ಕನ್ನಡ ಸುದ್ದಿ  /  Entertainment  /  Bollywood News Randeep Hooda Starrer Web Series Inspector Avinash Will Be Stream In Jio Cinemas From 18th May 2023 Rsm

Inspector Avinash: ಜಿಯೋ ಸಿನಿಮಾದಲ್ಲಿ ಸ್ಟ್ರೀಮ್‌ ಆಗಲಿದೆ ರಣದೀಪ್‌ ಹೂಡಾ ನಟನೆಯ ನೈಜ ಘಟನೆ ಆಧಾರಿತ ವೆಬ್‌ ಸರಣಿ ಇನ್‌ಸ್ಟೆಕ್ಟರ್ ಅವಿನಾಶ್

ಮಾಫಿಯಾ ಮತ್ತು ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆಯ ಜಾಲವನ್ನು, ಧೈರ್ಯ ಮತ್ತು ಪ್ರಾಮಾಣಿಕ ಪೊಲೀಸ್‌ ಅಧಿಕಾರಿ, ಅವಿನಾಶ್ ಮಿಶ್ರ ತನ್ನ ತಂಡದೊಂದಿಗೆ ಎದುರಿಸಿ ಹೋರಾಡುವ ಕಥೆಯನ್ನು ಈ ವೆಬ್‌ ಸೀರೀಸ್‌ನಲ್ಲಿ ತೋರಿಸಲಾಗಿದೆ.

ರಣದೀಪ್‌ ಹೂಡಾ ನಟನೆಯ ಇನ್‌ಸ್ಪೆಕ್ಟರ್‌ ಅವಿನಾಶ್
ರಣದೀಪ್‌ ಹೂಡಾ ನಟನೆಯ ಇನ್‌ಸ್ಪೆಕ್ಟರ್‌ ಅವಿನಾಶ್

ಭಾರತದಲ್ಲಿ ಉತ್ತಮ ಹೆಸರು ಮಾಡಿರುವ ಓಟಿಟಿ ವೇದಿಕೆಗಳಲ್ಲಿ ಜಿಯೋ ಸಿನಿಮಾ ಕೂಡಾ ಒಂದು. ವೈವಿಧ್ಯಮಯ ಷೋಗಳ ಖಜಾನೆಗೆ ಇದೀಗ ಹೊಸದೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಬ್ಲಾಕ್‌ ಬ್ಲಸ್ಟರ್‍‌ 'ವಿಕ್ರಮ್‌ ವೇದ' ಸಿನಿಮಾ ಅದ್ದೂರಿ ಪ್ರಿಮಿಯರ್‍‌ ನಂತರ, ಜಿಯೋ ಸಿನಿಮಾ ಈಗ ಥ್ರಿಲ್ಲಿಂಗ್ ಆಕ್ಷನ್‌ ಡ್ರಾಮಾ 'ಇನ್‌ಸ್ಟೆಕ್ಟರ್ ಅವಿನಾಶ್‌' ವೆಬ್‌ ಸೀರೀಸ್‌ ಪ್ರೀಮಿಯರ್‍‌ಗೆ ಸಜ್ಜಾಗಿದೆ.

ಪ್ರತಿಭಾವಂತ ನಟ ರಣದೀಪ್ ಹೂಡಾ ಈ ಚಿತ್ರದಲ್ಲಿ ಇನ್‌ಸ್ಟೆಕ್ಟರ್ ಅವಿನಾಶ್‌ ಆಗಿ ನಟಿಸಿದ್ದಾರೆ. ಇದು ನೈಜ ಘಟನೆ ಆಧಾರಿತ ಸೀರೀಸ್‌ ಆಗಿದ್ದು ಪೊಲೀಸ್ ಅಧಿಕಾರಿ ಅವಿನಾಶ್ ಮಿಶ್ರಾ ಅವರು ಅಪರಾಧ, ಅಪರಾಧಿಗಳ ವಿರುದ್ಧ ನಡೆಸಿದ ಹೋರಾಟದಿಂದ ಪ್ರೇರಿತವಾಗಿ ತಯಾರಾಗಿರುವ ವೆಬ್‌ ಸರಣಿ. ಈ ಚಿತ್ರಕ್ಕೆ ನೀರಜ್‌ ಪಾಠಕ್‌ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಊರ್ವಶಿ ರೌಟೇಲ, ಅಮಿತ್ ಸೈಲ್, ಅಭಿಮನ್ಯು ಸಿಂಘ್, ಶಲಿನ್ ಬನೋಟ್‌, ಫ್ರೆಡ್ಡಿ ದಾರುವಾಲಾ, ರಾಹುಲ್‌ ಮಿತ್ರಾ ಮತ್ತು ಅಧ್ಯಾಯನ್ ಸುಮನ್ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸರಣಿಯನ್ನು ಜಿಯೋ ಸ್ಟುಡಿಯೋಸ್ ಮತ್ತು ಗೋಲ್ಡ್ ಮೌಂಟೇನ್ ಪಿಕ್ಚರ್ಸ್‌ ಜಂಟಿಯಾಗಿ ನಿರ್ಮಿಸಿದ್ದಾರೆ. ಉತ್ತರ ಪ್ರದೇಶದಲ್ಲಿ 90ರ ದಶಕದಲ್ಲಿ ಇದ್ದ ಪಾತಕ ಮತ್ತು ಭ್ರಷ್ಟಾಚಾರದ ಜಗತ್ತಿಗೆ ಈ ಸೀರೀಸ್‌ ನಿಮ್ಮನ್ನು ಕರೆದೊಯ್ಯಲಿದೆ. ಮಾಫಿಯಾ ಮತ್ತು ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆಯ ಜಾಲವನ್ನು, ಧೈರ್ಯ ಮತ್ತು ಪ್ರಾಮಾಣಿಕ ಪೊಲೀಸ್‌ ಅಧಿಕಾರಿ, ಅವಿನಾಶ್ ಮಿಶ್ರ ತನ್ನ ತಂಡದೊಂದಿಗೆ ಎದುರಿಸಿ ಹೋರಾಡುವ ಕಥೆಯನ್ನು ಈ ವೆಬ್‌ ಸೀರೀಸ್‌ನಲ್ಲಿ ತೋರಿಸಲಾಗಿದೆ.

''ನೈಜ ಬದುಕಿನ ಎಲೆ ಮರೆಯ ಹೀರೊಗಳ ಕಥೆಗಳು ಆಸಕ್ತಿ ಹುಟ್ಟಿಸುತ್ತವೆ. ಭಾರತದ ನೆಲದ ಕಥೆಗಳನ್ನು, ನಮ್ಮ ಜನರ ಹೋರಾಟ ಮತ್ತು ವಿಜಯಗಳನ್ನು ಚಿತ್ರಿಸುವ ಕಥೆಗಳನ್ನು ಹೇಳುವುದು ಬಹಳ ಮುಖ್ಯ. ಅಪರಾಧಗಳ ವಿರುದ್ಧ ಹೋರಾಡುವ, ಸತ್ಯದ ಪರ ನಿಲ್ಲುವ ಮಿಶ್ರಾ ಅವರ ಜೀವನದ ಕಥೆ ಆಧುನಿಕ ಕಾಲದ ರಾಬಿನ್‌ಹುಡ್‌ ಕಥೆಗಿಂತ ಏನೂ ಕಡಿಮೆ ಇಲ್ಲ. ಈ ವೆಬ್‌ ಸೀರೀಸ್‌ ಭಾಗವಾಗಿರುವುದಕ್ಕೆ ನನಗೆ ನಿಜಕ್ಕೂ ಹೆಮ್ಮ ಇದೆ. ಪೊಲೀಸ್‌ ಪಾತ್ರಗಳಲ್ಲಿ ನಟಿಸುವುದೆಂದರೆ ನನಗೆ ಬಹಳ ಇಷ್ಟ.ಈ ಪಾತ್ರದ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಲು ನಾನು ಅವಿನಾಶ್‌ ಅವರ ಜೊತೆಗೆ ಸಾಕಷ್ಟು ಸಮಯ ಕಳೆದಿದ್ದೇನೆ'' ಎಂದು ನಟ ರಣದೀಪ್‌ ಹುಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

ಜಿಯೋ ಸಿನಿಮಾ ವೈವಿಧ್ಯಮಯ ಕಥೆಗಳ ಮೂಲಕ ಎಲ್ಲರನ್ನೂ ತಲುಪುವ ಉದ್ದೇಶ ಹೊಂದಿದೆ. ಇನ್‌ಸ್ಪೆಕ್ಟರ್ ಅವಿನಾಶ್‌ ಅವರ ರಿಯಲ್‌ ಸ್ಟೋರಿ ಜಿಯೋ ಸಿನಿಮಾದಲ್ಲಿ ಮೇ 18 ರಂದು ಸ್ಟ್ರೀಮ್‌ ಆಗಲಿದೆ.

ವಯಕಾಮ್‌ 18 ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌

ವಯಕಾಮ್ 18 ಪ್ರೈವೇಟ್‌ ಲಿಮಿಟೆಡ್‌, ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮನರಂಜನಾ ಜಾಲವಾಗಿದ್ದು, ಮಲ್ಟಿ ಪ್ಲಾಟ್‌ಫಾರಂ, ಮಲ್ಟಿ ಜನರೇಷನ್‌ ಮತ್ತು ಮಲ್ಟಿ ಕಲ್ಚರಲ್‌ ಬ್ರ್ಯಾಂಡ್‌ಗಳ ಸಮೂಹವಾಗಿದೆ. ಬಾನುಲಿ, ಅಂತರ್ಜಾಲ, ಆನ್‌ ಗ್ರೌಂಡ್ಸ್‌, ಮರ್ಚಂಡೈಸ್‌ಗಳಂಥ ಸಂವಹನ ಮಾಧ್ಯಮಗಳ ಮೂಲಕ ಭಾರತದಲ್ಲಿ ಜನರ ಮನಸ್ಸನ್ನು ಮುಟ್ಟುವ ಉದ್ದೇಶ ಈ ಸಂಸ್ಥೆಗೆ ಇದೆ. ಮನರಂಜನೆ, ಸಿನಿಮಾಗಳು, ಕ್ರೀಡೆ, ಯುವ, ಸಂಗೀತ ಮತ್ತು ಮಕ್ಕಳು ವಿಭಾಗವನ್ನು ಪ್ರತಿನಿಧಿಸುವ 38 ವಾಹಿನಿಗಳ ಮೂಲಕ, ದೇಶಾದ್ಯಂತ ತನ್ನ ಗ್ರಾಹಕರಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಉಣಬಡಿಸುತ್ತಿದೆ. ಜಿಯೋ ಸಿನಿಮಾ, ವಯಕಾಮ್‌ 18ನ ಓಟಿಟಿ ಪ್ಲ್ಯಾಟ್‌ಫಾರಂ ಆಗಿದ್ದು, ಭಾರತದ ಮುಂಚೂಣಿಯಲ್ಲಿರುವ ಸ್ಟ್ರೀಮಿಂಗ್‌ ಸರ್ವೀಸ್‌ಗಳಲ್ಲಿ ಒಂದಾಗಿದೆ. ಅಲ್ಲದೆ ಕ್ರೀಡೆಯ ನೇರ ಪ್ರಸಾರದ ಜನಪ್ರಿಯ ತಾಣವಾಗಿದೆ. ವಯಕಾಮ್‌ 18 ಸ್ಟುಡಿಯೋಸ್‌ ಕಳೆದ 13 ವರ್ಷಗಳಿಂದ ಭಾರತದಲ್ಲಿ ಐಕಾನಿಕ್‌ ಹಿಂದಿ ಸಿನಿಮಾಗಳು ಮತ್ತು ವಿಭಿನ್ನವಾದ ಪ್ರಾದೇಶಿಕ ಸಿನಿಮಾಗಳನ್ನು ಯಶಸ್ವಿಯಾಗಿ ನೀಡುತ್ತಾ ಬಂದಿದೆ.

IPL_Entry_Point