ಆಸ್ಪತ್ರೆ ಸೇರಿದ ಐರಾವತ ಸಿನಿಮಾ ನಟಿ ಊರ್ವಶಿ ರೌಟೇಲಾ; ಆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ ಪ್ರಪಂಚದ ಮೊದಲ ನಟಿ ನೀವೇ ಎಂದ ನೆಟ್ಟಿಗರು-bollywood news mr airavata kannada movie actress urvashi rautela admitted to hospital requested fans to pray for her rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಆಸ್ಪತ್ರೆ ಸೇರಿದ ಐರಾವತ ಸಿನಿಮಾ ನಟಿ ಊರ್ವಶಿ ರೌಟೇಲಾ; ಆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ ಪ್ರಪಂಚದ ಮೊದಲ ನಟಿ ನೀವೇ ಎಂದ ನೆಟ್ಟಿಗರು

ಆಸ್ಪತ್ರೆ ಸೇರಿದ ಐರಾವತ ಸಿನಿಮಾ ನಟಿ ಊರ್ವಶಿ ರೌಟೇಲಾ; ಆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ ಪ್ರಪಂಚದ ಮೊದಲ ನಟಿ ನೀವೇ ಎಂದ ನೆಟ್ಟಿಗರು

ಬಾಲಿವುಡ್‌ ನಟಿ, ಐರಾವತ ಕನ್ನಡ ಸಿನಿಮಾ ನಟಿ ಊರ್ವಶಿ ರೌಟೇಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಊರ್ವಶಿ, ನನಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ.

ಆಸ್ಪತ್ರೆ ಸೇರಿದ ಐರಾವತ ಸಿನಿಮಾ ನಟಿ ಊರ್ವಶಿ ರೌಟೇಲಾ; ಆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ ಪ್ರಪಂಚದ ಮೊದಲ ನಟಿ ನೀವೇ ಎಂದ ನೆಟ್ಟಿಗರು
ಆಸ್ಪತ್ರೆ ಸೇರಿದ ಐರಾವತ ಸಿನಿಮಾ ನಟಿ ಊರ್ವಶಿ ರೌಟೇಲಾ; ಆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ ಪ್ರಪಂಚದ ಮೊದಲ ನಟಿ ನೀವೇ ಎಂದ ನೆಟ್ಟಿಗರು

ನಟಿ ಊರ್ವಶಿ ರೌಟೇಲಾ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಾತ್ಮಕ ವಿಚಾರಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಐರಾವತ ನಟಿಯ ಬಾತ್‌ರೂಮ್‌ ವಿಡಿಯೋವೊಂದು ವೈರಲ್‌ ಆಗಿತ್ತು. ಈಗ ಈ ಚೆಲುವೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಊರ್ವಶಿ ರೌಟೇಲಾ ಆಸ್ಪತ್ರೆಗೆ ಸೇರಿದ್ದು, ಆಸ್ಪತ್ರೆಯಲ್ಲಿ ಆಕ್ಸಿಜನ್‌ ಹಾಕಿ ಕುಳಿತಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ನನಗಾಗಿ ಪ್ರಾರ್ಥಿಸಿ ಎಂದ ಐರಾವತ ನಟಿ ಊರ್ವಶಿ ರೌಟೇಲಾ

ಸ್ವತ: ಊರ್ವಶಿ ರೌಟೇಲಾ ಈ ವಿಡಿಯೋವನ್ನು ತಮ್ಮ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದು ನನಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ. ತಮ್ಮ ಮೆಚ್ಚಿನ ನಟಿ ಆಸ್ಪತ್ರೆ ಸೇರಿರುವ ವಿಚಾರ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಿಮಗಾಗಿ ಪ್ರಾರ್ಥಿಸುತ್ತೇವೆ, ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸುತ್ತಿದ್ದಾರೆ. ಅಷ್ಟಕ್ಕೂ ದರ್ಶನ್‌ ನಾಯಕಿಗೆ ಆಗಿದ್ದೇನು? ಊರ್ವಶಿ ರೌಟೇಲಾ ಆಸ್ಪತ್ರೆಗೆ ಸೇರಿ ಆಕ್ಸಿಜನ್‌ ತೆಗೆದುಕೊಳ್ಳುವಂತ ಸಮಸ್ಯೆ ಏನಾಗಿದೆ ಅಂತ ಯೋಚಿಸುತ್ತಿರುವವರಿಗೆ ಅಸಲಿ ವಿಚಾರ ತಿಳಿದು ಶಾಕ್‌ ಆಗಿದೆ. ನಿಜಕ್ಕೂ ಇದು ವಿಸ್ಮಯ, ವಿಚಿತ್ರ, ವಿಭಿನ್ನ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಊರ್ವಶಿ ರೌಟೇಲಾಗೆ ಹೇಳಿಕೊಳ್ಳುವಂಥ ಆರೋಗ್ಯ ಸಮಸ್ಯೆ ಅಂತೂ ಖಂಡಿತ ಇಲ್ಲ. ಆಕಸ್ಮಿಕವಾಗಿ ಊರ್ವಶಿ ಬಲಗೈ ಬೆರಳುಗಳಿಗೆ ಪೆಟ್ಟು ಬಿದ್ದು ರಕ್ತ ಹೊರ ಬಂದಿದೆ. ಅದಕ್ಕಾಗಿ ಊರ್ವಶಿ ರೌಟೇಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಊರ್ವಶಿ ಮಾಸ್ಕ್‌ ಹಾಕಿಕೊಂಡು ಆಸ್ಪತ್ರೆ ಚೇರ್‌ ಮೇಲೆ ಕುಳಿತು ಯಾವುದೋ ಮ್ಯಾಗಜಿನ್‌ ಓದುತ್ತಿದ್ದಾರೆ. ಇದನ್ನು ನೋಡಿದ ಕೂಡಲೇ ನಿಜಕ್ಕೂ ಆಕೆ ಏನೋ ಗಂಭೀರ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೇನೋ ಅನ್ನಿಸದೆ ಇರದು. ಆದರೆ ಅಸಲಿ ವಿಚಾರ ತಿಳಿದ ನಂತರ ಕೆಲವರು ಮುಸಿ ಮುಸಿ ನಗುತ್ತಿದ್ದಾರೆ.

ಹರಿದುಬಂತು ತರೇಹವಾರಿ ಕಾಮೆಂಟ್‌ಗಳು

ಕೈ ಬೆರಳು ಸ್ವಲ್ಪ ಏಟಾಗಿದ್ದಕ್ಕೆ ಆಸ್ಪತ್ರೆಗೆ ಸೇರಿದ ಮೊದಲ ನಟಿ ಇವರು ಎಂದು ಒಬ್ಬರು ಯೂಸರ್‌ ಕಾಮೆಂಟ್‌ ಮಾಡಿದರೆ ಓವರ್‌ ಆಕ್ಟಿಂಗ್‌ ಸಾಕು ಎಂದು ಮತ್ತೊಬ್ಬರು ಬರೆದಿದ್ದಾರೆ. ಊರ್ವಶಿ ಊರ್ವಶಿ ಟೇಕ್‌ ಇಟ್‌ ಈಸಿ ಊರ್ವಶಿ, ನಿಮಗಾಗಿ ನಾನು ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತೇನೆ ಬೇಗ ಗುಣಮುಖರಾಗಿ ಬನ್ನಿ ಎಂದೆಲ್ಲಾ ಇನ್‌ಸ್ಟಾಗ್ರಾಮ್‌ ಬಳಕೆದಾರರು ಕಾಮೆಂಟ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಊರ್ವಶಿ ರೌಟೇಲಾ ಸಣ್ಣ ವಿಚಾರಗಳಿಗೂ ದೊಡ್ಡ ಪ್ರಚಾರ ಪಡೆಯುತ್ತಿರುವುದು ಕೆಲವರಿಗೆ ನಗು ತರಿಸಿದೆ.

ಊರ್ವಶಿ ರೌಟೇಲಾ 2013 ರಲ್ಲಿ ತೆರೆ ಕಂಡ ಸಿಂಗ್‌ ಸಾಬ್‌ ದಿ ಗ್ರೇಟ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. 2015ರಲ್ಲಿ ಮೊದಲ ಬಾರಿಗೆ ಕನ್ನಡಕ್ಕೆ ಬಂದ ಈ ಬ್ಯೂಟಿ ಐರಾವತ ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ನಟಿಸಿದರು. ನಂತರ ಕನ್ನಡದ ಯಾವುದೇ ಸಿನಿಮಾಗಳಲ್ಲಿ ಊರ್ವಶಿ ನಟಿಸಲಿಲ್ಲ. ಕ್ರಮೇಣ ನಾಯಕಿ ಪಾತ್ರಕ್ಕಿಂತ ಹೆಚ್ಚಾಗಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಸದ್ಯಕ್ಕೆ ಊರ್ವಶಿ ತೆಲುಗಿನ ಬ್ಲಾಕ್‌ ರೋಸ್‌, ಹಿಂದಿಯ ಜಂಗಲ್‌, ಕಸೂರ್‌ 2 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.