ಕನ್ನಡ ಸುದ್ದಿ  /  ಮನರಂಜನೆ  /  ನನ್ನ ಲುಕ್‌ ನೋಡಿ ನಕ್ಕವರಿದ್ದಾರೆ, ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನದೇ ಅತ್ಯಂತ ಕೆಟ್ಟ ಮುಖ; ನವಾಜುದ್ದೀನ್‌ ಸಿದ್ಧೀಕಿ

ನನ್ನ ಲುಕ್‌ ನೋಡಿ ನಕ್ಕವರಿದ್ದಾರೆ, ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನದೇ ಅತ್ಯಂತ ಕೆಟ್ಟ ಮುಖ; ನವಾಜುದ್ದೀನ್‌ ಸಿದ್ಧೀಕಿ

ನಟ ನವಾಜುದ್ದೀನ್‌ ಸಿದ್ಧೀಕಿ ತಮ್ಮ ಲುಕ್ಸ್‌ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ನಾನೊಬ್ಬ ಅತ್ಯಂತ ಕುರುಪಿ ನಟ, ದೈಹಿಕವಾಗಿಯೂ ಚೆನ್ನಾಗಿಲ್ಲ ಎಂದಿದ್ದಾರೆ. ಇತ್ತೀಚೆಗಷ್ಟೇ ಇವರ ಜೀ 5ನಲ್ಲಿ ರೌತು ಕಾ ರಾಜ್‌ ಚಿತ್ರ ಬಿಡುಗಡೆ ಆಗಿದೆ.

ನನ್ನ ಲುಕ್‌ ನೋಡಿ ನಕ್ಕವರಿದ್ದಾರೆ, ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನದೇ ಅತ್ಯಂತ ಕೆಟ್ಟ ಮುಖ; ನವಾಜುದ್ದೀನ್‌ ಸಿದ್ಧೀಕಿ
ನನ್ನ ಲುಕ್‌ ನೋಡಿ ನಕ್ಕವರಿದ್ದಾರೆ, ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನದೇ ಅತ್ಯಂತ ಕೆಟ್ಟ ಮುಖ; ನವಾಜುದ್ದೀನ್‌ ಸಿದ್ಧೀಕಿ

Nawazuddin Siddiqui: ಬಾಲಿವುಡ್‌ನಲ್ಲಿ ಸಿನಿಮಾ ಹಿನ್ನೆಲೆ ಇರದೇ, ಪ್ರತಿಭೆ ಮೂಲಕವೇ ಆಗಮಿಸಿ ಸ್ಟಾರ್‌ ನಟನ ಪಟ್ಟ ಪಡೆದವರಲ್ಲಿ ನವಾಜುದ್ದೀನ್‌ ಸಿದ್ಧೀಕಿ ಸಹ ಒಬ್ಬರು. ಬಿಹಾರದ ಕುಗ್ರಾಮವೊಂದರಿಂದ ಬಂದ ಈ ನಟ, ತಮ್ಮ ನಟನಾ ಕೌಶಲದಿಂದಲೇ ಎಲ್ಲರ ಮನದಲ್ಲಿ ನೆಲೆ ನಿಂತಿದ್ದಾರೆ. 1999ರಲ್ಲಿ ಆಮೀರ್‌ ಖಾನ್‌ ನಟಿಸಿದ್ದ ಸರ್ಫರೋಶ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಬಂದ ನವಾಜುದ್ದೀನ್‌, ಅದಾದ ಬಳಿಕ ಸಣ್ಣಪುಟ್ಟ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತ ಎಲ್ಲರ ಗಮನ ಸೆಳೆದರು. ನೋಡಲು ಸ್ಪುರದ್ರುಪಿ ಅಲ್ಲದಿದ್ದರೂ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಸಿನಿಮಾ ನಟರೆಂದರೆ ಹೀಗೇ ಇರಬೇಕು ಎಂಬ ಒಂದಷ್ಟು ಸಿದ್ಧಸೂತ್ರಗಳಿವೆ. ಆದರೆ, ಆ ಯಾವ ಗುಣಗಳೂ ಇಲ್ಲದ ನವಾಜುದ್ದೀನ್‌, ತಮ್ಮ ಪ್ರತಿಭೆ ಮೂಲಕವೇ ಎಲ್ಲರ ಕಣ್ಣರಳಿಸಿದವರು. ಪ್ರತಿ ಸಿನಿಮಾಕ್ಕೂ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ಈ ನಟ. ಇದೀಗ ಇದೇ ನವಾಜುದ್ದೀನ್‌ ತಮ್ಮ ಲುಕ್‌ ಬಗ್ಗೆ ಮಾತನಾಡಿದ್ದಾರೆ. ನಾನೊಬ್ಬ ಕುರೂಪಿ ಎಂದು ಹೇಳಿಕೊಂಡಿದ್ದಾರೆ. ರೌತು ಕಾ ರಾಜ್ ಸಿನಿಮಾ ಇತ್ತೀಚೆಗಷ್ಟೇ ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿದೆ. ನೋಡುಗರಿಂದ ಮೆಚ್ಚುಗೆ ಪಡೆದಿದೆ. ಇದೀಗ ಇದೇ ಚಿತ್ರದ ಪ್ರಚಾರಾರ್ಥವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ ನವಾಜುದ್ದೀನ್.‌

ಟ್ರೆಂಡಿಂಗ್​ ಸುದ್ದಿ

ಚಿತ್ರರಂಗದಲ್ಲಿನ ಅತ್ಯಂತ ಕುರುಪಿ ನಟ

"ಕೆಲವರು ನಾವು ನೋಡುವ ರೀತಿಯನ್ನು ಏಕೆ ದ್ವೇಷಿಸುತ್ತಾರೆಂದು ನನಗೆ ತಿಳಿದಿಲ್ಲ. ಬಹುಶಃ ನಾವು ಕೊಳಕು ಎಂಬ ಕಾರಣದಿಂದಾಗಿರಬಹುದು. ಕನ್ನಡಿಯಲ್ಲಿ ನನ್ನನ್ನು ನೋಡಿದಾಗ ನನಗೂ ಸಹ ಅನಿಸುತ್ತದೆ. ಇಷ್ಟು ಕೆಟ್ಟದಾಗಿ ಕಾಣಿಸಿಕೊಂಡು ಚಿತ್ರರಂಗಕ್ಕೆ ಏಕೆ ಬಂದೆ ಎಂದು ನನಗೆ ನಾನೇ ಪ್ರಶ್ನೆ ಮಾಡಿಕೊಳ್ಳುತ್ತೇನೆ. ನಾನು ಚಿತ್ರರಂಗದಲ್ಲಿ ಅತ್ಯಂತ ಕುರುಪಿ ನಟ, ದೈಹಿಕವಾಗಿಯೂ ಹೌದು" ಎಂದಿದ್ದಾರೆ.

"ನಾನು ಅದನ್ನು ಬಹಳ ಸಮಯದಿಂದ ಕೇಳುತ್ತ ಬಂದಿದ್ದೇನೆ. ಅದಾದ ಬಳಿಕ ನಾನೂ ಅದನ್ನು ನಂಬಲು ಪ್ರಾರಂಭಿಸಿದೆ. ಹಾಗಂತ ಚಿತ್ರರಂಗದ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ನನಗೆ ವಿಭಿನ್ನ ಪಾತ್ರಗಳನ್ನು ನೀಡಿದ ಎಲ್ಲಾ ನಿರ್ದೇಶಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮಲ್ಲಿ ಸ್ವಲ್ಪ ಪ್ರತಿಭೆ ಇದ್ದರೆ, ಉದ್ಯಮವು ಬಹಳಷ್ಟು ನೀಡುತ್ತದೆ. ಸಮಾಜದಲ್ಲಿ ತಾರತಮ್ಯವಿದೆ, ಆದರೆ ಉದ್ಯಮದಲ್ಲಿ ಇಲ್ಲ" ಎಂದಿದ್ದಾರೆ.

ಒಟಿಟಿಯಲ್ಲಿ ರೌತು ಕಾ ರಾಜ್‌

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅಭಿನಯದ ರೌತು ಕಾ ರಾಜ್ ಚಿತ್ರವು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಜೀ5 OTTಯಲ್ಲಿ ಸ್ಟ್ರೀಮ್ ಆಗುತ್ತಿರುವ, ರೌತು ಕಾ ರಾಜ್ ಚಿತ್ರವನ್ನು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆ ಮಾಡಬಹುದು. ಈ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಚಿತ್ರವನ್ನು ಆನಂದ್ ಸುರಪುರ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ದೀಪಕ್ ನೇಗಿ ಎಂಬ ಪೊಲೀಸ್ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಕಾಣಿಸಿಕೊಂಡಿದ್ದಾರೆ. ಈ ಕಥೆಯು ಉತ್ತರಾಖಂಡದ ರೌತು ಕಿ ಬೇಲಿ ಎಂಬ ಹಳ್ಳಿಯಲ್ಲಿ ನಡೆಯುತ್ತದೆ.