ಸ್ಯಾಮ್ ಬಹದ್ಧೂರ್ ಸಿನೆಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ, ಮನೆಯಲ್ಲೇ ನೋಡಿ ವಿಕ್ಕಿ ಕೌಶಲ್ ನಟನೆಯ ಮಾಣಿಕ್ ಷಾ ಜೀವನಗಾಥೆ
Sam Bahadur OTT release Date: ವಿಕ್ಕಿ ಕೌಶಲ್ ನಟನೆಯ ಸ್ಯಾಮ್ ಬಹುದ್ಧೂರ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡಿದೆ. ಇದೀಗ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ಜೀವನಗಾಥೆ "ಸ್ಯಾಮ್ ಬಹದ್ಧೂರ್" ಸಿನಿಮಾವು ಝೀ 5 ಒಟಿಟಿಯಲ್ಲಿ ಸ್ಟ್ರೀಮ್ ಆಗಲು ಸಿದ್ಧವಾಗಿದೆ.
ಬೆಂಗಳೂರು: ವಿಕ್ಕಿ ಕೌಶಲ್ ನಟನೆಯ ಸ್ಯಾಮ್ ಬಹದ್ಧೂರ್ ಸಿನಿಮಾವು ಕೊನೆಗೂ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದ್ದ ಸ್ಯಾಮ್ ಬಹದ್ಧೂರ್ ಸಿನಿಮಾವು ಚಿತ್ರಮಂದಿರಗಳಲ್ಲಿ ಡಿಸೆಂಬರ್ 1ರಂದು ಬಿಡುಗಡೆಯಾಗಿತ್ತು. ಮೇಘನಾ ಗುಲ್ಜಾರ್ ನಿರ್ದೇಶನದ ಈ ಸಿನಿಮಾವು ಝೀ 5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಸ್ಯಾಮ್ ಬಹುದ್ಧೂರ್ ಸಿನಿಮಾವು ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾದ ಜತೆಗೆ ಬಿಡುಗಡೆಯಾಗಿತ್ತು. ನೀವಿನ್ನೂ ಸ್ಯಾಮ್ ಬಹುದ್ಧೂರ್ ಸಿನಿಮಾ ನೋಡದೆ ಇದ್ದರೆ ಸದ್ಯದಲ್ಲಿಯೇ ಒಟಿಟಿಯಲ್ಲಿ ನೋಡಬಹುದು. ಜನವರಿ 26ರಂದು ಝೀ5ನಲ್ಲಿ ಸ್ಯಾಮ್ ಬಹುದ್ಧೂರ್ ಬಿಡುಗಡೆಯಾಗಲಿದೆ. ಗಣರಾಜ್ಯೋತ್ಸವದ ಸಮಯದಲ್ಲಿ ಈ ದೇಶಭಕ್ತಿಯ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.
ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸ್ಯಾಮ್ ಬಹದ್ಧೂರ್ ಸಿನಿಮಾದ ಕುರಿತು ನಿರ್ದೇಶಕಿ ಮೇಘನಾ ಗುಲ್ಚಾರ್ ಮಾತನಾಡಿದ್ದಾರೆ. "ಇದು ನನ್ನ ಜೀವನ ಚರಿತ್ರೆಯ ಸಿನಿಮಾ ನಿರ್ಮಾಣವು ನನ್ನ ಬದುಕಿನ ವಿನೂತನ ಅನುಭವ. ಇದು ನನಗೆ ದೊರಕಿರುವ ಆಶೀರ್ವಾದ ಎಂದು ಪರಿಗಣಿಸುವೆ. ಸ್ಯಾಮ್ ಬಹದ್ದೂರ್ ಕಥೆಯು ಅದನ್ನು ನೋಡುವ ಎಲ್ಲರಿಗೂ ಸ್ಪೂರ್ತಿ ನೀಡುತ್ತದೆ. ಈ ಪಾತ್ರದಲ್ಲಿ ವಿಕ್ಕಿ ಕೌಶಲ್ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಝೀ 5 ಮೂಲಕ ಈ ಸಿನಿಮಾ ಹೆಚ್ಚಿನ ಜನರಿಗೆ ತಲುಪಲಿದೆ" ಎಂದು ಅವರು ಹೇಳಿದ್ದಾರೆ.
ಸ್ಯಾಮ್ ಮಾನೆಕ್ ಷಾ ಜೀವನಗಾಥೆ
ಸುದೀರ್ಘ 40 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದುಡಿದು, ಮೊದಲ ಏರ್ ಫೀಲ್ಡ್ ಮಾರ್ಷಲ್ ಆಗಿದ್ದ ಸ್ಯಾಮ್ ಮಾನೆಕ್ ಷಾ ಅವರ ಸೇನಾ ದಿನಗಳು ಮತ್ತು ಪ್ರಮುಖ ಯುದ್ಧದ ಕಥಾನಕವನ್ನು ನಿರ್ದೇಶಕರು ಸ್ಯಾಮ್ ಬಹದ್ಧೂರ್ ಸಿನಿಮಾದಲ್ಲಿ ಬಿಚ್ಚಿಟ್ಟಿದ್ದಾರೆ. 1969ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸ್ಯಾಮ್ ಮಾನೆಕ್ ಷಾ, ಪಾಕ್ ವಿರುದ್ಧದ ಸಮರದಲ್ಲಿ ವಿಜಯ ಸಾಧಿಸುತ್ತಾರೆ. ಇದರ ಪರಿಣಾಮವಾಗಿ 1971ರಲ್ಲಿ ಬಾಂಗ್ಲಾದೇಶದ ಹುಟ್ಟಿಗೂ ಇವರು ಕಾರಣರಾಗುತ್ತಾರೆ.
ಉರಿ ಸಿನಿಮಾದ ಬಳಿಕ ಸ್ಯಾಮ್ ಬಹದ್ಧೂರ್ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಸೈನಿಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉರಿ- ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸಿತ್ತು. ಈ ಸಿನಿಮಾವು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ್ ಷಾ ಅವರ ಬದುಕು ಮತ್ತು ಸೇನಾ ಪ್ರಯಾಣದ ಏಳುಬೀಳುಗಳನ್ನು ತೋರಿಸಿತ್ತು. ಐದು ಯುದ್ಧಗಳಲ್ಲಿ, ನಾಲ್ಕು ದಶಕಗಳ ಕಾಲ ಭಾರತದ ಸೇನೆಗೆ ಇವರು ಸಲ್ಲಿಸಿದ ಸೇವೆಯನ್ನು ಈ ಸಿನೆಮಾ ಕಟ್ಟಿಕೊಟ್ಟಿದೆ.