ಕನ್ನಡ ಸುದ್ದಿ  /  ಮನರಂಜನೆ  /  ನಟಿ ತನುಶ್ರೀ ದತ್ತಾ #Metoo ಆರೋಪದ ಬಗ್ಗೆ ಮೌನ ಮುರಿದ ನಾನಾ ಪಾಟೇಕರ್, ನನಗೆ ಕೋಪವಿಲ್ಲ ಎಂದ ಹಿರಿಯ ನಟ

ನಟಿ ತನುಶ್ರೀ ದತ್ತಾ #MeToo ಆರೋಪದ ಬಗ್ಗೆ ಮೌನ ಮುರಿದ ನಾನಾ ಪಾಟೇಕರ್, ನನಗೆ ಕೋಪವಿಲ್ಲ ಎಂದ ಹಿರಿಯ ನಟ

ಆರು ವರ್ಷಗಳ ಹಿಂದೆ ಭಾರತ ಸೇರಿದಂತೆ ಜಗತ್ತಿನಾದ್ಯಂತ #MeToo ಸುದ್ದಿಯಾಗಿತ್ತು. ಈ ಸಮಯದಲ್ಲಿ ತನುಶ್ರೀ ದತ್ತಾ ಅವರು ನಾನಾ ಪಾಟೇಕರ್‌ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಇದೀಗ ಆರು ವರ್ಷಗಳ ಬಳಿಕ ಆ ಆರೋಪದ ಕುರಿತು ನಾನಾ ಪಾಟೇಕರ್‌ ಬಹಿರಂಗವಾಗಿ ಮಾತನಾಡಿದ್ದಾರೆ.

ನಟಿ ತನುಶ್ರೀ ದತ್ತಾ #MeToo ಆರೋಪದ ಬಗ್ಗೆ ಮೌನ ಮುರಿದ ನಾನಾ ಪಾಟೇಕರ್
ನಟಿ ತನುಶ್ರೀ ದತ್ತಾ #MeToo ಆರೋಪದ ಬಗ್ಗೆ ಮೌನ ಮುರಿದ ನಾನಾ ಪಾಟೇಕರ್

ಬೆಂಗಳೂರು: ನಾನಾ ಪಾಟೇಕರ್ ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2018 ರಲ್ಲಿ ಮೀ ಟೂ ಆಂದೋಲನದ ಸಮಯದಲ್ಲಿ, ಅನೇಕ ಮಹಿಳೆಯರು ಲೈಂಗಿಕ ಕಿರುಕುಳದ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದರು. ಸ್ಯಾಂಡಲ್‌ವುಡ್‌ನಲ್ಲೂ ಮೀ2 ಸದ್ದು ಮಾಡಿತ್ತು. ಹಿಂದಿ ಚಿತ್ರರಂಗದ ತನುಶ್ರೀ ದತ್ತಾ ಕೂಡ ಮೀಟೂ ಆರೋಪ ಮಾಡಿದ್ದರು. 'ಹಾರ್ನ್ ಓಕೆ ಪ್ಲೀಸ್' ಸೆಟ್‌ನಲ್ಲಿ ನಾನಾ ಪಾಟೇಕರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಆಗ ಈ ಬಗ್ಗೆ ಬಹಿರಂಗವಾಗಿ ನಾನಾ ಪಾಟೇಕರ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನಾ ಪಾಟೇಕರ್ ಹೇಳಿದ್ದೇನು?

ತನುಶ್ರೀ ದತ್ತಾ ಅವರ ಲೈಂಗಿಕ ಕಿರುಕುಳದ ಆರೋಪದಿಂದ ನೀವು ಕೋಪಗೊಂಡಿದ್ದೀರಾ ಎಂದು ನಾನಾ ಪಾಟೇಕರ್ ಅವರನ್ನು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ನಾನಾ ಪಾಟೇಕರ್, "ಇಲ್ಲ! ಹೀಗೇನೂ ನಡೆದಿಲ್ಲ ಎಂದು ನನಗೆ ಗೊತ್ತಿತ್ತು. ನನಗೆ ಕೋಪ ಬರಲಿಲ್ಲ. ಇದರಿಂದ ನಾನು ಅಸಮಾಧಾನಗೊಂಡಿಲ್ಲ. ಏನೂ ಆಗಿಲ್ಲ, ನನಗೆ ಗೊತ್ತಿಲ್ಲ. ಏನಾದರೂ ನಡೆದಿದ್ದರೆ ಪ್ರತಿಕ್ರಿಯಿಸಬಹುದಿತ್ತು. ಈ ಕುರಿತು ನಾನು ಇನ್ನೇನು ಹೇಳಬಹುದು?" ಎಂದು ನಾನಾ ಪಾಟೇಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ತನುಶ್ರೀ ದತ್ತಾ ವಿರುದ್ಧ ನಾನಾ ಪಾಟೇಕರ್ ಪ್ರಕರಣ

2018 ರಲ್ಲಿ, ತನುಶ್ರೀ ದತ್ತಾ ನಾನಾ ಪಾಟೇಕರ್ ವಿರುದ್ಧ ದೂರು ದಾಖಲಿಸಿದರು, ಇದರಲ್ಲಿ ಅವರು 'ಹಾರ್ನ್ ಓಕೆ ಪ್ಲೀಸ್' ಹಾಡಿನ ಚಿತ್ರೀಕರಣದ ಸಮಯದಲ್ಲಿ ನಾನಾ ಪಾಟೇಕರ್ ಅನುಚಿತ ವರ್ತನೆಯನ್ನು ಆರೋಪಿಸಿದರು. ಆದರೆ, ನಾನಾ ಪಾಟೇಕರ್ ಯಾವುದೇ ದುರ್ವರ್ತನೆಯನ್ನು ನಿರಾಕರಿಸಿದ್ದಾರೆ. ಮುಂಬೈ ಪೊಲೀಸರು ನಾನಾ ಪಾಟೇಕರ್ ವಿರುದ್ಧ ಪುರಾವೆಗಳನ್ನು ಹುಡುಕಲು ಪ್ರಾರಂಭಿಸಿದರು, ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ನಂತರ ಅವರು ನಾನಾ ಪಾಟೇಕರ್ ಅವರನ್ನು ಆರೋಪಗಳಿಂದ ಮುಕ್ತಗೊಳಿಸಿದರು.

ಟ್ರೆಂಡಿಂಗ್​ ಸುದ್ದಿ

ಆಶಿಕ್‌ ಬನಾಯಾ ಆಪ್ನೇ ಚಿತ್ರದ ಮೂಲಕ ಸಿನಿಕ್ಷೇತ್ರದಲ್ಲಿ ತನುಶ್ರೀ ಕರಿಯರ್‌ ಆರಂಭಿಸಿದರು. 2018ರಲ್ಲಿ ಇವರು ನಾನಾ ಪಾಟೇಕರ್‌ ವಿರುದ್ಧ ಆರೋಪ ಮಾಡಿದ್ದರು. ಹಾಡಿನ ದೃಶ್ಯವೊಂದರ ಶೂಟಿಂಗ್‌ ಸಮಯದಲ್ಲಿ ಹಿರಿಯ ನಟ ಕೆಟ್ಟದ್ದಾಗಿ ನಡೆದುಕೊಂಡಿದ್ದರು ಎಂದು ಹೇಳಿದ್ದರು. ಯುವತಿಯರು ಮತ್ತು ನಟಿಯರ ವಿರುದ್ಧ ಇವರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂದು ಬಾಲಿವುಡ್‌ಗೆ ಗೊತ್ತು ಎಂದು ಹೇಳಿದ್ದರು. ಕೆಲವು ನಟಿಯರು ನಾನಾ ಪಾಟೇಕರ್‌ ಮೇಲೆ ಕೈ ಮಾಡಿದ್ದಾರೆ. ಆದರೆ, ಯಾರೂ ಇವರ ವಿರುದ್ಧ ದೂರು ನೀಡಿಲ್ಲ ಎಂದು ತನುಶ್ರೀ ಆರೋಪಿಸಿದ್ದರು.

ಈ ಆರೋಪದ ಬಳಿಕ ನಾನಾ ಪಾಟೇಕರ್‌ ಅವರನ್ನು ಅನೇಕ ಸಿನಿಮಾಗಳಿಂದ ಕೈಬಿಡಲಾಗಿತ್ತು. ಆದರೆ, ನಾನಾ ಪಾಟೇಕರ್‌ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ನಾನಾ ಪಾಟೇಕರ್‌ ನನಗೆ ಈ ವಿಷಯದ ಕುರಿತು ಕೋಪ ಇಲ್ಲ. ಅದೊಂದು ಸುಳ್ಳು ಎಂದು ನನಗೆ ಗೊತ್ತಿತ್ತು. ಹೀಗಾಗಿ, ನಾನು ಕೋಪಗೊಳ್ಳುವ ಪ್ರಮೇಯವಿಲ್ಲ ಎಂದು ಹೇಳಿದ್ದಾರೆ.