ಕನ್ನಡ ಸುದ್ದಿ  /  ಮನರಂಜನೆ  /  Mr And Mrs Mahi: ಹೇಗಿದೆಯಂತೆ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ? ರಾಜ್‌ಕುಮಾರ್‌ ರಾವ್‌, ಜಾನ್ವಿ ಕಪೂರ್‌ ಸಿನಿಮಾದ ಪಬ್ಲಿಕ್‌ ವಿಮರ್ಶೆ ಓದಿ

Mr and Mrs Mahi: ಹೇಗಿದೆಯಂತೆ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ? ರಾಜ್‌ಕುಮಾರ್‌ ರಾವ್‌, ಜಾನ್ವಿ ಕಪೂರ್‌ ಸಿನಿಮಾದ ಪಬ್ಲಿಕ್‌ ವಿಮರ್ಶೆ ಓದಿ

Mr and Mrs Mahi Public Review: ಎಕ್ಸ್‌ (ಟ್ವಿಟ್ಟರ್‌ನಲ್ಲಿ) ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್‌ಕುಮಾರ್‌ ರಾವ್‌, ಜಾನ್ವಿ ಕಪೂರ್‌ ನಟನೆಯ ಸಿನಿಮಾವನ್ನು ಕೆಲವರು ಬ್ಲಾಕ್‌ಬಸ್ಟರ್‌ ಎಂದಿದ್ದಾರೆ. ಇನ್ನು ಕೆಲವರು ಓಕೆ ಪರವಾಗಿಲ್ಲ ಎಂದಿದ್ದಾರೆ.

Mr and Mrs Mahi: ಹೇಗಿದೆಯಂತೆ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ?
Mr and Mrs Mahi: ಹೇಗಿದೆಯಂತೆ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ?

Mr and Mrs Mahi Public Review: ರಾಜ್‌ಕುಮಾರ್‌ ರಾವ್‌ ನಟನೆಯ ಎರಡನೇ ಸಿನಿಮಾ ಈ ವರ್ಷ ಬಿಡುಗಡೆಯಾಗಿದೆ. ಈಗಾಗಲೇ ಶ್ರೀಕಾಂತ್‌ ಸಿನಿಮಾ ಯಶಸ್ಸು ಪಡೆದಿದೆ. ಇದೀಗ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹೀ ಸಿನಿಮಾ ನೋಡಿರುವ ಸಿನಿಪ್ರೇಕ್ಷಕರು ಇಂಟರ್‌ನೆಟ್‌ನಲ್ಲಿ ಹೊಗಳುತ್ತಿದ್ದಾರೆ. ಶರಣ್‌ ಶರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಜಾನ್ವಿ ಕಪೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಎಂದರೂ ತಪ್ಪಾಗದು. ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾವು ರೊಮ್ಯಾಂಟಿಕ್‌ ಸ್ಪೋರ್ಟ್ಸ್‌ ಡ್ರಾಮಾ. ಅತಿಯಾಗಿ ಪ್ರೀತಿಸುವ ದಂಪತಿಗೆ ಕ್ರಿಕೆಟ್‌ ಅಂದ್ರೆ ಪಂಚಪ್ರಾಣ. ಕ್ರೀಡೆ ಇಷ್ಟಪಡುವ ಗಂಡ ಮತ್ತು ಹೆಂಡತಿಯ ಬದುಕಿನ ಕುರಿತು ಈ ಸಿನಿಮಾ ಹೆಚ್ಚಿನ ವಿವರ ನೀಡುತ್ತದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಎಕ್ಸ್‌ (ಟ್ವಿಟ್ಟರ್‌)ನಲ್ಲಿ ತಮ್ಮ ಅಭಿಪ್ರಾಯ ವಿಮರ್ಶೆಗಳನ್ನು ಬರೆಯುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಾಕ್‌ಬಸ್ಟರ್‌ ಸಿನಿಮಾವಾಗೋದು ಖಾತ್ರಿ

ಎಕ್ಸ್‌ನಲ್ಲಿ ಹಲವು ಜನರು ಮಿಸ್ಟರ್‌ ಆಂಡ್‌ ಮಿಸೆಸ್‌ ಸಿನಿಮಾದ ಕುರಿತು ತಮ್ಮ ಅಭಿಪ್ರಾಯ ಬರೆದಿದ್ದಾರೆ. ಬಹುತೇಕರು ಜಾನ್ವಿ ಕಪೂರ್‌ ಮತ್ತು ರಾಜ್‌ ಕುಮಾರ್‌ ರಾವ್‌ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಇಬ್ಬರು ಅದ್ಭುತವಾಗಿ ನಟಿಸಿದ್ದಾರೆ ಎಂದಿದ್ದಾರೆ. "ಖಂಡಿತಾ ಈ ಸಿನಿಮಾ ಬ್ಲಾಕ್‌ಬಸ್ಟರ್‌ ಆಗಲಿದೆ" " ಜಾನ್ವಿ ಕಪೂರ್‌ ಮತ್ತು ರಾಜ್‌ ನಟನೆ ಅದ್ಭುತ" "ಇದು ಭಾವನಾತ್ಮಕ ರೋಲರ್‌ಕಾಸ್ಟರ್‌ ಸಿನಿಮಾ" "ಮಿಸ್‌ ಮಾಡದೆ ನೋಡಿ, ನೀವು ಖಂಡಿತಾ ಇಷ್ಟಪಡುವ ಸಿನಿಮಾ" " ಈ ಸಿನಿಮಾದ ಸ್ಟೋರಿ ಗಟ್ಟಿಯಾಗಿದೆ. ನಟರ ನಟನೆ ಭಾವನಾತ್ಮಕವಾಗಿದೆ" ಎಂದೆಲ್ಲ ಎಕ್ಸ್‌ನಲ್ಲಿ ನೆಟ್ಟಿಗರು ರಿವ್ಯೂ ಮಾಡಿದ್ದಾರೆ.

ಸ್ಪೂರ್ತಿದಾಯಕ ಸಿನಿಮಾ

#MrandMrsMahi ಸ್ಪೂರ್ತಿದಾಯಕ ಸಿನಿಮಾ. ಇದರ ಕಥೆ ಅತ್ಯುತ್ತಮವಾಗಿದೆ. ರಾಜ್‌ಕುಮಾರ್‌ ಮತ್ತು ಜಾನ್ವಿ ನನ್ನ ಹೃದಯ ಗೆದ್ದರು. ಇವರಿಬ್ಬರು ತಮ್ಮ ಕರಿಯರ್‌ನಲ್ಲೇ ಅತ್ಯುತ್ತಮ ಪರ್ಫಾಮೆನ್ಸ್‌ ನೀಡಿದ್ದಾರೆ. ನನ್ನ ಕಡೆಯಿಂದ ಈ ಸಿನಿಮಾಕ್ಕೆ 5 ಸ್ಟಾರ್‌ ರೇಟಿಂಗ್‌ ನೀಡುವೆ ಎಂದು ಪೂಜಾ ಎಂಬ ಟ್ವಿಟ್ಟರ್‌ ಬಳಕೆದಾರರು ಪೋಸ್ಟ್‌ ಮಾಡಿದ್ದಾರೆ.

ಸಿನಿಮಾದ ಕಥೆ ಊಹಿಸುವಂತೆ ಇದೆ

"ಈ ಸಿನಿಮಾದಲ್ಲಿ ಊಹಿಸಬಹುದಾದ ವಿಷಯಗಳು ಸಾಕಷ್ಟು ಇವೆ. ಇದರ ಸ್ಕ್ರಿನ್‌ಪ್ಲೇ ಉತ್ತಮವಾಗಿಲ್ಲ. ಇದರಲ್ಲಿ ಕ್ರಿಕೆಟ್‌ ಅತ್ಯಂತ ದುರ್ಬಲ ಅಂಶ. ರಾಜ್‌ಕುಮಾರ್‌ ನಟನೆ ಓಕೆ. ಜಾನ್ವಿ ಕಪೂರ್‌ ನಟನೆ ಇನ್ನಷ್ಟು ಬೇಕಿತ್ತು. ಸಂಗೀತ ಉತ್ತಮವಾಗಿದೆ" ಎಂದು ರಿವ್ಯೂ ಜಂಕಿ ಎಕ್ಸ್‌ನಲ್ಲಿ ರಿವ್ಯೂ ಬರೆದಿದ್ದಾರೆ.

ಸಿನಿಮಾ ಚೆನ್ನಾಗಿದೆ

ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾ "ವಿನ್ನರ್‌". ರಾಜ್‌ಕುಮಾರ್‌ ರಾವ್‌ ಮತ್ತು ಜಾನ್ವಿ ಕಪೂರ್‌ ಕೆಮೆಸ್ಟ್ರಿ ವರ್ಕೌಟ್‌ ಆಗಿದೆ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ದ್ವಿತೀಯಾರ್ಧ ಉತ್ತಮ. ಮೊದಲಾರ್ಧದಲ್ಲಿ ಸಂಗೀತ ಗಮನ ಸೆಳೆಯುತ್ತದೆ ಎಂದು ನಿಶ್ಮಿತಾ ಶಾ ರಿವ್ಯೂ ಬರೆದಿದ್ದಾರೆ.

ಹೀಗೆ ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಇದು ಬ್ಲಾಕ್‌ಬಸ್ಟರ್‌ ಸಿನಿಮಾ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಮಿಶ್ರ ಅಭಿಪ್ರಾಯ ನೀಡಿದ್ದಾರೆ. ಕೆಲವರು ಸಾಧಾರಣ ಸಿನಿಮಾ ಎಂದಿದ್ದಾರೆ.

ಟಿ20 ವರ್ಲ್ಡ್‌ಕಪ್ 2024