ಕನ್ನಡ ಸುದ್ದಿ  /  ಮನರಂಜನೆ  /  ರವೀನಾ ಟಂಡನ್‌ಗೆ ನಡುರಸ್ತೆಯಲ್ಲಿಯೇ ಥಳಿಸಿದ್ರಾ ಸಾರ್ವಜನಿಕರು? ದಯವಿಟ್ಟು ಹೊಡೀಬೇಡಿ ಎಂದು ಪರಿಪರಿಯಾಗಿ ಬೇಡಿದ Kgf ನಟಿ

ರವೀನಾ ಟಂಡನ್‌ಗೆ ನಡುರಸ್ತೆಯಲ್ಲಿಯೇ ಥಳಿಸಿದ್ರಾ ಸಾರ್ವಜನಿಕರು? ದಯವಿಟ್ಟು ಹೊಡೀಬೇಡಿ ಎಂದು ಪರಿಪರಿಯಾಗಿ ಬೇಡಿದ KGF ನಟಿ

ಮುಂಬೈನ ರಿಜ್ವಿ ಕಾಲೇಜು ಬಳಿ ಬಾಲಿವುಡ್‌ ನಟಿ ರವೀನಾ ಟಂಡನ್ ಅವರಿದ್ದ ಕಾರು ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ ಎಂಬ ಆರೋಪಿಸಲಾಗಿದೆ. ಚಾಲಕನ ಅಜಾಗರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದ ಸ್ಥಳೀಯರು, ಕಾರನ್ನು ಅಡ್ಡಗಟ್ಟಿ ಚಾಲಕ ಸೇರಿ ನಟಿಗೆ ಥಳಿಸಲು ಮುಂದಾಗಿದ್ದಾರೆ. ಹಲ್ಲೆಯ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ರವೀನಾ ಟಂಡನ್‌ಗೆ ನಡುರಸ್ತೆಯಲ್ಲಿಯೇ ಥಳಿಸಿದ್ರಾ ಸಾರ್ವಜನಿಕರು? ದಯವಿಟ್ಟು ಹೊಡೀಬೇಡಿ ಎಂದು ಪರಿಪರಿಯಾಗಿ ಬೇಡಿದ KGF ನಟಿ VIDEO
ರವೀನಾ ಟಂಡನ್‌ಗೆ ನಡುರಸ್ತೆಯಲ್ಲಿಯೇ ಥಳಿಸಿದ್ರಾ ಸಾರ್ವಜನಿಕರು? ದಯವಿಟ್ಟು ಹೊಡೀಬೇಡಿ ಎಂದು ಪರಿಪರಿಯಾಗಿ ಬೇಡಿದ KGF ನಟಿ VIDEO

Raveena Tandon: KGF ಸಿನಿಮಾ ಖ್ಯಾತಿಯ ಬಾಲಿವುಡ್‌ ನಟಿ ರವೀನಾ ಟಂಡನ್‌ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಶನಿವಾರ ತಡರಾತ್ರಿ ಮೂವರು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ನಟಿ ರವೀನಾ ಮದ್ಯ ಸೇವಿಸಿದ್ದರು ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವಿಡಿಯೋ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಾಗಾದರೆ, ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ.

ಟ್ರೆಂಡಿಂಗ್​ ಸುದ್ದಿ

ಅಷ್ಟಕ್ಕೂ ಆಗಿದ್ದೇನು?

ನಟಿ ರವೀನಾ ಟಂಡನ್‌ ಅವರ ಚಾಲಕನ ಮೇಲೆ ಅಜಾಗರೂಕ ಚಾಲನೆ ಆರೋಪ ಹೊರಿಸಲಾಗಿದ್ದು, ಮುಂಬೈನ ರಿಜ್ವಿ ಕಾಲೇಜು ಬಳಿ ರವೀನಾ ಅವರಿದ್ದ ಕಾರು ಮೂವರು ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಚಾಲಕನ ಅಜಾಗರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದ ಸ್ಥಳೀಯರು, ಕಾರನ್ನು ಅಡ್ಡಗಟ್ಟಿ ಚಾಲಕನಿಗೆ ಥಳಿಸಲು ಮುಂದಾಗಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಮಹಿಳೆಯರ ಮೇಲೆಯೇ ರವೀನಾ ಮತ್ತೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜನ ಸೇರುತ್ತಿದ್ದಂತೆ, ಸ್ಥಳದಲ್ಲಿ ಕೊಂಚ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಟಿಯ ಮೇಲೆ ಮತ್ತು ಡ್ರೈವರ್‌ ಮೇಲೆ ಸ್ಥಳೀಯರು ಮುಗಿ ಬೀಳುತ್ತಿರುವ ದೃಶ್ಯ ಹರಿದಾಡುತ್ತಿರುವ ವೈರಲ್‌ ವಿಡಿಯೋದಲ್ಲಿದೆ. ತಳ್ಳಾಟ ನೂಕಾಟದ ಜತೆಗೆ ಹೊಡೀರಿ ಆಕೆಗೆ ಎಂಬ ಮಾತೂ ವಿಡಿಯೋದಲ್ಲಿದೆ. ಚಾಲಕನಿಗೆ ಸ್ಥಳೀಯರು ಹಲ್ಲೆಗೆ ಮುಂದಾದಾಗ, ಅದನ್ನು ತಡೆಯಲು ಯತ್ನಿಸಿದ ವೇಳೆ ರವೀನಾ ಮೇಲೆ ಸ್ಥಳೀಯರು ಕೈ ಮಾಡಿರುವುದೂ ವೈರಲ್‌ ವಿಡಿಯೋದಲ್ಲಿ ಕಂಡುಬಂದಿದೆ.

ಘಟನಾ ಸ್ಥಳದಲ್ಲಿ ಕಾರನ್ನು ಸ್ಥಳೀಯರು ಸುತ್ತುವರಿದಿದ್ದಾರೆ. ಈ ವೇಳೆ ವೀಡಿಯೊ ರೆಕಾರ್ಡ್ ಮಾಡದಂತೆ ಅಲ್ಲಿದ್ದವರಿಗೆ ರವೀನಾ ಮನವಿ ಮಾಡಿದ್ದಾರೆ. "ನನ್ನನ್ನು ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ" ಎಂದು ರವೀನಾ ಹೇಳಿರುವುದೂ ವಿಡಿಯೋದಲ್ಲಿದೆ. ಇದಾದ ಬಳಿಕ ಮೊಹಮ್ಮದ್ ಎಂಬ ವ್ಯಕ್ತಿ ಇಡೀ ಘಟನೆಯನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಎಡವಟ್ಟು?

"ನನ್ನ ತಾಯಿ, ಸಹೋದರಿ ಮತ್ತು ಸೊಸೆ ಮೂವರು ರಾತ್ರಿ ವೇಳೆ ರಿಜ್ವಿ ಕಾಲೇಜು ಬಳಿ ವಾಕಿಂಗ್‌ಗೆಂದು ಹೋಗುತ್ತಿದ್ದಾಗ ರವೀನಾ ಅವರ ಕಾರು ಮೂವರಿಗೂ ಡಿಕ್ಕಿ ಹೊಡೆದಿದೆ. ಈ ವಿಚಾರದ ಬಗ್ಗೆ ಚಾಲಕನ ಬಳಿ ಕೇಳಿದಾಗ, ಅವರನ್ನೇ ನಿಂದಿಸಿದ್ದಾನೆ. ನಟಿ ರವೀನಾ ಕುಡಿದ ಮತ್ತಿನಲ್ಲಿ ಕಾರಿನಿಂದ ಕೆಳಗಿಳಿದು ಅಮ್ಮನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಹಾಗಾಗಿ ನಾವೂ ಅವರ ಮೇಲೆ ಮುಗಿಬೀಳಬೇಕಾಯಿತು" ಎಂದು ಮೊಹಮ್ಮದ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಪೊಲೀಸ್‌ ಠಾಣೆಯಲ್ಲೂ ಹೈಡ್ರಾಮಾ

ತನ್ನ ತಾಯಿ ಮತ್ತು ಸೊಸೆಯೊಂದಿಗೆ ಖಾರ್ ಪೊಲೀಸ್ ಠಾಣೆಯಲ್ಲಿ ನಾಲ್ಕು ಗಂಟೆಗಳ ಕಾಲ ಇದ್ದರೂ ಪೊಲೀಸರು ದೂರು ದಾಖಲಿಸಿಲ್ಲ ಎಂದು ಮೊಹಮ್ಮದ್ ಹೇಳಿದ್ದಾರೆ. “ನಾವೇಕೆ ರಾಜಿ ಮಾಡಿಕೊಳ್ಳಬೇಕು? ನನ್ನ ತಾಯಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ನಾನು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದೇನೆ" ಎಂದು ವಿಡಿಯೋದಲ್ಲಿ ಮೊಹಮ್ಮದ್ ಹೇಳಿಕೊಂಡಿದ್ದಾರೆ .‌ ಈ ಘಟನೆ ನಡೆದ ಕೆಲ ಗಂಟೆಗಳ ನಂತರ ರವೀನಾ ಟಂಡನ್‌ ಅಲ್ಲಿಂದ ತೆರಳಿದ್ದಾರೆ. ಕೆಲ ಹೊತ್ತಿನ ಬಳಿಕ ರವೀನಾ ಅವರ ಪತಿ ಅನಿಲ್ ಥಡಾನಿ ಪೊಲೀಸ್ ಠಾಣೆಗೆ ಬಂದು ಅಪಘಾತದಲ್ಲಿ ಗಾಯವಾದ ಕುಟುಂಬದವರೊಂದಿಗೆ ಮಾತನಾಡಿ ಪ್ರಕರಣವನ್ನು ಬಗೆಹರಿಸಲು ಯತ್ನಿಸಿದರು.

ಟಿ20 ವರ್ಲ್ಡ್‌ಕಪ್ 2024