Parineeti Chopra: ಮದುವೆಗೆ ಮೊದಲು ಬೀಗರ ಜತೆ ಕ್ರಿಕೆಟ್‌ ಆಟ, ಪರಿಣಿತಿ ಚೋಪ್ರಾ ರಾಘವ ಚಡ್ಡಾ ವಿವಾಹಕ್ಕೆ ಮುನ್ನ ಮೂರು ಕಾಲಿನ ಓಟ
ಕನ್ನಡ ಸುದ್ದಿ  /  ಮನರಂಜನೆ  /  Parineeti Chopra: ಮದುವೆಗೆ ಮೊದಲು ಬೀಗರ ಜತೆ ಕ್ರಿಕೆಟ್‌ ಆಟ, ಪರಿಣಿತಿ ಚೋಪ್ರಾ ರಾಘವ ಚಡ್ಡಾ ವಿವಾಹಕ್ಕೆ ಮುನ್ನ ಮೂರು ಕಾಲಿನ ಓಟ

Parineeti Chopra: ಮದುವೆಗೆ ಮೊದಲು ಬೀಗರ ಜತೆ ಕ್ರಿಕೆಟ್‌ ಆಟ, ಪರಿಣಿತಿ ಚೋಪ್ರಾ ರಾಘವ ಚಡ್ಡಾ ವಿವಾಹಕ್ಕೆ ಮುನ್ನ ಮೂರು ಕಾಲಿನ ಓಟ

Parineeti Chopra: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ ಚಡ್ಡಾ ವಿವಾಹ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅವರ ಪ್ರಿ ವೆಡ್ಡಿಂಗ್‌ಗೆ ಸಂಬಂಧಪಟ್ಟ ಸ್ಪೋರ್ಟ್ಸ್‌ ಡೇಯ ಚಿತ್ರಗಳು ಹೊರಬಿದ್ದಿವೆ. ಗಂಡಿನ ಕಡೆಯವರಿಗೂ ಹೆಣ್ಣಿನ ಕಡೆಯವರಿಗೂ ಕ್ರಿಕೆಟ್‌ ಆಟ ಏರ್ಪಡಿಸಲಾಗಿತ್ತಂತೆ.

Parineeti Chopra: ಮದುವೆಗೆ ಮೊದಲು ಬೀಗರ ಜತೆ ಕ್ರಿಕೆಟ್‌ ಆಟ
Parineeti Chopra: ಮದುವೆಗೆ ಮೊದಲು ಬೀಗರ ಜತೆ ಕ್ರಿಕೆಟ್‌ ಆಟ

ಬೆಂಗಳೂರು: ಪರಿಣಿತಿ ಚೋಪ್ರಾ ಅವರು ವಿವಾಹ ಪೂರ್ವ ಕಾರ್ಯಕ್ರಮಗಳ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ಪರಿಣಿತಿ ಚೋಪ್ರಾ ಅವರು ಸಂಸದ ರಾಘವ ಚಡ್ಡಾ ಅವರನ್ನು ವಿವಾಹವಾಗಿದ್ದರು. ಉದಯಪುರದಲ್ಲಿ ನಡೆದ ಈ ವಿವಾಹ ಸಮಾರಂಭವು ಭಾರತದ ಪ್ರಮುಖ ಸೆಲೆಬ್ರಿಟಿ ವಿವಾಹವೆಂದು ಸದ್ದು ಮಾಡಿತ್ತು. ಉದಯಪುರ ಹೋಟೆಲ್‌ನಲ್ಲಿ ಕ್ರಿಕೆಟ್‌ ಮತ್ತು ಇತರೆ ಆಟಗಳನ್ನು ಆಯೋಜಿಸಲಾಗಿತ್ತು. ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರಲ್ಲಿ ಗೆದ್ದವರು ಯಾರು ಎಂಬ ವಿವರ ಲಭ್ಯವಿಲ್ಲ.

ಮದುವೆಗೆ ಮೊದಲು ಆಟ

ಕ್ರಿಕೆಟ್‌, ಮೂರು ಕಾಲಿನ ಓಟ, ಸಂಗೀತ ಕುರ್ಚಿ ಇತ್ಯಾದಿ ಹಲವು ಆಟಗಳನ್ನು ಗಂಡು ಮತ್ತು ಹೆಣ್ಣಿನ ಕುಟುಂಬದವರಿಗೆ ಆಯೋಜಿಸಲಾಗಿತ್ತು. ರಾಘವ್‌ ಚಡ್ಡಾ ಕಡೆಯವರು ನೀಲಿ ಟೀಶರ್ಟ್‌ ಧರಿಸಿದ್ದರು. ಹೆಣ್ಣಿನ ಕಡೆಯವರು ಬಿಳಿ ಟೀಶರ್ಟ್‌ ಧರಿಸಿದ್ದರು. ಟೀಮ್‌ ಬ್ರೈಬ್‌ ಮತ್ತು ಟೀಮ್‌ ಗ್ರೂಮ್‌ ಎಂದು ಟೀಶರ್ಟ್‌ ಮೇಲೆ ಬರೆಯಲಾಗಿತ್ತು.

ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಸ್ಪೋರ್ಟ್ಸ್‌ ಡೇ ಕುರಿತು ವಿವರವಾದ ಮಾಹಿತಿಯನ್ನು ಪರಿಣಿತಿ ಬರೆದಿದ್ದಾರೆ. "ಇದೀಗ ಸಾಂಪ್ರದಾಯಿಕವಲ್ಲದ ಕಾರ್ಯಕ್ರಮ ಆರಂಭವಾಗುತ್ತಿದೆ. ಭಾರತೀಯ ಸಂಪ್ರದಾಯದಂತೆ ನಡೆಯುವ ವಿವಾಹಕ್ಕೆ ಮುನ್ನ ಸಾಂಪ್ರದಾಯಿಕವಲ್ಲದ ಕಾರ್ಯಕ್ರಮವಿದು. ಮೊದಲಿಗೆ ಮ್ಯೂಸಿಕಲ್‌ ಚಯರ್ಸ್‌, ಇದಾದ ಬಳಿಕ ನಿಂಬೆ ಮತ್ತು ಚಮಚದ ಓಟ, ನಿಮ್ಮ ಶಾಲಾ ದಿನಗಳನ್ನು ನೆನಪಿಸಿಕೊಳ್ಳಿ. ಮೂರು ಕಾಲಿನ ಓಟ, ಇದು ಕ್ರಿಕೆಟ್‌ನಲ್ಲಿ ಸೆಂಚುರಿ ಹೊಡೆಯುವುದಕ್ಕಿಂತಲೂ ಕಠಿಣವಾದ ಆಟವಾಗಿದೆ. ಇದಾದ ಬಳಿಕ ಕ್ರಿಕೆಟ್‌ ಆಟ, ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರ ನಡುವೆ ಕುತೂಹಲಕಾರಿ ಪಂದ್ಯ" ಎಂದು ಪರಿಣಿತಿ ಚೋಪ್ರಾ ಬರೆದಿದ್ದಾರೆ. "ಇದು ಕೇವಲ ಸೋಲು ಮತ್ತು ಗೆಲುವಿನ ಆಟವಲ್ಲ. ಇದು ಅನನ್ಯ ನೆನಪಿನ ಕ್ಷಣಗಳು, ನಗು, ಸಂಭ್ರಮದ ಆಟವಿದು ಎಂದು ಪರಿಣಿತಿ ಚೋಪ್ರಾ ಬರೆದಿದ್ದಾರೆ.

ಪ್ರಿಯಾಂಕ ಚೋಪ್ರಾ ಮದುವೆಯಲ್ಲೂ ಇತ್ತು ಆಟ

ಐದು ವರ್ಷಗಳ ಹಿಂದೆ ಪರಿಣಿತಿ ಚೋಪ್ರಾ ಅವರ ಕಸಿನ್‌ ಪ್ರಿಯಾಂಕ ಚೋಪ್ರಾ ಅವರು ಕೂಡ ಇದೇ ರೀತಿ ಕ್ರಿಕೆಟ್‌ ಪಂದ್ಯ ಏರ್ಪಡಿಸಿದ್ದರು. ಅವರ ಮದುವೆಯ ಪಾರ್ಟಿಯಲ್ಲಿ ಕ್ರಿಕೆಟ್‌ ಆಯೋಜಿಸಲಾಗಿತ್ತು. ಅಂದರೆ, ಮೆಹಂದಿ ಮತ್ತು ಹಳದಿ ದಿನದ ಪಾರ್ಟಿಯಲ್ಲಿ ಕ್ರಿಕೆಟ್‌ ಆಯೋಜಿಸಲಾಗಿತ್ತು. ಪರಿಣಿತಿಯ ಸಹೋದರರು, ಸ್ನೇಹಿತರು ಕ್ರಿಕೆಟ್‌ ಆಡಿ ಎಂಜಾಯ್‌ ಮಾಡಿದ್ದರು. ಅಂದಹಾಗೆ, ಪರಿಣಿತಿ ಮದುವೆಯಲ್ಲಿ ಪ್ರಿಯಾಂಕ ಚೋಪ್ರಾ ಭಾಗಿಯಾಗಿಲ್ಲ. ಅಮೆರಿಕದಲ್ಲಿ ತನ್ನ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದರಿಂದ ಮದುವೆಗೆ ಅಟೆಂಡ್‌ ಆಗಲು ಆಗಿರಲಿಲ್ಲವಂತೆ.

ನನ್ನ ಮದುವೆ ಹೀಗೆಯೇ ಇರಬೇಕು ಎಂದು ಪರಿಣಿತಿ ಬಯಸಿದ್ದರು. ಮದುವೆಗೆ ಕೇವಲ ಹತ್ತಿರದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆಗೆ ಆಗಮಿಸುವ ಅತಿಥಿಗಳಿಗೆ ಕೆಲವೊಂದು ಪ್ರವಾಸೋದ್ಯಮ ಚಟುವಟಿಕೆಯನ್ನೂ ಈ ಜೋಡಿ ಆಯೋಜಿಸಿತ್ತು. ಇವರು ನಿಶ್ಚಿತಾರ್ಥಕ್ಕೆ ಮೊದಲು ತಮ್ಮ ಡೇಟಿಂಗ್‌ ಕುರಿತು ಸಾರ್ವಜನಿಕವಾಗಿ ಎಂದೂ ಮಾತನಾಡಿರಲಿಲ್ಲ. ಆದರೆ, ಹಲವು ವರ್ಷಗಳಿಂದ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದರು. ಅಧಿಕೃತವಾಗಿ ಇದೇ ಮೇ ತಿಂಗಳಿನಲ್ಲಿ ಇವರು ಉಂಗುರ ಬದಲಾಯಿಸಿಕೊಂಡಿದ್ದರು. ಬಳಿಕ ಇವರ ಫೋಟೊಗಳು, ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗತೊಡಗಿತ್ತು. ಇವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪ್ರವಾಸ ಹೋಗಿರುವುದು ಎಲ್ಲವೂ ಬಯಲಾಗಿತ್ತು.

Whats_app_banner