ಕನ್ನಡ ಸುದ್ದಿ  /  Photo Gallery  /  Bollywood News Mrunal Thakur Turns Heads In Glamorous Black Embroidered Blazer Set Worth 88k Photos Pcp

Mrunal Thakur: ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ ಮೃಣಾಲ್‌ ಠಾಕೂರ್‌; ಈಕೆ ಧರಿಸಿದ ಉಡುಗೆ ದರ 88 ಸಾವಿರ ರೂ ಮಾತ್ರ

Mrunal Thakur: ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌ ಇದೀಗ 88 ಸಾವಿರ ರೂಪಾಯಿ ಮೌಲ್ಯದ ಆಕರ್ಷಕ ಕಪ್ಪು ಕಸೂತಿ ಬ್ಲೇಜರ್ ಸೆಟ್ ಧರಿಸಿರುವ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ನಟಿಯ ಈ ಅತ್ಯಾಧುನಿಕ ಗ್ಲಾಮರ್‌ ಉಡುಗೆಯ ಕುರಿತು ಮತ್ತು ಅವರ ಫ್ಯಾಷನ್‌ ಬಗ್ಗೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

ಎಥ್ನಿಕ್‌ ಫ್ಯಾಷನ್‌ ಬಯಸುವವರಿಗೆ ಮೃಣಾಲ್‌ ಠಾಕೂರ್‌ ಧರಿಸಿರುವ ಈ ಉಡುಗೆ ಸೂಕ್ತವಾಗಿದೆ. ಈ ಕಪ್ಪು ಬಣ್ಣದ ಬ್ಲೇಜರ್‌ನಲ್ಲಿ ಇವರು ಅಮೋಘವಾಗಿ ಕಾಣಿಸುತ್ತಾರೆ. ನಿಜ ಹೇಳಬೇಕೆಂದರೆ ಮೃಣಾಲ್‌ ಠಾಕೂರ್‌ಗೆ ಯಾವುದೇ ರೀತಿಯ ಉಡುಗೆ ಅಂದವಾಗಿ ಕಾಣಿಸುತ್ತದೆ. ಸೀರೆಯಿರಲಿ, ಆಧುನಿಕ ಬ್ಲೇಜರ್‌ ಇರಲಿ, ಎಲ್ಲದರಲ್ಲೂ ಮುದ್ದಾಗಿ ಕಾಣಿಸುತ್ತಾರೆ. ಮೃಣಾಲ್‌ ಠಾಕೂರ್‌ ಉಡುಗೆಗಳನ್ನು ನೋಡಿದಾಗ ಹೆಣ್ಮಕ್ಕಳಿಗೆ ನಮ್ಮ ವಾರ್ಡ್‌ರೋಬ್‌ಗಳಲ್ಲೂ ಈ ಡ್ರೆಸ್‌ಗಳು ಇರಬೇಕೆಂದೆನಿಸಬಹುದು.
icon

(1 / 7)

ಎಥ್ನಿಕ್‌ ಫ್ಯಾಷನ್‌ ಬಯಸುವವರಿಗೆ ಮೃಣಾಲ್‌ ಠಾಕೂರ್‌ ಧರಿಸಿರುವ ಈ ಉಡುಗೆ ಸೂಕ್ತವಾಗಿದೆ. ಈ ಕಪ್ಪು ಬಣ್ಣದ ಬ್ಲೇಜರ್‌ನಲ್ಲಿ ಇವರು ಅಮೋಘವಾಗಿ ಕಾಣಿಸುತ್ತಾರೆ. ನಿಜ ಹೇಳಬೇಕೆಂದರೆ ಮೃಣಾಲ್‌ ಠಾಕೂರ್‌ಗೆ ಯಾವುದೇ ರೀತಿಯ ಉಡುಗೆ ಅಂದವಾಗಿ ಕಾಣಿಸುತ್ತದೆ. ಸೀರೆಯಿರಲಿ, ಆಧುನಿಕ ಬ್ಲೇಜರ್‌ ಇರಲಿ, ಎಲ್ಲದರಲ್ಲೂ ಮುದ್ದಾಗಿ ಕಾಣಿಸುತ್ತಾರೆ. ಮೃಣಾಲ್‌ ಠಾಕೂರ್‌ ಉಡುಗೆಗಳನ್ನು ನೋಡಿದಾಗ ಹೆಣ್ಮಕ್ಕಳಿಗೆ ನಮ್ಮ ವಾರ್ಡ್‌ರೋಬ್‌ಗಳಲ್ಲೂ ಈ ಡ್ರೆಸ್‌ಗಳು ಇರಬೇಕೆಂದೆನಿಸಬಹುದು.(Instagram/@mrunalthakur)

ಇತ್ತೀಚಿಗೆ ಮೃಣಾಲ್‌ ಠಾಕೂರ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಈ ಗ್ಲಾಮರ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಪ್ಪು ಪಲಾಜೋ ಸೆಟ್‌ ಧರಿಸಿ ಆಕರ್ಷಕ ಭಂಗಿಗಳಲ್ಲಿ ಪೋಸ್‌ ನೀಡಿದ್ದಾರೆ. 
icon

(2 / 7)

ಇತ್ತೀಚಿಗೆ ಮೃಣಾಲ್‌ ಠಾಕೂರ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಈ ಗ್ಲಾಮರ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಪ್ಪು ಪಲಾಜೋ ಸೆಟ್‌ ಧರಿಸಿ ಆಕರ್ಷಕ ಭಂಗಿಗಳಲ್ಲಿ ಪೋಸ್‌ ನೀಡಿದ್ದಾರೆ. (Instagram/@mrunalthakur)

ಮೃಣಾಲ್ ಅವರ ಉಡುಗೆ ಕಪ್ಪು ಬಣ್ಣದಲ್ಲಿದೆ. ಇದು ದುಬಾರಿ ಜಾರ್ಜೆಟ್‌ ಬಟ್ಟೆ ಮತ್ತು ಸಂಕೀರ್ಣ ಸಕ್ವಿನ್‌ ಕಸೂತಿ ಹೊಂದಿದೆ. ಈ ಉಡುಗೆಗೆ ಸೂಕ್ತವಾಗುವಂತಹ ಅರ್ಧ ತೋಳಿನ ಬ್ಲೇಜರ್‌ ಧರಿಸಿದ್ದಾರೆ. ಕಪ್ಪು ಬಣ್ಣದ ಪಲಾಜೋ ಪ್ಯಾಂಟ್‌ ಧರಿಸಿದ್ದಾರೆ.
icon

(3 / 7)

ಮೃಣಾಲ್ ಅವರ ಉಡುಗೆ ಕಪ್ಪು ಬಣ್ಣದಲ್ಲಿದೆ. ಇದು ದುಬಾರಿ ಜಾರ್ಜೆಟ್‌ ಬಟ್ಟೆ ಮತ್ತು ಸಂಕೀರ್ಣ ಸಕ್ವಿನ್‌ ಕಸೂತಿ ಹೊಂದಿದೆ. ಈ ಉಡುಗೆಗೆ ಸೂಕ್ತವಾಗುವಂತಹ ಅರ್ಧ ತೋಳಿನ ಬ್ಲೇಜರ್‌ ಧರಿಸಿದ್ದಾರೆ. ಕಪ್ಪು ಬಣ್ಣದ ಪಲಾಜೋ ಪ್ಯಾಂಟ್‌ ಧರಿಸಿದ್ದಾರೆ.(Instagram/@mrunalthakur)

ನೀವು ಮೃಣಾಲ್ ಅವರ ಉಡುಪನ್ನು ಇಷ್ಟಪಟ್ಟಿದ್ದರೆ ಮತ್ತು ಅದರ ಬೆಲೆ ಎಷ್ಟು ಎಂದು ಯೋಚಿಸುತ್ತಿದ್ದರೆ ಚಿಂತಿಸಬೇಡಿ, ಈಗಾಗಲೇ ಹೇಳಿದಂತೆ ಇದು ದುಬಾರಿ ಉಡುಗೆ. ಇವರ ಈ ಉಡುಗೆ ಮಿಶ್ರು ಬ್ರಾಂಡ್‌ನದ್ದು. ಈ ಉಡುಗೆ ದರ 88 ಸಾವಿರ ರೂಪಾಯಿ. 
icon

(4 / 7)

ನೀವು ಮೃಣಾಲ್ ಅವರ ಉಡುಪನ್ನು ಇಷ್ಟಪಟ್ಟಿದ್ದರೆ ಮತ್ತು ಅದರ ಬೆಲೆ ಎಷ್ಟು ಎಂದು ಯೋಚಿಸುತ್ತಿದ್ದರೆ ಚಿಂತಿಸಬೇಡಿ, ಈಗಾಗಲೇ ಹೇಳಿದಂತೆ ಇದು ದುಬಾರಿ ಉಡುಗೆ. ಇವರ ಈ ಉಡುಗೆ ಮಿಶ್ರು ಬ್ರಾಂಡ್‌ನದ್ದು. ಈ ಉಡುಗೆ ದರ 88 ಸಾವಿರ ರೂಪಾಯಿ. (Instagram/@mrunalthakur)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ತನಿಷ್ಕ್ ಮಲ್ಹೋತ್ರಾ ಅವರ ಸಹಾಯದಿಂದ, ಮೃಣಾಲ್ ತನ್ನ ಚಿಕ್ ಲುಕ್ ಹೆಚ್ಚಿಸಿಕೊಂಡರು. ಆಕರ್ಷಕ ಬ್ರೇಸ್ಲೆಟ್‌, ಪ್ರಿಂಟೆಡ್‌ ಬೂಟ್‌ ಕೂಡ ಧರಿಸಿದ್ದಾರೆ.
icon

(5 / 7)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ತನಿಷ್ಕ್ ಮಲ್ಹೋತ್ರಾ ಅವರ ಸಹಾಯದಿಂದ, ಮೃಣಾಲ್ ತನ್ನ ಚಿಕ್ ಲುಕ್ ಹೆಚ್ಚಿಸಿಕೊಂಡರು. ಆಕರ್ಷಕ ಬ್ರೇಸ್ಲೆಟ್‌, ಪ್ರಿಂಟೆಡ್‌ ಬೂಟ್‌ ಕೂಡ ಧರಿಸಿದ್ದಾರೆ.(Instagram/@mrunalthakur)

ಮೇಕಪ್ ಕಲಾವಿದ ಲೋಚನ್ ಅವರ ಸಹಾಯದಿಂದ ಮೃಣಾಲ್ ಮೇಕಪ್‌ ಮಾಡಿಕೊಂಡಿದ್ದಾರೆ. ಹುಬ್ಬಿಗೆ ಕಾಡಿಗೆ ಹಚ್ಚಲಾಗಿದೆ. ಕೆನ್ನೆ ಮೂಳೆಗಳಿಗೆ ಹೊಳಪು ನೀಡಲಾಗಿದೆ. ಮುಖಕ್ಕೆ ಒಪ್ಪುವಂತೆ ಅಂದವಾಗಿ ಮೇಕಪ್‌ ಮಾಡಲಾಗಿದೆ. 
icon

(6 / 7)

ಮೇಕಪ್ ಕಲಾವಿದ ಲೋಚನ್ ಅವರ ಸಹಾಯದಿಂದ ಮೃಣಾಲ್ ಮೇಕಪ್‌ ಮಾಡಿಕೊಂಡಿದ್ದಾರೆ. ಹುಬ್ಬಿಗೆ ಕಾಡಿಗೆ ಹಚ್ಚಲಾಗಿದೆ. ಕೆನ್ನೆ ಮೂಳೆಗಳಿಗೆ ಹೊಳಪು ನೀಡಲಾಗಿದೆ. ಮುಖಕ್ಕೆ ಒಪ್ಪುವಂತೆ ಅಂದವಾಗಿ ಮೇಕಪ್‌ ಮಾಡಲಾಗಿದೆ. (Instagram/@mrunalthakur)

ಹೇರ್ ಸ್ಟೈಲಿಸ್ಟ್ ತೇಜಿ ಸಿಂಗ್ ಅವರ ಸಹಾಯದಿಂದ ಕೇಶ ವಿನ್ಯಾಸ ಮಾಡಿಕೊಂಡಿದ್ದಾರೆ. ಉದ್ದನೆಯ ಕೂದಲನ್ನೆ ಹಿಂದಕ್ಕೆ ಎಳೆದು ಬಬಲ್ ಪೋನಿಟೆಲ್ ಕಟ್ಟಲಾಗಿದೆ. 
icon

(7 / 7)

ಹೇರ್ ಸ್ಟೈಲಿಸ್ಟ್ ತೇಜಿ ಸಿಂಗ್ ಅವರ ಸಹಾಯದಿಂದ ಕೇಶ ವಿನ್ಯಾಸ ಮಾಡಿಕೊಂಡಿದ್ದಾರೆ. ಉದ್ದನೆಯ ಕೂದಲನ್ನೆ ಹಿಂದಕ್ಕೆ ಎಳೆದು ಬಬಲ್ ಪೋನಿಟೆಲ್ ಕಟ್ಟಲಾಗಿದೆ. (Instagram/@mrunalthakur)


IPL_Entry_Point

ಇತರ ಗ್ಯಾಲರಿಗಳು