800 ಕೋಟಿ ದೋಚಿದ ಜವಾನ್ ಸಿನಿಮಾ; ಆಸ್ಕರ್‌ನತ್ತ ನಿರ್ದೇಶಕ ಅಟ್ಲಿ ಚಿತ್ತ
'ಜವಾನ್' ಸಿನಿಮಾ ಮಂಗಳವಾರದ ವೇಳೆಗೆ ಭಾರತದಲ್ಲೇ 500 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಒಟ್ಟಾರೆ ವಿಶ್ವಾದ್ಯಂತ ಸಿನಿಮಾ ಇದುವರೆಗೂ 800 ಕೋಟಿ ರೂಪಾಯಿ ದೋಚಿಕೊಂಡಿದ್ದು ಬಾಲಿವುಡ್ ಮಂದಿ ಜವಾನ್ ಹವಾ ನೋಡಿ ಬೆರಗಾಗಿದ್ದಾರೆ.
ಅಟ್ಲಿ ನಿರ್ದೇಶನದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟಿಸಿರುವ 'ಜವಾನ್' ಸಿನಿಮಾ ಬಿಡುಗಡೆ ಆಗಿ ಇಷ್ಟು ದಿನಗಳಾದರೂ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ಸೋಮವಾರ ಕೂಡಾ ಸಿನಿಮಾ 16 ಕೋಟಿ ರೂಪಾಯಿ ಲಾಭ ಮಾಡಿದೆ. ಈ ಮೂಲಕ ಇದುವರೆಗೂ ಸಿನಿಮಾ ಭಾರತದಲ್ಲಿ ₹493.63 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ವರ್ಲ್ಡ್ ವೈಡ್ 800 ಕೋಟಿ ದೋಚಿದ ಜವಾನ್
'ಜವಾನ್' ಸಿನಿಮಾ ಮಂಗಳವಾರದ ವೇಳೆಗೆ ಭಾರತದಲ್ಲೇ 500 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಒಟ್ಟಾರೆ ವಿಶ್ವಾದ್ಯಂತ ಸಿನಿಮಾ ಇದುವರೆಗೂ 800 ಕೋಟಿ ರೂಪಾಯಿ ದೋಚಿಕೊಂಡಿದ್ದು ಬಾಲಿವುಡ್ ಮಂದಿ ಜವಾನ್ ಹವಾ ನೋಡಿ ಬೆರಗಾಗಿದ್ದಾರೆ. ಜವಾನ್ ಚಿತ್ರತಂಡ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಿಂದಿ ವರ್ಷನ್ 11 ದಿನಗಳಗಲ್ಲಿ 400 ಕೋಟಿ ರೂಪಾಯಿ ಸಂಗ್ರಹಿಸಿರುವುದಾಗಿ ಬರೆದುಕೊಂಡಿದೆ. ಚಿತ್ರತಂಡ ಇಂದಿಗೂ ತಮ್ಮ ಸಿನಿಮಾವನ್ನು ಪಬ್ಲಿಸಿಟಿ ಮಾಡುತ್ತಲೇ ಇದೆ. ಜವಾನ್ ಸಿನಿಮಾ ಕ್ರೇಜ್ ಸದ್ಯದ ಮಟ್ಟಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಸದ್ಯಕ್ಕೆ ಸಿನಿಮಾ 800 ಕೋಟಿ ಕಲೆಕ್ಷನ್ ಮಾಡಿದ್ದು ಖಂಡಿತಾ 1000 ಕೋಟಿ ಸಂಗ್ರಹಿಸುತ್ತದೆ ಎಂದು ಸಿನಿಮಾ ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಟ್ಲಿ ಕಣ್ಣು ಆಸ್ಕರ್ ಮೇಲೆ
ಈ ನಡುವೆ ನಿರ್ದೇಶಕ ಅಟ್ಲಿ ಕಣ್ಣು ಆಸ್ಕರ್‌ನತ್ತ ಬಿದ್ದಿದೆ. ಈ ಕುರಿತು ಅವರು ಶಾರುಖ್ ಖಾನ್ ಜೊತೆ ಕೂಡಾ ಮಾತನಾಡಿದ್ದಾರೆ ಎನ್ನಲಾಗಿದೆ. ಜವಾನ್ ಸಿನಿಮಾ ಸೆಪ್ಟೆಂಬರ್ 7 ರಂದು ವಿಶ್ವಾದ್ಯಂತ ತೆರೆ ಕಂಡಿತ್ತು. ಚಿತ್ರದಲ್ಲಿ ವಿಜಯ್ ಸೇತುಪತಿ, ನಯನತಾರಾ, ಸಾನ್ಯಾ ಮಲ್ಹೊತ್ರಾ, ಸುನಿಲ್ ಗ್ರೋವರ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ತಮಗಾಗಿ ಸಿನಿಮಾ ಮಾಡಿಕೊಡುವಂತೆ ಕೇಳಿದ್ದ ಶಾರುಖ್
ಇತ್ತೀಚೆಗೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಅಟ್ಲಿ, ತಮಗೆ ಜವಾನ್ ನಿರ್ದೇಶನದ ಅವಕಾಶ ಸಿಕ್ಕಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ''ನಾನು ಬಿಗಿಲ್ ಸಿನಿಮಾ ಶೂಟಿಂಗ್‌ನಲ್ಲಿದ್ದೆ. ಇದ್ದಕ್ಕಿದ್ದಂತೆ ನನಗೆ ಶಾರುಖ್ ಖಾನ್ ಆಫೀಸಿನಿಂದ ಕರೆ ಬಂತು. ಬಿಡುವು ಮಾಡಿಕೊಂಡು ಒಮ್ಮೆ ಮುಂಬೈಗೆ ಹೋಗಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದೆ. ಅದೊಂದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ದಿನ. ನನ್ನನ್ನು ಸಂತೋಷದಿಂದಲೇ ಬರಮಾಡಿಕೊಂಡ ಶಾರುಖ್ ಖಾನ್, ನನಗಾಗಿ ಒಂದು ಸಿನಿಮಾ ಮಾಡಿಕೊಡಬೇಕು ಎಂದು ವಿನಮ್ರವಾಗಿ ಕೇಳಿಕೊಂಡರು. ಅವರ ಮಾತು ಕೇಳಿ ನನಗೆ ನಿಜವಾಗಿಯೂ ಆಶ್ಚರ್ಯವಾಯ್ತು. ನಾನು ಇದುವರೆಗೂ ಮಾಡಿರುವುದು 4 ಸಿನಿಮಾಗಳಷ್ಟೇ ಎಂದು ಅವರಿಗೆ ಹೇಳಿದೆ. ಅದಕ್ಕೆ ಉತ್ತರಿಸಿದ ಅವರು ನಿಮ್ಮಿಂದ ಸಾಧ್ಯ ಎಂದರು. ನಂತರ ನಾನು ಒಪ್ಪಿ ಚೆನ್ನೈಗೆ ವಾಪಸ್ ಬಂದೆ. 8 ತಿಂಗಳ ಕಾಲ ಸ್ಕ್ರಿಪ್ಟ್ ಕೆಲಸ ಮಾಡಿ ಕೊನೆಗೂ ಜವಾನ್ ಸಿನಿಮಾವನ್ನು ಅವರಿಗೆ ಗಿಫ್ಟ್ ನೀಡಿದೆ'' ಎಂದು ಹೇಳಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.