Sam Bahadur: ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ ಜೀವನಗಾಥೆ ನೋಡಲು ಸಜ್ಜಾಗಿ; ಈ ಶುಕ್ರವಾರ ಸ್ಯಾಮ್ ಬಹದ್ದೂರ್ ಬಿಡುಗಡೆ
Sam Bahadur Release friday December 1 : ಈ ಶುಕ್ರವಾರ ವಿಕ್ಕಿ ಕೌಶಲ್‌ರ ಬಹುನಿರೀಕ್ಷಿತ ಸಿನಿಮಾ ಸ್ಯಾಮ್ ಬಹದ್ಧೂರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿ ಕೌಶಲ್ ಅಪ್‌ಡೇಟ್ ನೀಡಿದ್ದು, ವೀರ ಸೈನಿಕ ಸಾಹಸಗಾಥೆ ನೋಡಲು ಸಜ್ಜಾಗಿ ಎಂದು ಬರೆದಿದ್ದಾರೆ.
ಬೆಂಗಳೂರು: ಈ ಶುಕ್ರವಾರ ತೆರೆ ಕಾಣಲು ಹಲವು ಸಿನಿಮಾಗಳು ಸಜ್ಜಾಗಿವೆ. ಒಂದೆಡೆ ರಣಬೀರ್ ಕಪೂರ್ ನಟನೆಯ ಎನಿಮಲ್ ಚಿತ್ರ ಬಿಡುಗಡೆಯಾಗುತ್ತಿದ್ದರೆ, ಇನ್ನೊಂದೆಡೆ ವೀರ ಯೋಧನ ಕಥೆಯಿರುವ ಸ್ಯಾಮ್ ಬಹುದ್ಧೂರ್ ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಈ ಚಿತ್ರದ ಕುರಿತು ತನ್ನ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಲು ನಟ ವಿಕ್ಕಿ ಕೌಶಲ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿಗಳನ್ನು ಅಪ್‌ಡೇ ಮಾಡುತ್ತಿದ್ದಾರೆ. ಇದನ್ನೂ ಓದಿ: ವರ್ಕೌಟ್ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ; ಫಿಟ್ನೆಸ್‌ಗಾಗಿ ಇಷ್ಟೊಂದು ಶ್ರಮ ವಹಿಸ್ತಾರ ಅನಿಮಲ್ ನಟಿ
"ನಾಲ್ಕು ದಶಕಗಳಿಂದ, ಐದು ಯುದ್ಧಗಳಲ್ಲಿ ಅಚಲ ಸಮರ್ಪಣೆ, ಧೈರ್ಯ ತೋರಿದ ಸೈನಿಕನ ಸಾಹಸಗಾಥೆ ವೀಕ್ಷಿಸಲು ಸಜ್ಜಾಗಿ" ಎಂದು ವಿಕ್ಕಿ ಕೌಶಲ್ ಅವರು ತಮ್ಮ ಪಾತ್ರದ ಪೋಸ್ಟರ್‌ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಸ್ಯಾಮ್ ಬಹದ್ಧೂರ್ ಮುಂಗಡ ಬುಕ್ಕಿಂಗ್ ಆರಂಭ
ಇದೇ ಪೋಸ್ಟರ್‌ನಲ್ಲಿ ವಿಕ್ಕಿ ಕೌಶಲ್ ಅವರು ಸ್ಯಾಮ್ ಬಹದ್ಧೂರ್ ಸಿನಿಮಾದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಆರಂಭವಾಗಿದೆ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಈ ವಿಕೇಂಡ್‌ಗೆ ಈ ಸೈನಿಕನ ಸಾಹಸ ಪ್ರಯಾಣ ನೋಡಲು ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು. "ಸುಮಾರು 40 ವರ್ಷಗಳ ಕಾಲ ಸೈನಿಕನ ಯೂನಿಫಾರ್ಮ್ ತೊಟ್ಟ ಸಾಹಸಿಯ ಕಥೆಯಿದು. ಐದು ಯುದ್ಧಗಳ ಕತೆಯಿದು, ಬುಕ್ಕಿಂಗ್ ಆರಂಭವಾಗಿದೆ" ಎಂದು ವಿಕ್ಕಿ ಕೌಶಲ್ ಬರೆದಿದ್ದಾರೆ. ಇದನ್ನೂ ಓದಿ: ಪೂಜಾ ಗಾಂಧಿಗೆ ನಾಳೆ ಮದುವೆ; ಕನ್ನಡ ಕಲಿಸಿದ ಗುರುವಿನ ಕೈಹಿಡಿಯಲಿದ್ದಾರಂತೆ ಮುಂಗಾರು ಮಳೆ ಚೆಲುವೆ
ಉರಿ ಸಿನಿಮಾದ ಬಳಿಕ ಸ್ಯಾಮ್ ಬಹದ್ಧೂರ್ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಸೈನಿಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉರಿ- ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸಿತ್ತು
ಕೆಲವು ದಿನದ ಹಿಂದಿನ ಲೆಕ್ಕಾಚಾರದ ಪ್ರಕಾರ ಸ್ಯಾಮ್ ಬಹದ್ಧೂರ್ ಸಿನಿಮಾದ ಅಡ್ವಾನ್ಸಡ್ ಬುಕ್ಕಿಂಗ್ ಆರಂಭವಾದ ಕೆಲವು ದಿನಗಳಲ್ಲಿ ಸುಮಾರು 18 ಲಕ್ಷ ಟಿಕೆಟ್‌ಗಳನ್ನು ಜನರು ಬುಕ್ಕಿಂಗ್ ಮಾಡಿದ್ದಾರೆ. ಇದರಿಂದ ಸುಮಾರು 64 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಸಚ್‌ನಿಕ್.ಕಾಂ ವರದಿ ಮಾಡಿದೆ.
ಇದೊಂದು ಅಪ್ಪಟ ದೇಶ ಪ್ರೇಮದ ಕಥೆ. ಸುದೀರ್ಘ 40 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದುಡಿದು, ಮೊದಲ ಏರ್ ಫೀಲ್ಡ್ ಮಾರ್ಷಲ್ ಆಗಿದ್ದ ಸ್ಯಾಮ್ ಮಾನೆಕ್ ಷಾ ಅವರ ಸೇನಾ ದಿನಗಳು ಮತ್ತು ಪ್ರಮುಖ ಯುದ್ಧದ ಕಥಾನಕವನ್ನು ಸ್ಯಾಮ್ ಬಹದ್ದೂರ್ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ ನಿರ್ದೇಶಕಿ ಮೇಘನಾ ಗುಲ್ಜಾರ್. 1971ರ ಇಂಡೋ- ಪಾಕ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ತೆರೆದುಕೊಳ್ಳಲಿದೆ. 1969ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸ್ಯಾಮ್ ಮಾನೆಕ್ ಷಾ, ಪಾಕ್ ವಿರುದ್ಧದ ಸಮರದಲ್ಲಿ ವಿಜಯ ಸಾಧಿಸುತ್ತಾರೆ. ಇದರ ಪರಿಣಾಮವಾಗಿ 1971ರಲ್ಲಿ ಬಾಂಗ್ಲಾದೇಶದ ಹುಟ್ಟಿಗೂ ಇವರು ಕಾರಣರಾಗುತ್ತಾರೆ. ಈ ಕುರಿತ ವರದಿ ಇಲ್ಲಿದ ಓದಿ.