Sushmita Sen: ರೋಹ್ಮನ್ ಶಾಲ್ ಜೊತೆಗಿನ ಸಂಬಂಧದ ಬಗ್ಗೆ ಸುಶ್ಮಿತಾ ಸೇನ್‌ ಅಫಿಷಿಯಲ್ ಪ್ರತಿಕ್ರಿಯೆ ಹೀಗಿತ್ತು
ಕನ್ನಡ ಸುದ್ದಿ  /  ಮನರಂಜನೆ  /  Sushmita Sen: ರೋಹ್ಮನ್ ಶಾಲ್ ಜೊತೆಗಿನ ಸಂಬಂಧದ ಬಗ್ಗೆ ಸುಶ್ಮಿತಾ ಸೇನ್‌ ಅಫಿಷಿಯಲ್ ಪ್ರತಿಕ್ರಿಯೆ ಹೀಗಿತ್ತು

Sushmita Sen: ರೋಹ್ಮನ್ ಶಾಲ್ ಜೊತೆಗಿನ ಸಂಬಂಧದ ಬಗ್ಗೆ ಸುಶ್ಮಿತಾ ಸೇನ್‌ ಅಫಿಷಿಯಲ್ ಪ್ರತಿಕ್ರಿಯೆ ಹೀಗಿತ್ತು

Sushmita Sen and Rohman Shawl Relationship: ರೋಹ್ಮನ್ ಶಾಲ್ ಮತ್ತು ಸುಶ್ಮಿತಾ ಸೇನ್ 2018-2021 ನಡುವೆ ಡೇಟಿಂಗ್ ಮಾಡುತ್ತಿದ್ದರು. ಪರಸ್ಪರ ಬೇರ್ಪಡುವ ಕುರಿತು ಇವರಿಬ್ಬರು ಅಧಿಕೃತವಾಗಿ ಇನ್‌ಸ್ಟಾಗ್ರಾಂನಲ್ಲಿ ಘೋಷಿಸಿದ್ದರು.

ರೋಹ್ಮನ್ ಶಾಲ್ ಮತ್ತು ಸುಶ್ಮಿತಾ ಸೇನ್
ರೋಹ್ಮನ್ ಶಾಲ್ ಮತ್ತು ಸುಶ್ಮಿತಾ ಸೇನ್

Sushmita Sen and Rohman Shawl Relationship: ನಟಿ ಸುಶ್ಮಿತಾ ಸೇನ್ ಮತ್ತು ರೂಪದರ್ಶಿ ರೋಹ್ಮನ್ ಶಾಲ್ ಅವರ ಸಂಬಂಧದ ಕುರಿತು ಅನೇಕ ವರ್ಷಗಳಿಂದ ಎಲ್ಲರೂ ಕುತೂಹಲ ಹೊಂದಿದ್ದಾರೆ. ಇವರಿಬ್ಬರ ನಡುವೆ ಈಗಲೂ ಸಂಬಂಧ ಇದೆಯಾ? ಇತ್ಯಾದಿ ಪ್ರಶ್ನೆಗಳು ಇವೆ. ಇತ್ತೀಚೆಗೆ ರೋಹ್ಮನ್‌ ಶಾಲ್‌ ಅವರು ಇನ್‌ಸ್ಟಾಂಟ್‌ ಬಾಲಿವುಡ್‌ ತಾಣಕ್ಕೆ ನೀಡಿದ ಸಂದರ್ಶನದಲ್ಲಿ "ತಮ್ಮಿಬ್ಬರ ಸಂಬಂಧದ" ಕುರಿತು ಮಾತನಾಡಿದ್ದಾರೆ. ನಾನು ಹಲವು ವರ್ಷಗಳಿಂದ ಆಕೆಯ ಜತೆಗಿರುವೆ. ಇದು ನಮ್ಮ ಪ್ರೀತಿಯ ಬಂಧ ಎಂದು ಹೇಳಿದ್ದರು.

ಆದರೆ, ಇದಕ್ಕೂ ಮೊದಲು ಸುಶ್ಮಿತಾ ಸೇನ್‌ ಹೇಳಿದ್ದೇ ಬೇರೆ. ಇತ್ತೀಚೆಗೆ ನಾನು ಸಿಂಗಲ್‌, ಒಂಟಿಯಾಗಿದ್ದೇನೆ ಎಂದು ಸುಶ್ಮಿತಾ ಹೇಳಿದ್ದರು. ಇದಾದ ಬಳಿಕ ರೋಹ್ಮನ್‌ ನಾವು ಕಳೆದ ಆರು ವರ್ಷಗಳಿಂದ ಜತೆಯಾಗಿದ್ದೇವೆ. ಇವರಿಬ್ಬರ ಭಿನ್ನ ಹೇಳಿಕೆಯು ಇವರಿಬ್ಬರು ಈಗಿನ ಸಂಬಂಧದ ಕುರಿತು ಊಹಾಪೋಹಗಳಿಗೆ ಕಾರಣವಾಗಿದೆ.

ಇತ್ತೀಚೆಗೆ ನಡೆದ ಪ್ರಶಸ್ತಿ ಪುರಸ್ಕಾರ ಸಮಾರಂಭ ಕಾರ್ಯಕ್ರಮವೊಂದರಲ್ಲಿ ರೋಹ್ಮನ್‌ ಮತ್ತು ಸುಶ್ಮಿತಾ ಜತೆಯಾಗಿ ಇದ್ದರು. ಸುಶ್ಮಿತಾ ಜತೆಗೆ ಇರುವ ಸಂಬಂಧ ಕುರಿತಾದ ಪ್ರಶ್ನೆಗೆ ರೋಹ್ಮನ್‌ “ವೋಹ್ ತೋ ಸಾಥ್ ಮೇ ಹೈ. ಇಸ್ಮೆ ನಯಾ ಕ್ಯಾ” ಎಂದು ಹೇಳಿದ್ದರು.

ಇನ್ನೊಂದೆಡೆ ಸುಶ್ಮಿತಾ ಸೇನ್‌ ಇತ್ತೀಚೆಗೆ ರಿಯಾ ಚಕ್ರವರ್ತಿಯ ಪಾಡ್‌ಕಾಸ್ಟ್ ‘ಚಾಪ್ಟರ್ 2’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಪಾಡ್ಕಾಸ್ಟ್ ಸಮಯದಲ್ಲಿ, ಸುಶ್ಮಿತಾ ಅವರು ಒಂಟಿಯಾಗಿದ್ದೇನೆ ಎಂದು ಹೇಳಿದ್ದರು.

"ನನ್ನ ಜೀವನದಲ್ಲಿ ಯಾರೂ ಇಲ್ಲ. ನಾನು ಸ್ವಲ್ಪ ಸಮಯದಿಂದ ಒಂಟಿಯಾಗಿದ್ದೇನೆ. ಅದ್ಭುತ ಜನರು ನನ್ನ ಸ್ನೇಹಿತರಾಗಿದ್ದಾರೆ. ಅವರೆಲ್ಲರೂ 'ನೋಡಿ, ನಾನು ಕಾರನ್ನು ಹೊರತೆಗೆಯುತ್ತಿದ್ದೇನೆ, ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಿ' ಎಂದು ನಾನು ಹೇಳುವ ಮಾತಿಗಾಗಿ, ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ನಾವು ಗೋವಾಕ್ಕೆ ಹೋಗುತ್ತಿದ್ದೇವೆ' ಎಂದು ಅವರು ಹೇಳಿದರು.

ನಿಮಗೆ ಯಾರ ಬಗ್ಗೆಯಾದರೂ ಆಸಕ್ತಿ ಇದೆಯೇ ಎಂದು ನಿರೂಪಕರು ಕೇಳಿದಾಗ, ಸುಶ್ಮಿತಾ, "ಈ ಸಮಯದಲ್ಲಿ ನನಗೆ ಯಾರ ಬಗ್ಗೆಯೂ ಆಸಕ್ತಿ ಇಲ್ಲ. ನಾನು ಹಲವು ವರ್ಷಗಳಿಂದ ಸಂಬಂಧದಲ್ಲಿದ್ದ ಕಾರಣ ವಿರಾಮ ತೆಗೆದುಕೊಳ್ಳುವುದು ಒಳಿತು" ಎಂದು ಹೇಳಿದ್ದಾರೆ.

ಸುಶ್ಮಿತಾ ಮತ್ತು ರೋಹ್ಮನ್ ಸಂಬಂಧದ ಬಗ್ಗೆ

ಸುಶ್ಮಿತಾ ಮತ್ತು ರೋಹ್ಮನ್ ಹಲವು ವರ್ಷ ರಿಲೇಷನ್‌ಶಿಪ್‌ನಲ್ಲಿದ್ದರು. ನಂತರ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕಪ್‌ ಆಗುವ ವಿಷಯ ಘೋಷಿಸಿದ್ದರು. ಹೀಗಿದ್ದರೂ ಕಳೆದ ಎರಡು ವರ್ಷಗಳಲ್ಲಿ ಇವರಿಬ್ಬರು ಒಟ್ಟಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. "ನಾವು ಸ್ನೇಹಿತರಾಗಿ ಹೊಸ ಜೀವನ ಆರಂಭಿಸಿದ್ದೇವೆ. ಸ್ನೇಹಿತರಾಗಿ ಉಳಿದಿದ್ದೇವೆ" ಎಂದು ಆ ಸಂದರ್ಭದಲ್ಲಿ ಸುಶ್ಮಿತಾ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು.

ಸುಶ್ಮಿತಾ ಸೇನ್‌ ಬಗ್ಗೆ

ಮಿಸ್‌ ಯೂನಿವರ್ಸ್‌ 1994 ಗೆದ್ದಿರುವ ಸುಶ್ಮಿತಾ ಸೇನ್‌ ತನ್ನ 18ನೇ ವಯಸ್ಸಿನಲ್ಲಿ ಫೆಮಿನಾ ಮಿಸ್‌ ಇಂಡಿಯಾ ಪ್ರಶಸ್ತಿ ಗೆದ್ದಿದ್ದರು. ಶರದ್‌ ಕಪೂರ್‌ ಜತೆ ‘ದಸ್ತಕ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.