ಕನ್ನಡ ಸುದ್ದಿ  /  ಮನರಂಜನೆ  /  Yash: ಬಾಪ್‌ ರೇ.. ‘ರಾಮಾಯಣ’ ಚಿತ್ರಕ್ಕೆ ಯಶ್‌ ನಿರ್ಮಾಪಕ! ಸಂಭಾವನೆಯ ಆಫರ್ ತಿರಸ್ಕರಿಸಿ ‌ಬೇರೆಯದರ ಮೇಲೆ ಕಣ್ಣಿಟ್ಟ ರಾಕಿಂಗ್‌ ಸ್ಟಾರ್‌

Yash: ಬಾಪ್‌ ರೇ.. ‘ರಾಮಾಯಣ’ ಚಿತ್ರಕ್ಕೆ ಯಶ್‌ ನಿರ್ಮಾಪಕ! ಸಂಭಾವನೆಯ ಆಫರ್ ತಿರಸ್ಕರಿಸಿ ‌ಬೇರೆಯದರ ಮೇಲೆ ಕಣ್ಣಿಟ್ಟ ರಾಕಿಂಗ್‌ ಸ್ಟಾರ್‌

ರಾಮಾಯಣ ಸಿನಿಮಾ ಮೂಲಕ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ ನಟ ಯಶ್.‌ ಬಿಗ್‌ ಬಜೆಟ್‌ನ ಈ ಸಿನಿಮಾದಲ್ಲಿ ನಟ ಯಶ್‌ಗೂ ಕೋಟಿ ಕೋಟಿ ಸಂಭಾವನೆ ನೀಡಲು ನಿರ್ಮಾಪಕರು ಮುಂದಾಗಿದ್ದರು. ಆದರೆ, ನನಗೆ ಸಂಭಾವನೆ ಬೇಡ ಎಂದು ಆಫರ್‌ ತಿರಸ್ಕರಿಸಿದ್ದಾರೆ.

Yash: ಬಾಪ್‌ ರೇ.. ರಾಮಾಯಣ ಚಿತ್ರಕ್ಕೆ ಯಶ್‌ ನಿರ್ಮಾಪಕ! 80 ಕೋಟಿ ಸಂಭಾವನೆ ತಿರಸ್ಕರಿಸಿ ಪಾಲು ಕೇಳಿದ ರಾಕಿಂಗ್‌ ಸ್ಟಾರ್‌
Yash: ಬಾಪ್‌ ರೇ.. ರಾಮಾಯಣ ಚಿತ್ರಕ್ಕೆ ಯಶ್‌ ನಿರ್ಮಾಪಕ! 80 ಕೋಟಿ ಸಂಭಾವನೆ ತಿರಸ್ಕರಿಸಿ ಪಾಲು ಕೇಳಿದ ರಾಕಿಂಗ್‌ ಸ್ಟಾರ್‌

Ramayan: ಕಳೆದ ಒಂದು ವರ್ಷದಿಂದ ಬಾಲಿವುಡ್‌ ಅಂಗಳದಲ್ಲಿ ರಾಮಾಯಣ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದಂಗಲ್‌ ಸಿನಿಮಾ ನಿರ್ದೇಶಕ ನಿತೀಶ್‌ ಕುಮಾರ್‌, ರಾಮಾಯಣ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ಎಂದಾಗಲೇ ನಿರೀಕ್ಷೆ ಆಕಾಶ ಮುಟ್ಟಿತ್ತು. ಅದಾದ ಬಳಿಕ ಇದೇ ಚಿತ್ರದಲ್ಲಿ ರಣಬೀರ್‌ ಕಪೂರ್‌, ಯಶ್‌, ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದಾಗ, ಅದು ಮತ್ತೊಂದು ಹಂತ ಮೇಲಕ್ಕೆ ಹೋಗಿತ್ತು. ಈಗ ಸದ್ದಿಲ್ಲದೇ ಶೂಟಿಂಗ್‌ನಲ್ಲೂ ಬಿಜಿಯಾಗಿದೆ ಚಿತ್ರತಂಡ. ಗ್ಯಾಪ್‌ನಲ್ಲೇ ಹೊಸ ಸುದ್ದಿಯೊಂದು ತೂರಿ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ರಾಮಾಯಣ ಸಿನಿಮಾದಲ್ಲಿ ನಟರಾದ ರಣಬೀರ್‌ ಕಪೂರ್‌ ರಾಮನಾಗಿ, ಸಾಯಿಪಲ್ಲವಿ ಸೀತೆಯಾಗಿ, ಯಶ್‌ ರಾವಣನಾಗಿ ನಟಿಸಲಿದ್ದಾರೆ ಎಂಬ ಗುಲ್ಲು ಶುರುವಾಗಿಯೇ ತುಂಬ ದಿನಗಳೇ ಕಳೆದಿದೆ. ಆದರೆ, ಈ ವರೆಗೂ ಸಿನಿಮಾ ಮಾತ್ರ ಅಧಿಕೃತವಾಗಿ ಘೋಷಣೆ ಆಗಿಲ್ಲ. ತೆರೆಮರೆಯಲ್ಲಿ ಒಂದಿಲ್ಲೊಂದು ಅಪ್‌ಡೇಟ್‌ ಸುದ್ದಿಗಳು ಹೊರಬೀಳುತ್ತಿವೆ. ಈ ನಡುವೆ ಶೂಟಿಂಗ್‌ ಸೆಟ್‌ನ ಒಂದಷ್ಟು ಫೋಟೋಗಳೂ ಲೀಕ್‌ ಆಗಿ ಸದ್ದು ಮಾಡಿದ್ದವು. ಈಗ ಈ ಹೈ ಬಜೆಟ್‌ ಸಿನಿಮಾಕ್ಕೆ ನಟನಾಗಿ ನಟಿಸುವುದರ ಜತೆಗೆ ನಿರ್ಮಾಪಕನಾಗಿಯೂ ಬಂಡವಾಳ ಹೂಡಲಿದ್ದಾರೆ ಯಶ್!‌

ಯಶ್ ಈಗ ನಿರ್ಮಾಪಕ!

ನಟ ಯಶ್‌ ಕೆಜಿಎಫ್‌ ಸಿನಿಮಾ ಮೂಲಕ ದೊಡ್ಡ ಮಟ್ಟದ ಸ್ಟಾರ್‌ ಡಮ್‌ ಗಿಟ್ಟಿಸಿಕೊಂಡರು. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸ್ಟಾರ್‌ ಹೀರೋ ಆದವರು. ಸದ್ಯ ಟಾಕ್ಸಕ್‌ ಸಿನಿಮಾ ಕೆಲಸಗಳಲ್ಲಿ ಯಶ್‌ ಬಿಜಿಯಾಗಿದ್ದಾರೆ. ಆ ಚಿತ್ರದ ಶೂಟಿಂಗ್‌ನಲ್ಲೂ ಭಾಗವಹಿಸಿದ್ದಾರೆ. ಈ ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲೂ ಯಶ್‌ ರಾವಣನಾಗಿದ್ದಾರೆ. ಅಂದರೆ, ಬಾಲಿವುಡ್‌ನ ಕೆಲ ಮೂಲಗಳ ಪ್ರಕಾರ, ರಾಮಾಯಣದ ರಾವಣ ಪಾತ್ರಕ್ಕೆ ಯಶ್‌, 80 ಕೋಟಿ ರೂಪಾಯಿ ಸಂಭಾವನೆ ಆಫರ್‌ ಕೈ ಬಿಟ್ಟು ಸಹ ನಿರ್ಮಾಪಕರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

150 ಕೋಟಿ ಸಂಭಾವನೆ ಬೇಡ ಎಂದ ಯಶ್‌

ಮೂಲಗಳ ಪ್ರಕಾರ ರಾಮಾಯಣ ಸಿನಿಮಾ ಒಂದಲ್ಲ ಎರಡಲ್ಲ ಒಟ್ಟು ಮೂರು ಭಾಗಗಳಲ್ಲಿ ನಿರ್ಮಾಣವಾಗಲಿದೆ. ನಟ ಯಶ್‌ಗೆ ಒಂದು ಭಾಗಕ್ಕೆ 50 ಕೋಟಿ ಸಂಭಾವನೆ, ಅಂದರೆ, ಮೂರು ಪಾರ್ಟ್‌ಗಳಿಗೆ ಒಟ್ಟು 150 ಕೋಟಿ ಸಂಭಾವನೆ ನಿಗದಿಮಾಡಲಾಗಿತ್ತಂತೆ. ಇನ್ನೊಂದು ಮೂಲಗಳಿಂದ 80 ಕೋಟಿ ಸಂಭಾವನೆ ಪ್ರಸ್ತಾಪಿಸಲಾಗಿತ್ತಂತೆ. ಆದರೆ, ಆ ಆಫರ್‌ ಬಿಟ್ಟು, ನಿರ್ಮಾಣದಲ್ಲಿ ಪಾಲುದಾರರಾಗಲು ಹೊರಟಿದ್ದಾರೆ ಯಶ್ ಎನ್ನಲಾಗುತ್ತಿದೆ.‌ ಅಂದಹಾಗೆ 2025ರಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ಟಾಕ್ಸಿಕ್‌ ಬಳಿಕ ರಾಮಾಯಣದಲ್ಲಿ ಭಾಗಿ

ಗೀತು ಮೋಹನ್‌ ದಾಸ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಟಾಕ್ಸಿಸ್‌ ಸದ್ಯ ಶೂಟಿಂಗ್‌ ಹಂತದಲ್ಲಿದೆ. ಯಶ್‌ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಬಹುಕೋಟಿ ವೆಚ್ಚದ ಈ ಸಿನಿಮಾ ಭಾರತೀಯ ಭಾಷೆ ಅಷ್ಟೇ ಅಲ್ಲದೆ ವಿದೇಶಿ ಭಾಷೆಗಳಿಗೂ ಡಬ್‌ ಆಗಿ ಬಿಡುಗಡೆ ಆಗಲಿದೆ. ಈ ಸಿನಿಮಾ ಮುಗಿದ ಬಳಿಕವೇ ನಟ ಯಶ್‌ ರಾಮಾಯಣ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

IPL_Entry_Point