನದ ಕಾರಣವೇ ಬೆಬೋ ಅವರು ಈ ಚಿತ್ರಕ್ಕೆ ಕೂಡಲೇ ಸಹಿ ಹಾಕಿದರು ಎಂದು ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.

1 ವರ್ಷ ಚಿತ್ರೀಕರಣ, 2026ರಲ್ಲಿ ತೆರೆಗೆ ಬರುವ ನಿರೀಕ್ಷೆ

ಈ ಸಿನಿಮಾ ಚಿತ್ರೀಕರಣವು 2025ರ ಜನವರಿಯಲ್ಲಿ ಶುರುವಾಗುವ ನಿರೀಕ್ಷೆ ಇದ್ದು, 2026ರಲ್ಲಿ ಪ್ರದರ್ಶನಕ್ಕೆ ತೆರೆಗೆ ಅಪ್ಪಳಿಸಲಿದೆ. ಚಿತ್ರೀಕರಣ ಭಾರತ ಮತ್ತು ವಿದೇಶಗಳಲ್ಲಿ ನಡೆಯಲಿದೆ ಎಂದು ಮೂಲಗಳು ಉಲ್ಲೇಖಿಸಿವೆ. ಹೀಗಾಗಿ 25ನೇ ವರ್ಷ ಪೂರ್ತಿ ಕರೀನಾ ಕಪೂರ್‌ ಕೆಲಸದಲ್ಲಿ ತಲ್ಲೀನರಾಗಿ ಇರಲಿದ್ದಾರೆ. ಹೊಸ ಜಗತ್ತು, ಹೊಸ ಸವಾಲುಗಳನ್ನು ಎದುರಿಸುವುದಕ್ಕೆ ಕರೀನಾ ಸಜ್ಜಾಗಿದ್ದು, ಹೊಸ ಬಿಗ್‌ ಬಜೆಟ್ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ನಡುವೆ, ನಟಿ ಕರೀನಾ ಕಪೂರ್ ಅವರು ಮತ್ತೊಮ್ಮೆ ಪತಿ ಸೈಫ್ ಅಲಿ ಖಾನ್ ಅವರೊಂದಿಗೆ ನಟಿಸಬೇಕು ಎಂದು ಬಯಸುತ್ತಿರುವುದಾಗಿ ಹೇಳಿದ್ದಾರೆ. ಅಂತಹ ನಟನೆಯ ಅವಕಾಶ ಶೀಘ್ರದಲ್ಲೇ ಬರಲಿದೆ ಎಂಬ ಆಶಾಭಾವನೆಯಲ್ಲಿದ್ದೇನೆ ಎಂದು ಕರೀನಾ ಕಪೂರ್ ಹೇಳಿಕೊಂಡಿದ್ದಾರೆ.

ಇದಕ್ಕೂ ಮೊದಲು, ಕರೀನಾ ಕಪೂರ್ ಅವರು ಮೇಘನಾ ಗುಲ್ಜಾರ್ ಅವರೊಂದಿಗೆ ಇನ್ನೂ ಹೆಸರಿಡದ ಚಿತ್ರಕ್ಕಾಗಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದನ್ನು ಜಂಗ್ಲೀ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ಇದರಲ್ಲಿ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಇದೇ ನವೆಂಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

mysore-dasara_Entry_Point