ಕನ್ನಡ ಸುದ್ದಿ  /  ಮನರಂಜನೆ  /  ರಾಮನ ಪಾತ್ರಕ್ಕೆ ನೀವು ಹೇಳಿದಂತೆ ದೇಹ ಹುರಿಗೊಳಿಸುವೆ, ಆದರೆ ನಿಮ್ಮ ಆ ಕೆಲಸ ಮಾತ್ರ ನನಗೆ ಇಷ್ಟವಿಲ್ಲ; ರಣಬೀರ್‌ ಕಪೂರ್‌ ಮನವಿ

ರಾಮನ ಪಾತ್ರಕ್ಕೆ ನೀವು ಹೇಳಿದಂತೆ ದೇಹ ಹುರಿಗೊಳಿಸುವೆ, ಆದರೆ ನಿಮ್ಮ ಆ ಕೆಲಸ ಮಾತ್ರ ನನಗೆ ಇಷ್ಟವಿಲ್ಲ; ರಣಬೀರ್‌ ಕಪೂರ್‌ ಮನವಿ

ರಾಮಾಯಣ ಚಿತ್ರದಲ್ಲಿ ಶ್ರೀರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ ರಣಬೀರ್‌ ಕಪೂರ್.‌ ಅದಕ್ಕೆ ವಿಶೇಷ ತಯಾರಿ, ತರಬೇತಿಗಳನ್ನೂ ಅವರು ಪಡೆಯುತ್ತಿದ್ದಾರೆ. ಈ ನಡುವೆ ಚಿತ್ರತಂಡಕ್ಕೂ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

ರಾಮನ ಪಾತ್ರಕ್ಕೆ ನೀವು ಹೇಳಿದಂತೆ ದೇಹ ಹುರಿಗೊಳಿಸುವೆ, ಆದರೆ ನಿಮ್ಮ ಆ ಕೆಲಸ ಮಾತ್ರ ನನಗೆ ಇಷ್ಟವಿಲ್ಲ; ರಣಬೀರ್‌ ಕಪೂರ್‌ ಮನವಿ
ರಾಮನ ಪಾತ್ರಕ್ಕೆ ನೀವು ಹೇಳಿದಂತೆ ದೇಹ ಹುರಿಗೊಳಿಸುವೆ, ಆದರೆ ನಿಮ್ಮ ಆ ಕೆಲಸ ಮಾತ್ರ ನನಗೆ ಇಷ್ಟವಿಲ್ಲ; ರಣಬೀರ್‌ ಕಪೂರ್‌ ಮನವಿ

Ranbir Kapoor: ಬಾಲಿವುಡ್‌ನಲ್ಲೀಗ ರಾಮಾಯಣ ಸಿನಿಮಾದ ಸದ್ದು ಜೋರಾಗಿದೆ. ನಿತೀಶ್‌ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಕ್ಕೆ ಈಗಾಗಲೇ ಸದ್ದಿಲ್ಲದೆ ಶೂಟಿಂಗ್‌ ಶುರುವಾಗಿದೆ. ಜತೆಗೆ ಆ ಶೂಟಿಂಗ್‌ನ ಕೆಲ ತುಣುಕುಗಳೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಈ ನಡುವೆ ನಟ ಯಶ್‌ ಈ ಸಿನಿಮಾಕ್ಕೆ ನಿರ್ಮಾಪಕರಾಗಿಯೂ ಪಾಲುದಾರರಾಗಲಿದ್ದಾರೆ ಎಂಬು ವಿಚಾರವೂ ಅಧಿಕೃತವಾಗಿತ್ತು. ಹೀಗೆ ಒಂದಿಲ್ಲೊಂದು ವಿಚಾರಗಳ ಮೂಲಕ ರಾಮಾಯಣ ಸಿನಿಮಾ ಸುದ್ದಿಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ರಾಮನಾಗಿ ರಣಬೀರ್‌ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿರುವುದು ಈಗಾಗಲೇ ಬಹುತೇಕ ಅಧಿಕೃತವಾಗಿದೆ. ರಾವಣ ಪಾತ್ರದಲ್ಲಿ ಯಶ್‌ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಆ ಸುದ್ದಿ ಮಾತ್ರ ಪಕ್ಕಾ ಆಗಿಲ್ಲ. ನಿರ್ಮಾಪಕರಾಗಿ ಮಾತ್ರ ಯಶ್‌ ಕಾಣಿಸಿಕೊಳ್ಳಲಿದ್ದಾರಾ? ಅಥವಾ ಮುಂದಿನ ದಿನಗಳಲ್ಲಿ ಈ ಬಗ್ಗೆ ಬಿಗ್‌ ಅನೌನ್ಸ್‌ಮೆಂಟ್‌ ಮಾಡುವ ಸಾಧ್ಯತೆ ಇದೆಯೇ? ಎಂಬುದನ್ನು ಕಾದು ನೋಡಬೇಕು. ಈ ನಡುವೆ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ವಿಎಫ್‌ಎಕ್ಸ್‌ ಬಳಕೆ ಬೇಡ ಎಂದೂ ಹೇಳಿದ್ದಾರಂತೆ ರಣಬೀರ್‌ ಕಪೂರ್.‌

ರಣಬೀರ್‌ ಕಪೂರ್‌ ಕೇವಲ ನಟ ಮಾತ್ರವಲ್ಲ. ಪಾತ್ರ ಬೇಡುವ ರೀತಿ ದೇಹವನ್ನು ಹುರಿಗೊಳಿಸುವ ತಾಕತ್ತು ಅವರಲ್ಲಿದೆ. ಈಗಾಗಲೇ ತಮ್ಮ ಸಿನಿಮಾಗಳಿಗಾಗಿ ಬಾಡಿ ಟಾನ್ಸ್‌ಫರ್ಮೇಷನ್‌ ಮಾಡಿಕೊಂಡಿದ್ದಾರವರು. ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಅನಿಮಲ್‌ ಸಿನಿಮಾಕ್ಕೆ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಈಗ ರಾಮಾಯಣ ಸಿನಿಮಾಕ್ಕೂ ದೇಹ ತೂಕ ಕಡಿಮೆ ಮಾಡಿಕೊಂಡು, ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಜತೆಗೆ ಚಿತ್ರದ ನಿರ್ದೇಶಕರ ಬಳಿಯೂ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಗ್ರಾಫಿಕ್ಸ್‌ ಬೇಡವೇ ಬೇಡ..

ರಣಬೀರ್‌ ಕಪೂರ್‌ ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಪಾತ್ರ ಬೇಡುವ ಎಲ್ಲವನ್ನು ನೀಡುವುದಕ್ಕೆ ಅವರು ಸಿದ್ಧರಿದ್ದಾರಂತೆ. ಆದರೆ, ಯಾವುದೇ ಕಾರಣಕ್ಕೂ ಮುಖ ಮತ್ತು ದೇಹಕ್ಕೆ ಯಾವುದೇ VFX ಮತ್ತು CGI ಬಳಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರಂತೆ. ರಾಮಾಯಣ ಸಿನಿಮಾದ ಪಾತ್ರಕ್ಕಾಗಿ ಯಂಗ್‌ ಆಗಿ ಕಾಣುವ ಸಲುವಾಗಿ ಗ್ರಾಫಿಕ್ಸ್‌ ಬಳಕೆ ಮಾಡಲೇಬೇಕು. ಆದರೆ, ಆ ರೀತಿಯ ಲುಕ್‌ ಸಲುವಾಗಿ ನಾನೇ ನನ್ನ ದೇಹವನ್ನು ರೆಡಿ ಮಾಡಿಕೊಳ್ಳುತ್ತೇನೆ ಎಂದೂ ಅವರು ಹೇಳಿದ್ದಾರಂತೆ.

ರಾಮನವಮಿಗೆ ರಾಮಾಯಣ ಘೋಷಣೆ

ರಾಮನವಮಿಗೆ ಇನ್ನೇನು ಮೂರು ದಿನವಷ್ಟೇ ಬಾಕಿ ಇದೆ. ಏ. 17ರಂದು ರಾಮನವಮಿ. ಈ ನಿಮಿತ್ತ ಬಾಲಿವುಡ್‌ನ ರಾಮಾಯಣ ಸಿನಿಮಾ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ. ನಮಿತಾ ಮಲ್ಹೋತ್ರಾ ಅವರ ಪ್ರೈಂ ಫೋಕಸ್‌ ಸ್ಟುಡಿಯೋಸ್‌, ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಮತ್ತು ನಿತೇಶ್‌ ತೊವಾರಿ ಒಟ್ಟಿಗೆ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, 2025ರ ದೀಪಾವಳಿಗೆ ಈ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

IPL_Entry_Point