ಕನ್ನಡ ಸುದ್ದಿ  /  Entertainment  /  Bollywood News Shaitaan Box Office Collection Day 3 Actor Ajay Devgn Film Crosses 50 Crore In India Pcp

Shaitaan: ಬಾಕ್ಸ್‌ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ ಸೈತಾನ್‌; 3 ದಿನದಲ್ಲಿ ಬಹುಕೋಟಿ ಗಳಿಕೆ ಮಾಡಿದ ಅಜಯ್‌ ದೇವಗನ್‌ ಸಿನಿಮಾ

Shaitaan box office collection day 3: ಅಜಯ್‌ ದೇವಗನ್‌ ನಟನೆಯ ಸೈತಾನ್‌ ಸಿನಿಮಾವು ಭಾನುವಾರ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 20 ಕೋಟಿ ರೂಪಾಯಿ ಗಳಿಕೆ ಮಾಡಿದೆ. ದೇಶದಲ್ಲಿ ಇಲ್ಲಿವರೆಗೆ 53 ಕೋಟಿ ರೂಪಾಯಿ ಗಳಿಕೆ ಮಾಡಿದೆ.

Shaitaan box office collection day 3: Ajay Devgn, R Madhavan, Jyotika-starrer's roar gets louder.
Shaitaan box office collection day 3: Ajay Devgn, R Madhavan, Jyotika-starrer's roar gets louder.

Shaitaan box office collection day 3: ಕಳೆದ ಶುಕ್ರವಾರ ಬಿಡುಗಡೆಯಾದ ಸಿನಿಮಾಗಳಲ್ಲಿ ಬಹುತೇಕ ಅಷ್ಟಕಷ್ಟೇ ಗಳಿಕೆ ಮಾಡುತ್ತಿವೆ. ಕಳೆದ ವಾರ ಉತ್ತಮ ಸಿನಿಮಾಗಳಿಗೆ ಬರ ಬಂದಿತ್ತು. ಬಹುನಿರೀಕ್ಷೆ ಹುಟ್ಟುಹಾಕಿದ್ದ ಕನ್ನಡದ ಕರಟಕ ದಮನಕದ ಕುರಿತೂ ಒಳ್ಳೆಯ ಮಾತುಗಳು ಕೇಳಿಸುತ್ತಿಲ್ಲ. ಇದೇ ಸಮಯದಲ್ಲಿ ರಂಗನಾಯಕ ಸಿನಿಮಾಕ್ಕೆ ಸಾಕಷ್ಟು ಸಿನಿಪ್ರೇಮಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಉಳಿದ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಆದಾಯ ಗಳಿಸಲು ಪ್ರಯತ್ನಿಸುತ್ತಿವೆ. ಇರೋದ್ರಲ್ಲಿ ಹಿಂದಿಯ ಸೈತಾನ್‌ ಸಿನಿಮಾ ತುಸು ಗಳಿಕೆ ಹೆಚ್ಚಿಸಿಕೊಂಡಿದೆ. ಸೈತಾನ್‌ ಸಿನಿಮಾ ಕಳೆದ ಮೂರು ದಿನಗಳಲ್ಲಿ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 53 ಕೋಟಿ ಗಳಿಕೆ ಮಾಡಿದೆ ಎಂದು ಆರಂಭಿಕ ಅಂದಾಜಿನ ಲೆಕ್ಕಾಚಾರದಿಂದ ತಿಳಿದುಬಂದಿದೆ.

ಬಾಕ್ಸ್‌ ಆಫೀಸ್‌ ವರದಿಗಳ ಪ್ರಕಾರ ಮೊದಲ ದಿನವಾದ ಶುಕ್ರವಾರ ಸೈತಾನ್‌ ಸಿನಿಮಾ ಭಾರತದಲ್ಲಿ 14.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನವಾದ ಶನಿವಾರ 18.75 ಕೋಟಿ ರೂಪಾಯಿ ಗಳಿಸಿತ್ತು. ಭಾನುವಾರ ಈ ಸಿನಿಮಾ ಸುಮಾರು 20 ಕೋಟಿ ರೂಪಾಆಯಿ ಗಳಿಸಿದೆ. ಭಾನುವಾರ ಥಿಯೇಟರ್‌ಗಳಲ್ಲಿ ಈ ಹಿಂದಿ ಸಿನಿಮಾದ ಆಕ್ಯುಪೆನ್ಸಿ ಶೇಕಡ 36.24ರಷ್ಟಿತ್ತು.

ಸೈತಾನ್‌ ಸಿನಿಮಾದ ಕುರಿತು

ವಿಕಾಸ್‌ ಬಾಹ್ಲ್‌ ನಿರ್ದೇಶನದ ಈ ಹಾರರ್‌ ಸಿನಿಮಾವನ್ನು ಜಿಯೋ ಸ್ಟುಡಿಯೋ, ದೇವಗನ್‌ ಫಿಲ್ಮ್ಸ್‌, ಪನೊರಮಾ ಸ್ಟುಡಿಯೋ ತಯಾರಿಸಿದೆ. ಇದು ಅಜಯ್‌ ದೇವಗನ್‌, ಜ್ಯೋತಿ ದೇಶ್‌ಪಾಂಡೆ, ಕುಮಾರ್‌ ಮಂಗಟ್‌ ಪಾಠಕ್‌, ಅಭಿಷೇಕ್‌ ಪಾಠಕ್‌ ನಿರ್ಮಾಣದ ಸಿನಿಮಾ. ವಾಸ್‌ ಹೆಸರಿನ ಗುಜರಾತಿ ಹಾರರ್‌ ಸಿನಿಮಾದ ರಿಮೇಕ್‌ ಇದಾಗಿದೆ. ಕಳೆದ ಮೂರು ದಿನಗಳು ವೀಕೆಂಡ್‌ ಆಗಿರುವ ಕಾರಣ ಸೈತಾನ್‌ಗೆ ಒಂದಿಷ್ಟು ಗಳಿಕೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ತುಸು ತಗ್ಗುವ ಸಾಧ್ಯತೆಯಿದೆ. ಮುಂದಿನ ವಾರವೂ ಬಹುನಿರೀಕ್ಷಿತ ಸಿನಿಮಾಗಳೇನು ಇಲ್ಲದೆ ಇರುವ ಕಾರಣ ಸೈತಾನ್‌ ಗಳಿಕೆ ವೀಕೆಂಡ್‌ಗೆ ಮುಂದುವರೆಯಬಹುದು.

ಸೈತಾನ್‌ ಸಿನಿಮಾದಲ್ಲಿ ಜ್ಯೋತಿಕಾ

ಸೈತಾನ್‌ ಸಿನಿಮಾಆದಲ್ಲಿ ನಟ ಜಾಂಕಿ ಬೊಡಿವಾಲರ ತಾಯಿ ಪಾತ್ರದಲ್ಲಿ ಜ್ಯೋತಿಕಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಜಯ್‌ ದೇವಗನ್‌ ಮತ್ತು ಆರ್‌ ಮಾಧವನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. "ಈ ಸಿನಿಮಾದಲ್ಲಿ ತಾಯ್ತನವನ್ನು ಅನುಭವಿಸುವಂತಹ ಹಲವು ದೃಶ್ಯಗಳಿವೆ. ಈ ಕುರಿತು ಬಹಿರಂಗಪಡಿಸಬಹುದೇ ಎಂದು ನನಗೆ ತಿಳಿದಿಲ್ಲ. ಈ ಚಿತ್ರದ ಈ ಪಾತ್ರದ ಕಾರಣಕ್ಕಾಗಿಯೇ ಸಿನಿಮಾದಲ್ಲಿ ನಟಿಸಲು ಒಪ್ಪಿದೆ. ಟೀನೇಜ್‌ ಮಗಳು ಇರುವ ತಾಯಿ ಎಷ್ಟು ಜವಾಬ್ದಾರಿಯಿಂದ ಇರಬೇಕು, ಮಕ್ಕಳ ರಕ್ಷಣಾತ್ಮಕ ಪ್ರಯಾಣದಲ್ಲಿ ತಂದೆತಾಯಿಯ ಮಹತ್ವವನ್ನು ಈ ಚಿತ್ರ ಹೇಳುತ್ತದೆ" ಎಂದು ಜ್ಯೋತಿಕಾ ಹೇಳಿದ್ದರು.

IPL_Entry_Point