ಭಾರತೀಯ ಚಿತ್ರರಂಗದ ಯಾವ ನಟ-ನಟಿಯೂ ಹೊಂದಿರದ 800 ಕೋಟಿ ರೂ ಬೆಲೆ ಬಾಳುವ ಅರಮನೆ ಇದು; ಯಾರಿರಬಹುದು ಆ ನಾಯಕ ?
ಕನ್ನಡ ಸುದ್ದಿ  /  ಮನರಂಜನೆ  /  ಭಾರತೀಯ ಚಿತ್ರರಂಗದ ಯಾವ ನಟ-ನಟಿಯೂ ಹೊಂದಿರದ 800 ಕೋಟಿ ರೂ ಬೆಲೆ ಬಾಳುವ ಅರಮನೆ ಇದು; ಯಾರಿರಬಹುದು ಆ ನಾಯಕ ?

ಭಾರತೀಯ ಚಿತ್ರರಂಗದ ಯಾವ ನಟ-ನಟಿಯೂ ಹೊಂದಿರದ 800 ಕೋಟಿ ರೂ ಬೆಲೆ ಬಾಳುವ ಅರಮನೆ ಇದು; ಯಾರಿರಬಹುದು ಆ ನಾಯಕ ?

ಸ್ಟಾರ್‌ ನಟ ನಟಿಯರು ದುಬಾರಿ ಮನೆಗಳನ್ನು ಹೊಂದಿರುವುದು ಸಹಜ. ಬಾಲಿವುಡ್‌ನಲ್ಲಿ ಶಾರುಖ್‌ ಖಾನ್‌, ಅಮಿತಾಬ್‌ ಬಚ್ಚನ್‌ ಇಬ್ಬರ ಮನೆಗಳಿಂತ ನವಾಬರ ಕುಟುಂಬಕ್ಕೆ ಸೇರಿದ ಸೈಫ್‌ ಅಲಿ ಖಾನ್‌, 800 ಕೋಟಿ ರೂ. ಬೆಲೆಯ ಅರಮನೆಯನ್ನು ಹೊಂದಿದ್ದಾರೆ. ಈ ಪಟೌಡಿ ಪ್ಯಾಲೇಸ್‌ ಹರಿಯಾಣದಲ್ಲಿದೆ.

ಭಾರತೀಯ ಚಿತ್ರರಂಗದ ಯಾವ ನಟ-ನಟಿಯೂ ಹೊಂದಿರದ 800 ಕೋಟಿ ರೂ ಬೆಲೆ ಬಾಳುವ ಅರಮನೆ ಇದು; ಯಾರಿರಬಹುದು ಆ ನಾಯಕ ?
ಭಾರತೀಯ ಚಿತ್ರರಂಗದ ಯಾವ ನಟ-ನಟಿಯೂ ಹೊಂದಿರದ 800 ಕೋಟಿ ರೂ ಬೆಲೆ ಬಾಳುವ ಅರಮನೆ ಇದು; ಯಾರಿರಬಹುದು ಆ ನಾಯಕ ? (PC: Twitter)

ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ನಟ ನಟಿಯರು ಅಷ್ಟೇ ಐಷಾರಾಮಿ ಮನೆಯನ್ನು ಹೊಂದಿರುತ್ತಾರೆ. ಅದರಲ್ಲೂ ಬಾಲಿವುಡ್‌ ಸ್ಟಾರ್‌ಗಳ ಮನೆ ಎಂದರೆ ಕೇಳಬೇಕೇ. ಅರಮನೆಯನ್ನೇ ಕಟ್ಟಿಸಿರುತ್ತಾರೆ. ಅದೂ ಒಂದಲ್ಲಾ ಎರಡಲ್ಲ, ಅವರು ಹೆಚ್ಚಾಗಿ ಉಳಿದುಕೊಳ್ಳುವ ಪ್ರಮುಖ ನಗರಗಳಲ್ಲಿ, ವಿದೇಶಗಳಲ್ಲಿ ದುಬಾರಿ ಮೌಲ್ಯದ ಮನೆಯನ್ನು ಹೊಂದಿರುತ್ತಾರೆ.

ಶಾರುಖ್‌ ಖಾನ್‌, ಅಮಿತಾಬ್‌ ಬಚ್ಚನ್‌ ನಿವಾಸಗಳನ್ನೂ ಮೀರಿಸಿದ ಅರಮನೆ

ಬಾಲಿವುಡ್‌ನಲ್ಲಿ ಅತ್ಯಂತ ಐಷಾರಾಮಿ ಮನೆಯನ್ನು ಹೊಂದಿರುವುದು ಯಾರು ಎಂದು ಕೇಳಿದರೆ ತಕ್ಷಣ ಅಭಿಮಾನಿಗಳು ಉತ್ತರ ಕೊಡುವುದು ಶಾರುಖ್‌ ಖಾನ್‌ ಮನ್ನತ್‌ ನಿವಾಸ ಎನ್ನುತ್ತಾರೆ. ಅದು ಹೊರತುಪಡಿಸಿ ಅಮಿತಾಬ್‌ ಬಚ್ಚನ್‌ ವಾಸಿಸುವ ಜಲ್ಸಾ ಎಂದು ಹೇಳಬಹುದು. ಆದರೆ ನಟ ಸೈಫ್‌ ಅಲಿ ಖಾನ್‌, ಈ ನಟರ ಬಂಗಲೆಯನ್ನೂ ಮೀರಿಸಿದಂತೆ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಮುಂಬೈನ ಅತಿ ದುಬಾರಿ ಮನೆಗಳಲ್ಲಿ ಈ ನಟನ ಮನೆಯೂ ಒಂದು. ಆದರೆ ಇಷ್ಟು ಮಾತ್ರವಲ್ಲ. ಸೈಫ್‌ ಅಲಿ ಖಾನ್‌ ಸುಮಾರು 800 ಕೋಟಿ ರೂ. ಬೆಲೆ ಬಾಳುವ ದೊಡ್ಡ ಬಂಗಲೆಗೂ ಒಡೆಯ ಅನ್ನೊದು ಹಲವರಿಗೆ ಗೊತ್ತಿಲ್ಲ. ಆದರೆ ಈ ಬಂಗಲೆ ಇರುವುದು ಮುಂಬೈನಲ್ಲಿ ಅಲ್ಲ, ಹರಿಯಾಣದಲ್ಲಿ.

ಸೈಫ್‌ ಅಲಿ ಖಾನ್‌ ನವಾಬರ ಕುಟುಂಬಕ್ಕೆ ಸೇರಿದವರು. ಇವರ ತಂದೆ ಖ್ಯಾತ ಕ್ರಿಕೆಟಿಕ ಮನ್ಸೂರ್‌ ಅಲಿ ಖಾನ್‌ ಪಟೌಡಿ, ತಾಯಿ ಶರ್ಮಿಳಾ ಠಾಗೂರ್‌. ದೆಹಲಿಯಿಂದ 80 ಕಿಮೀ ದೂರದಲ್ಲಿರುವ ಹರಿಯಾಣದ ಪಟೌಡಿಯಲ್ಲಿ ಸೈಫ್‌ ಅಲಿ ಖಾನ್‌ ಅವರ ಅರಮನೆ ಇದೆ. ಭಾರತೀಯ ಚಿತ್ರರಂಗದ ಯಾವುದೇ ನಾಯಕನಿಗೆ ಇಷ್ಟು ದೊಡ್ಡ ಮತ್ತು ಐಷಾರಾಮಿ ಮನೆ ಇಲ್ಲ. ಸೈಫ್ ಅಲಿ ಖಾನ್, ತಾತ ನವಾಬ್ ಇಫ್ತಿಕರ್ ಅಲಿ ಖಾನ್ ಪಟೌಡಿ ಈ ಅರಮನೆಯನ್ನು ನಿರ್ಮಿಸಿದರು. ಭೋಪಾಲ್‌ನ ಬೇಗಂ ಅವರನ್ನು ಮದುವೆಯಾದ ನಂತರ, ಅವರು ವಾಸಿಸುತ್ತಿದ್ದ ಮನೆಯು ತಮ್ಮ ರಾಜಮನೆತನಕ್ಕೆ ಯೋಗ್ಯವಲ್ಲ ಎಂಬ ಭಾವನೆಯಿಂದ ಈ ಬೃಹತ್ ಅರಮನೆಯನ್ನು ನಿರ್ಮಿಸಿದರು. ಪ್ರಸ್ತುತ ಪಟೌಡಿ ಮನೆತನದ ನವಾಬ, ಈ ಅರಮನೆಗೆ ಪಟೌಡಿ ಪ್ಯಾಲೇಸ್‌ ಎಂದು ಹೆಸರು ಇಡಲಾಗಿದೆ. ಪ್ರತಿ ಬೇಸಿಗೆಯಲ್ಲಿ ಸೈಫ್‌ ಅಲಿ ಖಾನ್‌ ಮಕ್ಕಳು, ತಂಗಿ ಸೋಹಾ ಅಲಿ ಖಾನ್ ಸೇರಿದಂತೆ ಅವರ ಕುಟುಂಬದವರು ರಜಾ ದಿನಗಳನ್ನು ಎಂಜಾಯ್‌ ಮಾಡಲು ಈ ಅರಮನೆಗೆ ಬರುತ್ತಾರೆ.

ಚಿತ್ರೀಕರಣಗಳಿಗೆ ಮೀಸಲಾದ ಪಟೌಡಿ ಪ್ಯಾಲೇಸ್

ಸೈಫ್ ಅಲಿ ಖಾನ್ ಅವರ ತಾತ ಈ ಅರಮನೆಯನ್ನು ನಿರ್ಮಿಸಿದ್ದರೂ, ಸೈಫ್‌ ಅಲಿ ಖಾನ್‌ಗೆ ಆ ಅರಮನೆ ಸುಲಭವಾಗಿ ಸಿಕ್ಕಿಲ್ಲ. ಕಾಲ ಕ್ರಮೇಣ ಈ ಅರಮನೆಯ ಮೇಲೆ ಕೋಟಿಗಟ್ಟಲೆ ಸಾಲ ಬಂದಿದೆ. ಸೈಫ್ ಅಲಿ ಖಾನ್‌ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ 2011 ರಲ್ಲಿ ನಿಧನರಾದ ನಂತರ ತಮ್ಮ ಕುಟುಂಬದ ಮೇಲಿದ್ದ ಎಲ್ಲಾ ಸಾಲವನ್ನು ತೀರಿಸಿ ನಂತರ ಆ ಅರಮನೆಯನ್ನು ಮರಳಿ ಪಡೆದೆವು ಎಂದು ಸ್ವತ: ಸೈಫ್‌ ಅಲಿ ಖಾನ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ಸದ್ಯಕ್ಕೆ ಈ ಅರಮನೆಯನ್ನು ಖಾಲಿ ಬಿಟ್ಟಿಲ್ಲ. ದಿನಕ್ಕೆ ಇಂತಿಷ್ಟು ಲಕ್ಷ ಎಂದು ನಿಗದಿಪಡಿಸಿ ಸಿನಿಮಾ, ಧಾರಾವಾಹಿಗಳ ಶೂಟಿಂಗ್‌ಗಾಗಿ ನೀಡಲಾಗುತ್ತಿದೆ. ಬಾಲಿವುಡ್‌ನ ಅನೇಕ ಸಿನಿಮಾಗಳು, ವೆಬ್‌ ಸೀರೀಸ್‌ ಹಾಗೂ ಕೆಲವು ಧಾರಾವಾಹಿಗಳು ಈ ಅರಮನೆಯಲ್ಲಿ ಚಿತ್ರೀಕರಣಗೊಂಡಿವೆ. ಇತ್ತೀಚೆಗೆ ತೆರೆ ಕಂಡ ಅನಿಮಲ್‌ ಸಿನಿಮಾ ಕೂಡಾ ಇದೇ ಸ್ಥಳದಲ್ಲಿ ಶೂಟಿಂಗ್‌ ಮಾಡಲಾಗಿದೆ.

ಸಾಮಾನ್ಯವಾಗಿ ಮುಂಬೈಗೆ ಹೋದವರು ಮುಖೇಶ್‌ ಅಂಬಾನಿ ಅವರ ಅಂಟಿಲಿಯಾ, ಶಾರುಖ್‌ ಖಾನ್‌ ವಾಸಿಸುವ ಮನ್ನತ್‌ ಹಾಗೂ ಅಮಿತಾಬ್‌ ಬಚ್ಚನ್‌ ಅವರ ಜಲ್ಸಾ ಮನೆಯನ್ನು ನೋಡಲು ಹೋಗುತ್ತಾರೆ. ಮನ್ನತ್‌ 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡರೆ ಜಲ್ಸಾಗೆ 120 ಕೋಟಿ ಖರ್ಚಾಗಿದೆ. ಆದರೆ ಇವರಡಕ್ಕೂ ಹೋಲಿಸಿದರೆ ಸೈಫ್‌ ಅಲಿ ಖಾನ್‌ ಅರಮನೆಗೆ 4 ಪಟ್ಟು ಹೆಚ್ಚು ಬೆಲೆ ಇದೆ.

 

Whats_app_banner