ಕನ್ನಡ ಸುದ್ದಿ  /  ಮನರಂಜನೆ  /  ಗರ್ಭಿಣಿ ದೀಪಿಕಾ ಪಡುಕೋಣೆ ಬೇಬಿ ಬಂಪ್‌ ಹೊಟ್ಟೆ ಮುಟ್ಟಿ ಸಿಗ್ನೇಚರ್‌ ಪೋಸ್‌ ನೀಡಿದ ಓರ್ರಿ; ನೆಟ್ಟಿಗರ ಥರೇವಾರಿ ಕಾಮೆಂಟ್ಸ್‌ ಹೀಗಿದೆ ನೋಡಿ

ಗರ್ಭಿಣಿ ದೀಪಿಕಾ ಪಡುಕೋಣೆ ಬೇಬಿ ಬಂಪ್‌ ಹೊಟ್ಟೆ ಮುಟ್ಟಿ ಸಿಗ್ನೇಚರ್‌ ಪೋಸ್‌ ನೀಡಿದ ಓರ್ರಿ; ನೆಟ್ಟಿಗರ ಥರೇವಾರಿ ಕಾಮೆಂಟ್ಸ್‌ ಹೀಗಿದೆ ನೋಡಿ

Orry Awatramani With Deepika Padukone: ಬಾಲಿವುಡ್‌ ಸೆಲೆಬ್ರಿಟಿಗಳ ಆತ್ಮೀಯ ಗೆಳೆಯನೆಂದು ಖ್ಯಾತಿ ಪಡೆದಿರುವ ಓರ್ರಿ ಅವತ್ರಮಾನಿಯು (Orry Awatramani) ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ನಡುವೆ ನಿಂತು ಪೋಸ್‌ ನೀಡಿದ್ದಾರೆ. ಬೇಬಿ ಬಂಪ್‌ ಜತೆ ಫೋಟೋ ತೆಗೆಸಿಕೊಂಡಿರುವ ಓರ್ರಿ ಬಗ್ಗೆ ನೆಟ್ಟಿಗರು ಥರೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Orry strikes his signature pose with Deepika Padukone's baby bump, Netizens Comments pcp
Orry strikes his signature pose with Deepika Padukone's baby bump, Netizens Comments pcp

ಬೆಂಗಳೂರು: ಓರ್ರಾನ್‌ ಅವತ್ರಮಾನಿ ಯಾನೆ ಓರ್ರಿ ಇಂದು ಹಂಚಿಕೊಂಡಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬಾರಿ ಈತ ನೀಡಿರುವ ಸಿಗ್ನೇಚರ್‌ ಪೋಸ್‌ಗೆ ಎಲ್ಲರೂ ಅಚ್ಚರಿಗೊಂಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಆಖೆಯ ಬೇಬಿ ಬಂಪ್‌ ಜತೆ ಓರ್ರಿ ಫೋಟೋಶೂಟ್‌ ಮಾಡಿದ್ದಾರೆ. ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹಕ್ಕೆ ಸಂಬಂಧಪಟ್ಟ ಸಂಗೀತ ಕಾರ್ಯಕ್ರಮದಲ್ಲಿ ಶುಕ್ರವಾರ ತೆಗೆಸಿಕೊಂಡ ಫೋಟೋ ಇದಾಗಿದೆ.

ಬೇಬಿ ಭವಾನಿಗೆ ಓರ್ರಿ ಆಶೀರ್ವಾದ

ಈ ಫೋಟೋಗೆ ಓರಿ ಅವತ್ರಮಾನಿಯು ಯಾವುದೇ ಶೀರ್ಷಿಕೆ ನೀಡಿಲ್ಲ. ಆತ ದೀಪಿಕಾ ಪಡುಕೋಣೆ ಮತ್ತು ಆಕೆಯ ಪತಿ ರಣವೀರ್‌ ಸಿಂಗ್‌ ನಡುವೆ ನಿಂತು ಪೋಸ್‌ ನೀಡಿದ್ದಾರೆ. ದೀಪಿಕಾ ಪಡುಕೋಣೆ ಪರ್ಪಲ್‌ ಬಣ್ಣದ ಸೀರೆ ಹುಟ್ಟಿದ್ದಾರೆ. ಇದು ತೊರಾನಿ ಬ್ರಾಂಡ್‌ನ ಸೀರೆ. ಈ ಫೋಟೋದಲ್ಲಿ ದೀಪಿಕಾ ಪಡುಕೋಣೆಯ ಬೇಬಿ ಬಂಪ್‌ ಹೊಟ್ಟೆ ಸಮರ್ಪಕವಾಗಿ ಕಾಣಿಸುತ್ತಿದೆ. ದೀಪಿಕಾ ಪಡುಕೋಣೆ ಗರ್ಭ ಧರಿಸಿರುವುದು ಸುಳ್ಳು, ಈಕೆಯ ಬೇಬಿ ಬಂಪ್‌ ನಕಲಿ ಎನ್ನುವವರಿಗೆ ಉತ್ತರವೆಂಬಂತೆ ಈ ಫೋಟೋ ಇದೆ. ರಣವೀರ್‌ ಸಿಂಗ್‌ ಖುಷಿಯಿಂದ ಓರ್ರಿ ಬೆನ್ನಿಗೆ ಕೈ ಹಾಕಿ ಪೋಸ್‌ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನೆಟ್ಟಿಗರ ಥರೇವಾರಿ ಕಾಮೆಂಟ್‌

ಇನ್‌ಸ್ಟಾಗ್ರಾಂನಲ್ಲಿ ಓರ್ರಿ ಹಂಚಿಕೊಂಡ ಫೋಟೋಗೆ ನೆಟ್ಟಿಗರು ಅಚ್ಚರಿಯಿಂದ ಬಗೆಬಗೆಯ ಕಾಮೆಂಟ್‌ ಹಾಕಿದ್ದಾರೆ. ಇನ್ನೊಂದಿಷ್ಟು ಜನರು ನಗೆ ಉಕ್ಕಿಸುವಂತಹ ಕಾಮೆಂಟ್‌ ಹಾಕಿದ್ದಾರೆ.

"ನಿಮ್ಮ ಕೈಯನ್ನು ಆಕೆಯ ಹೊಟ್ಟೆಯ ಮೇಲೆ ಇರಿಸಲು ದೀಪು ಹೇಗೆ ಅನುಮತಿ ನೀಡಿದಳು. ನಿಮ್ಮ ಫೋಟೋಗೆ ಧನ್ಯವಾದಗಳು. ಪುಟಾಣಿಗಾಗಿ ಕಾಯೋಣ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಜಿಟಿಎ 6ಕ್ಕೆ ಮೊದಲು ದೀಪಿಕಾ ಬೇಬಿಯನ್ನು ಓರ್ರಿ ಟಚ್‌ ಮಾಡಿದ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ದೀಪಿಕಾ ಪಡುಕೋಣೆ ಪ್ರೆಗ್ನೆಂಟ್‌ ಎನ್ನುವುದು ಈಗ ಖಾತ್ರಿಯಾಯಿತು" ಇನ್ನೊಬ್ಬರು ಬರೆದಿದ್ದಾರೆ. "ನಾನು ದೀಪಿಕಾ ಪಡುಕೋಣೆಯ ಪ್ರೆಗ್ನೆನ್ಸಿ ಫೋಟೋ ನೋಡಲು ಬಹುದಿನದಿಂದ ಕಾಯುತ್ತಿದ್ದೆ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಇನ್ನಷ್ಟು ಕಾಮೆಂಟ್‌ಗಳು

* ದೀಪಿಕಾ ಪಡುಕೋಣೆ ಗರ್ಭಿಣಿ ಎನ್ನುವುದನ್ನು ಓರ್ರಿ ವೆರಿಫೈ ಮಾಡಿದ.

* ಮಗುವಿನ ಹೆಸರು ಡೋರಿ

* ಓರ್ರಿ ನೋಟ ನೋಡಲಾಗುತ್ತಿಲ್ಲ.

* ಪತಿ ಪತ್ನಿ ಔರ್‌ ಓರಿ

* ಈ ಫೋಟೋ ತೆಗೆದಿರುವುದಕ್ಕೆ ನೀನು ಮಗುವಿಗೂ ಇನ್‌ವಾಯ್ಸ್‌ ಕಳುಹಿಸುವೆಯಾ? (ಏಕೆಂದರೆ ಓರ್ರಿ ಜತೆ ಫೋಟೋ ತೆಗೆದುಕೊಳ್ಳಲು ಲಕ್ಷಾಂತರ ರೂಪಾಯಿ ನೀಡಬೇಕು)

* "ರಣವೀರ್‌ ಸಿಂಗ್‌ ಯಾಕೆ ಹೀಗಾಗಿದ್ದಾನೆ" "ಎಐ ಚಿತ್ರದಂತೆ ರಣಬೀರ್‌ ಕಾಣಿಸುತ್ತಿದ್ದಾರೆ"

* ತನ್ನ ಹೊಟ್ಟೆ ಮುಟ್ಟಲು ದೀಪಿಕಾ ಯಾಕೆ ಅನುಮತಿ ನೀಡಿದ್ರು.

* ಇಂತಹ ಫೋಟೋ ತೆಗೆಸಿಕೊಳ್ಳಲು ನೀನು ಹಿಂದಿನ ಜನ್ಮದಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿರುವೆ.

* ಮಗುವಿಗೆ ನಿಮ್ಮ ಆಶೀರ್ವಾದ ದೊರಕಿತು.

ಹೀಗೆ ಈ ಪೋಸ್ಟ್‌ಗೆ ಲೆಕ್ಕವಿಲ್ಲದಷ್ಟು ಕಾಮೆಂಟ್‌ಗಳನ್ನು ನೆಟ್ಟಿಗರು ಮಾಡಿದ್ದಾರೆ.