Adipurush: ಪ್ರಭಾಸ್‌ ಅಭಿನಯದ ಆದಿಪುರುಷ್‌ 10 ದಿನಗಳಲ್ಲಿ ಮಾಡಿದ ಲಾಭ ಎಷ್ಟು; ಜನರನ್ನು ಸೆಳೆಯಲು ಚಿತ್ರತಂಡದ ಹೊಸ ಪ್ಲ್ಯಾನ್‌
ಕನ್ನಡ ಸುದ್ದಿ  /  ಮನರಂಜನೆ  /  Adipurush: ಪ್ರಭಾಸ್‌ ಅಭಿನಯದ ಆದಿಪುರುಷ್‌ 10 ದಿನಗಳಲ್ಲಿ ಮಾಡಿದ ಲಾಭ ಎಷ್ಟು; ಜನರನ್ನು ಸೆಳೆಯಲು ಚಿತ್ರತಂಡದ ಹೊಸ ಪ್ಲ್ಯಾನ್‌

Adipurush: ಪ್ರಭಾಸ್‌ ಅಭಿನಯದ ಆದಿಪುರುಷ್‌ 10 ದಿನಗಳಲ್ಲಿ ಮಾಡಿದ ಲಾಭ ಎಷ್ಟು; ಜನರನ್ನು ಸೆಳೆಯಲು ಚಿತ್ರತಂಡದ ಹೊಸ ಪ್ಲ್ಯಾನ್‌

ಈ ಹಿಂದೆ ಪ್ರಭಾಸ್‌ ಸಿನಿಮಾಗಳು ಭಾರೀ ಲಾಭ ಮಾಡಿವೆ. ಆದರೆ ಕಳೆದ ವರ್ಷ ತೆರೆ ಕಂಡ ರಾಧೇ ಶ್ಯಾಮ್‌ ಸಿನಿಮಾ ಹೀನಾಯವಾಗಿ ಸೋಲು ಕಂಡಿತ್ತು. ಅದಕ್ಕೂ ಮುನ್ನ ತೆರೆ ಕಂಡಿದ್ದ ಸಾಹೋ ಕೂಡಾ ಹೇಳಿಕೊಳ್ಳುವಂತ ಹೆಸರು ಮಾಡಿರಲಿಲ್ಲ.

ಪ್ರಭಾಸ್‌ ಅಭಿನಯದ ಆದಿಪುರುಷ್‌ 10 ದಿನಗಳ ಕಲೆಕ್ಷನ್
ಪ್ರಭಾಸ್‌ ಅಭಿನಯದ ಆದಿಪುರುಷ್‌ 10 ದಿನಗಳ ಕಲೆಕ್ಷನ್

ಅಭಿಮಾನಿಗಳಿಂದ ಮಿಸ್ಟರ್‌ ಪರ್ಫೆಕ್ಟ್‌ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಪ್ರಭಾಸ್‌ ಅಭಿನಯದ ಆದಿಪುರುಷ್‌ ಸಿನಿಮಾ ಸಿನಿಪ್ರಿಯರಿಗೆ ನಿರಾಶೆ ಉಂಟು ಮಾಡಿದೆ. ಜೂನ್‌ 16 ರಂದು ತೆರೆ ಕಂಡಿದ್ದ ಸಿನಿಮಾ ಮೊದಲ 3-4 ದಿನಗಳು ನಾಗಾಲೋಟದಿಂದ ಮುನ್ನುಗ್ಗಿದ್ದರೂ 5ನೇ ದಿನ ನೀರಸ ಎನಿಸಿತ್ತು. ಸಿನಿಮಾ ತೆರೆ ಕಂಡು 10 ದಿನಗಳಾಗಿವೆ. ಇದುವರೆಗೂ ಚಿತ್ರ ಎಷ್ಟು ಲಾಭ ಮಾಡಿದೆ ಎಂಬುದ ಬಗ್ಗೆ ಇಲ್ಲದೆ ಒಂದಿಷ್ಟು ಮಾಹಿತಿ.

ಭಾನುವಾರದಂದು ಆದಿಪುರುಷ್‌ ಸಿನಿಮಾ ಗಳಿಸಿದ್ದು 6 ಕೋಟಿ ರೂಪಾಯಿ ಮಾತ್ರ. ವಿಶ್ವಾದ್ಯಂತ ಇದುವರೆಗೂ ಸಿನಿಮಾ 400 ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈಗ ಟಿಕೆಟ್‌ ಬೆಲೆಯನ್ನು ಕಡಿಮೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ. ಆದ್ದರಿಂದ ಜನರನ್ನು ಚಿತ್ರಮಂದಿರದತ್ತ ಸೆಳೆಯಲು ಟಿಕೆಟ್‌ ಬೆಲೆಯನ್ನು 112 ರೂಪಾಯಿಗೆ ಇಳಿಸಲಾಗಿದೆ. ಕೆಲವೊಂದು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ತೆಗೆಯಲಾಗುತ್ತಿದ್ದು ಇದು ಸಿನಿಮಾ ತಂಡಕ್ಕೆ ಮತ್ತಷ್ಟು ತಲೆ ನೋವಾಗಿದೆ. ಈ ಹಿಂದೆ ಪ್ರಭಾಸ್‌ ಸಿನಿಮಾಗಳು ಭಾರೀ ಲಾಭ ಮಾಡಿವೆ. ಆದರೆ ಕಳೆದ ವರ್ಷ ತೆರೆ ಕಂಡ ರಾಧೇ ಶ್ಯಾಮ್‌ ಸಿನಿಮಾ ಹೀನಾಯವಾಗಿ ಸೋಲು ಕಂಡಿತ್ತು. ಅದಕ್ಕೂ ಮುನ್ನ ತೆರೆ ಕಂಡಿದ್ದ ಸಾಹೋ ಕೂಡಾ ಹೇಳಿಕೊಳ್ಳುವಂತ ಹೆಸರು ಮಾಡಿರಲಿಲ್ಲ. ಇದೀಗ ಆದಿಪುರುಷ್‌ ಸ್ಥಿತಿ ಈ ರೀತಿ ಆಗಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಆದ್ರೂ ಪ್ರಭಾಸ್‌ಗೆ ಬ್ರೇಕ್‌ ನೀಡಲಿದ್ಯಾ ಎಂಬುದು ಸದ್ಯದ ಪ್ರಶ್ನೆ.

ಆದಿಪುರುಷ್‌ ಸಿನಿಮಾಗಾಗಿ 5500 ಕಿಮೀ ಪ್ರಯಾಣಿಸಿದ ಅಭಿಮಾನಿ

ಆದಿಪುರುಷ್‌ ಸಿನಿಮಾಗೆ ನೆಗೆಟಿವ್‌ ಪ್ರಚಾರವೇ ಹೆಚ್ಚಾಗಿದ್ದರೂ ಅಭಿಮಾನಿಗಳು ಮಾತ್ರ ಸಿನಿಮಾ ಚೆನ್ನಾಗಿದೆ ಎಲ್ಲರೂ ಹೋಗಿ ನೋಡಿ ಎನ್ನುತ್ತಲೇ ಇದ್ದಾರೆ. ಇದರ ನಡುವೆ ವಿದೇಶಿ ಮಹಿಳಾ ಅಭಿಮಾನಿಯೊಬ್ಬರು ಆದಿಪುರುಷ್‌ ಸಿನಿಮಾ ನೋಡಲೆಂದು ಬರೋಬ್ಬರಿ 5500 ಕಿಮೀ ಪ್ರಯಾಣ ಮಾಡಿ ಸಿನಿಮಾ ವೀಕ್ಷಿಸಿ ಗಮನ ಸೆಳೆದಿದ್ದಾರೆ. ಜಪಾನ್‌ನಲ್ಲಿ ಆದಿಪುರುಷ್‌ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಆದ್ದರಿಂದ ಈ ಜಪಾನ್‌ ಮಹಿಳೆ ಸಿನಿಮಾ ನೋಡುವ ಹಠ ಮಾಡಿ, ಟೋಕಿಯೋದಿಂದ ಸಿಂಗಪೂರ್‌ಗೆ ಹೋಗಿ ಬಂದಿದ್ದಾರೆ.

ಆದಿಪುರುಷ್‌ ಸೀಕ್ವೆಲ್‌ಗೆ ಪ್ಲಾನ್‌ ಮಾಡಿದ್ದ ಓಂ ರಾವುತ್‌

ಆದಿಪುರುಷ್‌ ರಾಮಾಯಣ ಆಧರಿಸಿದ ಚಿತ್ರ. ರಾಮಾಯಣದಂಥ ದೊಡ್ಡ ಕಥೆಯನ್ನು ಒಂದೇ ಭಾಗದಲ್ಲಿ ಹೇಳಲು ಸಾಧ್ಯವಿಲ್ಲವಾದ್ದರಿಂದ ಓಂ ರಾವುತ್‌ ಈ ಸಿನಿಮಾವನ್ನು 2 ಭಾಗಗಳಾಗಿ ತೆರೆಗೆ ತರಲು ಪ್ಲಾನ್‌ ಮಾಡಿ ಎಲ್ಲಾ ತಂತ್ರಜ್ಞರನ್ನು ಒಪ್ಪಿಸಿದ್ದರಂತೆ. ಪ್ರಭಾಸ್‌ಗೆ ಕೂಡಾ ಕಾಲ್‌ಶೀಟ್‌ ಕೇಳಿದ್ದರಂತೆ. ಆದರೆ ಪ್ರಭಾಸ್‌, ಸೀಕ್ವೆಲ್‌ ಮಾಡಲು ಒಪ್ಪಲಿಲ್ಲ ಎಂಬ ಸುದ್ದಿ ಈಗ ಬೆಳಕಿಗೆ ಬಂದಿದೆ. ಒಂದು ವೇಳೆ ಪ್ರಭಾಸ್‌ ಭಾಗ 2ರಲ್ಲಿ ನಟಿಲು ಒಪ್ಪಿದ್ದರೆ ನಿಜಕ್ಕೂ ಸಿನಿಮಾಗೆ ಭಾರೀ ಲಾಸ್‌ ಆಗುತ್ತಿತ್ತು. ಜೊತೆಗೆ ದೇಶದಲ್ಲಿ ಇದೇ ವಿಚಾರವಾಗಿ ಮತ್ತಷ್ಟು ವಿರೋಧ ವ್ಯಕ್ತವಾಗುತ್ತಿತ್ತು ಎಂದು ಸಿನಿಪ್ರಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Whats_app_banner