Animal OTT: ಅನಿಮಲ್ ಸಿನಿಮಾದ ಹಣಕಾಸು ಜಗಳ ಅಂತ್ಯ; ಒಟಿಟಿ ಬಿಡುಗಡೆಗೆ ಇದ್ದ ಆತಂಕ ನಿವಾರಣೆ
Animal OTT release: ಅನಿಮಲ್ ಸಿನಿಮಾ ಒಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ, ಸಹ ನಿರ್ಮಾಪಕರ ಜತೆಗಿನ ಹಣಕಾಸು ಸಂಘರ್ಷದಿಂದ ಅನಿಮಲ್ ಒಟಿಟಿ ಬಿಡುಗಡೆ ವಿಳಂಬವಾಗಿತ್ತು. ಇದೀಗ ಈ ವಿವಾದ ಕೊನೆಗೊಂಡಿದ್ದು, ಸದ್ಯದಲ್ಲಿಯೇ ಅನಿಮಲ್ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿರುವ ಅನಿಮಲ್ ಸಿನಿಮಾವು ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಬಾಲಿವುಡ್ ನಟ ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾವು ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅತ್ಯಧಿಕ ಹಿಂಸೆಯಿಂದಾಗಿ ವಿಮರ್ಶಕರಿಂದ ಕಟು ಟೀಕೆಗೆ ಒಳಗಾಗಿದ್ದರೂ ಈ ಚಿತ್ರದ ಗಳಿಕೆ ಭರ್ಜರಿಯಾಗಿತ್ತು. ಈ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಲು ಪ್ರಕರಣವೊಂದು ಅಡ್ಡಿಯಾಗಿತ್ತು.
ಅನಿಮಲ್ ಚಿತ್ರದಲ್ಲಿ ಟೀ ಸೀರಿಸ್ (ಕ್ಯಾಸೆಟ್ ಇಂಡಸ್ಟ್ರಿ) ತಮಗೆ ನೀಡಬೇಕಾದ ಮೊತ್ತವನ್ನು ಪಾವತಿಸಿಲ್ಲ ಎಂದು ಸಿನಿ ಒನ್ ಸ್ಟುಡಿಯೋಸ್ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣವನ್ನು ಈ ಎರಡು ಕಂಪನಿಗಳು ಇದೀಗ ಇತ್ಯರ್ಥ ಮಾಡಿಕೊಂಡಿವೆ. ಟಿ-ಸೀರೀಸ್ (ಕ್ಯಾಸೆಟ್ ಇಂಡಸ್ಟ್ರೀಸ್) ಮತ್ತು ಸಿನಿ 1 ಸ್ಟುಡಿಯೋಸ್ ವಿವಾದ ಇತ್ಯರ್ಥವಾಗಿದ್ದು, ಒಟಿಟಿ ಬಿಡುಗಡೆಗೆ ಇದ್ದ ಆತಂಕ ನಿವಾರಣೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಅನಿಮಲ್ ಚಿತ್ರದ ಲಾಭದಲ್ಲಿ ಟೀ ಸೀರಿಸ್ ಪಾಲು ನೀಡಬೇಕಿತ್ತು. ಆದರೆ, ಟೀ ಸೀರಿಸ್ ತಮಗೆ ಪಾಲು ನೀಡದ ಕಾರಣ ಈ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡದಂತೆ ಆದೇಶಿಸುವಂತೆ ಕೋರಿ ಸಿ ಒನ್ ಸ್ಟುಡಿಯೋಸ್ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ನ್ಯಾಯಾಲಯವು ಟಿ ಸರಣಿ ಜತೆಗೆ ನೆಟ್‌ಪ್ಲಿಕ್ಸ್ ಒಟಿಟಿಗೆ ನೋಟಿಸ್ ನೀಡಿತ್ತು. ಜನವರಿ 22ರಂದು ಕೋರ್ಟ್‌ಗೆ ಹಾಜರಾದ ಉಭಯ ಪಾರ್ಟಿಗಳು "ವಿವಾದ ಇತ್ಯರ್ಥಗೊಳಿಸಿದ್ದದೇವೆ" ಎಂದು ಮಾಹಿತಿ ನೀಡಿವೆ.
ಒಟಿಟಿಯಲ್ಲಿ ಬಿಡುಗಡೆ
ಜನವರಿ 26ರಂದು ಅನಿಮಲ್ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ಸೂಚನೆಯಿದೆ. ಕಾನೂನು ಹೋರಾಟದಿಂದ ಬಿಡುಗಡೆ ವಿಳಂಬವಾಗುವ ಆತಂಕವಿತ್ತು. ಈಗ ಈ ಆತಂಕ ನಿವಾರಣೆಯಾಗಿದೆ. ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ನಟನೆಯ ಈ ಚಿತ್ರವು ಹಿಂದಿ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಸ್ಟ್ರೀಮ್ ಆಗಲಿದೆ. ಈ ವಿಷಯದ ಬಗ್ಗೆ ನೆಟ್‌ಫ್ಲಿಕ್ಸ್‌ನಿಂದ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ.
ಅನಿಮಲ್ ಚಿತ್ರದಲ್ಲಿ ನಾಯಕ ರಣಬೀರ್ ಕಪೂರ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಬಾಬಿ ಡಿಯೋಲ್ ವಿಲನ್ ಆಗಿ ನಟಿಸಿದ್ದಾರೆ. ರಣಬೀರ್ ತಂದೆಯ ಪಾತ್ರವನ್ನು ಹಿರಿಯ ನಟ ಅನಿಲ್ ಕಪೂರ್ ನಿರ್ವಹಿಸಿದ್ದಾರೆ. ರಣಬೀರ್ ಜೊತೆಗಿನ ತೃಪ್ತಿ ದಿಮ್ರಿಯ ಕೆಮಿಸ್ಟ್ರಿ ಅಗಾಧವಾಗಿತ್ತು. ಬಬ್ಲು ಪೃಥ್ವಿರಾಜ್, ಶಕ್ತಿಕಪೂರ್, ಪ್ರೇಮ್ ಚೋಪ್ರಾ, ಮಧು ರಾಜಾ, ಸುರೇಶ್ ಒಬೆರಾಯ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಅನಿಮಲ್ ಸಿನಿಮಾವನ್ನು ಟಿ-ಸೀರೀಸ್, ಸಿನಿ1 ಸ್ಟುಡಿಯೋಸ್ ಮತ್ತು ಭದ್ರಕಾಳಿ ಪಿಕ್ಚರ್ಸ್ ಬ್ಯಾನರ್‌ಗಳು ಜಂಟಿಯಾಗಿ ನಿರ್ಮಿಸಿವೆ. ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಅನಿಮಲ್ ಚಲನಚಿತ್ರವು ಸುಮಾರು 910 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮಾಡಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಆಗಿದೆ.