ಕನ್ನಡ ಸುದ್ದಿ  /  ಮನರಂಜನೆ  /  ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾ‌ ನಟನೆಗೆ ಜಾಹ್ವನಿ ಕಪೂರ್‌ಗೆ 5 ಕೋಟಿ ರೂಪಾಯಿ ವೇತನ; ಹೀರೋ ಮತ್ತು ಇತರರಿಗೆ ಎಷ್ಟು ಸಿಗ್ತು ಪಗಾರ

ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾ‌ ನಟನೆಗೆ ಜಾಹ್ವನಿ ಕಪೂರ್‌ಗೆ 5 ಕೋಟಿ ರೂಪಾಯಿ ವೇತನ; ಹೀರೋ ಮತ್ತು ಇತರರಿಗೆ ಎಷ್ಟು ಸಿಗ್ತು ಪಗಾರ

ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಈ ವರ್ಷದ ಬಹುನಿರೀಕ್ಷಿತ ಬಾಲಿವುಡ್‌ ಸಿನಿಮಾ. ಈ ಸಿನಿಮಾದಲ್ಲಿ ಜಾನ್ವಿ ಕಪೂರ್‌ ಮತ್ತು ರಾಜ್‌ಕುಮಾರ್‌ ರಾವ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜ್‌ಕುಮಾರ್‌ ರಾವ್‌, ಜಾನ್ವಿ ಕಪೂರ್‌ ಸೇರಿದಂತೆ ವಿವಿಧ ನಟರು ಈ ಸಿನಿಮಾದ ನಟನೆಗೆ ಪಡೆದ ವೇತನದ ವಿವರ ಇಲ್ಲಿದೆ.

ಮಿಸ್ಟರ್‌ ಆಂಡ್‌ ಮಿಸೆಸ್‌ ಮಾಹಿ ಸಿನಿಮಾ‌ ನಟನೆಗೆ ಜಾಹ್ವನಿ ಕಪೂರ್‌ಗೆ 5 ಕೋಟಿ ರೂಪಾಯಿ ವೇತನ
ಮಿಸ್ಟರ್‌ ಆಂಡ್‌ ಮಿಸೆಸ್‌ ಮಾಹಿ ಸಿನಿಮಾ‌ ನಟನೆಗೆ ಜಾಹ್ವನಿ ಕಪೂರ್‌ಗೆ 5 ಕೋಟಿ ರೂಪಾಯಿ ವೇತನ

ಬೆಂಗಳೂರು: ಮಿಸ್ಟರ್ ಅಂಡ್ ಮಿಸಸ್ ಮಾಹಿ ಇದೇ ಮೇ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಜಾನ್ವಿ ಕಪೂರ್‌ ಮತ್ತು ರಾಜ್‌ಕುಮಾರ್‌ ರಾವ್‌ ನಟಿಸಿದ್ದಾರೆ. ಶರಣ್ ಶರ್ಮಾ ನಿರ್ದೇಶನದ, ಮಿಸ್ಟರ್ & ಮಿಸೆಸ್ ಮಾಹಿ ಸಿನಿಮಾವನ್ನು ಅಪೂರ್ವ ಮೆಹ್ತಾ, ಹಿರೂ ಯಶ್ ಜೋಹರ್ ಮತ್ತು ಕರಣ್ ಜೋಹರ್ ನಿರ್ಮಿಸಿದ್ದಾರೆ. ಸುಮಾರು 40 ಕೋಟಿ ಬಜೆಟ್‌ನಲ್ಲಿ ಮಿಸ್ಟರ್ ಅಂಡ್ ಮಿಸಸ್ ಮಾಹಿ ಸಿನಿಮಾವನ್ನು ನಿರ್ಮಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಅಂದಹಾಗೆ, ಈ ಸಿನಿಮಾದಲ್ಲಿ ನಟಿಸಲು ಹೀರೋ ಮತ್ತು ಹೀರೋಯಿನ್‌ ಪಡೆದ ಸಂಭಾವನೆ ಎಷ್ಟು? ಉಳಿದ ಕಲಾವಿದರಿಗೆ ಎಷ್ಟು ವೇತನ ನೀಡಲಾಗಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಯಾರಿಗೆ ಎಷ್ಟು ವೇತನ?

ರಾಜ್‌ಕುಮಾರ್‌ ರಾವ್‌ ಪಡೆದ ಸಂಭಾವನೆ ಎಷ್ಟು?

ಮಿಸ್ಟರ್‌ ಆಂಡ್‌ ಮಿಸ್‌ ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಜ್‌ಕುಮಾರ್‌ ರಾವ್‌ ನಟಿಸಿದ್ದಾರೆ. ವರದಿಗಳ ಪ್ರಕಾರ ರಾಜ್‌ ಕುಮಾರ್‌ ರಾವ್‌ ಅವರಿಗೆ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾದಲ್ಲಿ ನಟಿಸಲು ಚಿತ್ರತಂಡವು ಬರೋಬ್ಬರಿ 6 ಕೋಟಿ ರೂಪಾಯಿ ಸಂಭಾವನೆ ನೀಡಿದೆಯಂತೆ.

ಜಾನ್ವಿ ಕಪೂರ್‌ ವೇತನ

ಈ ಸಿನಿಮಾದಲ್ಲಿ ಜಾನ್ವಿ ಕಪೂರ್‌ ಅವರು ಮಹಿಮಾ ಪಾತ್ರದಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾದಲ್ಲಿ ನಟಿಸಲು ಇವರಿಗೆ 5 ಕೋಟಿ ರೂಪಾಯಿ ನೀಡಲಾಗಿದೆ.

ರಾಜೇಶ್‌ ಶರ್ಮಾ

ಜಾಗರಣ ಜೋಶ್‌ ವರದಿ ಪ್ರಕಾರ ರಾಜೇಶ್‌ ಶರ್ಮಾ ಅವರಿಗೆ ಈ ಸಿನಿಮಾದಲ್ಲಿ ನಟಿಸಲು 40 ಲಕ್ಷ ರೂಪಾಯಿ ವೇತನ ನೀಡಲಾಗಿದೆ. ಈ ಸಿನಿಮಾದಲ್ಲಿ ರಾಜೇಶ್‌ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕುಮುದ್‌ ಮಿಶ್ರಾ

ವರದಿಗಳ ಪ್ರಕಾರ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾದಲ್ಲಿ ನಟಿಸಲು ಕುಮುದ್‌ ಮಿಶ್ರಾರಿಗೆ 30 ಲಕ್ಷ ರೂಪಾಯಿ ನೀಡಲಾಗಿದೆ.

ಅಭಿಷೇಕ್‌ ಬ್ಯಾನರ್ಜಿ

ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾದಲ್ಲಿ ಅಭಿಷೇಕ್‌ ಬ್ಯಾನರ್ಜಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೆ ಸುಮಾರು 35 ಲಕ್ಷ ರೂಪಾಯಿ ವೇತನ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಸಿನಿಮಾ ಬಿಡುಗಡೆ ದಿನಾಂಕ

ರಾಜ್‌ಕುಮಾರ್‌ ರಾವ್‌, ಜಾನ್ವಿ ಕಪೂರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಿಸ್ಟರ್‌ ಆಂಡ್‌ ಮಿಸೆಸ್‌ ಮಹಿ ಎಂಬ ಸ್ಪೋರ್ಟ್ಸ್‌ ಡ್ರಾಮಾ ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಂದರೆ, ಮೇ 31ರಂದು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಲಿದೆ.

ಟಿ20 ವರ್ಲ್ಡ್‌ಕಪ್ 2024