Sarfira: ಕರ್ನಾಟಕದ ಗೋಪಿನಾಥ್‌ ಜೀವನಕಥೆಯ ಸಿನಿಮಾ ಈ ವಾರ ಬಿಡುಗಡೆ; ಅಕ್ಷಯ್‌ ಕುಮಾರ್‌ ನಟನೆಯ ಸರ್ಫಿರಾ ಕಣ್ತುಂಬಿಕೊಂಡ ಸೆಲೆಬ್ರಿಟಿಗಳು
ಕನ್ನಡ ಸುದ್ದಿ  /  ಮನರಂಜನೆ  /  Sarfira: ಕರ್ನಾಟಕದ ಗೋಪಿನಾಥ್‌ ಜೀವನಕಥೆಯ ಸಿನಿಮಾ ಈ ವಾರ ಬಿಡುಗಡೆ; ಅಕ್ಷಯ್‌ ಕುಮಾರ್‌ ನಟನೆಯ ಸರ್ಫಿರಾ ಕಣ್ತುಂಬಿಕೊಂಡ ಸೆಲೆಬ್ರಿಟಿಗಳು

Sarfira: ಕರ್ನಾಟಕದ ಗೋಪಿನಾಥ್‌ ಜೀವನಕಥೆಯ ಸಿನಿಮಾ ಈ ವಾರ ಬಿಡುಗಡೆ; ಅಕ್ಷಯ್‌ ಕುಮಾರ್‌ ನಟನೆಯ ಸರ್ಫಿರಾ ಕಣ್ತುಂಬಿಕೊಂಡ ಸೆಲೆಬ್ರಿಟಿಗಳು

Sarfira Movie: ಅಕ್ಷಯ್‌ ಕುಮಾರ್‌ ನಟನೆಯ ಸರ್ಫಿರಾ ಸಿನಿಮಾ ಈ ವಾರ (ಜುಲೈ 12) ಬಿಡುಗಡೆಯಾಗುತ್ತಿದೆ. ಮುಂಬೈನಲ್ಲಿ ಇಂದು ನಡೆದ ಪ್ರೀಮಿಯರ್‌ ಶೋನಲ್ಲಿ ಹಲವು ಸೆಲೆಬ್ರಿಟಿಗಳು ಸಿನಿಮಾ ನೋಡಿದ್ದಾರೆ.. ಈ ಸಿನಿಮಾವು ತಮಿಳಿನ ಸೂರರೈ ಪೋಟ್ರು ರಿಮೇಕ್‌. ಇದು ಕರ್ನಾಟಕದ ಜಿಆರ್‌ ಗೋಪಿನಾಥ್‌ ಅವರ ಜೀವನಗಾಥೆ.

Sarfira: ಕರ್ನಾಟಕದ ಗೋಪಿನಾಥ್‌ ಜೀವನಕಥೆಯ ಸಿನಿಮಾ ಈ ವಾರ ಬಿಡುಗಡೆ; ಅಕ್ಷಯ್‌ ಕುಮಾರ್‌ ನಟನೆಯ ಸರ್ಫಿರಾ
Sarfira: ಕರ್ನಾಟಕದ ಗೋಪಿನಾಥ್‌ ಜೀವನಕಥೆಯ ಸಿನಿಮಾ ಈ ವಾರ ಬಿಡುಗಡೆ; ಅಕ್ಷಯ್‌ ಕುಮಾರ್‌ ನಟನೆಯ ಸರ್ಫಿರಾ

ಬೆಂಗಳೂರು: ಅಕ್ಷಯ್‌ ಕುಮಾರ್‌ ನಟನೆಯ ಸರ್ಫಿರಾ ಸಿನಿಮಾ ಈ ವಾರ (ಜುಲೈ 12) ಬಿಡುಗಡೆಯಾಗುತ್ತಿದೆ. ಮುಂಬೈನಲ್ಲಿ ಇಂದು ನಡೆದ ಪ್ರೀಮಿಯರ್‌ ಶೋನಲ್ಲಿ ಅಕ್ಷಯ್‌ ಕುಮಾರ್‌, ಸೂರ್ಯ, ಜ್ಯೋತಿಕಾ ಮತ್ತು ರಾಧಿಕಾ ಮದನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈ ಸಿನಿಮಾವು ತಮಿಳಿನ ಸೂರರೈ ಪೋಟ್ರು ಸಿನಿಮಾದ ರಿಮೇಕ್‌. ಸರ್ಫಿರಾ ಸಿನಿಮಾ ಬಿಡುಗಡೆಯಾಗುವ ಮೊದಲೇ ಚಿತ್ರತಂಡವು ಮುಂಬೈನಲ್ಲಿ ಈ ಪ್ರೀಮಿಯರ್‌ ಶೋ ನಡೆಸಿದೆ. ಗುರುವಾರ ರಾತ್ರಿ ಸೆಲೆಬ್ರಿಟಿಗಳು ಈ ಸಿನಿಮಾ ವೀಕ್ಷಿಸಿದ್ದಾರೆ.

ಜಿಆರ್‌ ಗೋಪಿನಾಥ್‌ ಕನಸು

ಸರ್ಫಿರಾ ಸಿನಿಮಾವನ್ನು ಸುಧಾ ಕೊಂಗರಾ ನಿರ್ದೇಶಿಸಿದ್ದಾರೆ. 2ಡಿ ಎಂಟರ್‌ಟೇನ್‌ಮೆಂಟ್‌, ಅಬುದಂತಿಯಾ ಎಂಟರ್‌ಟೇನ್‌ಮೆಂಟ್‌ ಮತ್ತು ಕೇಪ್‌ ಆಫ್‌ ಗುಡ್‌ ಫಿಲ್ಮ್ಸ್‌ ನಿರ್ಮಾಣ ಮಾಡಿದೆ. ಈ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌, ಪರೇಶ್‌ ರಾವಲ್‌, ರಾಧಿಕಾ ಮದನ್‌ ನಟಿಸಿದ್ದಾರೆ. ಇದು ತಮಿಳಿನ ಸೂರರೈ ಪೋಟ್ರು(2020) ಸಿನಿಮಾದ ರಿಮೇಕ್‌ ಆಗಿದೆ. ಸಿಂಪ್ಲಿ ಫ್ಲೈ: ಎ ಡೆಕ್ಕನ್‌ ಒಡೆಸ್ಸಿ ಎಂಬ ಪುಸ್ತಕ ಆಧರಿತ ಸಿನಿಮಾ. ಅಂದರೆ, ಜಿಆರ್‌ ಗೋಪಿನಾಥ್‌ ಅವರು ಬಡವರಿಗೂ ವಿಮಾನಯಾನ ಎಟುಕಬೇಕು ಎಂದು ಕೈಗೆಟುಕುವ ದರದಲ್ಲಿ ವಿಮಾನಯಾನ ಆರಂಭಿಸಿದ ನಿಜಕಥೆ ಆಧರಿಸಿದ ಸಿನಿಮಾ ಇದಾಗಿದೆ.

ಪ್ರೀಮಿಯರ್‌ ಶೋಗೆ ಹಲವು ನಟರು ಆಗಮಿಸಿದ್ದಾರೆ. ಅಕ್ಷಯ್‌ ಕುಮಾರ್‌ ಕಪ್ಪು ಬಣ್ಣದ ಸ್ಲೀವ್‌ಲೆಸ್‌ ವೆಸ್ಟ್, ಡೆನಿಮ್ಸ್ ಮತ್ತು ಬಿಳಿ ಸ್ನೀಕರ್ಸ್ ಧರಿಸಿದ್ದರು. ಸೂರ್ಯ ಕಪ್ಪು ಶರ್ಟ್, ಪ್ಯಾಂಟ್ ಧರಿಸಿದ್ದರು. ಜ್ಯೋತಿಕಾ ನೀಲಿ ಬ್ಲೇಜರ್ ಅಡಿಯಲ್ಲಿ ಬಿಳಿ ಟಾಪ್‌ನಲ್ಲಿ ಕಾಣಿಸಿಕೊಂಡರು, ಅದಕ್ಕೆ ಹೊಂದಿಕೆಯಾಗುವ ಪ್ಯಾಂಟ್ ಮತ್ತು ಹೀಲ್ಸ್ ಧರಿಸಿದ್ದರು.

ರಾಧಿಕಾ ಮದನ್ ಕಪ್ಪು ಮತ್ತು ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರೆಲ್ಲ ಮುಗುಳ್ನಕ್ಕು ಪಾಪರಾಜಿಗೆ ಪೋಸ್ ಕೊಟ್ಟರು. ವೀಡಿಯೊವೊಂದರಲ್ಲಿ ಸೂರ್ಯ ಮತ್ತು ಜ್ಯೋತಿಕಾ ಚಿತ್ರ ವೀಕ್ಷಿಸಿದ ನಂತರ ಕ್ಯಾಮೆರಾಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ಸರ್ಫಿರಾ ಚಿತ್ರದ ಪಾತ್ರವರ್ಗ

ಅಕ್ಷಯ್ ಕುಮಾರ್ (ವೀರ್‌ ಮಾತ್ರೆ- ಉದ್ಯಮಿಯಾದ ಪೈಲೆಟ್‌), ಪರೇಶ್ ಗೋಸ್ವಾಮಿಯಾಗಿ ಪರೇಶ್ ರಾವಲ್, ವೀರ್ ಪತ್ನಿ ರಾಣಿಯಾಗಿ ರಾಧಿಕಾ ಮದನ್, ವೀರನ ತಾಯಿಯಾಗಿ ಸೀಮಾ ಬಿಸ್ವಾಸ್, ಆರ್. ಶರತ್‌ಕುಮಾರ್ ಅವರು ವಾಯುಪಡೆಯಲ್ಲಿ ವೀರರ ಕಮಾಂಡಿಂಗ್ ಅಧಿಕಾರಿಯಾಗಿ ನಟಿಸಿದ್ದಾರೆ. ಉಳಿದಂತೆ ಸೌರಭ್ ಗೋಯಲ್, ಕೃಷ್ಣಕುಮಾರ್ ಬಾಲಸುಬ್ರಮಣಿಯನ್, ಇರಾವತಿ ಹರ್ಷೇ ಮಾಯಾದೇವ, ಅನಿಲ್ ಚರಂಜಿತ್, ಪ್ರಕಾಶ್ ಬೆಳವಾಡಿ, ರಾಹುಲ್ ವೋಹ್ರಾ ಮತ್ತು ಸೂರ್ಯ (ಅತಿಥಿ ಪಾತ್ರ) ನಟಿಸಿದ್ದಾರೆ.

ಯಾರಿದು ಜಿಆರ್‌ ಗೋಪಿನಾಥ್‌?

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥೆಯ ಸಂಸ್ಥಾಪಕರು. ಪ್ರಾದೇಶಿಕ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ ಉಡಾನ್‌ ಯೋಜನೆಯಲ್ಲಿ ಗೋಪಿನಾಥ್‌ ಅವರೂ ಕೆಲಸ ಮಾಡುತ್ತಿದ್ದಾರೆ. ಇವರ ಆತ್ಮಕಥನ 'ಸಿಂಪ್ಲಿ ಫ್ಲೈ’ ('Simply fly’) ಪುಸ್ತಕವನ್ನು ಉದಯಭಾನು ಸುವರ್ಣ ಪುಸ್ತಕಮಾಲೆ ಪ್ರಕಟಿಸಿದೆ. ಬಡವರು ಕೂಡ ವಿಮಾನಯಾನ ನಡೆಸಬೇಕೆಂಬ ಕನಸು ಕಂಡ ಇವರ ಬದುಕಿನ ಕಥೆ ಈಗ ಬಾಲಿವುಡ್‌ನಲ್ಲಿ ಸರ್ಫಿರಾ ಎಂಬ ಸಿನಿಮಾವಾಗಿದೆ. ಕರ್ನಾಟಕದ ಹಾಸನ ಜಿಲ್ಲೆಯ ಗೊರೂರಿನ ಶಾಲಾ ಶಿಕ್ಷಕರೊಬ್ಬರ ಪುತ್ರರಾದ ಗೋಪಿನಾಥ್‌ ಸೇನೆಗೆ ಸೇರಿ ಕ್ಯಾಪ್ಟನ್‌ ಆಗಿದ್ದರು. ಇದಾದ ಬಳಿಕ ಕಡಿಮೆ ಹಣದಲ್ಲಿ ವಿಮಾನಯಾನ ಒದಗಿಸುವಂತಹ ಏರ್‌ಡೆಕ್ಕನ್‌ ಆರಂಭಿಸಿದರು. ಇವರ ಜೀವನಚರಿತ್ರೆಯು ತಮಿಳಿನಲ್ಲಿಸೂರರೈ ಪೋಟ್ರು ಎಂಬ ಸಿನಿಮಾವಾಗಿದೆ. ಇದೇ ಸಿನಿಮಾ ಹಿಂದಿಗೆ ರಿಮೇಕ್‌ ಆಗಿ ಈ ವಾರ ಬಿಡುಗಡೆಯಾಗುತ್ತಿದೆ.

Whats_app_banner