Sonu Nigam: ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಸೋನು ನಿಗಮ್, ತನ್ನ ಹೆಸರು ದುರ್ಬಳಕೆ ಮಾಡುವ ಹಣಕಾಸು ವಂಚಕರ ಕುರಿತು ಗಾನ ಗಾರುಡಿಗ ಗರಂ
Sonu Nigam News: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಗಾಯಕರಾಗಿ ಜನಪ್ರಿಯರಾಗಿರುವ ಸೋನು ನಿಗಮ್ ಅವರು ಸೋಷಿಯಲ್ ಮೀಡಿಯಾದಲ್ಲೊಂದು ಅಪ್‌ಡೇಟ್ ನೀಡಿದ್ದು, ತನ್ನ ಅಭಿಮಾನಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.

ಭಾರತದ ಸಿನಿಮಾ ಮತ್ತು ಸಂಗೀತ ಕ್ಷೇತ್ರದಲ್ಲಿ ಗಾನ ಗಾರುಡಿಗನಾಗಿ ಹೆಸರುಪಡೆದಿರುವ ಸೋನು ನಿಗಮ್ ಹಲವು ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ.ಅವರ ಮಧುರ ಧ್ವನಿಯಿಂದಾಗಿ ದೇಶ ವಿದೇಶದಲ್ಲಿ ಅಭಿಮಾನಿಗಳಿದ್ದಾರೆ. ಇದೇ ಸಮಯದಲ್ಲಿ ಈ ಸಿಂಗರ್ ಸೋಷಿಯಲ್ ಮೀಡಿಯಾದಲ್ಲೊಂದು ಅಪ್‌ಡೇಟ್ ನೀಡಿದ್ದು, ತನ್ನ ಅಭಿಮಾನಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಇವರ ಫೇಸ್‌ಬುಕ್ ಪುಟದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅದೇ ಫೇಸ್‌ಬುಕ್ ಪುಟದಲ್ಲಿ ಇದೀಗ ಸೋನು ನಿಗಮ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. "ಆನ್‌ಲೈನ್ ವಂಚಕರು ನನ್ನ ಹೆಸರನ್ನು ದುರುಪಯೋಗ ಮಾಡಿ ಹಣ ಕೇಳಬಹುದು, ಇಂತಹ ವಂಚಕರ ಕುರಿತು ಎಚ್ಚರಿಕೆಯಿಂದ ಇರಿ" ಎಂದು ಅವರು ಅಪ್‌ಡೇಟ್ ನೀಡಿದ್ದಾರೆ.
ನನ್ನ ಪ್ರೀತಿಯ ಕುಟುಂಬ ಮತ್ತು ಸ್ನೇಹಿತರ ಬಳಗವೇ, ನನ್ನ ಹೆಸರಲ್ಲಿ ಕೆಲವರು "ಪ್ರಾಮಾಣಿಕ"ವಾಗಿ ಹಣ ಸಂಪಾದಿಸಲು ಯತ್ನಿಸುತ್ತಿದ್ದಾರೆ. ಇಲ್ಲೊಮ್ಮೆ ನೋಡಿ, ಎಚ್ಚರಿಕೆಯಿಂದ ಇರಿ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆನ್‌ಲೈನ್ ವಂಚಕರ ಕುರಿತು ಇವರು ಗರಂ ಆಗಿದ್ದರೂ ಸಾಫ್ಟ್ ಆಗಿ ಪೋಸ್ಟ್ ಮಾಡಿದ್ದು "ಹಾನೆಸ್ಟ್" ಎಂಬ ಪದವನ್ನು ಇನ್ವರ್ಟ್ ಕಾಮಾದೊಳಗಿಟ್ಟು ಅಂತಹ ವಂಚಕರ ಕುರಿತು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಅವರು ಹಂಚಿಕೊಂಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಸೋನು ನಿಗಮ್ ಹೆಸರಿನ ಫೇಕ್ ಐಡಿ ಇದೆ. "ನನ್ನ ಹೆಸರು ಎರಿಕಾ, ನಾನು ಸೋನು ನಿಗಮ್ ಅವರ ಸೋಷಿಯಲ್ ಮೀಡಿಯಾ ನಿರ್ವಹಣಾ ತಂಡದಿಂದ ಸಂದೇಶ ಕಳುಹಿಸುತ್ತಿದ್ದೇನೆ" ಎಂಬ ಸಂದೇಶವನ್ನು ಜನರಿಗೆ ಕಳುಹಿಸುತ್ತಿದೆ. ಜತೆಗೆ ಜನರಲ್ಲಿ ಡೊನೆಷನ್ ಕೇಳಲಾಗುತ್ತದೆ.
ಸೋನು ನಿಗಮ್ ಹಂಚಿಕೊಂಡ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಜನರು ಹೇಳಿದ್ದಾರೆ. "ಜನರ ಕುರಿತು ನಿಮ್ಮ ಇಂತಹ ಕಾಳಜಿಯೇ ಇಷ್ಟವಾಗೋದು" ಎಂದು ಸಾಕಷ್ಟು ಜನರು ಬರೆದಿದ್ದಾರೆ.
ಸೋನು ನಿಗಮ್ ಅವರು ತನ್ನ ಅನನ್ಯ ಕರಿಯರ್ ಮೂಲಕ ಹಾಡುಗಾರರಿಗೆ, ಸಂಗೀತ ಅಭಿಮಾನಿಗಳಿಗೆ ಸ್ಫೂರ್ತಿದಾಯಕ ವ್ಯಕ್ತಿ. ಹಿಂದಿ, ಕನ್ನಡ, ಒಡಿಯಾ, ಬಂಗಾಳಿ, ಗುಜರಾತಿ, ತಮಿಳು, ತೆಲುಗು, ಮರಾಟಿ, ನೇಪಾಳಿ, ಮಲೆಯಾಳಂ, ಭೋಜಪುರಿ ಇತ್ಯಾದಿ ಹಲವು ಭಾಷೆಗಳಲ್ಲಿ ಇವರು ನಟಿಸಿದ್ದಾರೆ. ಈ ಮೂಲಕ ಸಂಗೀತಕ್ಕೆ ಭಾಷೆಯ ಹಂಗಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಎಲ್ಲಾ ಭಾಷೆಯಲ್ಲಿಯೂ ಹಾಡುವಂತಹ ಸಾಮರ್ಥ್ಯವೂ ಇವರನ್ನು ದೇಶಾದ್ಯಂತ ಫೇಮಸ್ ಮಾಡಿದೆ.
ಸೋನು ನಿಗಮ್ ಅವರ ಯಶಸ್ಸಿನ ಹಿಂದೆ ಸಾಕಷ್ಟು ಕಠಿಣ ಪರಿಶ್ರಮವಿದೆ. 1991 ರಲ್ಲಿ 18ನೇ ವಯಸ್ಸಿನಲ್ಲಿ ತಮ್ಮ ತಂದೆಯೊಂದಿಗೆ ಮುಂಬೈಗೆ ಹೋದ ಇವರು ಹಲವು ವರ್ಷಗಳ ಕಾಲ ಅವಕಾಶಕ್ಕಾಗಿ ಪ್ರಯತ್ನಿಸಿದ್ದರು. ಸಂದೇಶ್ ಸೇ ಆತೆ ಹೈ ಹಾಡು ಸೂಪರ್‌ಹಿಟ್ ಆದ ಬಳಿಕ ಇವರಿಗೆ ಸಾಕಷ್ಟು ಅವಕಾಶ ದೊರಕಿದೆ. ಕನ್ನಡದಲ್ಲಿಯೂ ಹಲವು ಗೀತೆಗಳಿಗೆ ಸೋನು ನಿಗಮ್ ಅವರು ಧ್ವನಿಯಾಗಿದ್ದಾರೆ. ಜೀವನದಿ ಚಿತ್ರದ ʼಯೆಲ್ಲೋ ಯಾರೋ ಹೇಗೋʼ ಒಂದು ಉದಾಹರಣೆ. ಒಂಬೈನೂರಕ್ಕೂ ಹೆಚ್ಚು ಕನ್ನಡ ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ.
ಸಂಗೀತ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಇವರಿಗೆ ಕಳೆದ ವರ್ಷ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.
ವಿಭಾಗ