ಕನ್ನಡ ಸುದ್ದಿ  /  ಮನರಂಜನೆ  /  ಫಾರ್ಮ್‌ಹೌಸ್‌ ಶೈಲಿಯ ಭರ್ಜರಿ ಮನೆ ನಿರ್ಮಿಸಿಕೊಂಡ ನಟ ವಿವೇಕ್‌ ಓಬೇರಾಯ್‌; ಮುಂಬೈನ ಈ ಮನೆಯಲ್ಲಿ ಕೊಟ್ಟಿಗೆಯೂ ಇದೆ, ದನವೂ ಇದೆ

ಫಾರ್ಮ್‌ಹೌಸ್‌ ಶೈಲಿಯ ಭರ್ಜರಿ ಮನೆ ನಿರ್ಮಿಸಿಕೊಂಡ ನಟ ವಿವೇಕ್‌ ಓಬೇರಾಯ್‌; ಮುಂಬೈನ ಈ ಮನೆಯಲ್ಲಿ ಕೊಟ್ಟಿಗೆಯೂ ಇದೆ, ದನವೂ ಇದೆ

Vivek Oberoi farmhouse style home: ಬಾಲಿವುಡ್‌ ನಟ ವಿವೇಕ್‌ ಓಬೇರಾಯ್‌ ಮುಂಬೈನಲ್ಲಿರುವ ತನ್ನ ಮನೆಯ ಕುರಿತು ಒಂದಿಷ್ಟು ವಿವರ ನೀಡಿದ್ದಾರೆ. ಈ ಮನೆ ಫಾರ್ಮ್‌ಹೌಸ್‌ ಶೈಲಿಯಲ್ಲಿದ್ದು, ಈ ಮನೆಯಲ್ಲಿ ದನದ ಕೊಟ್ಟಿಗೆಯೂ ಇದೆ. ದನವೂ ಇದೆ. ಇದರೊಂದಿಗೆ ಮನೆಯೊಳಗೆ ವೈಭವದ ಫೀಚರ್‌ಗಳೂ ಇವೆ.

ಈ ಮನೆಯಲ್ಲಿ ವಿವೇಕ್‌ ಓಬೇರಾಯ್‌ ಮತ್ತು ಪ್ರಿಯಾಂಕ ಆಳ್ವಾ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಾರೆ.
ಈ ಮನೆಯಲ್ಲಿ ವಿವೇಕ್‌ ಓಬೇರಾಯ್‌ ಮತ್ತು ಪ್ರಿಯಾಂಕ ಆಳ್ವಾ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಾರೆ.

ಬೆಂಗಳೂರು: ಮುಂಬೈನಲ್ಲಿರುವ ನಟ ವಿವೇಕ್‌ ಒಬೇರಾಯ್‌ ಅವರ ಮನೆಯನ್ನು ನೋಡಿದರೆ ವಾಹ್‌ ಎನಿಸದೆ ಇರದು. ಈ ಮನೆಯಲ್ಲಿ ಹಳ್ಳಿಗಾಡಿನ ಸೊಗಡು ಇದೆ, ಆಧುನಿಕ ಸ್ಪರ್ಶವೂ ಇದೆ. ಆಧುನಿಕ ಸೌಂದರ್ಯಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡು ಫಾರ್ಮ್‌ಹೌಸ್‌ ಶೈಲಿಯಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದೆ. ವಿವೇಕ್‌ ಓಬೇರಾಯ್‌ ಇತ್ತೀಚೆಗೆ ತನ್ನ ಮನೆಯೊಳಗಿನ ಒಂದು ಇಣುಕುನೋಟ ನೀಡಿದ್ದಾರೆ. ಈ ಮನೆಯಲ್ಲಿ ಒಂದು ಶತಮಾನಕ್ಕೂ ಹಳೆಯದಾದ ವಿಂಟೇಜ್‌ ಮಂಚವಿದೆ. ಹಸುವಿಗೆ ಕೊಟ್ಟಿಗೆಯೂ ಇದೆ. ಮನೆಯೊಳಗೆ ಸಾಕಷ್ಟು ಕಲಾಕೃತಿಗಳು ಇದ್ದು, ಗಮನ ಸೆಳೆಯುತ್ತದೆ.

ಟ್ರೆಂಡಿಂಗ್​ ಸುದ್ದಿ

ಅರ್ಬನ್ ಕಂಪನಿ ರೀಲ್ಸ್ ಟು ರೂಮ್ಸ್ ಇತ್ತೀಚಿನ ಸಂಚಿಕೆಯಲ್ಲಿ ಈ ಮನೆಯ ಚಿತ್ರಣ ನೀಡಿದೆ. ಈ ಮನೆಯನ್ನು ಗೋವಾದ ಫಾರ್ಮ್‌ಹೌಸ್‌ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಮನೆಯು ವಿವೇಕ್‌ ಓಬೇರಾಯ್‌ ಮತ್ತು ಅವರ ಪತ್ನಿ ಪ್ರಿಯಾಂಕ ಆಳ್ವರ ಅಭಿರುಚಿಗೆ ಕನ್ನಡಿ ಹಿಡಿದಿದೆ.

ಈ ವಿಡಿಯೋದಲ್ಲಿ ಮೊದಲಿಗೆ ವಿವೇಕ್‌ ಓಬೇರಾಯ್‌ ತನ್ನ ಮನೆಯ ಹಸು ಕಾಮಧೇನುವನ್ನು ಪರಿಚಯಿಸುತ್ತಾರೆ. ಈ ದನ ಇರುವುದರಿಂದ ಈ ಸ್ಥಳಕ್ಕೆ ಹಳ್ಳಿಗಾಡಿನ ಸೊಗಡು ಬಂದಿದೆ ಎಂದು ಹೇಳಿದ್ದಾರೆ. "ಇದು ನನ್ನ ಮನೆಯಲ್ಲ. ಅವಳ ಮನೆ. ದನದ ಕೊಟ್ಟಿಗೆಯ ಸುವಾಸನೆಯು ಈ ನಗರದೊಳಗೆ ಹಳ್ಳಿಯ ಫೀಲ್‌ ನೀಡುತ್ತದೆ" ಎಂದು ಅವರು ಹೇಳಿದ್ದಾರೆ.

"ಎಲ್ಲರಿಗೂ ಮೇಲ್ನೋಟಕ್ಕೆ ಕಾಣುವ ನಂಬಿಕೆಯ ಜಗತ್ತಿನಲ್ಲಿ ನಾನು ಕೆಲಸ ಮಾಡುತ್ತೇನೆ. ಆದರೆ, ಆ ಪ್ರಪಂಚದಿಂದ ನನ್ನ ಮನೆಗೆ ಹಿಂದುರುಗಿದಾಗ ನಾನು ನಟ ವಿವೇಕ್‌ ಓಬೇರಾಯ್‌ ಅಲ್ಲ. ನಾನು ಕೇವಲ ನಾನಾಗಿರುತ್ತೇನೆ" ಎಂದು ಅವರು ಹೇಳಿದ್ದಾರೆ.

ಈ ಮನೆಯೊಳಗೆ ಸಾಕಷ್ಟು ಮರದ ಪೀಠೋಪಕರಣಗಳು ಇವೆ. ಗೋಡೆಯಲ್ಲಿ ಲಕ್ಷ್ಮೀ ದೇವಿಯ ದೊಡ್ಡ ಫೋಟೋಗಳಿವೆ. ಮನೆಯೊಳಗೆ ಸಾಕಷ್ಟು ಸಸ್ಯಗಳಿದ್ದು, ಹಸಿರಿನ ಫೀಲ್‌ ನೀಡುತ್ತದೆ. ಮನೆಯ ಹೊರಗೂ ಕಾಡಿನಂತಹ ಸುಂದರ ಪರಿಸರವಿದೆ.

ಸುಸ್ಥಿರ ವಾತಾವರಣ ಹೊಂದಬೇಕು ಎಂದು ಈ ರೀತಿ ಮನೆ ನಿರ್ಮಿಸಿದ್ದೇವೆ ಎಂದು ವಿವೇಕ್‌ ಹೇಇದ್ದಾರೆ. "ಈ ಮನೆ ನನಗೆ ಮತ್ತು ಪ್ರಿಯಾಂಕ ಅವರ ತಾಣ. ಇದು ನಮ್ಮ ಜೀವನವನ್ನು ಪ್ರತಿನಿಧಿಸುತ್ತದೆ. ನಾವು ಈ ಮನೆಯನ್ನು ಖರೀದಿಸಿದಾಗ ಇದನ್ನು ಗೋವಾದ ಮನೆಯಂತೆ ಮಾಡಬೇಕು ಎಂದು ಬಯಸಿದೆವು. ಈಗ ಇದು ಫಾರ್ಮ್‌ಹೌಸ್‌ನಂತೆ ಬದಲಾಗಿದೆ" ಎಂದು ಹೇಳಿದ್ದಾರೆ.

ಬೆಡ್‌ರೂಂ ಮತ್ತು ಲಿವಿಂಗ್‌ ರೂಂ ಚಿತ್ರಣ

ಈ ವಿಡಿಯೋದಲ್ಲಿ ವಿವೇಕ್‌ ಓಬೇರಾಯ್‌ ಅವರ ಮನೆಯ ಲಿವಿಂಗ್‌ ಕೊಠಡಿ ಮತ್ತು ಬೆಡ್‌ರೂಂನ ಚಿತ್ರಣವನ್ನೂ ನೀಡಲಾಗಿದೆ. ಜಗತ್ತಿನ ವಿವಿಧೆಡೆಯಿಂದ ಸಂಗ್ರಹಿಸಿದ ಪ್ರಾಚೀನ ವಸ್ತುಗಳು ಈ ಕೊಠಡಿಗಳಲ್ಲಿ ಇವೆ. ಈ ಮನೆಯಲ್ಲಿ ಪುರಾತನ ಮಂಚ ಇದೆ. ಇದು ಪ್ರಿಯಾಂಕ ಅವರ ಕುಟುಂಬದ್ದು. ಈ ಬೆಡ್‌ ಪ್ರಿಯಾಂಕ ಅವರ ಕುಟುಂಬದ್ದು. ಸುಮಾರು ಅರ್ಧಶತಮಾನದಕ್ಕಿಂತಲೂ ಹಳೆಯದ್ದು. ಇದೇ ಕಾರಣಕ್ಕೆ ನಾನಿದನ್ನು ಇಷ್ಟಪಡುತ್ತೇನೆ. ನನಗೆ 4 ವರ್ಷ ವಯಸ್ಸಾದ ಬಳಿಕ ಇಂತಹ ಹಾಸಿಗೆ, ಮಂಚದಲ್ಲಿ ಮಲಗಿದ ನೆನಪಿದೆ. ಈ ಪುರಾತನ ಮಂಚವು ನನಗೆ ಹಿತಕರ ಮತ್ತು ಸುರಕ್ಷಿತ ಭಾವನೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಮನೆಯ ಹೊರಾಂಗಣವು ಒಳಾಂಗಣಕ್ಕೆ ಲಿಂಕ್‌ ಹೊಂದಿದೆ. ಮನೆಗೆ ವಿಶಾಲವಾದ ಕಿಟಕಿಗಳನ್ನು ಜೋಡಿಸಿದ್ದಾರೆ. ಮನೆಯೊಳಗೆ ಹೊರಗಿನ ಸೊಂಪಾದ ಮರಗಳು ಕಾಣಿಸುತ್ತವೆ. ಈ ಮನೆಯಲ್ಲಿ ಒಂದಿಷ್ಟು ಅಪರಿಪೂರ್ಣ ಅಂಶಗಳಿವೆ. ಈ ರೀತಿಯ ಬಿರುಕುಗಳು, ಅಪರಿಪೂರ್ಣ ಅಂಶಗಳು ನನಗೆ ಇಷ್ಟ ಎಂದು ಅವರು ಹೇಳಿದ್ದಾರೆ.

IPL_Entry_Point