ಫಳಫಳ ಹೊಳೆಯೋ ಚರ್ಮದ ಕಾಂತಿಯ ರಹಸ್ಯ ಬಿಚ್ಚಿಟ್ಟ ಸಮಂತಾ ಪ್ರಭು, ಅಯ್ಯೋ ಪಾಪ ಎಂದು ಬೇಜಾರಾದ್ರು ಫ್ಯಾನ್ಸ್
ಫೋಟೋದಲ್ಲಿ ಕಾಣಿಸುವ ತನ್ನ ಫಳಫಳ ಹೊಳೆಯುವ ಕಾಂತಿಯುಕ್ತವಾದ ಚರ್ಮ ನಿಜವಲ್ಲ ಎಂದು ಸಮಂತ ಪ್ರಭು ಹೇಳಿದ್ದಾರೆ. ಮಯೋಸಿಟಿಸ್ ಚಿಕಿತ್ಸೆಯ ಸಂದರ್ಭದಲ್ಲಿ ತನ್ನ ಚರ್ಮದ ಕಾಂತಿ ಹೇಗೆ ಹಾಳಾಯ್ತು ಎಂದೂ ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸಮಂತಾ ಪ್ರಭುವಿನ ಪ್ರಾಮಾಣಿಕ ಮಾತು ಫ್ಯಾನ್ಸ್‌ಗೆ ಇಷ್ಟವಾಗಿದೆ. ಜತೆಗೆ, ಅವರ ನೋವಿಗೆ ಮರುಗಿದ್ದಾರೆ.
ಸಮಂತಾ ರುತು ಪ್ರಭು ಅವರು ತಮ್ಮ ಚರ್ಮದ ಕುರಿತು ಇತ್ತೀಚೆಗೆ ಮಾಹಿತಿ ನೀಡಿದ್ದಾರೆ. ಇವರು ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಾಗ "ಫಳ ಫಳ ಹೊಳೆಯುವ ಚರ್ಮದ ಕುರಿತು" ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದರು. ಇಷ್ಟೊಂದು ಕೋಮಲ ಚರ್ಮದ ರಹಸ್ಯವೇನು ಎಂದು ಅಭಿಮಾನಿ ಕೇಳಿದ್ದಾರೆ. "ಇಲ್ಲ ಗೆಳೆಯ, ಇದು ನಿಜವಲ್ಲ, ಇದು ಫೋಟೋ ಫಿಲ್ಟರ್ ಬಳಸಿರುವುದರಿಂದ ನಯವಾಗಿ ಕಾಣಿಸುತ್ತಿದೆ" ಎಂದು ಅವರು ಪ್ರಾಮಾಣಿಕವಾಗಿ ಉತ್ತರಿಸಿದ್ದರು.
ನನ್ನ ಚರ್ಮ್ ಹೀಗೆ ಇಲ್ಲ. ಮೈಯೋಸಿಟಿಸ್‌ಗೆ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ತೆಗೆದುಕೊಂಡ ಸ್ಟಿರಾಯ್ಡ್ ಪರಿಣಾಮವಾಗಿ ಚರ್ಮಕ್ಕೆ ಹಾನಿಯಾಗಿದೆ. ಇದಕ್ಕಾಗಿ ನಾನು ಫಿಲ್ಟರ್ ಬಳಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ. ಮಂಗಳವಾರ ಸಂಜೆ ಅಭಿಮಾನಿಗಳ ಜತೆ ಇನ್‌ಸ್ಟಾಗ್ರಾಂ ಸಂವಾದದಲ್ಲಿ ಅವರು ಫ್ಯಾನ್ಸ್‌ಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ತನ್ನ ಚರ್ಮದ ಕುರಿತು ಸಮಂತಾ ಹೇಳಿಕೆ
ನಿಮ್ಮ ಚರ್ಮ ಏಕೆ ಇಷ್ಟು ಕ್ಲಿಯರ್ ಆಗಿದೆ? ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ ಸಂದರ್ಭದಲ್ಲಿ ತನ್ನ ಚರ್ಮದ ಕುರಿತು ಸಮಂತಾ ಪ್ರಭು ಹೇಳಿದ್ದಾರೆ. "ಇದು ಖಂಡಿತವಾಗಿಯೂ ಅಲ್ಲ. ಚಿನ್ಮಯಿ ಶ್ರೀಪಾದ ಅವರು ಇದನ್ನು ಸರಿಪಡಿಸಬೇಕಿದೆ. ವೈದ್ಯರಾಗಿರುವ ಅವರು ನನ್ನ ಚರ್ಮವನ್ನು ಮೊದಲಿನಂತೆ ಮಾಡುವುದಾಗಿ ತಿಳಿಸಿದ್ದಾರೆ. ನಾನು ಸಾಕಷ್ಟು ಸ್ಟಿರಾಯ್ಡ್ ತೆಗೆದುಕೊಂಡಿರುವುದರಿಂದ ಹೀಗಾಗಿದೆ. ನೀವು ನೋಡುತ್ತಿರುವ ಕ್ಲಿಯರ್ ಚರ್ಮವು ಫಿಲ್ಟರ್" ಎಂದು ಅವರು ಹೇಳಿದ್ದಾರೆ.
ಸಮಂತಾ ಹೇಳಿದ ಮೂರು ವಿಷಯಗಳು
ಅಭಿಮಾನಿಗಳ ಜತೆ ಚಿಟ್‌ಚಾಟ್‌ನಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. "ನೀವು ಬದುಕು ವಿಷಯಗಳಲ್ಲಿ ಪ್ರಮುಖವಾದ ಮೂರು ವಿಷಯಗಳು ಯಾವುವು?ʼ ಇತ್ಯಾದಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಅವರು ತಿಣುಕಾಡಿದ್ದಾರೆ. "ನಾನು ತುಂಬಾ ತಾಳ್ಮೆಯನ್ನು ಹೊಂದಿದ್ದೇನೆ. ನನ್ನ ವಿಲ್ ಪವರ್‌ನಿಂದಾಗಿ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು" ಎಂದು ಅವರು ಹೇಳಿದ್ದಾರೆ. ನಾನು ಯಾವುದೇ ತೊಂದರೆಯಿಂದ ಹೊರ ಬರಲು ಬಯಸುವೆ, ನನಗೆ ಅನಗತ್ಯವಾದ ವಿಷಯಗಳ ಕುರಿತು ಪ್ರಶ್ನಿಸಲಾರೆ. ಏನಾಗಲಿ ಮುಂದೆ ಸಾಗುವೆ ಎಂದು ಅವರು ಹೇಳಿದ್ದಾರೆ.
ಯುವಜನತೆಗೆ ಸಮಂತಾ ಸಲಹೆ
ಯುವಜನತೆಗೆ ನಿಮ್ಮ ಸಲಹೆ ಏನು ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೂ ಸಮಂತಾ ಉತ್ತರಿಸಿದ್ದಾರೆ. "ಯುವ ಜನತೆ ಮತ್ತು ಹರೆಯದ ಜನರು ತಮ್ಮ ಜೀವನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸರಿಯಾದ ದಾರಿಯಲ್ಲಿ ಸಾಗಬೇಕು. ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು. ತಮ್ಮ ಜೀವನ ಮುಗಿದು ಹೋಯ್ತು ಎಂದು ಯಾವುದೇ ಸಂದರ್ಭದಲ್ಲಿ ಅಂದುಕೊಳ್ಳಬಾರದು. ನನ್ನ ಜೀವನದಲ್ಲಿ ನಾನು ಸಾಕಷ್ಟು ತೊಂದರೆ ಅನುಭವಿಸಿದೆ. ಇಂತಹ ತೊಂದರೆಗಳ ಹಾದಿಯಲ್ಲಿ ಸಾಗಿ ಮುಂದೆ ಬರಬೇಕು ಎಂದು ಅವರು ಹೇಳಿದ್ದಾರೆ.