ಕನ್ನಡ ಸುದ್ದಿ  /  ಮನರಂಜನೆ  /  ಈ ಒಂದು ಕಾರಣಕ್ಕೆ ಕಳೆದ 26 ವರ್ಷಗಳಿಂದ ಬಾಲಿವುಡ್‌ನಿಂದ ನನಗೆ ಸಿನಿಮಾ ಆಫರ್‌ಗಳೇ ಬರಲಿಲ್ಲ; ಮೌನ ಮುರಿದ ಜ್ಯೋತಿಕಾ

ಈ ಒಂದು ಕಾರಣಕ್ಕೆ ಕಳೆದ 26 ವರ್ಷಗಳಿಂದ ಬಾಲಿವುಡ್‌ನಿಂದ ನನಗೆ ಸಿನಿಮಾ ಆಫರ್‌ಗಳೇ ಬರಲಿಲ್ಲ; ಮೌನ ಮುರಿದ ಜ್ಯೋತಿಕಾ

ದಕ್ಷಿಣ ಭಾರತದಲ್ಲಿ ಬಿಜಿಯಾಗಿರುವ ನಟಿ ಜ್ಯೋತಿಕಾ, ಸುದೀರ್ಘ 26 ವರ್ಷಗಳ ಬಳಿಕ ಬಾಲಿವುಡ್‌ಗೆ ಮರಳಿದ್ದಾರೆ. ಇತ್ತೀಚೆಗಷ್ಟೇ ಶೈತಾನ್‌ ಸಿನಿಮಾ ರಿಲೀಸ್‌ ಆಗಿತ್ತು. ಈಗ ಶ್ರೀಕಾಂತ್‌ ಚಿತ್ರದ ಬಿಡುಗಡೆಯ ಪ್ರಚಾರದಲ್ಲಿದ್ದಾರೆ. ಹಿಂದಿಗೆ ಬರಲು ಇಷ್ಟೊಂದು ಗ್ಯಾಪ್‌ ಮಾಡಿದ್ದೇಕೆ ಜ್ಯೋತಿಕಾ? ಅವರೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ಒಂದು ಕಾರಣಕ್ಕೆ ಕಳೆದ 26 ವರ್ಷಗಳಿಂದ ಬಾಲಿವುಡ್‌ನಿಂದ ನನಗೆ ಸಿನಿಮಾ ಆಫರ್‌ಗಳೇ ಬರಲಿಲ್ಲ; ಮೌನ ಮುರಿದ ಜ್ಯೋತಿಕಾ
ಈ ಒಂದು ಕಾರಣಕ್ಕೆ ಕಳೆದ 26 ವರ್ಷಗಳಿಂದ ಬಾಲಿವುಡ್‌ನಿಂದ ನನಗೆ ಸಿನಿಮಾ ಆಫರ್‌ಗಳೇ ಬರಲಿಲ್ಲ; ಮೌನ ಮುರಿದ ಜ್ಯೋತಿಕಾ

South Actress Jyotika: ಸೌತ್‌ ಸಿನಿಮಾ ಅದರಲ್ಲೂ ಕಾಲಿವುಡ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್‌ ನಟಿ ಎನಿಸಿಕೊಂಡಿದ್ದಾರೆ ನಟಿ ಜ್ಯೋತಿಕಾ. ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳನ್ನು ನೀಡುವುದರ ಜತೆಗೆ ಸ್ಟಾರ್‌ ನಟರ ಸಿನಿಮಾಗಳಲ್ಲಿ ನಾಯಕಿಯಾಗಿಯೂ ಮಿಂಚಿದ್ದಾರೆ. ಆದರೆ, ನಿಮಗೆ ನೆನಪಿರಲಿ ನಟಿ ಜ್ಯೋತಿಕಾ ಬಣ್ಣದ ಲೋಕಕ್ಕೆ ಬಂದಿದ್ದೇ ಬಾಲಿವುಡ್‌ನಿಂದ. ಆಳಿದ್ದು ಮಾತ್ರ ಸೌತ್‌ ಚಿತ್ರೋದ್ಯಮದಲ್ಲಿ. ಹಿಂದಿ ಚಿತ್ರರಂಗದಲ್ಲಿ ಕೆರಿಯರ್‌ ಆರಂಭಿಸಿದರೂ, ಅಲ್ಲಿ ಅವರಿಗೆ ಅವಕಾಶಗಳೇ ಸಿಗಲಿಲ್ಲ. ಅದಕ್ಕೆ ಕಾರಣ ಏನಿರಬಹುದು? ಈ ಒಂದು ವಿಚಾರದ ಬಗ್ಗೆ ನಟಿ ಜ್ಯೋತಿಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಜಯ್‌ ದೇವಗನ್‌ ನಾಯಕನಾಗಿ ನಟಿಸಿದ ಶೈತಾನ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿಯನ್ನೇ ಮಾಡಿತು. 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 200 ಕೋಟಿಗೂ ಅಧಿಕ ಗಳಿಕೆ ಕಂಡು ಯಶಸ್ವಿಯಾಯ್ತು. ಇತ್ತೀಚಿಗಷ್ಟೇ ಒಟಿಟಿಯಲ್ಲೂ ಬಿಡುಗಡೆಯಾಗಿ ಅಲ್ಲಿಯೂ ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತಿದೆ ಶೈತಾನ್. ಇದೇ ಸಿನಿಮಾ ಮೂಲಕ ಸುದೀರ್ಘ 26 ವರ್ಷಗಳ ನಂತರ ನಟಿ ಜ್ಯೋತಿಕಾ ಬಾಲಿವುಡ್‌ ಮೆಟ್ಟಿಲೇರಿದ್ದರು. ಇದೀಗ ಇದೇ ಜ್ಯೋತಿಕಾ ರಾಜ್‌ಕುಮಾರ್‌ ರಾವ್‌ ಜತೆಗೆ ಶ್ರೀಕಾಂತ್‌ ಹೆಸರಿನ ಸಿನಿಮಾದಲ್ಲೂ ನಟಿಸಿದ್ದಾರೆ. ಇನ್ನೇನು ಆ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ.

ಮೊದಲ ಚಿತ್ರವೇ ಪ್ಲಾಪ್‌

ಈ ನಡುವೆ ಈ ಸಿನಿಮಾಗಳ ಪ್ರಚಾರದ ನಿಮಿತ್ತ ನೀಡಿದ ಸಂದರ್ಶನದಲ್ಲಿ ಬಾಲಿವುಡ್‌ನಲ್ಲಿ ಮತ್ತೆ ಏಕೆ ಕಾಣಿಸಿಕೊಳ್ಳಲಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಜ್ಯೋತಿಕಾ, "1998ರಲ್ಲಿ ಹಿಂದಿಯಲ್ಲಿ ಡೋಲಿ ಸಜಾ ಕೆ ರಖನಾ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೂ, ಆ ಚಿತ್ರ ಯಶಸ್ವಿಯಾಗಲಿಲ್ಲ. ಅಲ್ಲಿಂದ ಅಂದರೆ, ಕಳೆದ 26 ವರ್ಷಗಳಿಂದ ನಾನು ದಕ್ಷಿಣದ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದೆ. ನನ್ನ ಮೊದಲ ಹಿಂದಿ ಸಿನಿಮಾ ಅದರ ಶೈಲಿಯೇ ಬೇರೆಯದಾಗಿತ್ತು. ಅದು ಅಷ್ಟಾಗಿ ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಮೊದಲ ಚಿತ್ರವೇ ಪ್ಲಾಪ್‌ ಎಂದು ಗೊತ್ತಾದ ಮೇಲೆ, ನನಗೆ ಅವಕಾಶಗಳೇ ಇಲ್ಲವಾದವು. ಗೆದ್ದರಷ್ಟೇ ಚಿತ್ರೋದ್ಯಮದಲ್ಲಿ ಬೆಲೆ.

ದಕ್ಷಿಣ ಭಾರತದವಳೆಂಬ ಕಾರಣಕ್ಕೆ..

"ಬಿಗ್‌ ಬ್ಯಾನರ್‌ನಲ್ಲಿಯೇ ಎಲ್ಲ ನಟ, ನಟಿಯರು ತಮ್ಮ ಸಿನಿಮಾಗಳು ನಿರ್ಮಾಣವಾಗಬೇಕು ಎಂದು ಬಯಸುತ್ತಾರೆ. ನನಗೂ ಮೊದಲ ಸಿನಿಮಾದಲ್ಲಿಯೇ ಅಂಥದ್ದೇ ದೊಡ್ಡ ನಿರ್ಮಾಣ ಸಂಸ್ಥೆ ಜತೆಗೆ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ, ಆ ಸಿನಿಮಾ ಮಾತ್ರ ಹೇಳಿಕೊಳ್ಳುವಂಥ ಯಶ ಕಾಣಲಿಲ್ಲ. ಅಲ್ಲಿಂದ ನೇರವಾಗಿ ನಾನು ದಕ್ಷಿಣದ ಸಿನಿಮಾಗಳತ್ತ ಮುಖ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೂ ನನಗೆ ಕಳೆದ 26 ವರ್ಷಗಳಲ್ಲಿ ನನಗೆ ಯಾವುದೇ ಬಾಲಿವುಡ್‌ ಸಿನಿಮಾಗಳ ಆಫರ್‌ ಬರಲೇ ಇಲ್ಲ. ಅಲ್ಲಿನವರು ನನ್ನನ್ನು ದಕ್ಷಿಣ ಭಾರತದವಳೆಂದು ಅಂದುಕೊಂಡಿದ್ದರು. ಆ ನಟಿ ಮತ್ತಿನ್ನೆಂದೂ ಹಿಂದಿ ಸಿನಿಮಾ ಮಾಡಲ್ಲ ಎಂದೂ ಮಾತನಾಡಿದ್ದರು" ಎಂದು ಹೇಳಿಕೊಂಡಿದ್ದಾರೆ.

ಒಳ್ಳೊಳ್ಳೆ ಸಿನಿಮಾ ನೀಡಿದ ಖುಷಿಯಿದೆ..

ಮುಂದುವರಿದು ಮಾತನಾಡಿರುವ ಜ್ಯೋತಿಕಾ, "ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಿಜಿಯಾದ ಮೇಲೆ, ಇನ್ಮೇಲೆ ಆ ನಟಿ ಹಿಂದಿ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಊಹಿಸಿದ್ದರು. ಆದರೆ, ನಾನು ಯಾವತ್ತೂ ಹಿಂದಿ ಸಿನಿಮಾ ಮಾಡುವುದಿಲ್ಲ ಎಂದು ಹೇಳಿಲ್ಲ. ನಾನು ಬೇಕು ಅಂತಲೇ ಹಿಂದಿ ಸಿನಿಮಾರಂಗದಿಂದ ದೂರ ಉಳಿದಿಲ್ಲ. ಅಲ್ಲಿಂದ ನನಗೆ ಯಾವುದೇ ಅವಕಾಶಗಳು ಬಂದಿಲ್ಲ. ಹಾಗಾಗಿ ನಾನು ದೂರ ಇರಬೇಕಾಯ್ತು. ಆದರೆ, ದಕ್ಷಿಣದಲ್ಲಿ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸಿದ ಖುಷಿ ಇದೆ. ಇಲ್ಲಿಯವರೆಗೂ ನನ್ನ ಸಿನಿಮಾ ಪ್ರಯಾಣ ಚೆನ್ನಾಗಿಯೇ ಇದೆ" ಎಂದಿದ್ದಾರೆ.

IPL_Entry_Point