ನಟಿ ನತಾಶಾ ಸ್ಟಾಂಕೋವಿಕ್- ಹಾರ್ದಿಕ್‌ ಪಾಂಡ್ಯ ಸಂಬಂಧದಲ್ಲಿ ಬಿರುಕು? ಹೆಸರು ಬದಲಾವಣೆ, ಐಪಿಎಲ್‌ಗೆ ಗೈರು ಸೇರಿದಂತೆ ಇಲ್ಲಿದೆ ಹಲವು ಸಾಕ್ಷಿ
ಕನ್ನಡ ಸುದ್ದಿ  /  ಮನರಂಜನೆ  /  ನಟಿ ನತಾಶಾ ಸ್ಟಾಂಕೋವಿಕ್- ಹಾರ್ದಿಕ್‌ ಪಾಂಡ್ಯ ಸಂಬಂಧದಲ್ಲಿ ಬಿರುಕು? ಹೆಸರು ಬದಲಾವಣೆ, ಐಪಿಎಲ್‌ಗೆ ಗೈರು ಸೇರಿದಂತೆ ಇಲ್ಲಿದೆ ಹಲವು ಸಾಕ್ಷಿ

ನಟಿ ನತಾಶಾ ಸ್ಟಾಂಕೋವಿಕ್- ಹಾರ್ದಿಕ್‌ ಪಾಂಡ್ಯ ಸಂಬಂಧದಲ್ಲಿ ಬಿರುಕು? ಹೆಸರು ಬದಲಾವಣೆ, ಐಪಿಎಲ್‌ಗೆ ಗೈರು ಸೇರಿದಂತೆ ಇಲ್ಲಿದೆ ಹಲವು ಸಾಕ್ಷಿ

Natasa Stankovic, Hardik Pandya Relationship: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರನ್ನು ವಿವಾಹದ ಬಳಿಕ ಬಾಲಿವುಡ್‌ ಚಿತ್ರರಂಗ ತೊರೆದ ಸರ್ಬಿಯಾದ ರೂಪದರ್ಶಿ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಇದೀಗ ತಮ್ಮ ಪತಿಯಿಂದ ಬೇರ್ಪಟ್ಟಿದ್ದಾರೆಯೇ?‌ ರೆಡ್ಡಿಟ್‌ನಲ್ಲಿ ಇದೇ ವಿಷಯದ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ನಟಿ ನತಾಶಾ ಸ್ಟಾಂಕೋವಿಕ್- ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಸಂಬಂಧದಲ್ಲಿ ಬಿರುಕು?
ನಟಿ ನತಾಶಾ ಸ್ಟಾಂಕೋವಿಕ್- ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಸಂಬಂಧದಲ್ಲಿ ಬಿರುಕು?

ಬೆಂಗಳೂರು: ನಟಿ ನತಾಶಾ ಸ್ಟಾಂಕೋವಿಕ್- ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ 2020ರ ಮೇ 31ರಂದು ವಿವಾಹವಾಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅದೇ ವರ್ಷ ಜುಲೈ 30ರಂದು ಘೋಷಿಸಿದ್ದರು. ಕಳಪೆ ಐಪಿಎಲ್‌ ಪ್ರದರ್ಶನಕ್ಕಾಗಿ 2024ರ ಮಾರ್ಚ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಅವರನ್ನು ಸೋಷಿಯಲ್‌ ಮೀಡಿಯಾದಲ್ಲಿ ಟೀಕಿಸಲಾಗಿತ್ತು. ಇದೀಗ ರೆಡ್ಡಿಟ್‌ನಲ್ಲಿ ನಟಿ ನತಾಶಾ ಸ್ಟಾಂಕೋವಿಕ್- ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಬೇರ್ಪಟ್ಟಿದ್ದಾರೆ ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ.

ಹಲವು ಸಾಕ್ಷಿ ನೀಡಿದ ನೆಟ್ಟಿಗರು

ಈ ಹಿಂದೆ ನತಾಶಾ ಅವರು ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಾರ್ದಿಕ್‌ ಪಾಂಡೆ ಅವರನ್ನು ಟ್ಯಾಗ್‌ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಇವರಿಬ್ಬರು ತಮ್ಮ ಸ್ಟೋರಿಗಳನ್ನು ಪರಸ್ಪರ ಹಂಚಿಕೊಳ್ಳುತ್ತಿಲ್ಲ. ಈ ಹಿಂದೆ ನತಾಶಾ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಹೆಸರನ್ನು ಬಳಸುತ್ತಿದ್ದರು. ಆದರೆ, ಈಗ ಹಾರ್ದಿಕ್‌ ಪಾಂಡ್ಯ ಹೆಸರನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

"ಮಾರ್ಚ್‌ 4ರಂದು ನತಾಶಾ ಹುಟ್ಟುಹಬ್ಬ. ಅಂದು ಹಾರ್ದಿಕ್‌ ಯಾವುದೇ ಶುಭಾಶಯದ ಪೋಸ್ಟ್‌ ಮಾಡಿಲ್ಲ. ಮಗ ಆಗಸ್ತ್ಯ ಜತೆಗೆ ಇದ್ದ ಪೋಸ್ಟ್‌ ಹೊರತುಪಡಿಸಿ ಹಾರ್ದಿಕ್‌ಗೆ ಸಂಬಂಧಪಟ್ಟ ಎಲ್ಲಾ ಪೋಸ್ಟ್‌ಗಳನ್ನು ನತಾಶ ತೆಗೆದುಹಾಕಿದ್ದಾರೆ. ಅದಲ್ಲದೆ, ನತಾಶ ಅವರು ಐಪಿಎಲ್‌ ಪಂದ್ಯಗಳಲ್ಲೂ ಕಾಣಿಸಿಲ್ಲ. ಐಪಿಎಲ್‌ ಬಗ್ಗೆ ಯಾವುದೇ ಸ್ಟೋರಿಗಳನ್ನು ಪೋಸ್ಟ್‌ ಮಾಡುತ್ತಿಲ್ಲ. ಇವರಿಬ್ಬರ ನಡುವೆ ಏನೋ ನಡೆದಿದೆ. ಬಹುಶಃ ಇವರಿಬ್ಬರು ದೂರವಾಗಿರಬಹುದು" ಎಂದು ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ನತಾಶಾ ಸ್ಟಾಂಕೋವಿಕ್- ಹಾರ್ದಿಕ್‌ ಪಾಂಡ್ಯ ಸಂಬಂಧ

ರೆಡ್ಡಿಟ್‌ನ ಈ ಊಹಾಪೋಹಗಳಿಗೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. "ಈ ರೀತಿಯಾಗಿರುವುದು ಆಶ್ವರ್ಯವೇನಿಲ್ಲ" ಎಂದು ಒಬ್ಬರು ಬರೆದಿದ್ದಾರೆ. "ಹಾರ್ದಿಕ್‌ ಪಾಂಡ್ಯ ನನಗೆ ಮೋಸ ಮಾಡಿದ್ದಾರೆ ಎಂದು ಗಿಲ್‌ ಹೇಳಿಕೆಗೆ ಯಾರೋ ಕಾಮೆಂಟ್‌ ಮಾಡಿದ್ದಾರೆ. ಅವನು ಲಂಡನ್‌ನಲ್ಲಿ ಬೇರೊಬ್ಬ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾನೆ" ಎಂದು ರೆಡ್ಡಿಟ್‌ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಈ ದಂಪತಿಯ ಸಂಬಂಧದ ಸದ್ಯದ ಸ್ಥಿತಿ ಕುರಿತು ಊಹಿಸಲು ಇನ್ನೂ ಕಾಲ ಬಂದಿಲ್ಲ. ಇಷ್ಟು ಬೇಗ ಇವರಿಬ್ಬರು ದೂರವಾಗಿದ್ದಾರೆ ಎಂದು ಹೇಳುವುದು ಕಷ್ಟ ಎಂದು ಒಬ್ಬರು ಹೇಳಿದ್ದಾರೆ. "ಆಕೆ ಹಾರ್ದಿಕ್‌ನ ಎಲ್ಲಾ ಪೋಸ್ಟ್‌ ಅಳಿಸಿ ಹಾಕಿಲ್ಲ. ಐಪಿಎಲ್‌ಗೆ ಸಂಬಂಧಪಟ್ಟಂತೆ ಈಕೆಯನ್ನು ಟ್ರೋಲ್‌ ಮಾಡುವುದಕ್ಕೂ ಇದಕ್ಕೂ ಸಂಬಂಧವಿಲ್ಲ" ಎಂದು ಒಬ್ಬರು ಹೇಳಿದ್ದಾರೆ.

"ಐಪಿಎಲ್ ಟ್ರೋಲಿಂಗ್ ಮತ್ತು ದ್ವೇಷದಿಂದಾಗಿ ಹಾರ್ದಿಕ್ ಅವರ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಬಳಸದೆ ಇರಬಹುದು. ಈ ದೇಶದ ಜನರು ಕ್ರಿಕೆಟಿಗರ ಹೆಂಡಿಯರನ್ನು ಅವಮಾನಿಸಲು ಅಥವಾ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೆ ಧೋನಿಯ ಐದು ವರ್ಷದ ಮಗಳನ್ನೂ ಬಿಟ್ಟಿರಲಿಲ್ಲ. ಇದೇ ಕಾರಣಕ್ಕೆ ಆಕೆ ಜಾಗೃತವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಈ ರೀತಿ ಮಾಡಿರಬಹುದು" ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಟ್ರೋಲಿಂಗ್‌ಗೆ ಬೆದರಿದ್ರ ನತಾಶಾ?

ಇತ್ತೀಚೆಗೆ, ಸರ್ಬಿಯಾದ ರೂಪದರ್ಶಿ ಮತ್ತು ನಟಿ ನತಾಶಾ ಅವರನ್ನು ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯರ ಕಳಪೆ ಪ್ರದರ್ಶನಕ್ಕಾಗಿ ಟ್ರೋಲ್ ಮಾಡಲಾಗಿತ್ತು. ಈಕೆಯ ಇನ್‌ಸ್ಟಾಗ್ರಾಂನ ಪೋಸ್ಟ್‌ಗಳಿಗೆ ಕೆಟ್ಟದ್ದಾಗಿ ಕಾಮೆಂಟ್‌ ಮಾಡಲಾಗಿತ್ತು. ಇದೇ ಕಾರಣಕ್ಕೆ ಹಾರ್ದಿಕ್‌ ಪಾಂಡ್ಯರ ಫೋಟೋಗಳನ್ನು ಇವರು ರಿಮೂವ್‌ ಮಾಡಿರಬಹುದು ಎಂಬ ಅಭಿಪ್ರಾಯವೂ ಇದೆ. ಸೋಷಿಯಲ್‌ ಮೀಡಿಯಾದ ದ್ವೇಷದ ಕುರಿತ ಅಸಹನೆಯಿಂದ ಈ ರೀತಿ ಮಾಡಿರಬಹುದು ಎನ್ನಲಾಗುತ್ತಿದೆ.

Whats_app_banner