ಕನ್ನಡ ಸುದ್ದಿ  /  Entertainment  /  Bollywood News Mahabharat Serial Shakuni Mama Fame Gufi Paintal Passed Away In Mumbai Hospital On Monday Rsm

Gufi Paintal: ಮಹಾಭಾರತದ ಶಕುನಿ ಮಾಮ ಇನ್ನಿಲ್ಲ; ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಗುಫಿ ಪೈಂಟಲ್‌ ಆಸ್ಪತ್ರೆಯಲ್ಲಿ ನಿಧನ

1988 ರಿಂದ 1990ವರೆಗೆ ಸುಮಾರು 2 ವರ್ಷಗಳ ಕಾಲ ಮಹಾಭಾರತ ಧಾರಾವಾಹಿ ಡಿಡಿ-1 ರಲ್ಲಿ ಪ್ರಸಾರವಾಗಿತ್ತು. ಜನರ ಮೆಚ್ಚುಗೆ ಗಳಿಸಿದವರಲ್ಲಿ ಶಕುನಿ ಮಾಮ ಪಾತ್ರ ಕೂಡಾ ಒಂದು. ಗುಫಿ ಪೈಂಟಲ್‌ ಶಕುನಿ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದರು. ಆರ್‌ ಛೋಪ್ರಾ ಹಾಗೂ ರವಿ ಛೋಪ್ರಾ ಈ ಧಾರಾವಾಹಿಯನ್ನು ನಿರ್ದೇಶಿಸಿದ್ದರು.

ಮಹಾಭಾರತದ ಶಕುನಿ ಪಾತ್ರಧಾರಿ ಗುಫಿ ಪೈಂಟಲ್‌ ನಿಧನ
ಮಹಾಭಾರತದ ಶಕುನಿ ಪಾತ್ರಧಾರಿ ಗುಫಿ ಪೈಂಟಲ್‌ ನಿಧನ (PC: Twitter)

ಮಹಾಭಾರತ ಧಾರಾವಾಹಿಯಲ್ಲಿ ಶಕುನಿ ಪಾತ್ರದಲ್ಲಿ ನಟಿಸಿದ್ದ ಗುಫಿ ಪೈಂಟಲ್‌ ನಿಧನರಾಗಿದ್ದಾರೆ. ಗುಫಿ, ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಗುಫಿ ನಿಧನದ ಸುದ್ದಿಯನ್ನು ಅವರ ಸಂಬಂಧಿ ಹಿತೇನ್‌ ಪೈಂಟಲ್‌ ದೃಢಪಡಿಸಿದ್ದಾರೆ.

''ಮುಂಬೈನ ಅಂಧೇರಿಯ ಆಸ್ಪತ್ರೆಯೊಂದಕ್ಕೆ ಗುಫಿ ಅವರನ್ನು ಅಡ್ಮಿಟ್‌ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಅವರು ನಿಧನರಾಗಿದ್ದಾರೆ. ದುರದೃಷ್ಟವಶಾತ್‌ ನಾವು ಇಂದು ಬೆಳಗ್ಗೆ 9 ಗಂಟೆಗೆ ಗುಫಿ ಪೈಂಟಲ್‌ ಅವರನ್ನು ಕಳೆದುಕೊಂಡಿದ್ದೇವೆ.'' ಎಂದು ಹಿತೇನ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. ''ಗುಫಿ ಅವರಿಗೆ ಕೆಲವು ವರ್ಷಗಳಿಂದ ರಕ್ತದ ಒತ್ತಡ ಹಾಗೂ ಹೃದಯಸಂಬಂಧಿ ಸಮಸ್ಯೆಗಳು ಇದ್ದವು. ಆಗಿನಿಂದಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇತ್ತೀಚೆಗೆ ಅವರ ಆರೋಗ್ಯ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಅದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಕಳೆದ 8 ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು'' ಎಂದು ಹಿತೇನ್‌ ಮಾಹಿತಿ ನೀಡಿದ್ದಾರೆ.

1988 ರಿಂದ 1990ವರೆಗೆ ಸುಮಾರು 2 ವರ್ಷಗಳ ಕಾಲ ಮಹಾಭಾರತ ಧಾರಾವಾಹಿ ಡಿಡಿ-1 ರಲ್ಲಿ ಪ್ರಸಾರವಾಗಿತ್ತು. ಜನರ ಮೆಚ್ಚುಗೆ ಗಳಿಸಿದವರಲ್ಲಿ ಶಕುನಿ ಮಾಮ ಪಾತ್ರ ಕೂಡಾ ಒಂದು. ಗುಫಿ ಪೈಂಟಲ್‌ ಶಕುನಿ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದರು. ಆರ್‌ ಛೋಪ್ರಾ ಹಾಗೂ ರವಿ ಛೋಪ್ರಾ ಈ ಧಾರಾವಾಹಿಯನ್ನು ನಿರ್ದೇಶಿಸಿದ್ದರು. ಈ ಧಾರಾವಾಹಿ ಜೊತೆಗೆ ಗುಫಿ, ಸುಹಾಗ್‌, ದಿಲ್ಹಗಿ ಸಿನಿಮಾಗಳಲ್ಲಿ ನಟಿಸಿ ಕೂಡಾ ಹೆಸರಾಗಿದ್ದರು. ಸಿಐಡಿ, ಹಲೋ ಇನ್‌ಸ್ಪೆಕ್ಟರ್‌ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಆದರೆ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಮಹಾಭಾರತದ ಶಕುನಿ ಮಾಮ ಪಾತ್ರ. ಮಗ , ಸೊಸೆ, ಮೊಮ್ಮಕ್ಕಳನ್ನು ಗುಫಿ ಪೈಂಟಲ್‌ ಅಗಲಿದ್ದಾರೆ. ಸೋಮವಾರ ಸಂಜೆ 4 ಗಂಟೆಗೆ ಮುಂಬೈನ ಅಂಧೇರಿಯಲ್ಲಿ ಗುಫಿ ಪೈಂಟಲ್‌ ಅಂತ್ಯ ಸಂಸ್ಕಾರ ನೆರವೇರಲಿದೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಹಲೋ ಡ್ಯಾಡಿ ಸಿನಿಮಾ ಖ್ಯಾತಿಯ ನಿತಿನ್‌ ಗೋಪಿ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕನ್ನಡ ಚಿತ್ರರಂಗ, ಕಿರುತೆರೆ

ಬಾಲನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಿತಿನ್‌ ಗೋಪಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿತಿನ್‌ ನಟನಾಗಿ, ಕನ್ನಡ ಕಿರುತೆರೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಅವರಿಗೆ 39 ವಯಸ್ಸಾಗಿತ್ತು. ನಿತಿನ್‌ ಬೆಂಗಳೂರಿನ ಇಟ್ಟಮಡುವಿನ ಅಪಾರ್ಟ್‌ಮೆಂಟ್‌ನಲ್ಲಿ ತಂದೆ ತಾಯಿ ಜೊತೆ ವಾಸವಾಗಿದ್ದರು. ಇಂದು( ಶುಕ್ರವಾರ) ಬೆಳಗಿನ ಜಾವ 4 ಗಂಟೆಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ನೆರೆಹೊರೆಯವರ ಸಹಾಯದಿಂದ ಹೆತ್ತವರು ನಿತಿನ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೂರ್ತಿ ಸ್ಟೋರಿಗೆ ಈ ಲಿಂಕ್‌ ಒತ್ತಿ.

ಹೃದಯಾಘಾತದಿಂದ ಹಿಂದಿ ಕಿರುತೆರೆಯ ಖ್ಯಾತ ನಟ ನಿತೀಶ್‌ ಪಾಂಡೆ ನಿಧನ

ಹಿಂದಿ ಕಿರುತೆರೆಗೆ ಒಂದಾದ ಮೇಲೊಂದರಂತೆ ವಿಘ್ನಗಳು ಎದುರಾಗುತ್ತಿವೆ. ಆದಿತ್ಯ ಸಿಂಗ್‌ ರಜಪೂತ್‌ ಮತ್ತು 'ಸಾರಾಭಾಯಿ ವರ್ಸಸ್ ಸಾರಾಭಾಯಿ' ನಟಿ ವೈಭವಿ ಉಪಾಧ್ಯಾಯ ಸಾವಿನಿಂದ ಶಾಕ್‌ನಲ್ಲಿದ್ದ ಕಿರುತೆರೆ ಮಂದಿಗೆ ಇದೀಗ ಮತ್ತೊಂದು ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಹಿಂದಿಯ ಖ್ಯಾತ ಕಿರುತೆರೆ ನಟ ನಿತೇಶ್ ಪಾಂಡೆ (51) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಪೂರ್ಣ ಸ್ಟೋರಿಗೆ ಇಲ್ಲಿ ಒತ್ತಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ