ಕನ್ನಡ ಸುದ್ದಿ  /  Entertainment  /  Bollywood News Ranbir Kapoor Rashmika Mandanna Latest Film Animal Earns Over <Span Class='webrupee'>₹</span>9 Crore In Advance Booking Pcp

Animal Movie: ಮುಂಗಡ ಟಿಕೆಟ್‌ ಬುಕ್ಕಿಂಗ್‌ನಲ್ಲೂ ಅನಿಮಲ್‌ ಮುಂದು; ಸಿನಿಮಾ ಬಿಡುಗಡೆಗೆ ಮುನ್ನವೇ 9 ಕೋಟಿ ರೂನ ಟಿಕೆಟ್‌ ಸೋಲ್ಡೌಟ್‌

Animal Movie Latest Update: ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್‌ ಸಿನಿಮಾದ ಟಿಕೆಟ್‌ ಮುಂಗಡ ಬುಕ್ಕಿಂಗ್‌ಗೆ ಜನರು ಮುಗಿಬಿದಿದ್ದಾರೆ. ಇಲ್ಲಿಯವರೆಗೆ ಭಾರತಾದ್ಯಂತ 7,200 ಶೋಗಳಿಗೆ 3,34,173 ಟಿಕೆಟ್‌ ಬುಕ್ಕಿಂಗ್‌ ಮಾಡಲಾಗಿದೆ. ಇದರಿಂದ 9.75 ಕೋಟಿ ರೂಪಾಯಿ ಗಳಿಕೆಯಾಗಿದೆ.

ಅನಿಮಲ್‌ ಸಿನಿಮಾದ ರಣಬೀರ್‌ ಕಪೂರ್‌, ರಶ್ಮಿಕಾ ಮಂದಣ್ಣ ಮತ್ತು ಬಾಬಿ ಡಿಯೋಲ್‌
ಅನಿಮಲ್‌ ಸಿನಿಮಾದ ರಣಬೀರ್‌ ಕಪೂರ್‌, ರಶ್ಮಿಕಾ ಮಂದಣ್ಣ ಮತ್ತು ಬಾಬಿ ಡಿಯೋಲ್‌

ಬೆಂಗಳೂರು: ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಅನಿಮಲ್‌ ಈ ಶುಕ್ರವಾರ ಬಿಡುಗಡೆಯಾಗಲಿದೆ. ಈ ಸಿನಿಮಾದ ಟಿಕೆಟ್‌ಗಳ ಅಡ್ವಾನ್ಸಡ್‌ ಬುಕ್ಕಿಂಗ್‌ ಆರಂಭವಾಗಿದೆ. ನವೆಂಬರ್‌ 27, ಸೋಮವಾರದವರೆಗಿನ ಲೆಕ್ಕ ನೋಡುವುದಾದರೆ ಅನಿಮಲ್‌ ಸಿನಿಮಾದ ಮುಂಗಡ ಟಿಕೆಟ್‌ ಬುಕ್ಕಿಂಗ್‌ನಿಂದ 9.75 ಕೋಟಿ ರೂಪಾಯಿ ಗಳಿಕೆಯಾಗಿದೆ. ಅಂದರೆ, 3,34,173 ಟಿಕೆಟ್‌ಗಳು ಬುಕ್ಕಿಂಗ್‌ ಆಗಿವೆ. ದೇಶಾದ್ಯಂತ 7,200 ಶೋಗಳಿಗೆ ಸಿನಿಮಾ ಪ್ರೇಮಿಗಳು ಟಿಕೆಟ್‌ ಕಾದಿರಿಸಿದ್ದಾರೆ ಎಂದು ಸಿನಿಮಾ ವಹಿವಾಟು ಪೋರ್ಟಲ್‌ ಸಚ್‌ನಿಲ್ಕ್‌ ವರದಿ ಮಾಡಿದೆ.

ಹಿಂದಿ 2ಡಿ ಶೋಗಳಿಗೆ ನಿನ್ನೆಯವರೆಗೆ 2,73,425 ಟಿಕಟ್‌ಗಳನ್ನು ಮುಂಗಡ ಕಾಯ್ದಿರಿಸಲಾಗಿದೆ. ತೆಲುಗು 2ಡಿ ಶೋಗಳಿಗೆ 58,465 ಟಿಕೆಟ್‌ ಬುಕ್ಕಿಂಗ್‌ ಮಾಡಲಾಗಿದೆ. ಕನ್ನಡ ಅವತರಣಿಕೆಯ ಸಿನಿಮಾಕ್ಕೆ 1,504 ಟಿಕೆಟ್‌ಗಳನ್ನು ಬುಕ್ಕಿಂಗ್‌ ಮಾಡಲಾಗಿದೆ. ತಮಿಳು ಅನಿಮಲ್‌ ಸಿನಿಮಾದ ಟಿಕೆಟ್‌ಗಳನ್ನು 779 ಜನರು ಬುಕ್ಕಿಂಗ್‌ ಮಾಡಿದ್ದಾರೆ.

ಬೆಂಗಳೂರಿನಲ್ಲಿ 80.02 ಲಕ್ಷ ರೂಪಾಯಿ ಮೌಲ್ಯದ ಟಿಕೆಟ್‌ ಬುಕ್ಕಿಂಗ್‌ ಮಾಡಲಾಗಿದೆ. ದೆಹಲಿಯಲ್ಲಿ 2.14 ಕೋಟಿ ರೂಪಾಯಿ, ಹೈದರಾಬಾದ್‌ನಲ್ಲಿ 1.12 ಕೋಟಿ ರೂಪಾಯಿ, ಮುಂಬೈನಲ್ಲಿ 84.96 ಲಕ್ಷ ರೂಪಾಯಿ, ಕೊಲ್ಕೊತ್ತಾದಲ್ಲಿ 25.97 ಲಕ್ಷ ರೂಪಾಯಿ, ಜೈಪುರದಲ್ಲಿ 18.31 ಲಕ್ಷ ಮತ್ತು ಚಂಡೀಗಢದಲ್ಲಿ 14.9 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಸಚ್‌ನಿಲ್ಕ್‌ ವರದಿ ಮಾಡಿದೆ.

ಅಡ್ವಾನ್ಸಡ್‌ ಬುಕ್ಕಿಂಗ್‌ ಆರಂಭವಾದ ಮೊದಲ ದಿನ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರವು ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ನಿಂದ 6.95 ಕೋಟಿ ರೂಪಾಆಯಿ ಗಳಿಕೆ ಮಾಡಿತ್ತು. ಭಾನುವಾರದವರೆಗೆ ಮೂರು ಭಾಷೆಗಳ 2,28,275 ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿತ್ತು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ತಿನ್ನೋ ತಟ್ಟೆಯಲ್ಲಿ ಏನೇನಿರುತ್ತೆ? ಇಲ್ಲಿದೆ ಅನಿಮಲ್‌ ನಟಿಯ ದಿನಚರಿ

ಮೊದಲ ದಿನ ಈ ಸಿನಿಮಾ 50 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆಯನ್ನು ಸಚ್‌ನಿಲ್ಕ್‌ ವ್ಯಕ್ತಪಡಿಸಿದೆ. ಈ ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿಯು ಎ ಸರ್ಟಿಫಿಕೇಟ್‌ ನೀಡಿದೆ. ರಣಬೀರ್‌ ಕಪೂರ್‌ ಮಾತ್ರವಲ್ಲದೆ ಈ ಸಿನಿಮಾದಲ್ಲಿ ಬಾಬಿ ಡಿಯೋಲ್‌ ಮತ್ತು ಅನಿಲ್‌ ಕಪೂರ್‌ ಕೂಟ ನಟಿಸಿದ್ದಾರೆ. ರಣಬೀರ್‌(ಅರ್ಜುನ್‌ ಸಿಂಗ್)‌ ಮತ್ತು ಆತನ ತಂದೆ ಬಲ್‌ಬೀರ್‌ ಸಿಂಗ್‌ ನಡುವಿನ ಸಂಬಂಧದ ಕತೆಯನ್ನು ಈ ಸಿನಿಮಾ ಬಿಚ್ಚಿಡಲಿದೆ.

ರಣಬೀರ್‌ ಕಪೂರ್‌, ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾ ಪ್ಯಾನ್ ಇಂಡಿಯನ್ ಮಟ್ಟದಲ್ಲಿ ಡಿಸೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಸಂದೀಪ್ ವಂಗಾ ಅವರು ಈ ಚಿತ್ರದಲ್ಲಿ ಅಪ್ಪ-ಮಗನ ಬಾಂಧವ್ಯದ ಹಿನ್ನೆಲೆಯನ್ನು ಇಟ್ಟುಕೊಂಡು ಕ್ರೈಂ ಡ್ರಾಮಾ ಥ್ರಿಲ್ಲರ್ ಸಿನಿಮಾ ನಿರ್ಮಿಸಿದ್ದಾರೆ.. ರಣಬೀರ್ ಕಪೂರ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ. ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಬಾಬಿ ಡಿಯೋಲ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಮಾರು ನೂರು ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ