ಹೀರಾಮಂಡಿ ವೆಬ್‌ಸರಣಿಯಲ್ಲಿ ಸಲಿಂಗರತಿ ದೃಶ್ಯ; ಡೈಮಂಡ್ ಬಜಾರ್‌ನ ಆಕೆಗೆ ಪುರುಷರೆಂದರೆ ಆಗೋದೇ ಇಲ್ಲ ಅಂದ್ರು ಸೋನಾಕ್ಷಿ ಸಿನ್ಹಾ
Heeramandi: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವೆಬ್ ಶೋ ಹೀರಮಂಡಿಯಲ್ಲಿ ನಟಿ ಸೋನಾಕ್ಷಿ ಸಿನ್ಹಾ ಸಲಿಂಗರತಿ ದೃಶ್ಯದಲ್ಲಿ ಬೋಲ್ಡ್ ಆಗಿ ನಟಿಸಿದ್ದಾರೆ. ಈ ಕುರಿತು ಸೋನಾಕ್ಷಿ ಸಿನ್ಹಾ ಮಾತನಾಡಿದ್ದಾರೆ.
ಬೆಂಗಳೂರು: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಅವರು ಫರೀದಾನ್ ಪಾತ್ರದಲ್ಲಿ ನಟಿಸಿದ್ದಾರೆ. ಇವರ ನಟನೆಯ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ವಿಶೇಷವಾಗಿ ಇವರು ಸಲಿಂಗ ಪೋರ್‌ಪ್ಲೇ ದೃಶ್ಯದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಕುರಿತು ಸೋನಾಕ್ಷಿ ಮಾತನಾಡಿದ್ದಾರೆ. ಫರೀದಾನ್ ಅವರ ಲೈಂಗಿಕತೆಯನ್ನು ಉದ್ದೇಶಪೂರ್ವಕವಾಗಿ ಈ ಚಿತ್ರದಲ್ಲಿ ಹೆಚ್ಚು ತೋರಿಸಲಾಗಿಲ್ಲ ಎಂದು ಸೋನಾಕ್ಷಿ ಬಹಿರಂಗಪಡಿಸಿದ್ದಾರೆ.
ಫರೀದಾನ್ ಅವರ ಲೈಂಗಿಕತೆಯ ವಿವರವನ್ನು ನಿರ್ದೇಶಕ ಬನ್ಸಾಲಿ ಹೆಚ್ಚು ನೀಡಲು ಏಕೆ ಹೋಗಿಲ್ಲ ಎಂದು ನ್ಯೂಸ್18ಗೆ ನೀಡಿದ ಸಂದರ್ಶನದಲ್ಲಿ ಸೋನಾಕ್ಷಿ ವಿವರಿಸಿದ್ದಾರೆ.
ಈ ಚಿತ್ರದಲ್ಲಿ ಫರೀದಾನ್ ತನ್ನ ಸೇವಕಿಯೊಬ್ಬಳೊಂದಿಗೆ ಫೋರ್ ಪ್ಲೇಯಲ್ಲಿ ತೊಡಗಿರುವ ದೃಶ್ಯವಿದೆ. ಈ ಮೂಲಕ ಇವರಿಬ್ಬರ ನಡುವಿನ ಲೈಂಗಿಕತೆಯನ್ನು ತೋರಿಸಲಾಗಿದೆ. ಆದರೆ, ನಿರ್ದೇಶಕರು ಇಂತಹದ್ದೇ ದೃಶ್ಯಗಳನ್ನು ಹೆಚ್ಚಾಗಿ ತುರುಕಿಲ್ಲ ಎಂದು ಸೋನಾಕ್ಷಿ ಹೇಳಿದ್ದಾರೆ.
ಇದಕ್ಕೆ ಕಾರಣವನ್ನೂ ಸೋನಾಕ್ಷಿ ಸಿನ್ಹಾ ನೀಡಿದ್ದಾರೆ. "ಅವಳು ಒಂಬತ್ತು ವರ್ಷದ ಹುಡುಗಿಯಾಗಿದ್ದಾಗ ಅವಳನ್ನು ಮಾರಾಟ ಮಾಡಲಾಯಿತು. ಬಹುಶಃ ಅದಕ್ಕಾಗಿಯೇ ಅವಳು ಪುರುಷರನ್ನು ಸಂಪೂರ್ಣವಾಗಿ ದ್ವೇಷಿಸುತ್ತಾಳೆ. ಆದರೆ, ಈ ಹೀರಾಮಂಡಿ ಚಿತ್ರದಲ್ಲಿ ಆಕೆಯ ಇಂತಹ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಿಲ್ಲ. ಅವಳು ಚೌಧರಿ ಸಾಬ್ (ನವಾಬ್) ನನ್ನು ಭೇಟಿಯಾಗುವ ಮತ್ತು ಅವಳ ಸೇವಕಿಯೊಂದಿಗೆ ಇರುವ ಆ ಒಂದು ದೃಶ್ಯವನ್ನು ಹೊರತುಪಡಿಸಿ ಬೇರೆಲ್ಲೂ ಇಂತಹ ದೃಶ್ಯಗಳು ಇಲ್ಲ ಎಂದು ಅವರು ಹೇಳಿದ್ದಾರೆ.
"ಇದು ಬಹಳ ವಿಶಾಲವಾದ ಜಗತ್ತು ಮತ್ತು ಆಕೆಯ ಬದುಕಿನ ಘಟನೆಗಳನ್ನು ತುಸುತುಸುವೇ ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ" ಎಂದು ಸೋನಾಕ್ಷಿ ಹೇಳಿದ್ದಾರೆ.
36 ವರ್ಷದ ಸೋನಾಕ್ಷಿ ಈ ಸರಣಿಗೆ ಬರುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಖುಷಿಗೊಂಡಿದ್ದಾರೆ. ಈಕೆಯ ಹೃದಯದಲ್ಲಿ ವಿಶೇಷ ಸ್ಥಾನ ಪಡೆದ ಒಂದು ಪ್ರತಿಕ್ರಿಯೆ ಬಂದಿದೆಯಂತೆ. ನಟಿ ರೇಖಾ ಅವರ ಮೆಚ್ಚುಗೆಯ ಮಾತುಗಳು ಖುಷಿ ನೀಡಿದೆ ಎನ್ನುತ್ತಾರೆ. "ಇದು ಭಾವಪರವಶಗೊಳಿಸುವ ಸಂಗತಿ. ಹಲವು ವರ್ಷಗಳ ಬಳಿಕ ಇಂತಹ ಪ್ರದರ್ಶನವನ್ನು ನೋಡಿದೆ. ನನ್ನ ಇಡೀ ವೃತ್ತಿಜೀವನದಲ್ಲಿ ನೋಡಿರುವ ಅತಿಪ್ರಮುಖ ಪ್ರೀಮಿಯರ್‌ಗಳಲ್ಲಿ ಒಂದಾಗಿದೆ. ಅಲ್ಲಿ ಅನೇಕ ಜನರನ್ನು ಭೇಟಿಯಾದೆ. ರೇಖಾ ಮೇಡಂ ಹೀರಮಂಡಿಯನ್ನು ನೋಡಿ ತುಂಬಾ ಖುಷಿಪಟ್ಟರು. ಮೆಚ್ಚುಗೆಯ ಮಾತುಗಳನ್ನಾಡಿದರು" ಎಂದು ಸೋನಾಕ್ಷಿ ನೆನಪಿಸಿಕೊಂಡಿದ್ದಾರೆ.
ಹಿರಿಯ ತಾರೆಯ ಮೆಚ್ಚುಗೆಯ ಮಾತುಗಳಿಂದ ರೋಮಾಂಚನಗೊಂಡಿರುವೆ ಎಂದು ಸೋನಾಕ್ಷಿ ಹೇಳಿದ್ದಾರೆ. "ಅವರು ಎಷ್ಟು ಸುಂದರವಾಗಿ ತಮ್ಮ ಅಭಿಪ್ರಾಯವನ್ನು ಹೇಳಿದರೆಂದರೆ ನನಗೆ ವಿಸ್ಮಯವಾಯಿತು. ರೇಖಾಜೀ ನನ್ನನ್ನು ಹೊಗಳುತ್ತಿದ್ದಾರೆ ಎಂದರೆ ನನಗೆ ನನ್ನ ಕಿವಿಗಳನ್ನು ನಂಬಲು ಸಾಧ್ಯವಾಗಲಿಲ್ಲ. ಆಕೆಯ ಜತೆಗಿನ ಸಂಭಾಷಣೆಯನ್ನು ಯಾವಾಗಲೂ ನೆನಪಿಸಿಕೊಳ್ಳುವೆ. ಅವರು ನನ್ನ ಅಮ್ಮನಂತೆ. ನಮ್ಮ ನಡುವೆ ಸಾಕಷ್ಟು ಪ್ರೀತಿ ಇದೆ" ಎಂದು ಸೋನಾಕ್ಷಿ ಹೇಳಿದ್ದಾರೆ.
ಹೀರಾಮಂಡಿ ಬಗ್ಗೆ ವಿವರ
ಹೀರಾಮಂಡಿ ಮೂಲಕ ಸಂಜಯ್ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿದ್ದ ವೇಶ್ಯೆಯರ ಜೀವನದ ಪ್ರೀತಿ ಮತ್ತು ದ್ರೋಹದ ಕಥೆಗಳನ್ನು ಹೇಳಿದ್ದಾರೆ. ಈ ಸರಣಿಯು 1940 ರ ದಶಕದ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಕ್ಷುಬ್ಧ ಹಿನ್ನೆಲೆಯಲ್ಲಿ ವೇಶ್ಯೆಯರು ಮತ್ತು ಅವರ ಪೋಷಕರ ಕಥೆಗಳ ಹೇಳುತ್ತದೆ. ಲಾಹೋರ್‌ನ ಹೀರಾಮಂಡಿ ಜಿಲ್ಲೆಯ ಸಾಂಸ್ಕೃತಿಕ ವಾಸ್ತವಗಳನ್ನು ಬಿಚ್ಚಿಡುವ ಪ್ರಯತ್ನ ಮಾಡುತ್ತದೆ.
ಹೀರಾಮಂಡಿಯಲ್ಲಿ ಮನೀಷಾ ಕೊಯಿರಾಲಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್, ಶರ್ಮಿನ್ ಸೆಗಲ್, ಶೇಖರ್ ಸುಮನ್, ಫರ್ದೀನ್ ಖಾನ್, ಅಧ್ಯಾಯನ್ ಸುಮನ್ ಮತ್ತು ತಾಹಾ ಶಾ ಬಾದುಶಾ ನಟಿಸಿದ್ದಾರೆ. ಇದು ಮೇ 1 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ