ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌; ಅನುಷ್ಕಾರಂತೆ ಲಂಡನ್‌ನಲ್ಲಿಯೇ ಮಗುವಿಗೆ ಜನ್ಮ ನೀಡ್ತಾರಂತೆ ಟೈಗರ್‌ ನಟಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌; ಅನುಷ್ಕಾರಂತೆ ಲಂಡನ್‌ನಲ್ಲಿಯೇ ಮಗುವಿಗೆ ಜನ್ಮ ನೀಡ್ತಾರಂತೆ ಟೈಗರ್‌ ನಟಿ

Katrina Kaif Pregnant: ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಗರ್ಭಧಾರಣೆಯ ವದಂತಿ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಕತ್ರಿನಾ ಕೈಫ್‌ ಲಂಡನ್‌ನಲ್ಲಿ ಸ್ವಾಗತಿಸಲಿದ್ದಾರೆ ಎನ್ನಲಾಗಿದೆ. ಕತ್ರಿನಾ ಕೈಫ್‌ ಪ್ರೆಗ್ನೆನ್ಸಿ ಕುರಿತು ಒಂದಿಷ್ಟು ವಿವರ ಇಲ್ಲಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌

ಬೆಂಗಳೂರು: ಬಾಲಿವುಡ್‌ ದಂಪತಿ ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಲಂಡನ್‌ನಲ್ಲಿದ್ದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕತ್ರಿನಾ ಕೈಫ್‌ ಗರ್ಭಿಣಿ ಎನ್ನಲಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಟ್ರೆಂಡಿಂಗ್​ ಸುದ್ದಿ

ಬಳಕೆದಾರರೊಬ್ಬರು ಕತ್ರಿನಾ ಕೈಫ್‌ ಅವರು ಲಂಡನ್‌ನಲ್ಲಿ ವಿಕ್ಕಿ ಕೌಶಲ್‌ ಜತೆ ನಡೆಯುತ್ತಿರುವ ವಿಡಿಯೋ ಅಪ್ಲೋಡ್‌ ಮಾಡಿದ ಬಳಿಕ ಈ ಎಲ್ಲಾ ವದಂತಿ ಆರಂಭವಾಯತು. ಈಕೆ ನಡೆಯುವ ರೀತಿ ಮತ್ತು ಈಕೆಯ ದೇಹದಲ್ಲಿನ ಬದಲಾವಣೆಗಳನ್ನು ಗಮನಿಸಿದ ಸೋಷಿಯಲ್‌ ಮೀಡಿಯಾ ಬಳಕೆದಾರರು ಈಕೆ ಪ್ರೆಗ್ನೆಂಟ್‌ ಎಂದು ಷರಾ ಬರೆದರು. ಒಬ್ಬರು ಬಳಕೆದಾರರು "ಇದು ಕತ್ರಿನಾ ಕೈಫ್‌ ಅಲ್ಲ, ಈಕೆ ನಡೆಯುವ ಶೈಲಿ ಇದಲ್ಲ. ಎಲ್ಲಾದರೂ ಈಕೆ ಕತ್ರಿನಾ ಆಗಿದ್ದರೆ ಖಂಡಿತಾ ಗರ್ಭಿಣಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ" ಎಂದು ಹೇಳಿದ್ದಾರೆ.

ಸೋಷಿಯಲ್‌ ಮೀಡಿಯಾದ ಚರ್ಚೆಗಳೇನೇ ಇರಲಿ. ಈ ದಂಪತಿಗೆ ಹತ್ತಿರದ ಮೂಲಗಳ ಪ್ರಕಾರ "ಕತ್ರಿನಾ ಕೈಫ್‌ ಹುಟ್ಟಿ ಬೆಳೆದದ್ದು ಲಂಡನ್‌ನಲ್ಲಿ. ಹೀಗಾಗಿ, ಲಂಡನ್‌ನಲ್ಲಿಯೇ ಮೊದಲ ಮಗುವಿಗೆ ಡೆಲಿವರಿ ನೀಡಲಿದ್ದಾರೆ" ಎಂದಿವೆ. ಮನಿ ಕಂಟ್ರೋಲ್‌ಗೆ ಮೂಲಗಳು ನೀಡಿದ ಮಾಹಿತಿ ಪ್ರಕಾರ "ಹೌದು, ಕತ್ರಿನಾ ಕೈಫ್‌ ಪ್ರೆಗ್ನೆಂಟ್‌. ಲಂಡನ್‌ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ವಿಕ್ಕಿ ಲಂಡನ್‌ ತಲುಪಿದ್ದು, ಆಕೆಯೊಂದಿಗಿದ್ದಾರೆ" ಎಂದು ಖಚಿತಪಡಿಸಿವೆ. ಹೀಗಾಗಿ, ಸೋಷಿಯಲ್‌ ಮೀಡಿಯಾ ಬಳಕೆದಾರರ ಊಹೆ ತಪ್ಪಾಗಿಲ್ಲ ಎನ್ನಬಹುದು.

ಕತ್ರಿನಾ ಕೈಫ್‌ ಮತ್ತು ಆಕೆಯ ಪತಿ ವಿಕ್ಕಿ ಕೌಶಲ್‌ ಲಂಡನ್‌ ಬೀದಿಯಲ್ಲಿ ನಿಧಾನವಾಗಿ ನಡೆಯುತ್ತಿರುವ ವಿಡಿಯೋ ವೈರಲ್‌ ಆಗಿದೆ. ರಶ್ಮಿಕಾ ಮಂದಣ್ಣರ ಜತೆ ಛವಾ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾದ ಬಳಿಕ ವಿಕ್ಕ ಕೌಶಲ್‌ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇದೇ ಮೇ 16ರಂದು ವಿಕ್ಕಿ ಕೌಶಲ್‌ ಹುಟ್ಟುಹಬ್ಬವನ್ನು ಕತ್ರಿನಾ ಕೈಫ್‌ ಆಚರಿಸಿದ್ದರು.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಲಂಡನ್ ನಲ್ಲಿ ರಜಾದಿನಗಳನ್ನು ಕಳೆಯುತ್ತಿರುವ ಸಂದರ್ಭದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೈ ಕೈ ಹಿಡಿದು ನಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ. ಇದು ಬೇಬಿ ಬಂಪ್‌ ಸಮಯ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸೆಪ್ಟೆಂಬರ್ 2024 ರಲ್ಲಿ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿರುವ ನಟಿ ದೀಪಿಕಾ ಪಡುಕೋಣೆಗಿಂತ ಮೊದಲೇ ಕತ್ರಿನಾ ಕೈಫ್‌ ಗರ್ಭಿಣಿ ಎನ್ನಲಾಗಿದೆ.

ಸದ್ಯ ಕತ್ರಿನಾ ಕೈಫ್‌ ಅವರು ಪಾಪರಾಜಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಲಂಡನ್‌ಗೆ ಹೋಗಿರಬಹುದು. ವಿಡಿಯೋ ನೋಡಿದರೆ ಖಂಡಿತಾ ಇದು ದೊಡ್ಡ ಜಾಕೆಟ್‌ ಅಲ್ಲ, ಆಕೆ ಗರ್ಭಿಣಿ ಎನ್ನುವುದು ಖಚಿತ ಎಂದು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.

ಟಿ20 ವರ್ಲ್ಡ್‌ಕಪ್ 2024