ಕನ್ನಡ ಸುದ್ದಿ  /  Entertainment  /  Bollywood News Pooja Hegde Rohan Mehra Relationship Gossip Viral Video Dating With Rumored Boyfriend Pcp

Pooja Hegde: ಬಾಯ್‌ಫ್ರೆಂಡ್‌ ಜತೆ ಪೂಜಾ ಹೆಗ್ಡೆ ಸುತ್ತಾಟ; ನಟ ರೋಹನ್‌ ಮೆಹ್ರಾ ಕರಾವಳಿ ಮೂಲದ ನಟಿಯ ಡೇಟಿಂಗ್‌ ಕುರಿತು ಗುಸುಗುಸು

Pooja Hegde Rohan Mehra: ಕರಾವಳಿ ಮೂಲದ ಬಾಲಿವುಡ್‌ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ನಟ ರೋಹನ್‌ ಮೆಹ್ರಾ ಜತೆ ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಇವರಿಬ್ಬರು ಜತೆಯಾಗಿ ಕೈಹಿಡಿದುಕೊಂಡು ಓಡಾಡುವುದು, ಕಾರಿನಲ್ಲಿ ಸುತ್ತಾಡುವ ವಿಡಿಯೋಗಳು ವೈರಲ್‌ ಆಗುತ್ತಿದ್ದು, ವದಂತಿಗಳು ಸ್ಫೋಟಗೊಂಡಿವೆ.

Pooja Hegde: ಬಾಯ್‌ಫ್ರೆಂಡ್‌ ರೋಹನ್‌  ಜತೆ ಕಾಣಿಸಿಕೊಂಡ ಕರಾವಳಿ ಚೆಲುವೆ ಪೂಜಾ ಹೆಗ್ಡೆ
Pooja Hegde: ಬಾಯ್‌ಫ್ರೆಂಡ್‌ ರೋಹನ್‌ ಜತೆ ಕಾಣಿಸಿಕೊಂಡ ಕರಾವಳಿ ಚೆಲುವೆ ಪೂಜಾ ಹೆಗ್ಡೆ

ಬೆಂಗಳೂರು: ಕರ್ನಾಟಕ ಮೂಲದ ಹಲವು ನಟಿಯರು ಟಾಲಿವುಡ್‌, ಬಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಕರಾವಳಿ ಮೂಲದ ಪೂಜಾ ಹೆಗ್ಡೆ ಒಂದೊಮ್ಮೆ ಟಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಸಿನಿಮಾಗಳು ಹಿಟ್‌ ಆಗಲಿ, ಪ್ಲಾಪ್‌ ಆಗಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗ ಇವರ ಜತೆ ಸದಾ ಇದೆ. ತನ್ನ ಸೌಂದರ್ಯ, ಅಭಿನಯ, ಸೌಮ್ಯ ನಡವಳಿಕೆಯಿಂದ ಎಲ್ಲರಿಗೂ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ. ಕುಡ್ಲದ ಚೆಲುವೆ ಪೂಜಾ ಹೆಗ್ಡೆ ಕುರಿತು ಒಂದಿಷ್ಟು ರೂಮರ್‌ಗಳಿದ್ದವು. ಪೂಜಾ ಹೆಗ್ಡೆ ಕ್ರಿಕೆಟರ್‌ ಜತೆಗೆ ಡೇಟಿಂಗ್‌ ಮಾಡುತ್ತಿದ್ದಾರೆ, ಬೇಗ ಆ ಆಟಗಾರನನ್ನು ವಿವಾಹವಾಗಲಿದ್ದಾರೆ ಎಂದು ಸಣ್ಣ ಮಟ್ಟಿನ ವದಂತಿಗಳು ಇದ್ದವು. ಆದರೆ, ಇದು ಸುಳ್ಳು ಸುದ್ದಿ ಎಂದು ಗೊತ್ತಾದಗ ಅಭಿಮಾನಿಗಳು ನಿರಾಳವಾಗಿದ್ದರು.

ಇದೀಗ ಪೂಜಾ ಹೆಗ್ಡೆ ಕುರಿತು ಒನ್ನೊಂದು ವದಂತಿ ಆರಂಭವಾಗಿದೆ. ಮೂಲಗಳ ಪ್ರಕಾರ ಬಾಲಿವುಡ್‌ ನಟ ರೋಹನ್‌ ಮೆಹ್ರಾ ಜತೆ ಪೂಜಾ ಹೆಗ್ಡೆ ಡೇಟಿಂಗ್‌ನಲ್ಲಿದ್ದಾರಂತೆ. ಮುಂಬೈನಲ್ಲಿ ಹೋಟೆಲ್‌ ಮತ್ತು ರೆಸ್ಟೂರೆಂಟ್‌ಗಳಿಗೆ ಇವರಿಬ್ಬರು ಜತೆಯಾಗಿ ಹಲವು ಬಾರಿ ಹೋಗುತ್ತಿದ್ದಾರೆ. ಇವರಿಬ್ಬರು ಕಳೆದ ಹಲವು ವರ್ಷಗಳಿಂದ ಜತೆಯಲ್ಲಿದ್ದು, ಶೀಘ್ರದಲ್ಲಿ ವಿವಾಹವಾಗುವ ಸಾಧ್ಯತೆಗಳು ಇವೆ ಎಂದು ವದಂತಿಗಳು ತಿಳಿಸಿವೆ.

ಬಾಲಿವುಡ್‌ ನಟ ರೋಹನ್‌ ಮೆಹ್ರಾ ಅವರು ತಾರಾ ಸುತಾರಿಯಾಳ ಜತೆಗೆ ಸಂಬಂಧದಲ್ಲಿದ್ದಾನೆ ಎಂದು ವರದಿಗಳು ತಿಳಿಸಿವೆ. ಈಗ ಈಕೆ ಈತನ ಮಾಜಿನ ಗರ್ಲ್‌ ಫ್ರೆಂಡ್‌ ಎನ್ನಲಾಗುತ್ತಿದೆ. ಆದರೆ, ಇದೀಗ ಪೂಜಾ ಹೆಗ್ಡೆ ಜತೆ ಕಾಣಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪೂಜಾ ಹೆಗ್ಡೆ ಮತ್ತು ರೋಹನ್‌ ಮೆಹ್ರಾ ಕಾರಿನಲ್ಲಿ ಜತೆಯಾಗಿ ಹೋಗುತ್ತಿರುವುದು ಕಂಡುಬಂದಿದೆ. ಇದು ಪೂಜಾ ಹೆಗ್ಡೆಯ ಹಾರ್ಡ್‌ ಕೋರ್‌ ಅಭಿಮಾನಿಗಳಿಗೆ ತುಸು ಹರ್ಟ್‌ ಮಾಡಿದ್ದು ಸುಳ್ಳಲ್ಲ. ಆದರೆ, ರೋಹನ್‌ ಮತ್ತು ಪೂಜಾ ಹೆಗ್ಡೆ ತಮ್ಮ ಸಂಬಂಧದ ಕುರಿತು ಅಧಿಕೃತವಾಗಿ ತಿಳಿಸುವ ತನಕ ಅಭಿಮಾನಿಗಳು ದುಃಖಪಡುವ ಅಗತ್ಯವಿಲ್ಲ.

ರೋಹನ್‌ ಮೆಹ್ರಾ ಸಿನಿಮಾಗಳು ತುಂಬಾ ಫೇಮಸ್‌ ಏನಲ್ಲ. ಆತ ಬಾಲಿವುಡ್‌ನಲ್ಲಿ ಹೆಸರು ಮಾಡಿಲ್ಲ. ಆತನ ಕೆಲವು ಸಿನಿಮಾಗಳು ಈಗಾಗಲೇ ಫ್ಲಾಪ್‌ ಪಟ್ಟ ಕಟ್ಟಿಕೊಂಡಿವೆ. ಇದೇ ಸಮಯದಲ್ಲಿ ಪೂಜಾ ಹೆಗ್ಡೆಯ ಹಲವು ಸಿನಿಮಾಗಳು ಇತ್ತೀಚೆಗೆ ಸೋಲುತ್ತಿವೆ. ಈಕೆಗೆ ಡಿಮ್ಯಾಂಡ್‌ ಕಡಿಮೆಯಾಗುತ್ತಿದೆ. ಸದ್ಯ ಇವರ ಕೈಯಲ್ಲಿ ಕೇವಲ ಒಂದು ಪ್ರಾಜೆಕ್ಟ್‌ ಇದೆ. ಪೂಜಾ ಹೆಗ್ಡೆ ಬದಲು ಜಾಹ್ನವಿ ಕಪೂರ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಕರಾವಳಿ ಮೂಲದ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಕರ್ನಾಟಕ ಮೂಲದ ಶ್ರೀಲೀಲಾ ಸಿನಿಮಾಗಳು ಇತ್ತೀಚೆಗೆ ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಹಿಟ್‌ ಕಾಣುತ್ತಿಲ್ಲ.

ಮಹೇಶ್‌ ಬಾಬು ಜತೆ ಗುಂಟೂರು ಕರಮ್‌, ಪವನ್‌ ಕಲ್ಯಾಣ್‌ ಜತೆಗೆ ಉಸ್ತಾದ್‌ ಭಗತ್‌ ಸಿಂಗ್‌ನಂತಹ ಚಿತ್ರಗಳಲ್ಲಿ ನಟಿಸಿದ ಬಳಿಕ ಪೂಜಾ ಹೆಗಡೆ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇತ್ತೀಚೆಗೆ ಇವರಿಗೆ ಬೇರೊಂದು ತೆಲುಗು ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿದೆ ಎಂದು ವರದಿಗಳು ತಿಳಿಸಿವೆ.

IPL_Entry_Point