ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್‌; ತನಗಿಂತ 10 ವರ್ಷ ಕಿರಿಯನನ್ನು ಪ್ರೀತಿಸಿ ಮದುವೆ ಆಗಿದ್ದ ರಂಗೀಲಾ ಸಿನಿಮಾ ನಟಿ-bollywood news rangeela actress urmila matondkar files for divorce from husband mohsin akhtar mir rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್‌; ತನಗಿಂತ 10 ವರ್ಷ ಕಿರಿಯನನ್ನು ಪ್ರೀತಿಸಿ ಮದುವೆ ಆಗಿದ್ದ ರಂಗೀಲಾ ಸಿನಿಮಾ ನಟಿ

ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್‌; ತನಗಿಂತ 10 ವರ್ಷ ಕಿರಿಯನನ್ನು ಪ್ರೀತಿಸಿ ಮದುವೆ ಆಗಿದ್ದ ರಂಗೀಲಾ ಸಿನಿಮಾ ನಟಿ

8 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ರಂಗೀಲಾ ನಟಿ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿರುವ ವಿಚಾರ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. 2018 ರಲ್ಲಿ ಊರ್ಮಿಳಾ , ಮೋಸಿನ್ ಅಖ್ತರ್ ಮಿರ್ ಕೈ ಹಿಡಿದಿದ್ದರು.

ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್‌; ತನಗಿಂತ 10 ವರ್ಷ ಕಿರಿಯನನ್ನು ಪ್ರೀತಿಸಿ ಮದುವೆ ಆಗಿದ್ದ ರಂಗೀಲಾ ಸಿನಿಮಾ ನಟಿ
ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್‌; ತನಗಿಂತ 10 ವರ್ಷ ಕಿರಿಯನನ್ನು ಪ್ರೀತಿಸಿ ಮದುವೆ ಆಗಿದ್ದ ರಂಗೀಲಾ ಸಿನಿಮಾ ನಟಿ

ಚಿತ್ರರಂಗದಲ್ಲಿ ಈಗ ಡಿವೋರ್ಸ್‌ ಪ್ರಕರಣ ಹೆಚ್ಚುತ್ತಲೇ ಇದೆ. ಮೊದಲೆಲ್ಲಾ ಯಾವುದಾದರೂ ಜೋಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಅದು ಶಾಕಿಂಗ್‌ ನ್ಯೂಸ್‌ ಎನಿಸುತ್ತಿತ್ತು. ಅದರೆ ಈಗ ವಿಷಯ ಕೇಳಿ ಸುಮ್ಮನಾಗುವಷ್ಟು ಸಾಮಾನ್ಯ ಎನಿಸಿಬಿಟ್ಟಿದೆ. ರಂಗೀಲಾ ನಟಿ, ಊರ್ಮಿಳಾ ಮಾಂತೋಡ್ಕರ್‌ ಕೂಡಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಊರ್ಮಿಳಾ ಮಾತೋಂಡ್ಕರ್‌

ಊರ್ಮಿಳಾ ಮಾತೋಂಡ್ಕರ್ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವರು. 1977ರಲ್ಲಿ ತೆರೆ ಕಂಡ ಕರ್ಮ್‌ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದವರು. 1989ರಲ್ಲಿ ಚಾಣಕ್ಯನ ಎಂಬ ಮಲಯಾಳಂ ಸಿನಿಮಾ ಮೂಲಕ ನಾಯಕಿಯಾಗಿ ನಟಿಸಲು ಆರಂಭಿಸಿದರು. ನಂತರ ರಾಮ್‌ ಗೋಪಾಲ್‌ ವರ್ಮಾ ಅವರ ಅಂತಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಕ್ಕೂ ಮುನ್ನ ಹಾಗೂ ನಂತರ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದರೂ ಆಕೆಗೆ ಹೆಸರು ತಂದುಕೊಟ್ಟದ್ದು 1994 ರಲ್ಲಿ ತೆರೆಕಂಡ ರಂಗೀಲಾ ಸಿನಿಮಾ. ಆ ಚಿತ್ರದ ಹಾಡುಗಳು, ಊರ್ಮಿಳಾ ಪಾತ್ರ, ಕಾಸ್ಟ್ಯೂಮ್‌ ಹುಡುಗರಿಗೆ ಹುಚ್ಚೆಬ್ಬಿಸಿತ್ತು. ಅಂದಿನಿಂದ ಊರ್ಮಿಳಾ ಬಾಲಿವುಡ್‌ನಲ್ಲಿ ಸಾಕಷ್ಟು ಅವಕಾಶಗಳನ್ನು ಬಾಚಿಕೊಂಡರು.

2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ

2018 ರಿಂದ ಊರ್ಮಿಳಾ ಚಿತ್ರರಂಗದಿಂದ ದೂರ ಉಳಿದಿದ್ದರು. ಬ್ಲಾಕ್‌ಮೇಲ್‌ ಸಿನಿಮಾದ ಸಣ್ಣ ಪಾತ್ರದಲ್ಲಿ ನಟಿಸಿದ ನಂತರ ಅವರು ಬೇರೆ ಸಿನಿಮಾಗಳಲ್ಲಿ ಕಾಣಿಸಕೊಂಡಿರಲಿಲ್ಲ. 4 ಫೆಬ್ರವರಿ 2016 ರಂದು ಊರ್ಮಿಳಾ ತಮಗಿಂತ ಕಿರಿಯ ವ್ಯಕ್ತಿಯನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಊರ್ಮಿಳಾ ಪತಿಯ ಹೆಸರು ಮೋಸಿನ್ ಅಖ್ತರ್ ಮಿರ್. ಆಕೆಗೆ ಈಗ 50 ವರ್ಷ ಮತ್ತು ಮೋಸಿನ್‌ಗೆ 40 ವರ್ಷ ವಯಸ್ಸು. ಎಲ್ಲವೂ ಸರಿ ಇದೆ ಎಂದುಕೊಳ್ಳುವಷ್ಟರಲ್ಲಿ ಊರ್ಮಿಳಾ ಈಗ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿರುವ ವಿಚಾರ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಹಿಂದೆ ಊರ್ಮಿಳಾ ಮಾತೋಂಡ್ಕರ್ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ಮುಂಬೈ ಮೂಲಗಳು ತಿಳಿಸಿವೆ. ಪರಸ್ಪರ ಒಪ್ಪಿಗೆ ಇಲ್ಲದ ಕಾರಣ ಸ್ವತಃ ಊರ್ಮಿಳಾ ಪತಿಯಿಂದ ದೂರಾಗಲು ಡಿವೋರ್ಸ್‌ ಕೇಳುತ್ತಿದ್ದಾರಂತೆ.

10 ವರ್ಷ ಕಿರಿಯನನ್ನು ಪ್ರೀತಿ ಮದುವೆ ಆಗಿದ್ದ ರಂಗೀಲಾ ಹಾಟ್‌ ಬ್ಯೂಟಿ

ಮೋಸಿನ್ ಅಖ್ತರ್ ಮಿರ್ ಕಾಶ್ಮೀರಿ ಉದ್ಯಮಿ. ಮದುವೆ ಸಮಯದಲ್ಲಿ ಈ ಜೋಡಿ ನಡುವಿನ ವಯಸ್ಸಿನ ಅಂತರ ಬಹಳ ಚರ್ಚೆಯಾಗಿತ್ತು. ಬಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಸಂಬಂಧಿಕರ ವಿವಾಹದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮೋಸಿನ್ ಅಖ್ತರ್ ಮಿರ್ ಮೊದಲ ಬಾರಿ ಭೇಟಿ ಆದರು. ನಂತರ ಪ್ರೀತಿಯ ಬಲೆಯಲ್ಲಿ ಬಿದ್ದ ಈ ಜೋಡಿ ಎರಡು ವರ್ಷಗಳ ರಿಲೇಶನ್‌ ಶಿಪ್‌ ನಂತರ 2018 ರಲ್ಲಿ ಅಮೃತ್ ಸರ್ ಗೋಲ್ಡನ್‌ ಟೆಂಪಲ್‌ನಲ್ಲಿ ಕೆಲವೇ ಕೆಲವು ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ, ನೂರು ಕಾಲ ಜೊತೆಯಾಗಿ ಬಾಳಿ ಎಂದು ವೀಕ್ಷಕರು ಮಾಡಿದ್ದ ಹಾರೈಕೆ ಈಗ ಸುಳ್ಳಾಗಿದೆ.

mysore-dasara_Entry_Point